ರಾಮಾಯಣ- ಒಂದು ವೈಜ್ಞಾನಿಕ ಅವಲೋಕನ..
ಕಲ್ಪನೆ ಎಂದು ತಿಳಿದಿದ್ದ ಹಲವಾರು ವಿಷಯಗಳು ಇಂದು ವೈಜ್ಞಾನಿಕವಾಗಿ ಸಾಧ್ಯವೆಂದು ಧೃಡಪಡಿಸಲಾಗಿದೆ. ಉದಾಹರಣೆಗೆ mobile, TV, gprs, fighter jets, test tube baby, plastic surgery etc. ಇವೆಲ್ಲವೂ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಉಕ್ತವಾಗಿರುವ ವಿಷಯಗಳೇ. ಇವುಗಳ ಕಲ್ಪನೆ ಭಾರತೀಯರಿಗೆ ಹೊಸತೇನಲ್ಲ. 50-70 ವರ್ಷಗಳ ಹಿಂದೆ ಹೋದರೆ ಇವೆಲ್ಲವೂ ಕೇವಲ ಕಥೆಗಳಾಗಿದ್ದವೇ ಹೊರತು ನಿಜವಾಗಿರಲಿಲ್ಲ. ಆಗಿನ ಕಾಲದ ಬುದ್ಧಿಜೀವಿಗಳು ಇವುಗಳನ್ನು ಬಾಲಿಷ ಕಥೆಗಳೆಂದು ತೆಗಳುತ್ತಿದ್ದರು. ಆದರೆ ಇಂದು? ಇಂದು ಕೂಡಾ ಕೆಲವಾರು ಸನ್ನಿವೇಶಗಳನ್ನು ಕಟ ್ಟು ಕಥೆಗಳೆಂದು ತೆಗಳುವವರು ಅನೇಕರಿದ್ದಾರೆ. ಆದರೆ ಅಂತಹುಗಳನ್ನು ಸಾಧ್ಯವಾಗಿಸುವ ಬಗೆ ಹೇಗೆ ಎಂದು ಯೋಚಿಸುವವರು ಬಹಳ ಕಡಿಮೆ. ಪ್ರಯತ್ನ ಪಡುವವರಿಗಾಗಿ ಈ ಕೆಳಗಿನ ಉದಾಹರಣೆ ; ಹನುಮಂತ ಲಂಕೆಗೆ ಹಾರುವಾಗ ಸಾಗರ ಮಧ್ಯದಲ್ಲಿ ಲಂಕೆಗೆ ಕಾವಲಾಗಿರವ ಒಬ್ಬ ರಾಕ್ಷಸಿಯ ಪ್ರಸಂಗ ಬರುತ್ತದೆ. ಅವಳನ್ನು ದಾಟಿ ಯಾರೂ ಲಂಕೆಗೆ ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಜಲಮಾರ್ಗದಲ್ಲೆ ಬರಲಿ, ವಾಯುಮಾರ್ಗದಲ್ಲೇ ಬರಲಿ, ಅವಳು ಎಲ್ಲವನ್ನೂ ನುಂಗಿಹಾಕುತ್ತಿದ್ದಳು. ಹನುಮಂತ ಲಂಕೆಗೆ ಹಾರಿಹೋಗುವಾಗ ಅವಳು ಹನುಮನನ್ನೂ ಅಡ್ಡಗಟ್ಟುತ್ತಾಳೆ. ಅವನ ಜೊತೆಗೆ ಯುದ್ಧ ನಡೆಯುತ್ತದೆ. ನಂತರ ಅವಳು ಅವನನ್ನೂ ನುಂಗುತ್ತಾಳೆ. ನಂತರ ಹನುಮ ಅವಳನ್ನೇ ಸೀಳಿಕೊಂಡು ಹೊರಬರುತ್ತಾನೆ. ಹೀಗೆ ಅವಳ ಅ...