ಜೀವನ್ಮುಕ್ತಿಯೂ ವಿದೇಹಮುಕ್ತಿಯೂ
ಮುಕ್ತಿ ಎಂದರೇನು? ಎಂಬ ವಿಷಯದಲ್ಲಿಯೂ ವಾದವಿವಾದಗಳಿಲ್ಲದೆ ಇಲ್ಲ, ಜೀವನು ಸಂಸಾರದಲ್ಲಿ ಧರ್ಮಾಧರ್ಮಾಗಳಿಂದ ಶರೀರವನ್ನು ಒಂದೊಂದಾಗಿ ಧರಿಸುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುವನು. ಈ ಸುಖ ದುಃಖಗಳಿಂದಲೂ ಇವಕ್ಕೆ ಕಾರಣವಾಗಿರುವ ರಾಗದ್ವೇಷಾದಿಗಳಿಂದಲೂ ಬಿಡುಗಡೆಯನ್ನು ಹೊಂದುವದೇ ಮುಕ್ತಿ ಎಂದು ಸಾಮಾನ್ಯವಾಗಿ ಎಲ್ಲಾವಾದಿಗಳೂ ಒಪ್ಪುತ್ತಾರೆ. ಈ ಮುಕ್ತಿಯು ನಿತ್ಯವಾಗಿರುತ್ತದೆ ಎಂಬುದೂ ಎಲ್ಲಾ ವಾದಿಗಳಿಗೂ ಸಮ್ಮತವಾಗಿರುತ್ತದೆ ಎಂದಿಟ್ಟುಕೊಳ್ಳಬಹುದು. ಶ್ರೀ ಶಂಕರಾಚಾರ್ಯರವರಿಗೆ ಸಮ್ಮತವಾದ ಅದ್ವೈತಸಿದ್ದಾಂತದಲ್ಲಿ ಮಾತ್ರ ಒಂದು ವಿಶೇಷರೀತಿಯ ಅಭ್ಯುಪಗಮವಿದೆ. ಬಂಧವು ಪರಮಾರ್ಥವಾಗಿದ್ದರೆ ಅದು ಎಂದಿಗೂ ಹೋಗಲಾರದು; ಏಕೆಂದರೆ ನಿತ್ಯವಾಗಿರುವ ಬಂಧವು ಜೀವನ ಸ್ವಭಾವವಾಗಿದ್ದರೆ ಸೂರ್ಯನಿಗೆ ಸ್ವಭಾವವಾಗಿರುವ ಬಿಸಿ ಬೆಳಕುಗಳು ಹೇಗೆ ತೊಲಗಲಾರವೋ ಹಾಗೆ ಬಂಧವೊ ತೊಲಗಲಾರದೆಂದೇ ಒಪ್ಪಬೇಕಾಗುತ್ತದೆ. ಇದೂ ಅಲ್ಲದೆ ನಿತ್ಯವಾದ ವೋಕ್ಷವು ಸಾಧನದಿಂದ ಉಂಟಾಗುತ್ತದೆ ಎಂದು ಕಲ್ಪಿಸುವದೂ ದೃಷ್ಟವಿರುದ್ಧವಾಗಿರುತ್ತದೆ. ಯಾವದು ಕೃತಕವೋ, ಯಾವದು ಸಾಧನದಿಂದ ಹೊಸದಾಗಿ ಉಂಟಾಗತಕ್ಕದ್ದೋ, ಅದು ಆದಿಯುಳ್ಳದ್ಧಾದ್ದರಿಂದ ಕೊನೆಯುಳ್ಳದ್ದೂ ಆಗಿರಬೇಕು ಎಂಬುದು ಸ್ಪಷ್ಟ. ಆದ್ದರಿಂದ ವೋಕ್ಷವು ಹೊಸದಾಗಿ ಉಂಟಾಗತಕ್ಕದ್ದಲ್ಲ ಎಂಬುದು ಈ ಸಿದ್ದಾಂತದ ಮುಖ್ಯೋಪದೇಶವಾಗಿರುತ್ತದೆ. ಹಾಗಾದರೆ ಬಂಧಮೋಕ್...