ಶ್ರೀ ಧನ್ವಂತರಿ ಸ್ತೋತ್ರಮ್
ನಮಾಮಿ ಧನ್ವಂತರಿಮಾದಿದೇವಂ ಸುರಾಸುರೈರ್ವಂದಿತ ಪಾದಪದ್ಮಮ್ | ಲೋಕೇ ಜರಾರುಗ್ಭಯಮೃತ್ಯು ನಾಶಂ ದಾತಾರಮೀಶಂ ವಿವಿಧೌಷಧೀನಾಂ ||೧|| ಭಾವಾರ್ಥ:-ಯಾವಾತನ ಪಾದಾರವಿಂದಗಳಿಗೆ ದೇವಾದಿದೇವತೆಗಳೂ,ಅಸುರರೂ ನಮಸ್ಕರಿಸುವರೋ ಅಂತಹಾ ಆದಿದೇವನಾಗಿರುವ ಹಾಗೂ ಜಗತ್ತಿನಲ್ಲಿ ರೋಗ,ಮುಪ್ಪುಗಳ ಭಯವನ್ನು ಮತ್ತು ಮರಣ ಭೀತಿಯನ್ನು ದೂರೀಕರಿಸುವ ಅಂತೆಯೇ ವಿವಿಧ ತೆರನಾದ ಔಷಧಿಗಳನ್ನು ಕರುಣಿಸುವ ಸ್ವಾಮಿಯಾಗಿರುವ ಧನ್ವಂತರಿಗೆ ನನ್ನ ಪ್ರಣಾಮಗಳು. ಅರಿ ಜಲಜ ಜಲೂಕಾ ರತ್ನ ಪೀಯೂಷ ಕುಂಭ- ಪ್ರಕಟಿತ ಕರಕಾಂತ: ಕಾಂತ ಪೀತಾಂಬರಾಢ್ಯ: | ಸಿತವಸನ ವಿರಾಜನ್ಮೌಲಿರಾರೋಗ್ಯದಾಯೀ ಶತಮುಖ ಮಣಿವರ್ಣ: ಪಾತು ಧನ್ವಂತರಿರ್ನ: ||೨|| ಭಾವಾರ್ಥ:-ಹಸ್ತಗಳಲ್ಲಿ ಅಮೃತಕಲಶದೊಡನೆ ಜಿಗಣೆ,ಚಕ್ರ,ಶಂಖಗಳನ್ನು ಧರಿಸಿ ಕಾಂತಿಯುತ ಪೀತಾಂಬರವನ್ನುಟ್ಟು, ಶ್ವೇತವಸನದ ರುಮಾಲಿನಿಂದ ಶೋಭಿಸುವ ಶಿರಸ್ಸು ಉಳ್ಳವನಾದ ಶರೀರವು ಇಂದ್ರನೀಲಮಣಿಯ ಬಣ್ಣ ಹೊಂದಿರುವ ಆರೋಗ್ಯದಾಯಿಯಾಗಿರುವ ಧನ್ವಂತರಿ ಸ್ವಾಮಿಯು ನಮ್ಮನ್ನು ರಕ್ಷಿಸಲಿ. ಚಂದ್ರೌಘಕಾಂತಿಂ ಅಮೃತೋರು ಕರೈರ್ಜಗಂತಿ ಸಂಜೀವಯಂತಂ ಅಮಿತಾತ್ಮ ಸುಖಂ ಪರೇಶಮ್ | ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ಥಮ್ ||೩|| ಭಾವಾರ್ಥ:-ಬಹು ಚಂದ್ರರ ಸೌಂದರ್ಯವುಳ್ಳ,ತನ್ನ ಮೋಕ್ಷದಾಯಕವಾಗಿರುವ ಕಿರಣಗಳಿಂದ ಜಗತ್ತನ್ನು ಪುನರ್ಜ್ಜೀವನಗೊಳಿಸುತ್ತಲಿರುವ,ವಿಶಾಲವಾದ ಆತ್ಮಾನುಭೂತಿಯುಳ್ಳ,ಉನ್ನತ ಸ್ವಾಮಿಯಾಗಿರುವ,ಜ್ಞಾನಮುದ್ರೆಯನ್ನು ...