Posts

ಗಾಯತ್ರಿಯೇ ಪರಬ್ರಹ್ಮವು

    ಉಪನಿಷತ್ಪ್ರತಿಪಾದ್ಯವಾಗಿರುವ ಪರಬ್ರಹ್ಮದ ವಿಜ್ಞಾನದಿಂದಲೇ ಪರಮ ಪುರುಷಾರ್ಥರೂಪವಾದ ಮೋಕ್ಷಪ್ರಾಪ್ತಿಯೆಂಬುದನ್ನು ಎಲ್ಲಾ ಶಾಸ್ತ್ರಗಳಲ್ಲಿಯೂ ಹೇಳಿರುತ್ತದೆ. ಈಗ ಗಾಯತ್ರೀಜಪಕ್ಕೂ ಪರಬ್ರಹ್ಮವಿಜ್ಞಾನಕ್ಕೂ ಏನು ಸಂಬಂಧವಿದೆ? ಎಂಬುದನ್ನು ವಿಚಾರಿಸೋಣ ಇದರಿಂದ ನಾವು ಗಾಯತ್ರಿಯ ಮಹತ್ತ್ವವನ್ನು ಮತ್ತಷ್ಟು ಅರಿತಂತಾಗುವದು.     ಛಾಂದೋಗ್ಯೋಪನಿಷತ್ತಿನಲ್ಲಿ ಮೂರನೆಯ ಅಧ್ಯಾಯದ ಹನ್ನೆರಡನೆಯ ಖಂಡದಲ್ಲಿ ಗಾಯತ್ರಿಯ ಮಹಿಮೆಯನ್ನು ಕೊಂಡಾಡಿರುತ್ತದೆ. ಶ್ರೀಶಂಕರಾಚಾರ್ಯರು ಈ ಮಂತ್ರಗಳಿಗೆ ಭಾಷ್ಯವನ್ನು ಬರೆಯುವಾಗ ಅವತರಣಿಕೆಯಲ್ಲಿ ಹೀಗೆಂದಿದ್ದಾರೆ : "ಗಾಯತ್ರೀದ್ವಾರೇಣ ಚೋಚ್ಯತೇ ಬ್ರಹ್ಮ  |.....   ಗಾಯತ್ರ್ಯಾ ಏವ ಬ್ರಹ್ಮಜ್ಞಾನದ್ವಾರತಯೋಪಾದಾನಂ ಪ್ರಾಧಾನ್ಯಾತ್ .....    ಗಾಯತ್ರೀ ಸಾರತ್ವಾಚ್ಚ ಬ್ರಾಹ್ಮಣಸ್ಯ ಮಾತರಮಿವ .....    ಅತಃ ಗಾಯತ್ರೀಮುಖೇನೈವ ಬ್ರಹ್ಮ ಉಚ್ಯತೇ ||" ಎಂದರೆ ಬ್ರಹ್ಮವು ಸರ್ವವಿಶೇಷರಹಿತವಾಗಿರುವದರಿಂದ 'ನೇತಿ ನೇತಿ' ಎಂದು ವರ್ಣಿಸಿದರೆ ತಿಳಿಯುವದು ಕಷ್ಟ. ಅದಕ್ಕಾಗಿ ಗಾಯತ್ರೀರೂಪದಿಂದ ಹೇಳಿದೆ. ಆದರೆ ವೇದದಲ್ಲಿ ಅನೇಕಛಂದಸ್ಸುಗಳಿದ್ದರೂ ಈ ಗಾಯತ್ರಿಯು ಎಲ್ಲಾ ಛಂದಸ್ಸುಗಳನ್ನೂ ವ್ಯಾಪಿಸಿಕೊಂಡಿರುವದರ ಮೂಲಕ ಎಲ್ಲಾ ಯಜ್ಞಗಳಲ್ಲಿಯೂ ಹರಡಿಕೊಂಡಿರುವದರಿಂದ ಯಜ್ಞದಲ್ಲಿ ಗಾಯತ್ರೀಛಂಸ್ಸಿಗೇ ಪ್ರಾಧಾನ್ಯವಿದೆ. ವೇದಗಳೆಲ್ಲದರ ಸಾರವೇ ಗಾಯತ್ರಿಯು....

ಗೋದಾಸ್ತುತಿಃ (ಸಂಗ್ರಹ) - 12

ಪ್ರಾಯೇಣ ದೇವಿ ಭವತೀವ್ಯಪದೇಶಯೋಗಾತ್ ಗೋದಾವರೀ ಜಗದಿದಂ ಪಯಸಾ ಪುನೀತೇ | ಯಸ್ಯಾಂ ಸಮೇತ್ಯ ಸಮಯೇಷು ಚಿರಂ ನಿವಾಸಾತ್ ಭಾಗೀರಥೀ ಪ್ರಭೃತಯೋಪಿ ಭವಂತಿ ಪುಣ್ಯಾಂಃ ||12|| ದೇವಿ! = ಎಲೈ! ಗೋದಾದೇವಿಯೇ!, ಭವತೀ = ನಿನ್ನ ವೈಪದೇಶ. ಯೋಗಾತ್ = 'ಗೋದಾ' ಎಂಬ ಹೆಸರಿನ ಸಂಬಂದದಿಂದ, ಗೋದಾವರೀ = ಗೋದಾವರೀ ನದಿಯಾದರೋ, ಇದಂ ಜಗತ್ = ಈ ಜಗತ್ತನ್ನು, ಪ್ರಾಯೇಣ = ಬಹುಶಃ, ಪಯಸಾ = ತನ್ನ ತೀರ್ಥದಿಂದ, ಪುನೀತೇ = ಪವಿತ್ರಗೊಳಿಸುತ್ತಿದೆ. ಯಸ್ಯಾಂ = ಯಾವ ಗೋದಾವರೀ ನದಿಯಲ್ಲಿ ಸಮಯೇಷು = ಕೆಲವು ಸಮಯಗಳಲ್ಲಿ ಸಮೇತ್ಯ = ಕೂಡಿಕೊಂಡು, ಚಿರಂ = ಚಿರಕಾಲ, ನಿವಾಸಾತ್ = ವಾಸಮಾಡಿದ ದೆಸೆಯಿಂದ, ಭಾಗೀರಥೀ ಪ್ರಭೃತಯಃ ಅಪಿ = ಗಂಗೆಯೇ ಮೊದಲಾದ ನದಿಗಳೂ, ಪುಣ್ಯಾಃ = ಪುಣ್ಯನದಿಗಳಾಗಿ, ಭವಂತಿ = ಆಗಿವೆ.     ಎಲೈ! ಗೋದಾದೇವಿಯೇ! ನಿನ್ನ 'ಗೋದಾ' ಎಂಬ ಹೆಸರಿನ ಯೋಗದಿಂದಲೇ, ಗೋದಾವರೀ ನದಿಯೂ, ಈ ಜಗತ್ತನ್ನೇ ಬಹುಶಃ ತನ್ನ ತೀರ್ಥದಿಂದ ಪವಿತ್ರಗೊಳಿಸುತ್ತಿದೆ. ಅದೂ ಅಲ್ಲದೆ, ಯಾವ ಈ ಗೋದಾವರಿ ನದಿಯಲ್ಲಿ ಆಗಾಗ್ಗೆ ಕೆಲವು ಸಮಯಗಳಲ್ಲಿ ಕೂಡಿಕೊಂಡು ಚಿರಕಾಲ ವಾಸಮಾಡಿದುದರಿಂದಲೇ, ವಿಷ್ಣುಪಾದೋದ್ಭವೆಯಾದ ಗಂಗೆಯೇ ಮೊದಲಾದ ನದಿಗಳೂ ಪುಣ್ಯನದಿಗಳಾಗಿವೆ. [ಅಂದರೆ ಎಲ್ಲ ಪುಣ್ಯನದಿಗಳ ಮತ್ತು ಜಗತ್ತಿನ ಪಾವನತ್ವಕ್ಕೂ ಗೋದೆಯೇ ಕಾರಣ - ಎಂದು ಆಚಾರ್ಯರು ಇಲ್ಲಿ ವರ್ಣೀಸಿದ್ದಾರೆ.]

ಗಾಯತ್ರೀ ಮಾತಾ

ಗಾಯತ್ರೀ ದೇವಿ ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯಸೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು. ಗಾಯತ್ರೀ ಛಂದಸ್ಸು - ೨೪ ಅಕ್ಷರಗಳ ತ್ರಿಪದಿ ಗಾಯತ್ರೀ ಮಂತ್ರ - ಋಗ್ವೇದದಲ್ಲಿ ಮೊದಲು ಕಾಣಿಸಿಕೊಂಡು ನಂತರ ಇತರ ವೇದೋಪನಿಷತ್‌ಗಳಲ್ಲಿ ಪ್ರಸ್ತಾಪವಿರುವ ಹಿಂದೂ ಧರ್ಮದ ಒಂದು ಪ್ರಮುಖ ಮಂತ್ರ. ಗಾಯತ್ರೀ ಛಂದಸ್ಸಿನಲ್ಲಿ ಬರೆದ ಯಾವುದೆ ಮಂತ್ರವನ್ನು ಗಾಯತ್ರೀ ಮಂತ್ರ ಎಂದು ಕರೆಯುವ ಪ್ರತೀತಿ ಕೂಡ ಇದೆ. ಗಾಯತ್ರೀ ದೇವಿ - ವೇದಮಾತೆ ಮತ್ತು ದೇವಿ ಸರಸ್ವತಿಯ ಸ್ವರೂಪ. ಗಾಯತ್ರೀ ಛಂದಸ್ಸು ಗಾಯತ್ರೀ ಛಂದಸ್ಸು ಸಾಲಿಗೆ ೮ ಅಕ್ಷರದಂತೆ ಒಟ್ಟು ೨೪ ಅಕ್ಷರಗಳಿರುವು ತ್ರಿಪದಿ. ಗಾಯತ್ರಿ ಮಂತ್ರ ಕೂಡ ಇದೆ ಛಂದಸ್ಸಿನಲ್ಲಿದೆ. ಋಗ್ವೇದದದ ಶ್ಲೋಕಗಳಲಿ ಸುಮಾರು ೧/೪ ಭಾಗದಷ್ಟು ಈ ಛಂದಸ್ಸುನಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಗಾಯತ್ರೀ ಮಂತ್ರ ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದ...

ಸ್ಕಂದಪುರಾಣ ಅಧ್ಯಾಯ 16

ವ್ಯಾಸ ಉವಾಚ | ವರಾನ್ಸ ಉಬ್ಧ್ವಾ ಭಗವಾನ್ವಸಿಷ್ಠೋಸ್ಮತ್ಪಿತಾಮಹಃ | ಕಂ ಪುತ್ರಂ ಜನಯಾಮಾಸ ಆತ್ಮನಃ ಸದೃಶದ್ಯುತಿಮ್ || ಸನತ್ಕುಮಾರ ಉವಾಚ | ತೇನಾಸೌ ವರದಾನೇನ ದೇವದೇವಸ್ಯ ಶೂಲಿನಃ | ಅರುಂಧತ್ಯಾಮಜನಯತ್ತಪೋಯೋಗಬಲಾನ್ವಿತಮ್ | ಬ್ರಹ್ಮಿಷ್ಠಂ ಶಕ್ತಿನಾಮಾನಂ ಪುತ್ರಂ ಪುತ್ರಶತಾಗ್ರಜಮ್ || ತಸ್ಯ ಬಾಲ್ಯಾತ್ಪ್ರಭೃತ್ಯೇವ ವಾಸಿಷ್ಠಸ್ಯ ಮಹಾತ್ಮನಃ | ಪರೇಣ ಚೇತಸಾ ಭಕ್ತಿರಭವದ್ಗೋವೃಷಧ್ವಜೇ || ಸ ಕದಾಚಿದಪತ್ಯಾರ್ಥಮಾರಾಧಯದುಮಾಪತಿಮ್ | ತಸ್ಯ ತುಷ್ಟೋ ಮಹಾದೇವೋ ವರದೋಸ್ಮೀತ್ಯಭಾಷತ || ಅಥ ದೃಷ್ಟ್ವಾ ತಮೀಶಾನಮಿದಮಾಹಾನತಾನನಃ | ಕೇನ ಸ್ತೋಷ್ಯಾಮಿ ತೇ ದೇವ ಯಸ್ತ್ವಂ ಸರ್ವಜಗತ್ಪತಿಃ | ಸರ್ವಾಂಧಾರಯಸೇ ಲೋಕಾನಾತ್ಮನಾ ಸಮಯಾದ್ವಿಭೋ || ತ್ವಮೇವ ಭೋಕ್ತಾ ಭೋಜ್ಯಂ ಚ ಕರ್ತಾ ಕಾರ್ಯಂ ತಥಾ ಕ್ರಿಯಾ ಉತ್ಪಾದಕಸ್ತಥೋತ್ಪಾದ್ಯ ಉತ್ಪತ್ತಿಚ್ಚೈವ ಸರ್ವಶಃ || ಆತ್ಮಾನಂ ಪುತ್ರನಾಮಾನಂ ಮಮ ತುಲ್ಯಂ ಗುಣೈರ್ವಿಭೋ | ಇಚ್ಛಾಮಿ ದತ್ತಂ ದೇವೇಶ ಏಷ ಮೇ ದೀಯತಾಂ ವರಃ || ಸನತ್ಕುಮಾರ ಉವಾಚ | ತಮೇವಂವಾದಿನಂ ದೇವಃ ಪ್ರಹಸ್ಯ ವದತಾಂ ವರಃ | ಉವಾಚ ವಚಸಾ ವ್ಯಾಸ ದಿಶಃ ಸರ್ವಾ ವಿನಾದಯನ್ || ತ್ವಯಾಹಂ ಯಾಚಿತಃ ಶಕ್ತೇ ಸ ಚ ತೇ ಸಂಭವಿಷ್ಯತಿ | ತ್ವತ್ಸಮಃ ಸರ್ವವೇದಜ್ಞಸ್ತ್ವದೀಯೋ ಮುನಿಪುಂಗವ || ಬೀಜಾತ್ಮಾ ಚ ತಥೋದ್ಭೂತಃ ಸ್ವಯಮೇವಾಶ್ಣ್ಕುರಾತ್ಮನಾ | ಬೀಜಾತ್ಮನಾ ನ ಭವತಿ ಪರಿಣಾಮಾಂತರಂ ಗತಃ || ಏವಂ ಸ ಆತ್ಮನಾತ್ಮಾ ವಃ ಸಂಭೂತೋಪತ್ಯಸಂಜ್ಞಿತಃ | ಸ್ವೇನಾತ್ಮನಾ ನ ಭವಿತಾ ಪರಿಣ...

ಗೋದಾಸ್ತುತಿಃ (ಸಂಗ್ರಹ) - 11

ದಿಕ್‌ದಕ್ಷಿಣಾಪಿ ಪರಿಪಕ್ತ್ತಿಮ ಪುಣ್ಯಲಭ್ಯಾತ್ ಸರ್ವೋತ್ತರಾಭವತಿ ದೇವಿ ತವಾವತಾರಾತ್ | ಯತ್ರೈವ ರಂಗಪತಿನಾ ಬಹುಮಾನಪೂರ್ವಂ ನಿದ್ರಾಳುನಾಪಿ ನಿಯತಃ ನಿಹಿತಾಃ ಕಟಾಕ್ಷಾಃ ||11|| ದೇವಿ! = ಎಲೈ! ಗೋದಾದೇವಿಯೇ, ದಕ್ಷಿಣಾದಿಕ್ ಅಪಿ = (ಯಾವ ಸುಭಕೆಲಸಗಳಿಗೂ ಅರ್ಹತೆಯಿಲ್ಲದ) ದಕ್ಷಿಣ ದಿಕ್ಕಾದರೋ, ಪರಿಪಕ್ತ್ರಿಮ = ಪಕ್ವವಾದ, ಪುಣ್ಯಲಭ್ಯಾತ್ = ಪುಣ್ಯಫಲಗಳನ್ನು ಹೊಂದಿದುದರಿಂದ ತವ = ನಿನ್ನ, ಅವತಾರಾತ್ = ಅವತಾರವು ಆ ದಿಕ್ಕಿನಲ್ಲಾದುದರಿಂದ, ಸರ್ವೋತ್ತರಾ = ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯುಳ್ಳದುದಾಗಿ (ಉತ್ತರದಿಕ್ಕಿಗಿಂತಲೂ ಮಹತ್ವ ಉಳ್ಳದುದಾಗಿ), ಭವತಿ = ಆಗಿದೆ, ಯತ್ರೈವ = ಯಾವ ನಿನ್ನ ಅವತಾರವಾದ ದಕ್ಷಿಣ ದಿಕ್ಕಿನಲ್ಲಾದರೋ, ನಿದ್ರಾಳುನಾ = ಉಭಯ ವಿಭೂತಿಗಳ ರಕ್ಷಣೆಯನ್ನು ಚಿಂತಿಸುತ್ತಾ ನಿದ್ರಿಸುವವನಂತಿರುವ, ರಂಗಪತಿನಾ ಅಪಿ = ಶ್ರೀರಂಗನಾಥನಿಂದಲೂ, ಬಹುಮಾನಪೂರ್ವಂ = ಅತ್ಯಾದರದಿಂದ, ನಿಹಿತಾಃ = ಬೀರುವ, ಕಟಾಕ್ಷಾಃ = ವೀಕ್ಷಣೆಯಾದರೋ, ನಿಯತಃ = ಕಟ್ಟಲ್ಪಟ್ಟಿದೆ.     ಎಲೈ! ಗೋದಾದೇವಿಯೇ, "ಪ್ರಾಚೀನಮುದೀಚೀನಂಮೇಧ್ಯಂ ಪ್ರತೀಚೀನಂದಕ್ಷಿಣಾಮೇಧ್ಯಂ" ಎಂದು ಶ್ರುತಿಯಲ್ಲೇ ಅಪವಿತ್ರವೆಂದು ಪ್ರತಿಪಾದಿತವಾಗಿ, ಶುಭಕೆಲಸಗಳಿಗೆ ಅನರ್ಹವಾದ ದಕ್ಷಿಣದಿಕ್ಕದರೋ ತನ್ನ ಪರಿಪಕ್ವವಾದ ಪುಣ್ಯಫಲದಿಂದ, ನೀನು ಆ ದಿಕ್ಕಿನಲ್ಲಿ ಅವತರಿಸುವಂತಾದುದರಿಂದ, ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯನ್ನು ಪಡೆಯಿತ...

ಮಹಾಶಿವರಾತ್ರಿಯ ತತ್ತ್ವ

    ಪ್ರತಿವರ್ಷವೂ ಮಾಘ ಬಹುಳ ಚತುರ್ದಶಿಯಂದು ಪ್ರಾಪ್ತವಾಗುವ ಮಹಾಶಿವರಾತ್ರಿಯ ಅನುಷ್ಠಾನವು ವಿಶ್ವಾದ್ಯಂತ ಅನೇಕ ಭಕ್ತರಿಂದ ಆಚರಿಸಲ್ಪಡುತ್ತದೆ. ಶಿವನ ಆರಾಧನೆಗೆ ಮುಖ್ಯವಾದ ದಿನವೇ ಶಿವರಾತ್ರಿಯು. ಇದು ಹಿಂದೂಪಂಚಾಂಗದ ಪ್ರಕಾರ ಪ್ರತಿ ಮಾಸದ ಕೃಷ್ಣಪಕ್ಷದ ಚತುರ್ದಶಿಯ ದಿನ ಪ್ರಾಪ್ತವಾಗುತ್ತದೆ. ಇದನ್ನು 'ಮಾಸಶಿವರಾತ್ರಿ'ಯೆಂದು ಕರೆಯುತ್ತಾರೆ, ಆದ್ದರಿಂದಲೇ ಮಾಘಮಾಸದಲ್ಲಿ ಬರುವ ಶಿವರಾತ್ರಿಗೆ 'ಮಹಾಶಿವರಾತ್ರಿ' ಎಂಬ ವಿಶೇಷವಾದ ಹೆಸರಿದೆ.     ರಾತ್ರಿಯು ಯಾವಾಗಲೂ ಜೀವರಿಗೆ ಭಯಂಕರವಾದುದು. ಎಲ್ಲಾ ಪದಾರ್ಥಗಳೂ ಕಗ್ಗತ್ತಲೆಯಲ್ಲಿ ಮುಳುಗಿರುವಾಗ ಏನೊಂದೂ ಕೆಲಸವು ಸಧ್ಯವಾಗುವದಿಲ್ಲ ಹಾಗೂ ಪ್ರಾಣಿಗಳಿಗೆಲ್ಲ ನಿದ್ರೆಯ ಸಮಯವೂ ರಾತ್ರಿಯೇ ಆಗಿದೆ ಕೆಲವೇ ಭೂತ ಪ್ರೇತಪಿಶಾಚಾದಿ ಸತ್ತ್ವಗಳಿಗೂ ಗೂಬೆ ಮುಂತಾದವುಗಳಿಗೂ ರಾತ್ರಿಯ ಚಟುವಟಿಕೆಯ ಕಾಲವಾಗಿರಬಹುದು, ಆದರೆ ಸಾಮಾನ್ಯವಾಗಿ ಎಲ್ಲರಿಗೂ ರಾತ್ರಿಯು ಅಮಂಗಳಕರವು ಹೀಗಿರುವಲ್ಲಿ 'ಶಿವರಾತ್ರಿ' ಎಂದು ರಾತ್ರಿಯನ್ನು ಮಂಗಳಕರವೆಂತ ಕರೆಯಲು ಕಾರಣವೇನು? ಆ ರಾತ್ರಿಗೆ ಮಂಗಳತ್ವವು ಉಂಟಾಗುವದಕ್ಕೆ ನಿಮಿತ್ತವೇನಾದರೂ ಇರಬಹುದೆ? ಎಂದು ಯಾರಾದರೂ ಕೇಳಬಹುದಾಗಿದೆ. ಇದಕ್ಕೆ ಉತ್ತರವನ್ನು ಒಂದು ಗೀತಾಶ್ಲೋಕದಿಂದ ಕಂಡುಹಿಡಿಯಲು ಯತ್ನಿಸೋಣ. ಹೇಗೆಂದರೆ: 'ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮಿ' ಎಂಬ ಪದ್ಯವು ಗೀತಾಪಾಠಕರಿಗೆಲ್ಲ ಪರಿಚಿತವೇ ಆಗಿದೆ. ಎಲ್ಲಾ...

Importance of Mangala Sutra

ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: | ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಽಫಲಾ: ಕಿಯಾ: | यत्र नार्यस्तु पूज्यंते रमंते तत्र देवता: । यत्रैतास्तु न पूज्यंते सर्वास्तत्राऽफला: किया: । Where there is respect for the women, there stays all the devata. Where there is no respect for women, there all the kriya are waste. Now a days, it is said that " the women are ignored.  They are not recognised in the world.  They should be treated equally on par with the men".    But it is recognised by our subhaashita kaaras and sanaatana dharmaas also. Recently in some places some section of people are trying to say that the "maangalya is not necessary as it may dictate the adheenatva of a women by a man.".  No.  It is not adheenatva of a woman, but is the sanaatana dharma, or the protection for a women or it is the daampatya - i.e., understanding of each other.   ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನ:| ಕಂಠೇ ಬದ್ನಾಮಿ ಸುಭಗೆ ಸಂಜೀವ ಶರದ ಶತ...