ರುದ್ರಾಕ್ಷಿ



ರುದ್ರಾಕ್ಷಮೂಲಮ್ ತತ್ ಬ್ರಹ್ಮಾ ತನ್ನಾಲಮ್ ವಿಷ್ಣುಃ ಏವ ಚ |
ತನ್ಮುಖಮ್ ರುದ್ರಃ ಇತಿ ಆಹುಃ ತದ್ಬಿಂದುಃ ಸರ್ವದೇವತಾಃ ||
ರುದ್ರಾಕ್ಷಿಯ ಬುಡದಲ್ಲಿ ಬ್ರಹ್ಮನು, ರಂಧ್ರದಲ್ಲಿ ವಿಷ್ಣುವು, ಮುಖಗಳಲ್ಲಿ ರುದ್ರನೂ ಇರುತ್ತಾರೆ. ಮುಳ್ಳಿನ ತುದಿಯಲ್ಲಿ ಎಲ್ಲ ದೇವತೆಗಳು ಇರುತ್ತಾರೆ.


ಗ್ರಹಣೇ ವಿಷುವೇ ಚ ಏವಮ್ ಅಯನೇ ಸಂಕ್ರಮೇ ಅಪಿ ಚ |
ದರ್ಶೇಷು ಪೂರ್ಣಮಾಸೇ ಚ ಪೂರ್ಣೇಷು ದಿವಸೇಷು ಚ |
ರುದ್ರಾಕ್ಷಧಾರಣಾತ್ ಸದ್ಯಃ ಸರ್ವಪಾಪೈಃ ಪ್ರಮುಚ್ಯತೇ ||
ಅಮಾವಸೆ, ಹುಣ್ಣಿಮೆ, ಉತ್ತರಾಯಣ ಮತ್ತು ದಕ್ಷಿಣಾಯನಗಳ ಪ್ರಾರಂಭದ ದಿನ ಸಂಕ್ರಮಣ,ವಿಷುವ ಸಂಕ್ರಮಣ, ಗ್ರಹಣದ ದಿನಗಳಲ್ಲಿ ರುದ್ರಾಕ್ಷಿಯನ್ನು ಧರಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ.


ಚತುರ್ದಶಮುಖಮ್ ಚ ಅಕ್ಷಮ್ ರುದ್ರನೇತ್ರಸಮುದ್ಭವಮ್ |
ಸರ್ವವ್ಯಾಧಿಹರಮ್ ಚ ಏವ ಸರ್ವದಾ ಆರೋಗ್ಯಮ್ ಆಪ್ನುಯಾತ್ ||
ಹದಿನಾಲ್ಕು ಮುಖದ ರುದ್ರಾಕ್ಷಿಯು ರುದ್ರನ ನೇತ್ರದಿಂದಲೇ ಉಂಟಾಗುತ್ತದೆ. ಇದನ್ನು ಧರಿಸುವುದರಿಂದ ಎಲ್ಲ ರೋಗಗಳು ನಾಶಾವಾಗಿ ಆರೋಗ್ಯವು ಸಿದ್ಧಿಸುತ್ತದೆ.


ತ್ರಯೋದಶಮ್ ತು ಮುಖಮ್ ತು ಅಕ್ಷಮ್ ಕಾಮದಮ್ ಸಿದ್ಧಿದಮ್ ಶುಭಮ್ |
ತಸ್ಯಾಃ ಧಾರಣಮಾತ್ರೇಣ ಕಾಮದೇವಃ ಪ್ರಸೀದತಿ ||
ಹದಿಮೂರು ಮುಖದ ರುದ್ರಾಕ್ಷಿಯು ಮನಸ್ಸಿನ ಕಾಮನೆಗಳನ್ನು ಮತ್ತು ಸಿದ್ಧಿಗಳನ್ನು ಉಂಟುಮಾಡುತ್ತದೆ. ಇದನ್ನು ಧರಿಸುವವರು ಕಾಮದೇವನ ಅನುಗ್ರಹವನ್ನು ಹೊಂದುತ್ತಾರೆ.


ರುದ್ರಾಕ್ಷಮ್ ದ್ವಾದಶಮುಖಮ್ ಮಹಾವಿಷ್ಣುಸ್ವರೂಪಕಮ್ |
ದ್ವಾದಶಾದಿತ್ಯರೂಪಮ್ ಚ ಬಿಭರ್ತಿ ಏವ ಹಿ ತತ್ಪರಮ್ ||
ಹನ್ನೆರಡು ಮುಖದ ರುದ್ರಾಕ್ಷಿಯು ಮಹಾವಿಷ್ಣುವಿನ ಮತ್ತು ದ್ವಾದಶಾದಿತ್ಯರ ಸ್ವರೂಪವಾಗಿದೆ. ಇದನ್ನು ಧರಿಸುವವರು ವಿಷ್ಣುವಿನಲ್ಲಿ, ದ್ವಾದಶಾದಿತ್ಯರಲ್ಲಿ ಭಕ್ತಿಯುಳ್ಳವರಾಗುತ್ತಾರೆ.


ಏಕಾದಶಮುಖಮ್ ತು ಅಕ್ಷಮ್ ರುದ್ರೈಕಾದಶದೈವತಮ್ |
ತತ್ ಇದಮ್ ದೈವತಮ್ ಪ್ರಾಹುಃ ಸದಾ ಸೌಭಾಗ್ಯವರ್ಧನಮ್ ||
ಹನ್ನೊಂದು ಮುಖಗಳ ರುದ್ರಾಕ್ಷಿಯು ಏಕಾದಶ ರುದ್ರರು ಸ್ವರೂಪವಾಗಿದೆ. ಈ ದೇವತೆಗಳನ್ನು ಸದಾ ಸೌಭಾಗ್ಯವನ್ನು ನೀಡುವರೆಂದು ಹೇಳಲಾಗಿದೆ.


ದಶವಕ್ತ್ರಮ್ ತು ರುದ್ರಾಕ್ಷಮ್ ಯಮದೈವತ್ಯಮ್ ಈರಿತಮ್ |
ದಶಾಪ್ರಶಾಂತಿಜನಕಮ್ ಧಾರಣಾತ್ ನ ಅತ್ರ ಸಂಶಯಃ ||
ಹತ್ತು ಮುಖಗಳ ರುದ್ರಾಕ್ಷಿಯು ಯಮದೇವತೆಯ ಸ್ವರೂಪವಾಗಿದೆ. ಇದನ್ನು ನೋಡುವುದರಿಂದ ಮತ್ತು ಧರಿಸುವುದರಿಂದ ಶಾಂತಿಯು ಉಂಟಾಗುತ್ತದೆ.


ನವವಕ್ತ್ರಮ್ ತು ರುದ್ರಾಕ್ಷಮ್ ನವಶಕ್ತ್ಯಧಿದೈವತಮ್ |
ತಸ್ಯ ಧಾರಣಮಾತ್ರೇಣ ಪ್ರೀಯಂತೇ ನವಶಕ್ತಯಃ ||
ಒಂಬತ್ತು ಮುಖಗಳ ರುದ್ರಾಕ್ಷಿಯು ನವಶಕ್ತಿಗಳ ಸ್ವರೂಪವಾಗಿದೆ. ಇದನ್ನು ಧರಿಸುವುದರಿಂದ ನವಶಕ್ತಿಗಳು ಪ್ರಸನ್ನರಾಗುತ್ತಾರೆ.


ವಸ್ವಷ್ಟಕಪ್ರಿಯಮ್ ಚ ಏವ ಗಂಗಾ ಪ್ರೀತಿಕರಮ್ ತಥಾ |
ತತ್ ಧಾರಣಾತ್ ಇಮೇ ಪ್ರೀತಾಃ ಭವೇಯುಃ ಸತ್ಯವಾದಿನಃ ||
ಈ ರುದ್ರಾಕ್ಷಿಯನ್ನು ಧರಿಸುವುದರಿಂದ ಅಷ್ಟವಸುಗಳು ಮತ್ತು ಗಂಗೆಯರು ಅನುಗ್ರಹಿಸುತ್ತಾರೆ. ಇದನ್ನು ಧರಿಸುವುದರಿಂದ ಸತ್ಯವಾದಿಗಳು ಪ್ರೀತಿಯನ್ನು ಹೊಂದುತ್ತಾರೆ.


ಮಹತೀ ಜ್ಞಾನಸಂಪತ್ತಿಃ ಶುಚಿಃ ಧಾರಣತಃ ಸದಾ |
ಅಷ್ಟವಕ್ತ್ರಮ್ ತು ರುದ್ರಾಕ್ಷಮ್ ಅಷ್ತಮಾತ್ರಾಧಿದೈವತಮ್ ||
ಎಂಟು ಮುಖದ ರುದ್ರಾಕ್ಷಿಯು ಅಷ್ಟಮಾತೃಕೆಯರ ಸ್ವರೂಪವಾಗಿದೆ. ಇದನ್ನು ಧರಿಸುವುದರಿಂದ ಸದಾ ಶುಚಿಯೂ ಜ್ಞಾನಿಯೂ ಆಗುತ್ತಾನೆ.


ಸಪ್ತವಕ್ತ್ರಮ್ ತು ರುದ್ರಾಕ್ಷಮ್ ಸಪ್ತಮಾಲಾಧಿದೈವತಮ್ |
ತತ್ ಧಾರಣಾತ್ ಮಹಾಶ್ರೀಃ ಸ್ಯಾತ್ ಮಹದಾರೋಗ್ಯಮ್ ಉತ್ತಮಮ್ ||
ಏಳು ಮುಖದ ರುದ್ರಾಕ್ಷಿಯು ಬ್ರಾಹ್ಮೀ ಮೊದಲಾದ ಸಪ್ತ ಮಾತೃಕೆಯರ ಸ್ವರೂಪವಾಗಿದೆ. ಇದನ್ನು ಧರಿಸುವುದರಿಂದ ಅತುಲವಾದ ಸಂಪತ್ತು ಮತ್ತು ಆರೋಗ್ಯಗಳು ಉಂಟಾಗುತ್ತವೆ.


ಷಡ್ವಕ್ತ್ರಮ್ ಅಪಿ ರುದ್ರಾಕ್ಷಮ್ ಕಾರ್ತಿಕೇಯಾಧಿದೈವತಮ್ |
ತತ್ ಧಾರಣಾತ್ ಮಹಾಶ್ರೀಃ ಸ್ಯಾತ್ ಮಹದಾರೋಗ್ಯಮ್ ಉತ್ತಮಮ್ ||
ಆರು ಮುಖದ ರುದ್ರಾಕ್ಷಿಯು ಷಣ್ಮುಖನ ಸ್ವರೂಪವಾಗಿದೆ, ಇದನ್ನು ಧರಿಸುವುದರಿಂದ ಬಹಳ ಸಂಪತ್ತು ಮತ್ತು ಆರೋಗ್ಯಗಳು ಉಂಟಾಗುತ್ತವೆ,


ಪಂಚವಕ್ತ್ರಮ್ ತು ರುದ್ರಾಕ್ಷಮ್ ಪಂಚಬ್ರಹ್ಮಸ್ವರೂಪಕಮ್ |
ಪಂಚವಕ್ತ್ರಃ ಸ್ವಯಮ್ ಬ್ರಹ್ಮ ಪುಂಹತ್ಯಾಮ್ ಚ ವ್ಯಪೋಹತಿ ||
ಐದು ಮುಖದ ರುದ್ರಾಕ್ಷಿಯು ಬ್ರಹ್ಮನ ಸ್ವರೂಪವಾಗಿದೆ, ಇದನ್ನು ಧರಿಸುವುದರಿಂದ ಬ್ರಹ್ಮನು ಸದಾ ಅನುಗ್ರಹಿಸುತ್ತಾನೆ. ಇದರಿಂದ ಬ್ರಹ್ಮಹತ್ಯಾ ದೋಷವು ನಾಶವಾಗುತ್ತದೆ.


ಚತುರ್ಮುಖಮ್ ಚ ರುದ್ರಾಕ್ಷಮ್ ಚತುರ್ವಕ್ತ್ರಸ್ವರೂಪಕಮ್ |
ತತ್ ಧಾರಣಾತ್ ಚತುರ್ವಕ್ತ್ರಃ ಪ್ರೀಯತೇ ತಸ್ಯ ನಿತ್ಯದಾ ||
ನಾಲ್ಕು ಮುಖದ ರುದ್ರಾಕ್ಷಿಯು ಬ್ರಹ್ಮನ ಸ್ವರೂಪವಾಗಿದೆ, ಇದನ್ನು ಧರಿಸುವುದರಿಂದ ಬ್ರಹ್ಮನು ಸದಾ ಅನುಗ್ರಹಿಸುತ್ತಾನೆ.


ತ್ರಿಮುಖಮ್ ಚ ಏವ ರುದ್ರಾಕ್ಷಮ್ ಅಗ್ನಿತ್ರಯಸ್ವರೂಪಕಮ್ |
ತತ್ ಧಾರಣಾತ್ ಚ ಹುತಭುಕ್ ತಸ್ಯ ತುಷ್ಯತಿ ನಿತ್ಯದಾ ||
ಮೂರು ಮುಖವಿರುವ ರುದ್ರಾಕ್ಷಿಯು ಮೂರು ಅಗ್ನಿಗಳ ಸ್ವರೂಪವಾಗಿದೆ, ಇದನ್ನು ಧರಿಸುವುದರಿಂದ ಅಗ್ನಿಗಳು ಸದಾ ಅನುಗ್ರಹಿಸುತ್ತವೆ.


ದ್ವಿವಕ್ತ್ರಂ ತು ಮುನಿಶ್ರೇಷ್ಠ ಚ ಅರ್ಧನಾರೀಶ್ವರಾತ್ಮಕಮ್ |
ಧಾರಣಾತ್ ಅರ್ಧನಾರೀಶಃ ಪ್ರೀಯತೇ ತಸ್ಯ ನಿತ್ಯಶಃ ||
ಎರಡು ಮುಖವಿರುವ ರುದ್ರಾಕ್ಷಿಯು ಅರ್ಧನಾರೀಶ್ವರನ ಸ್ವರೂಪವಾಗಿದೆ, ಇದನ್ನು ಧರಿಸುವುದರಿಂದ ಅರ್ಧನಾರೀಶ್ವರನು ಅನುಗ್ರಹಿಸುತ್ತಾನೆ.


ಮತಿವಿಜ್ಞಾನಸಂಪತ್ತಿಶುದ್ಧಯೇ ಧಾರಯೇತ್ ನರಃ |
ವಿನಾಯಕಾಧಿದೈವಮ್ ಚ ಪ್ರವದಂತಿ ಮನೀಷಿಣಃ ||
ಜ್ಞಾನಿಗಳು ಇದನ್ನು ಗಣಪತಿಯ ರೂಪವೆಂದು ತಿಳಿಯುತ್ತಾರೆ. ವಿದ್ಯೆ , ಬುದ್ಧಿ, ಸಂಪತ್ತುಗಳು ಹೆಚ್ಚಲು ಇದನ್ನು ಧರಿಸಬೇಕು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ