This is against your copied article on Kanyaadaana. One place you say it as kanyaadaana, another place you are saying it as Kanyaadaana. So please study carefully the scriptures. Don't do Kruti chaurya.
ಪಂಚಾಂಗವೆಂದರೇನು ? ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು. ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ. ಆದರೆ ಪಂಚಾಂಗ ಪುಸ್ತಕವನ್ನು ತೆರೆದು ನೋಡಿದಾಗ ತಲೆ ಸುತ್ತುತ್ತದೆ. ಅಲ್ಲಿ ಮುದ್ದೆ ಮುದ್ದೆಯಾಗಿ ಬರೆದಿರುವ ಹತ್ತಾರು ವಿಷಯಗಳ ಮಧ್ಯೆ ಸಂಕ್ಷಿಪ್ತ ಸಂಕೇತಗಳಿಂದ ಸೂಚಿಸಿರುವ ಈ ಐದು ಅಂಗಗಳು ಕಾಣಿಸುವುದೇ ಇಲ್ಲ. ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ. ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದು...
This is against your copied article on Kanyaadaana. One place you say it as kanyaadaana, another place you are saying it as Kanyaadaana. So please study carefully the scriptures. Don't do Kruti chaurya.
ReplyDelete