ವಿವೇಕ ಚೂಡಾಮಣಿ 2-2
2. ಆದ್ಯಾತ್ಮಿಕ ಜೀವನದ ಮಹತ್ಮೆ
ಜಂತೂನಾಂ ನರಜನ್ಮದುರ್ಲಭಮತಃ ಪುಂಸ್ತ್ವಂ ತತೋ ವಿಪ್ರತಾ |
ತಸ್ಮಾದ್ವೈದಿಕಧರ್ಮಮಾರ್ಗಪರತಾ ವಿದ್ವತ್ತ್ವಮಸ್ಮತ್ ಪರಮ್ |
ಆತ್ಮನಾತ್ಮವಿವೇಚನಂ ಸ್ವನುಭವೋ ಬ್ರಹ್ಮಾತ್ಮನಾ ಸಂಸ್ಥಿತಿಃ |
ಮುಕ್ತಿರ್ನೋ ಶತಕೋಟಿಜನ್ಮಸುಕ್ರತ್ಯೆಃ ಪುಣ್ಯೈರ್ವಿನಾ ಲಭ್ಯತೇ ||2||
ಪ್ರಾಣಿಗಳಲ್ಲಿ ಮನುಷ್ಯನಾಗಿ ಹುಟ್ಟುವುದು ದುರ್ಲಭ. ಅದಕ್ಕಿಂತ ಪುರುಷತ್ವವಿರುವ ಜನ್ಮವು ಮತ್ತೂ ದುರ್ಲಭ. ಅದಕ್ಕಿಂತಲೂ ಸಾತ್ವಿಕ ಸ್ವಭಾವ (ವಿಪ್ರತಾ)ವಿರುವ ಹುಟ್ಟು ಮತ್ತೂ ವಿರಳ. ವಿಪ್ರತ್ವಕ್ಕಿಂತಲೂ ವೈದಿಕಮಾರ್ಗದಲ್ಲಿ ನಿಷ್ಠೆಯುಳ್ಳವನಾಗಿರುವುದು ಇನ್ನೂ ಅಪರೂಪ. ಅದಕ್ಕಿಂತಲೂ ಶ್ರೇಷ್ಠವಾದದ್ದು ವಿದ್ವತ್ತು; ಎಂದರೆ, ಶಾಸ್ತ್ರಗಳಲ್ಲಿ ಅಡಗಿರುವ ಆಳವಾದ ಯಥಾರ್ಥಾಜ್ಞಾನವನ್ನು ಪಡೆದಿರುವುದು ಇನ್ನೂ ಕಷ್ಟ. ಆತ್ಮ ಮತ್ತು ಅನಾತ್ಮಗಳ ವಿವೇಕಜ್ಞಾನ, ಆಧ್ಯಾತ್ಮ ವಿದ್ಯೆಯಲ್ಲಿ ಗಾಢ ಅನುಭವ, ತನ್ನಲ್ಲಿರುವ ಆತ್ಮವೇ ಎಲ್ಲರಲ್ಲಿಯೂ ಇರುವುದೆಂಬ ಭಾವನೆ (ಬ್ರಹ್ಮಭಾವದಲ್ಲಿರುವುದು) - ಇವು ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠವಾದದ್ದು. ಈ ಫಲವು (ಮುಕ್ತಿಯು) ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದಲ್ಲದೆ ಬೇರೆ ಯಾವುದರಿಂದಲೂ ಲಭಿಸುವುದಿಲ್ಲ.
Comments
Post a Comment