ಶಕ್ತಿಪೀಠಗಳು
ದೇವಿಯು ಹಲವು ರೀತಿಗಳಲ್ಲಿ ವ್ಯಕ್ತಗೊಳ್ಳುತ್ತಾಳೆ, ಭಕ್ತರು ಅದನ್ನು ತಿಳಿಯ ಬೇಕು, ದೇವಿಯ ಅಭಿವ್ಯಕ್ತವಾದ, ಪವಿತ್ರವಾದ ಸ್ಥಳಗಳನ್ನು ಪೀಠಗಳೆನ್ನುತ್ತೇವೆ.
ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಹೀಗೆ ಪವಿತ್ರವಾದ ಸ್ಥಳಗಳಲ್ಲಿ ದೇವಿಯನ್ನು ಪೂಜಿಸಿ ಕೋಟ್ಯಂತರ ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಪುರಾಣಗಳಲ್ಲಿ ಹಲವಾರು ರೀತಿಯಲ್ಲಿ ಈ ಶಕ್ತಿಪೀಠಗಳ ವರ್ಣನೆಯನ್ನು ಕಾಣುತ್ತೇವೆ.
ನಮ್ಮ ಬಯಕೆಗಳನ್ನು ನೆರವೇರಿಸಿಕೊಳ್ಳಲು ನಾವು ದೇವಿಯನ್ನು ಪೂಜಿಸುತ್ತೇವೆ. ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಪೂಜಿಸುವುದು ಎಲ್ಲದಕ್ಕಿಂತ ಶ್ರೇಷ್ಠವಾದುದು. ಒಂದು ಸಾರಿ ಈ ಸಂಸಾರ ಬಂಧನದಿಂದ ಬಿಡುಗಡೆ ದೊರೆಯಿತೆಂದರೆ ಸಾಕು ಉಳಿದ ಬಯಕೆಗಳೆಲ್ಲವೂ ಇಲ್ಲವಾಗುತ್ತವೆ. ಆದುದರಿಂದ ಮೋಕ್ಷಾರ್ಥಿಯಾಗಿ ದೇವಿಯನ್ನು ಬೇಡುವುದು ಎಲ್ಲದಕ್ಕಿಂತ ಮಿಗಿಲಾದುದು.
ಋಗ್ವೇದದಲ್ಲಿ ಉಕ್ತವಾಗಿರುವ ದಕ್ಷಯಜ್ಞದ ಕಥೆಯು ಮುಂದೆ ಹಲವಾರು ಪುರಾಣಗಳಲ್ಲಿ ವಿಸ್ತೃತಗೊಂಡು ಬೆಳೆದಿದೆ ದಕ್ಷ ಪ್ರಜಾಪತಿಯು ಯಜ್ಞವನ್ನು ಮಾಡಿದನು ಎಂಬ ಇತಿಹಾಸವು ಮಹಾಭಾರತದಲ್ಲಿಯೂ, ಮತ್ಯೃ, ಪದ್ಮ, ಕೂರ್ಮ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರವಾಗಿ ವಿಸ್ತೃತವಾಗಿದೆ. ಕಾಳಿದಾಸನು ಕುಮಾರ ಸಂಭವ ಎಂಬ ಕಾವ್ಯವನ್ನೇ ರಚಿಸಿರುತ್ತಾನೆ.
ಸತಿಯು ದಕ್ಷಪ್ರಜಾಪತಿಯ ಮಗಳು. ದಕ್ಷ ಪ್ರಜಾಪತಿಯು ಒಂದು ಯಜ್ಞವನ್ನು ಮಾಡಿದನು. ಆ ಯಜ್ಞಕ್ಕೆ ತನ್ನ ಮಗಳಾದ ಸತಿಯನ್ನು ಆಹ್ವಾನಿಸಲಿಲ್ಲ, ಆದರೂ ಸತಿಯು ತಂದೆಯ ಮನೆ ಎಂಬ ಭಾವನೆಯಿಂದ ಯಜ್ಞಕ್ಕಾಗಿ ಬಂದಳು, ಅವಳಿಗೆ ಅವಮಾನವಾದುದರಿಂದ ಯಜ್ಞಕುಂಡದಲ್ಲಿ ತನ್ನ ಪ್ರಾಣಾರ್ಪಣೆ ಮಾಡಿದಳು, ಪರಶಿವನು ಕೋಪಾವಿಷ್ಟನಾಗಿ ಯಜ್ಞ ಶಾಲೆಗೆ ಬಂದನು ತನ್ನ ಸತಿಯ ಸ್ಥಿತಿಯನ್ನು ನೋಡಿ ಬಹು ಉಗ್ರಕೋಪದಿಂದ ದೇವಿಯನ್ನು ತನ್ನ ಹೆಗಲಿನಲ್ಲಿ ಇರಿಸಿಕೊಂಡು ನೃತ್ಯಮಾಡ ತೊಡಗಿದನು ಪ್ರಪಂಚವೆಲ್ಲವೂ ನಡುಗತೊಡಗಿತು ದೇವತೆಗಳು ಹೆದರಿದರು, ಕೊನೆಗೆ ವಿಷ್ಣುವು ಉಪಾಯಾಂತರದಿಂದ ದೇವಿಯ ಶರೀರದ ಒಂದೊಂದು ಭಾಗವು ಬೀಳತೊಡಗಿತು, ದೇವೀಭಾಗವತ, ಕಾಳಿಕಾ ಪುರಾಣಗಳಲ್ಲಿ ಇದರ ವರ್ಣನೆಯನ್ನು ವಿವರವಾಗಿ ನೀಡಲಾಗಿದೆ, ಹಾಗೆ ಬಿದ್ದ ಒಂದೊಂದು ಸ್ಥಳವೂ ಒಂದು ಪವಿತ್ರ ಪೀಠವಾಯಿತು.
ತಂತ್ರಗ್ರಂಥಗಳಲ್ಲಿ ಈ ಪೀಠಗಳ ಸಂಖ್ಯೆಯನ್ನು ವಿವಿಧ ರೀತಿಯಲ್ಲಿ ಗುರುತಿಸಿದ್ದಾರೆ, ಕಾಳಿಕಾ ಪುರಾಣ, ರುದ್ರಯಾಮಾಲಾ, ಕುಬ್ಜಿಕಾ ತಂತ್ರ, ತಂತ್ರಸಾರ, ತಂತ್ರಚೂಡಾಮಣಿ ಮೊದಲಾದ ಕೆಲವು ಗ್ರಂಥಗಳಲ್ಲಿ ಐವತ್ತೊಂದು ಎಂದು ಗುರುತಿಸಿರುತ್ತಾರೆ ಮತ್ತೆ ಕೆಲವರು ಇಂತಹ ಪೀಠಗಳ ಸಂಖ್ಯೆ ನೂರ ಎಂಟು ಎಂದೂ ಗುರುತಿಸುತ್ತಾರೆ. ಮಹಾಭಾರತದಲ್ಲಿ 108 ಕ್ಷೇತ್ರಗಳನ್ನು ನಮೂದಿಸಲಾಗಿದೆ ಮತ್ಸ್ಯಪುರಾಣದಲ್ಲಿಯೂ ಇದನ್ನೇ ಕಾಣುತ್ತೇವೆ.
ಪೀಠಗಳ ಸಂಖ್ಯೆ ಹೇಗಾದರೂ ಇರಲಿ, ಇವು ಭರತಖಂಡದ ಭಾವೈಕ್ಯಕ್ಕೆ ಬಹಳ ಸಹಕಾರಿಯಾಗಿವೆ, ದೇಶದ ಯಾವ ಮೂಲೆಯಲ್ಲಿ ಹೋದರೂ ಒಂದಲ್ಲ ಒಂದು ಹೆಸರಿನಿಂದ ದೇವಿಯ ದರ್ಶನವಾಗುತ್ತದೆ. ಎಲ್ಲಾ ದೇವಿಯರ ಮಹಾತ್ಮ್ಯೆಯೂ ಒಂದೇ ಆಗಿದೆ, ಎತ್ತ ಎತ್ತಹರಿದರೂ ಎಲ್ಲಾ ನದಿಗಳೂ ಕೊನೆಯಲ್ಲಿ ಒಂದೇ ಸಾಗರದಲ್ಲಿ ತಮ್ಮ ಇರುವಿಕೆಯನ್ನೂ ಮರೆಯುವಂತೆ ಎತ್ತ ಎತ್ತ ಹೋದರೂ ಈ ದೇವಿಯ ಕ್ಷೇತ್ರಗಳಲ್ಲಿ ಭಕ್ತರು ಒಂದೇ ಒಂದು ತತ್ತ್ವವನ್ನು ಕಾಣುತ್ತಾರೆ. ಯಾವ ಹೆಸರಿನಿಂದ ಕರೆದರೂ ದೇವೀ ಒಬ್ಬಳೇ ನಾಮ ಹಲವು, ರೂಪ ಹಲವು ಆದರೆ ಶಕ್ತಿ ಒಂದೇ, ಅದೇ ಸರ್ವಶಕ್ತಿ, ಅದೇ ಮಹಾಶಕ್ತಿ, ಆ ಶಕ್ತಿಯ ರೂಪವೇ ಬೇರೆ ಬೇರೆ ರೀತಿಯಲ್ಲಿ ಗೋಚರಿಸುತ್ತವೆ ಎಂದು ಅನುಭವ ಪೂರ್ವಕವಾಗಿ ಅರಿಯುತ್ತಾರೆ.
ದೇವಿಯಿಂದ ಕೆಳಗೆ ಬಿದ್ದ ಲಿಂಗದ ಹೆಸರಿಗನುಗುಣವಾಗಿ ದೇವಿಯ ಕ್ಷೇತ್ರಗಳು ಮಹಿಮಾನ್ವಿತವಾದವು, ಸುಲಭವಾಗಿ ಅಧ್ಯಯನ ಮಾಡಲು
1 ದೇವಿಯ ಶರೀರದಿಂದಿ ಬಿದ್ದ ಭಾಗ ಅಥವಾ ಲಿಂಗ
2 ದೇವಿಯ ಶಕ್ತಿಯ ರೂಪ
3 ಬೈರವನು ಅಲ್ಲಿ ಯಾವ ಹೆಸರಿನಿಂದ ನೆಲೆ ಗೊಂಡಿದ್ದಾನೆ
4 ಪೀಠದ ಸ್ಥಳ ಎಂಬುದನ್ನು ಗಮನಿಸಬೇಕು
51ಪೀಠಗಳ ವಿವರಣೆ :
1) ಹಿಂದುಲಾಜ್ :
(1) ದೇವಿಯ ಕಪಾಲದಿಂದ ಕೆಳಗೆ ಬಿದ್ದಿತು
(2) ಶಕ್ತಿಯ ಹೆಸರು ಕೋತಾರಿ
(3) ಬೈರವನ ಹೆಸರು ಭೀಮಲೋಚನ
(4) ದೇವಿಯ ಭಾಗವು ಕೆಳಗೆ ಬಿದ್ದ ಭಾಗ ಅಥವಾ ಪ್ರದೇಶ ಬೆಲೂಚಿಸ್ಥಾನ ಈಗಿನ ಪಾಕಿಸ್ಥಾನ
2) ಕಿರೀಟ :
(1) ಕಿರೀಟವು ಇಲ್ಲಿ ಬಿದ್ದಿತು
(2) ವಿಮಲ ಅಥವ ಭವನೇಶಿ
(3) ಸಮಾವರ್ತ
(4) ಬಟ್ನಾಗರ್ (ಪಶ್ಚಿಮ ಬಂಗಾಳದ ಗಂಗಾನದಿಯ ತೀರ)
3) ಬೃಂದಾವನ :
(1) ಕೂದಲು
(2) ಉಮಾ
(3) ಬುತೇಷ
(4) ಭೂತೇಶ್ವರ ಮಹಾದೇವ ದೇವಾಲಯ ಮಥುರ (ಬೃಂದಾವನ ಮಾರ್ಗದಲ್ಲಿದೆ)
4. ಕರವೀರ :
(1) ಮೂರು ಕಣ್ಣುಗಳು
(2) ಮಹಿಷ ಮರ್ದಿನಿ
(3) ಕ್ರೋದಿಶ
(4) ಮಹಾಲಕ್ಷ್ಮಿ ದೇವಾಲಯ ಕೊಲ್ಲಾಪುರ (ಮಹಾರಾಷ್ಟ್ರ)
5. ಸುಗಂಧಾ :
(1) ಮೂಗು
(2) ಸುಗಂಧಾ ಅಥವಾ ಉಗ್ರಾತ್ರಾ
(3) ತ್ರಯಂಬಕ
(4) ಶಿಕಾರಪುರ (ಬಂಗ್ಲಾದೇಶದಲ್ಲಿರುವ ಬರೀಸಾಲ್ ನಗರದ ಸಮೀಪದಲ್ಲಿದೆ.
6. ಕಾರ-ಟೋಯ-ಟಾಟಾ :
(1) ಎಡದ ಕಿವಿ
(2) ಅಪರ್ಣಾ
(3) ವಾಮನ
(4) ಭವಾನಿಪುರ (ಬಂಗ್ಲಾದೇಶದ ಬೋಗಟಾನಗರದ ಸಮೀಪದಲ್ಲಿದೆ
7. ಶ್ರೀ ಪರ್ವತ
(1) ಬಲದ ಕಿವಿ
(2) ಶ್ರೀಸುಂದರೀ
(3) ಸುಂದರಾನಂದ
(4) ಲಡಾಕ್ ಪ್ರದೇಶ (ಕಾಶ್ಮೀರ)
8. ವಾರಣಸೀ :
(1) ಕಿವಿಯ ಆಭರಣಗಳು
(2) ವಿಶಾಲಕ್ಷ್ಮೀ
(3) ಕಾಲ-ಬೈರವ
(4) ಮಣಿಕರ್ಣಕಾ ಘಟಕ (ಉತ್ತರ ಪ್ರದೇಶ)
9. ಗೋದಾವರೀ :
(1) ಎಡದ ಕೆನ್ನೆ
(2) ವಿಶ್ಯೇಷಿ ಅಥವಾ ರಾಕಿಣೀ
(3) ವಿಶ್ಯೇಷ ಅಥವಾ ದಂಡಪಾಣಿ
(4) ಗೋದಾವರಿಯ ತಟದಲ್ಲಿರುವ ಕೋಟಿತೀರ್ಥ (ಆಂಧ್ರಪ್ರದೇಶದ ರಾಜಮಹೇಂದ್ರವರಂ ಹತ್ತಿರ)
10. ಗಂಡಕೀ :
(1) ಬಲದ ಕೆನ್ನೆ
(2) ಗಂಡಕೀ
(3) ಚಕ್ರಪಾಣಿ
(4) ಗಂಡಕೀನದಿಯ ತಟ (ನೇಪಾಳದ ಗಂಡಕೀ ನದಿಯ ತೀರ ಮುಕ್ತನಾಥ )
11. ಶುಚಿ :
(1) ಮೇಲಿನ ಹಲ್ಲುಗಳು ದವಡೆ
(2) ನಾರಾಯಣೀ
(3) ಸಂಹಾರ
(4) ಕನ್ಯಾಕುಮಾರೀ ಹತ್ತಿರವಿರುವ ಸ್ಥಾನ ಶಿವದೇವಸ್ಥಾನ ಶುಚೀಂದ್ರಂ (ತಮಿಳುನಾಡು)
12. ಪಂಚಸಾಗರ :
(1) ಕೆಳಗಿನ ಹಲ್ಲುಗಳು
(2) ವಾರಾಹಿ
(3) ಮಹಾರುದ್ರ
(4) ಗುರುತಿಸಲಾಗಿಲ್ಲ
13. ಜ್ವಾಲಾಮುಖಿ :
(1) ನಾಲಿಗೆ
(2) ಅಂಬಿಕಾ ಅಥವಾ ಸಿದ್ಧಿದಾ
(3) ಉನ್ಮತ್ತ
(4) ಹಿಮಾಚಲ ಪ್ರದೇಶ
14. ಭೈರವ ಪರ್ವತ :
(1) ಮೇಲಿನ ತುಟಿ
(2) ಆವಂತಿ
(3) ಲಂಬಾ ಕರಣ
(4) ಉಜ್ಜಯಿನಿ ಸಿಪ್ರಾನದಿಯ ತಟದಲ್ಲಿರುವ ನಗರ
15. ಅಟ್ಟಹಾಸ :
(1) ಕೆಳಗಿನ ದವಡೆ
(2) ಪುಲ್ಲಾರ
(3) ವಿಶ್ವೇಶ
(4) ಲುದ್ದಾಪುರದ ಹತ್ತಿರ (ಅಹಮದ್ ಪುರ ಮತ್ತು ಕಟವಾ ರೈಲು ಮಾರ್ಗದ ಮಧ್ಯದಲ್ಲಿದೆ)
16. ಜ್ಞಾನಸ್ಥಾನ :
(1) ಕೆನ್ನೆ
(2) ಭ್ರಾಮರಿ
(3) ವಿಕ್ರಿರಿತಾಕ್ಷ
(4) ಭದ್ರಕಾಳ ಕ್ಷೇತ್ರ ನಾಸಿಕ್ (ಪಂಚವಟಿಯ ಹತ್ತಿರ)
17. ಕಾಶ್ಮೀರ :
(1) ಕತ್ತು
(2) ಮಹಾಮಾಯಾ
(3) ತ್ರಿ - ಸಂಧ್ಯೇಶ್ವರ
(4) ಅಮರನಾಥ ಗುಹೆ
18. ನಂದೀಪುರ :
(1) ಕೊರಳಿನ ಕಂಠಾಭರಣ
(2) ನಂದಿನಿ
(3) ನಂದಿಕೇಶ್ವರ
(4) ವಟವೃಕ್ಷದ ಸಮೀಪದಲ್ಲಿದೆ ಸಯಿನ್ ದಿಯಾ (ಹೌರಾ ಮತ್ತು ಕ್ಲೂಲ್ ರೈಲು ಮಾರ್ಗದ ಮಧ್ಯದಲ್ಲಿರುವ ಸ್ಥಳ ಪಶ್ಚಿಮ ಬಂಗಾಳ
19. ಶ್ರೀಶೈಲ :
(1) ಕೊರಳಿನ ಮೂಳೆ
(2) ಮಹಾಲಕ್ಷ್ಮೀ
(3) ಸಂವರಾನಂದಾ
(4) ಭಮರಾಂಬಿಕಾ ದೇವಾಸ್ಥಾನ ಶ್ರೀಶೈಲ (ಆಂದ್ರಪ್ರದೇಶ)
20. ನಲಹತಿ :
(1) ವಿವರ ತಿಳಿದು ಬಂದಿಲ್ಲ
(2) ಕಾಳಿಕಾ
(3) ಯೋಗೀಶ
(4) ನಲಹತಿ (ಪಶ್ಚಿಮ ಬಂಗಾಳ)
21. ಮಿಥಿಲಾ :
(1) ಎಡಭುಜ
(2) ಮಹಾದೇವಿ ಅಥವ ಉಮಾ
(3) ಮಹೋದರಾ
(4) ದುರ್ಗಾದೇವಾಲಯ (ಜನಕಪುರದ ಹತ್ತಿರ)
22. ರತ್ನಾವಳೀ :
(1) ಬಲಭುಜ
(2) ಕುಮಾರೀ
(3) ಶಿವಾ
(4) ತಿಳಿದು ಬಂದಿಲ್ಲ
23. ಪ್ರಭಾಸ :
(1) ಉದರದ ತಳಭಾಗ
(2) ಚಂದ್ರಭಾಗಾ
(3) ವಕ್ರತುಂಡಾ
(4) ಅಂಬಾಜೀ ದೇವಸ್ಥಾನ (ಗಿರಿನಾರ್ ಬೆಟ್ಟಗಳಲ್ಲಿದೆ)
24. ಜಲಂಧರ :
(1) ಎಡಭಾಗದ ಸ್ತನ
(2) ತ್ರಿಪುರಮಾಲಿನೀ
(3) ಭೀಷಣಾ
(4) ಪಂಜಾಬ್
25. ರಾಮಗಿರಿ :
(1) ಬಲಭಾಗದ ಸ್ತನ
(2) ಶಿವಾಣಿ
(3) ಚಂದ
(4) ಶಾರದಾ ದೇವಾಲಯ ಚಿತ್ರಕೂಟ
26. ವೈದ್ಯನಾಥ :
(1) ಹೃದಯ
(2) ಜಯದುರ್ಗಾ
(3) ವೈದ್ಯನಾಥ
(4) ಶಕ್ತಿ ದೇವಾಲಯ - ವೈದ್ಯನಾಥ ದೇವಾಲಯದ ಎದುರು (ಬಿಹಾರ ರಾಜ್ಯ)
27. ವಕ್ರೇಶ್ವರ :
(1) ಮೆದುಳು
(2) ಮಹಿಷಮರ್ದಿನೀ
(3) ವಕ್ರಾಂತಾ
(4) ದುಬ್ರಾಜಪುರದ ಸ್ಮಶಾನ, ಓಂಡಾಲಾ-ಸ್ಕೆಂದ್ಯ ರೈಲ್ವೆಮಾರ್ಗದಲ್ಲಿ (ಪಶ್ಚಿಮ ಬಂಗಾಳ)
28. ಕನ್ಯಕಾಶ್ರಮ :
(1) ಹಿಂಭಾಗದ ಬೆನ್ನು ಹುರಿ
(2) ಶರ್ವಾಣೀ
(3) ನಿಮಿಷಾ
(4) ಭದ್ರಕಾಳೀ ದೇವಸ್ಥಾನ ಕನ್ಯಾಕುಮಾರಿ ದೇವಸ್ತಾನದ ಒಳ ಆವರಣದಲ್ಲಿ ಕನ್ಯಾಕುಮಾರಿ (ತಮಿಳುನಾಡು)
29. ಬಹುಳ :
(1) ಎಡತೋಳು
(2) ಬಹುಳಾ ಅಥವ ಚಂಡಿಕಾ
(3) ಬೈರುಕ
(4) ಕೇತು ಬ್ರಹ್ಮ ದೇವಾಲಯ, ಕಟ್ಟಾನಗರದ ಹತ್ತಿರ (ಪಶ್ಚಿಮ ಬಂಗಾಳ)
30. ಚಟ್ಟಾಲ :
(1) ಬಲತೋಳು
(2) ಭವಾನಿ
(3) ಭವಾನಿ ಚಂದ್ರಶೇಖರ
(4) ಭವಾನಿ ದೇವಸ್ತಾನ ಚಂದ್ರಶೇಖರ ಬೆಟ್ಟ ಸೀತಾಕುಂಡದ ಹತ್ತಿರ (ಬಂಗ್ಲಾದೇಶದ ಛೋಟಾಗಾಂವ್ ಹತ್ತಿರ)
31. ಉಜ್ಜಯಿನಿ :
(1) ಕತ್ತಿನ ಪಟ್ಟಿಯ ಮೂಳೆ
(2) ಮಂಗಳ ಚಂಡಿ
(3) ಕಪಿಲಾಂಬರ
(4) ಹರಸಿದ್ದಿ ದೇವಸ್ಥಾನ ಉಜ್ಜಯಿನಿಯ ಬಳಿಯಲ್ಲಿರುವ ರುದ್ರ ಸಾಗರದ ಬಳಿ
32. ಮಣಿವೇದಿಕಾ :
(1) ತೋಳು
(2) ಗಾಯತ್ರಿ
(3) ಸರ್ವಾನಂದಾ
(4) ಗಾಯತ್ರೀ ಬೆಟ್ಟಗಳು ಪುಷ್ಕರದ ಬಳಿ
33. ಮಾನಸ :
(1) ಬಲತೋಳು
(2) ದಾಕ್ಷಾಯಿಣೀ
(3) ಹರಾ ಅಥವಾ ಅಮರಾ
(4) ಮಾನಸಸರೋವರ ಟಿಬೆಟ್ ಪೀಠ ಭೂಮಿ
34. ಯಶೋರ :
(1) ಎಡತೋಳು
(2) ಯಶೋರೇಶ್ವರೀ
(3) ಚಂದಾದ
(4) ಈಶ್ವರ ಪುರಿ (ಜೈಶೋರ್ - ಯಶೋಹರ ಮಾರ್ಗ, ಬಂಗ್ಲಾದೇಶ)
35. ಪ್ರಯಾಗ :
(1) ಕೈ ಬೆರಳುಗಳು
(2) ಲಲಿತಾ
(3) ಭವ
(4) ಲಲಿತಾ ದೇವಿ ದೇವಸ್ಥಾನ ಅಕ್ಷಯವಟವೃಕ್ಷದ ಬಳಿ ಅಲಹಾಬಾದ್
36. ವಿರಾಜ :
(1) ಹೊಕ್ಕಳು
(2) ವಿಮಲಾ
(3) ಜಗನ್ನಾಥ
(4) ವಿಮಲಾದೇವಿ ದೇವಾಲಯ - ಜಗನ್ನಾಥ ದೇವಾಲಯ ಪುರಿ
37. ಕಾಂಚೀ :
(1) ಮೂಳೆಗಳು
(2) ಸೇವಗರ್ಭ
(3) ರುರು
(4) ಕಾಳಿಕಾದೇವಸ್ಥಾನ ಶಿವಕಂಚಿ ಕಾಂಚೀಪುರ (ತಮಿಳುನಾಡು)
38. ಕಾಲಮಹಾದೇವ :
(1) ಎಡಪೃಷಾ
(2) ಕಾಳೀ
(3) ಅಸಿತಾಂಗ
(4) ಸ್ಥಳ ನಿರ್ಧಾರವಾಗಿಲ್ಲ
39. ಸೋನಾ :
(1) ಬಲಭಾಗದ ಪೃಷ್ಠ
(2) ನರ್ಮದಾ ಅಥವಾ ಸೋನಾಕ್ಷಿ
(3) ಭದ್ರಸೇನಾ
(4) ಸೋನಾನದಿಯ ಉಗಮಸ್ಥಳ (ಅಮರ ಕಂಟಕ ಪ್ರದೇಶ)
40. ಕಾಮಗಿರಿ :
(1) ಯೋನಿ
(2) ಕಾಮಾಖ್ಯಾ
(3) ಉಮಾನಂದಾ
(4) ಕಾಮಾಖ್ಯದೇವಸ್ಥಾನ, ಗೌಹತಿ (ಅಸ್ಸಾಂ)
41. ನೇಪಾಳ :
(1) ಎರಡೂ ಕಾಲಿನ ಕಿಣ್ಣುಗಳು
(2) ಮಹಾಮಾಯಾ
(3) ಕಪಾಲೀ
(4) ಗುಹೇಶ್ವರೀ ದೇವಸ್ಥಾನ ಭಾಗಮತಿ ನದಿಯ ತೀರ ಪಶುಪತಿನಾಥ (ನೇಪಾಳ)
42. ಜಯಂತಿ :
(1) ಎಡತೊಡೆ
(2) ಜಯಂತೀ
(3) ಕ್ರಮಭದೀಶ್ವರ
(4) ದರ್ಭಂಗ ಪಟ್ಟಣ ಜಯಂತಿ ಬೆಟ್ಟಗಳು, ಶಿಲ್ಲಾಂಗ್ ಬಳಿ (ಮೇಘಾಲಯ)
43. ಮಗಧ :
(1) ಬಲತೊಡೆ
(2) ಸರ್ವಾನಂದಕಾರಿ
(3) ವ್ಯೋಮಕೇಶ
(4) ಪಟ್ಟಣೀಶ್ವರೀ ದೇವಿ ದೇವಾಲಯ, ಪಾಟ್ನಾನಗರದ ಬಳಿ (ಬಿಹಾರ)
44. ತ್ರಿಸ್ತೋಟಾ :
(1) ಎಡಪಾದ
(2) ಭ್ರಾಮರೀ
(3) ಈಶ್ವರ
(4) ಜಲಪಾಯಿದೇವಸ್ಥಾನ (ಪಶ್ಚಿಮ ಬಂಗಾಳ)
45. ತ್ರಿಪುರ :
(1) ಬಲಪಾದ
(2) ತ್ರಿಪುರಸುಂದರೀ
(3) ತ್ರಿಪುರೇಷ
(4) ರಾಧಕಿಶೋರದ ಬಳಿಯಿರುವ ಬೆಟ್ಟಗಳು ತ್ರಿಪುರ
46. ವಿಭಾಷಾ :
(1) ಎಡ ಮಣಿಕಟ್ಟು
(2) ಕಾಪಾಲಿನೀ ಅಥವ ಭೀಮರೂಪಾ
(3) ಸರ್ವಾನಂದಾ
(4) ಕಾಳೀದೇವಸ್ಥಾನದ ಮೂಲಕ ನಗರದ ಬಳಿ ಮಿಡ್ ನಾಪುರ ಜಿಲ್ಲೆ ( ಪಶ್ಚಿಮ ಬಂಗಾಳ)
47. ಕುರುಕ್ಷೇತ್ರ :
(1) ಬಲಮಣಿಕಟ್ಟು
(2) ಸಾವಿತ್ರೀ
(3) ಸ್ಥಾಣು
(4) ದ್ವೈಪಾಯನ ಸರೋವರ
48. ಲಂಕಾ :
(1) ಮಣಿಕಟ್ಟು
(2) ಇಂದ್ರಾಕ್ಷೀ
(3) ರಾಕ್ಷಸೇಶ್ವರ
(4) ಶ್ರೀಲಂಕಾ
49. ಯುಗಾದ್ಯ :
(1) ಬಲಭಾಗದ ಹೆಬ್ಬೆರಳು
(2) ಭೂತಧಾತ್ರೀ
(3) ಕ್ಷೀರ ಕಂಟದ ಅಥವ ಯುಗಾಧ್ಯ
(4) ಉತ್ತರ ಖೀರ ಪಟ್ಟಣ ಬರದ್ವಾನ್ ಬಳಿ (ಪಶ್ಚಿಮ ಬಂಗಾಳ)
50. ವಿರಾಟ :
(1) ಎಡಗಾಲಿನ ಹೆಬ್ಬೆಟ್ಟು
(2) ಅಂಬಿಕಾ
(3) ಅಮೃತಾ
(4) ವೈರಾಟ ನಗರದ ಬಳಿ ಜಯಪುರ (ರಾಜಸ್ಥಾನ)
51. ಕಾಳಿಪೀಠ :
(1) ಬೆರಳುಗಳು
(2) ಕಾಶಿಕಾ
(3) ನಕುಳಿಕಾ
(4) ಕಾಳಿದೇವಸ್ಥಾನ ಕಾಳೀಘಟ್ಟ, ಕಲ್ಕತ್ತ

thank you sir,
ReplyDeleteee mahiti tumba upayukta agide