ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು
ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು : ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ ಸರ್ವಭೂತದಯಾ ಪುಷ್ಪಂ ಸತ್ಯಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ಧ್ಯಾನಪುಷ್ಪಂ ತಪಃ ಪುಷ್ಪಂ ಕ್ರಿಯಾಪುಷ್ಪಂ ಆರ್ಚತಿ ತುಷ್ಯತಿ ಕೇಶವ ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ. ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ...