Posts

Showing posts from January, 2019

ಶ್ರೀಹನುಮತ್ತಾಂಡವಸ್ತೋತ್ರಮ್

Image
ವನ್ದೇ ಸಿನ್ದೂರವರ್ಣಾಭಂ ಲೋಹಿತಾಮ್ಬರಭೂಷಿತಮ್ । ರಕ್ತಾಂಗರಾಗಶೋಭಾಢ್ಯಂ ಶೋಣಾಪುಚ್ಛಂ ಕಪೀಶ್ವರಮ್॥ ಭಜೇ ಸಮೀರನನ್ದನಂ, ಸುಭಕ್ತಚಿತ್ತರಂಜನಂ, ದಿನೇಶರೂಪಭಕ್ಷಕಂ, ಸಮಸ್ತಭಕ್ತರಕ್ಷಕಮ್ । ಸುಕಂಠಕಾರ್ಯಸಾಧಕಂ, ವಿಪಕ್ಷಪಕ್ಷಬಾಧಕಂ, ಸಮುದ್ರಪಾರಗಾಮಿನಂ, ನಮಾಮಿ ಸಿದ್ಧಕಾಮಿನಮ್ ॥ 1॥ ಸುಶಂಕಿತಂ ಸುಕಂಠಭುಕ್ತವಾನ್ ಹಿ ಯೋ ಹಿತಂ ವಚಸ್ತ್ವಮಾಶು ಧೈರ್ಯ್ಯಮಾಶ್ರಯಾತ್ರ ವೋ ಭಯಂ ಕದಾಪಿ ನ । ಇತಿ ಪ್ಲವಂಗನಾಥಭಾಷಿತಂ ನಿಶಮ್ಯ ವಾನರಾsಧಿನಾಥ ಆಪ ಶಂ ತದಾ, ಸ ರಾಮದೂತ ಆಶ್ರಯಃ ॥ 2॥ ಸುದೀರ್ಘಬಾಹುಲೋಚನೇನ, ಪುಚ್ಛಗುಚ್ಛಶೋಭಿನಾ, ಭುಜದ್ವಯೇನ ಸೋದರೀಂ ನಿಜಾಂಸಯುಗ್ಮಮಾಸ್ಥಿತೌ । ಕೃತೌ ಹಿ ಕೋಸಲಾಧಿಪೌ, ಕಪೀಶರಾಜಸನ್ನಿಧೌ, ವಿದಹಜೇಶಲಕ್ಷ್ಮಣೌ, ಸ ಮೇ ಶಿವಂ ಕರೋತ್ವರಮ್ ॥ 3॥ ಸುಶಬ್ದಶಾಸ್ತ್ರಪಾರಗಂ, ವಿಲೋಕ್ಯ ರಾಮಚನ್ದ್ರಮಾಃ, ಕಪೀಶ ನಾಥಸೇವಕಂ, ಸಮಸ್ತನೀತಿಮಾರ್ಗಗಮ್ । ಪ್ರಶಸ್ಯ ಲಕ್ಷ್ಮಣಂ ಪ್ರತಿ, ಪ್ರಲಮ್ಬಬಾಹುಭೂಷಿತಃ ಕಪೀನ್ದ್ರಸಖ್ಯಮಾಕರೋತ್, ಸ್ವಕಾರ್ಯಸಾಧಕಃ ಪ್ರಭುಃ ॥ 4॥ ಪ್ರಚಂಡವೇಗಧಾರಿಣಂ, ನಗೇನ್ದ್ರಗರ್ವಹಾರಿಣಂ, ಫಣೀಶಮಾತೃಗರ್ವಹೃದ್ದೃಶಾಸ್ಯವಾಸನಾಶಕೃತ್ । ವಿಭೀಷಣೇನ ಸಖ್ಯಕೃದ್ವಿದೇಹ ಜಾತಿತಾಪಹೃತ್, ಸುಕಂಠಕಾರ್ಯಸಾಧಕಂ, ನಮಾಮಿ ಯಾತುಧತಕಮ್ ॥ 5॥ ನಮಾಮಿ ಪುಷ್ಪಮೌಲಿನಂ, ಸುವರ್ಣವರ್ಣಧಾರಿಣಂ ಗದಾಯುಧೇನ ಭೂಷಿತಂ, ಕಿರೀಟಕುಂಡಲಾನ್ವಿತಮ್ । ಸುಪುಚ್ಛಗುಚ್ಛತುಚ್ಛಲಂಕದಾಹಕಂ ಸುನಾಯಕಂ ವಿಪಕ್ಷಪಕ್ಷರಾಕ್ಷಸೇನ್ದ್ರ-...

ಶ್ರೀನೃಸಿಂಹಾಯ ಮಂಗಳಂ

"ಯಾದವಗಿರಿ" ಒಡೆಯ; ದೇವ ಯೋಗನೃಸಿಂಹ ನಿನ್ನಡಿಗೆ ತಲೆಬಾಗಿ ವಂದಿಸುವೆನು | ತಪ್ತಗೊಂಡಿಹ ಬದುಕಿಗಮಲ ಸತ್ಯವ ನೀಡು ತವ ಸನ್ನಿಧಿಗೆ ಮುಡಿಯನರ್ಪಿಸುವೆನು || ಭವದ ಬೇನೆಗೆ ಜೀವ ಭಾರವಾಗಿದೆ ತಂದೆ; ಸೈರಿಸುವ ಚೈತನ್ಯ ಉಡುಗುತ್ತಿದೆ | ಕವಿದ ಕತ್ತಲೆಯಲ್ಲಿ ತಡವರಿಸಿ ಸಾಗುತಿಹೆ; ಸೊಡರಬೆಳಕಿನ ಹಾದಿ ಅರಿಯದಾದೆ || 'ನಾನು, ನನ್ನದು' ಎಂಬ ಮೋಹಾಂಧಕಾರದಲಿ ಸಿಲುಕಿರುವ ಈ ಜೀವ ಮತಿ ವಿಹೀನ | ಸ್ವಾರ್ಥ ಬಂಧನದಿಂದ ಬಿಗಿಗೊಂಡ ಈ ಬದುಕು ಸಾಗಿಸಿದೆ ಅನಗಾಲ ಸಂಸಾರಯಾನ || ಆಮೆ ನಡಿಗೆಯ ಬದುಕು ಬೇಡೆನೆಗೆ ನೃಸಿಂಹ ಗರುಡಚೇತನವಿತ್ತು ಕರುಣೆದೋರು | ವರದ ಹಸ್ತವನೆನ್ನ ಮಸ್ತಕದ ಮೇಲಿರಿಸು; ಕರ್ಮ ಬಂಧವ ಕಡಿದು ಬೆಳಕ ತೋರು || ಎಲ್ಲ ಕಿವಿಗೊಡಲಲ್ಲಿ 'ಗೋವಿಂದ, ಗೋವಿಂದ,' ನಿನ್ನನುಪಮದ ನಾಮ ಮನಸಿಗಾನಂದ ಆ ನಾಮಬಲದಿಂದ ಕಳೆಯಲೀ ಭವಬಂಧ ಹೃತ್ಕಮಲ ಪೀಠದಲಿ ನೆಲೆಸಿರಲಿ ಗೋವಿಂದ || ಏನ ನೀಡಲಿ ನಿನಗೆ ಶ್ರೀನೃಸಿಂಹನೆ; ಸಕಲ ಐಸಿರಿ ನಿನ್ನ ಸನ್ನಿಧಿಯೊಳಿರಲು ನೀಡಲೆನಗೇನಿಹುದು ಭಕ್ತಿಯೊಂದನ್ನುಳಿದು ಹರಿದಿರಲಿ ತವಪದಕೆ ಆ ಭಕ್ತಿ ಹೊನಲು || ನಿನ್ನಡಿಗೆ ಸುಮವಾಗಿ ಮುಡಿಪಿರಲಿ ಈ ಜೀವ ಬಾಡದಂದದಿ ನಿತ್ಯ ಸಲಹು ದೇವ | ಬೆಳಗುತಿಹ ಪ್ರಣತಿಯಲಿ ಬಾಳ ಬತ್ತಿಯ ಹೊಸೆದು ಭಕ್ತಿ ತೈಲವನೆರೆಯಲೆನ್ನ ಜೀವ || ಮಂಗಳವು ಶ್ರೀ ಮಂಗಳಾಂಗಗೆ ದೇವ ನೃಸಿಂಹಗೆ, ಮಂಗಳವು ಜಯಮಂಗಳ | ಮಂಗಳವು ಶ್ರೀ ಕ್ಷೇತ್ರ ಯಾದವಗಿರಿವಾಸಿ ಸುಂದರ ಮೂರ್ತಿಗೆ ಮಂಗಳವು ಶುಭ...

ಮನೆಗೆ ಬಾರೋ ವಿಘ್ನರಾಜಾ

ಮನೆಗೆ ಬಾರೋ ವಿಘ್ನರಾಜಾ ಉಮಾಪುತ್ರ ಗಜಮುಖನೇ ವಿಘ್ನಹರನೇ ಏಕವಿಂಶತಿ ಮೋದಕ ಪ್ರೀಯನೇ, ಏಕದಂತನೆ ಮನೆಗೆ ಬಾರೋ ವಿಘ್ನರಾಜಾ...... ಜ್ಞಾನದಾಯಕ ವರ ವಿನಾಯಕನೇ, ಗಣನಾಥನೇ, ಷಡಾನನನ ಗೆಲಿದ ಲಂಬೋದರನೇ, ಶೂರ್ಪಕರ್ಣನೇ, ಮನೆಗೆ ಬಾರೋ ವಿಘ್ನರಾಜಾ..... ನಾಗಭೂಷಣ ಪ್ರಿಯನು ನೀನೇ, ಗಣಾಧ್ಯಕ್ಷನೇ ಭಾದ್ರಪದ ಚೌತಿಲಿ ಪೂಜೆಗೊಂಬನೇ, ವಿಶ್ವಂಭರನೇ, ಮನೆಗೆ ಬಾರೋ ವಿಘ್ನರಾಜಾ.... ದುಷ್ಟರಿಗೆ ವಿಘ್ನಕರ್ತನೇ, ಹೇರಂಬನೇ, ಶಿಷ್ಟರಿಗೆ ವಿಘ್ನಹರ್ತನೇ, ಶಿವಪ್ರಿಯನೇ, ಮನೆಗೆ ಬಾರೋ ವಿಘ್ನರಾಜಾ..... ರಕ್ತಾಂಬರ, ಪಾಶ ಅಂಕುಶಧಾರನೇ, ಅಂಬರಾಧಿಪನೇ, ವ್ಯಾಸರಚಿತ ಭಾರತದ ಬರೆದಿಹನೇ, ಶಂಭುನಂದನನೇ, ಮನೆಗೆ ಬಾರೋ ವಿಘ್ನರಾಜಾ.....

ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆಗಳು

Image
1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ. 2. ಕ್ರೋಧವೆಂಬ ಎರಡನೇ ಮೆಟ್ಟಿಲುನ್ನು ಸ್ಪರ್ಶಿಸುವುದರಿಂದ ತನ್ನ ಕೋಪವೇ ತಾನೇ ಶತ್ರು ಎಂಬ ಸತ್ಯವೂ ತನ್ನ ಅರಿವಿಗೆ ಬರುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಂಗಾದೇವಿ. 3. ಲೋಭವೆಂಬ ಮೂರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ತನ್ನೊಳಗಿನ ಪಿಶಾಚತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಾಯತ್ರಿ ದೇವಿ 4. ಮೋಹವೆಂಬ ನಾಲ್ಕನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಜ್ಞಾನ ಯೋಗ ತನ್ನದಾಗಿಸಿಕೊಳ್ಳುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಸೀತಾದೇವಿ. 5. ಮದವೆಂಬ ಐದನೇ ಮೆಟ್ಟಿಲು ಕರ್ಮ ಸನ್ಯಾಸ ಯೋಗದ ಪ್ರತೀಕವಾಗಿದೆ. ಈ ಮೆಟ್ಟಿಲಿನ ಅಧಿದೇವತೆ ಸತ್ಯವತಿ ದೇವಿ. 6. ಮಾತ್ಸರ್ಯವೆಂಬ ಆರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದಾನ ಫಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಸರಸ್ವತಿ ದೇವಿ. 7. ದಂಬವೆಂಬ ಏಳನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ವಿಜ್ಞಾನ ಯೋಗದ ಫಲ ದೊರೆತು ಪುನರ್ಜನ್ಮ ಇರುವುದಿಲ್ಲ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮ ವಿದ್ಯಾ ದೇವಿ. 8. ಅಹಂಕಾರವೆಂಬ ಎಂಟನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ವಾರ್ಥ ರಾಕ್ಷಸತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮವಲ್ಲಿ ದೇವಿ. 9. ನೇತ್ರವೆಂಬ ಒಂಬತ್ತನೇ ಮೆಟ್ಟಿಲನ್ನು ಸ್ಪರ್...

ಮಾನವತೆಗೆ ಅದ್ವೈತದ ಕೊಡುಗೆ

Image
    ನಮ್ಮ ಭರತಖಂಡದ ಸಂಸ್ಕೃತಿಯ ಗನಿಗಳಾದ ವೇದ-ಪುರಾಣ ಇತಿಹಾಸಗಳಲ್ಲಿ ಮಾನವನೆಂದರೆ ಯಾರು? ಎಂಬಿದನ್ನು ಚೆನ್ನಾಗಿ ವಿವೇಚಿಸಿ ತಿಳಿಸಿದ್ದಾರೆ. ಪ್ರತ್ಯಕ್ಷಪ್ರಮಾಣದಿಂದ ಕಂಡುಬರುವ, ಮನುಷ್ಯಶರೀರಧಾರಿಯಾದ ವ್ಯಕ್ತಿಯೇ ಮಾನವನು - ಎಂಬಿಷ್ಟನ್ನೇ ಶಾಸ್ತ್ರಗಳು ಒಪ್ಪಿರುವದಿಲ್ಲ. ಶರೀರದ ಜೊತೆಗೆ ಅಂತಃಕರಣವೂ, ಅದಕ್ಕೆ ಹೊಂದಿಕೊಂಡಂತೆ ದೈವೀಗುಣಗಳೂ ಇರುವವನನ್ನೇ ಮಾನವ, ಪುರುಷ - ಎಂದು ಅಲ್ಲಿ ಕರೆದಿರುತ್ತದೆ. ಮಾನವನ ಸೃಷ್ಟಿಯ ವಿಷಯಕ್ಕೆ ಉಪನಿಷತ್ತಿನಲ್ಲಿ ಈ ವರ್ಣನೆಯಿದೆ : "ಆತ್ಮನಿಂದ ಆಕಾಶವು ಹುಟ್ಟಿತು, ಆಕಾಶದಿಂದ ಕ್ರಮವಾಗಿ ವಾಯು, ತೇಜಸ್ಸು, ಜಲ, ಪೃಥ್ವಿಗಳೂ ಅನಂತರ ಪೈರುಗಳೂ ಅನ್ನವೂ ಅನ್ನದಿಂದ ಪುರುಷನೂ ಹುಟ್ಟಿರುತ್ತಾನೆ." ಈ ವಿವರಣೆಯು ತೈತ್ತಿರೀಯೋಪನಿಷತ್ತಿನಲ್ಲಿದೆ. ಅಲ್ಲಿ ಶ್ರೀ ಶಂಕರಾಚಾರ್ಯರು ವ್ಯಾಖ್ಯಾನಮಾಡಿರುವದು ಹೇಗೆಂದರೆ : "ಎಲ್ಲಾ ಚೇತನಾಚೇತನವಸ್ತುಗಳೂ ಬ್ರಹ್ಮದಿಂದಲೇ ಹುಟ್ಟಿ ಬಂದು ಬ್ರಹ್ಮವಂಶಕ್ಕೇ ಸೇರಿದ್ದರೂ ಶ್ರುತಿಯು ಪುರುಷನನ್ನೇ ಏಕೆ ಗ್ರಹಿಸಿದೆ? ಎಂದರೆ ಬ್ರಹ್ಮದ ಆವಿರ್ಭಾವವು ಮನುಷ್ಯನಲ್ಲಿ ಪೂರ್ಣವಾಗಿರುವದರಿಂದ - ಎಂದು ತಿಳಿಯಬೇಕು. ಪುರುಷನು ತಿಳಿವಳಿಕೆಯಿಂದ ಕೂಡಿದವನಾಗಿದ್ದು ಮಾತನಾಡುವದು, ನೋಡುವದು, ಕೇಳುವದು - ಮುಂತಾದ ವ್ಯವಹಾರಗಳ ಜೊತೆಗೆ, ನಾಳೆಗೇನು? ವಯಸ್ಸಾದ ಮೇಲೆ ಹೇಗೆ? ಈ ಶರೀರವನ್ನು ಬಿಟ್ಟ ಅನಂತವೂ ಜನ್ಮಾಂತರಲೋಕಾಂತರಗಳಲ್ಲಿಯೂ ಸುಖವಾಗಿರುವದು ಹೇಗೆ? ಮುಂತಾದ ರೀ...