ರಾಮಾಯಣ- ಒಂದು ವೈಜ್ಞಾನಿಕ ಅವಲೋಕನ..

ಕಲ್ಪನೆ ಎಂದು ತಿಳಿದಿದ್ದ ಹಲವಾರು ವಿಷಯಗಳು ಇಂದು ವೈಜ್ಞಾನಿಕವಾಗಿ ಸಾಧ್ಯವೆಂದು ಧೃಡಪಡಿಸಲಾಗಿದೆ. ಉದಾಹರಣೆಗೆ mobile, TV, gprs, fighter jets, test tube baby, plastic surgery etc. ಇವೆಲ್ಲವೂ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಉಕ್ತವಾಗಿರುವ ವಿಷಯಗಳೇ. ಇವುಗಳ ಕಲ್ಪನೆ ಭಾರತೀಯರಿಗೆ ಹೊಸತೇನಲ್ಲ. 50-70 ವರ್ಷಗಳ ಹಿಂದೆ ಹೋದರೆ ಇವೆಲ್ಲವೂ ಕೇವಲ ಕಥೆಗಳಾಗಿದ್ದವೇ ಹೊರತು ನಿಜವಾಗಿರಲಿಲ್ಲ. ಆಗಿನ ಕಾಲದ ಬುದ್ಧಿಜೀವಿಗಳು ಇವುಗಳನ್ನು ಬಾಲಿಷ ಕಥೆಗಳೆಂದು ತೆಗಳುತ್ತಿದ್ದರು. ಆದರೆ ಇಂದು?
ಇಂದು ಕೂಡಾ ಕೆಲವಾರು ಸನ್ನಿವೇಶಗಳನ್ನು ಕಟ್ಟು ಕಥೆಗಳೆಂದು ತೆಗಳುವವರು ಅನೇಕರಿದ್ದಾರೆ. ಆದರೆ ಅಂತಹುಗಳನ್ನು ಸಾಧ್ಯವಾಗಿಸುವ ಬಗೆ ಹೇಗೆ ಎಂದು ಯೋಚಿಸುವವರು ಬಹಳ ಕಡಿಮೆ.
ಪ್ರಯತ್ನ ಪಡುವವರಿಗಾಗಿ ಈ ಕೆಳಗಿನ ಉದಾಹರಣೆ ;
ಹನುಮಂತ ಲಂಕೆಗೆ ಹಾರುವಾಗ ಸಾಗರ ಮಧ್ಯದಲ್ಲಿ ಲಂಕೆಗೆ ಕಾವಲಾಗಿರವ ಒಬ್ಬ ರಾಕ್ಷಸಿಯ ಪ್ರಸಂಗ ಬರುತ್ತದೆ. ಅವಳನ್ನು ದಾಟಿ ಯಾರೂ ಲಂಕೆಗೆ ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಜಲಮಾರ್ಗದಲ್ಲೆ ಬರಲಿ, ವಾಯುಮಾರ್ಗದಲ್ಲೇ ಬರಲಿ, ಅವಳು ಎಲ್ಲವನ್ನೂ ನುಂಗಿಹಾಕುತ್ತಿದ್ದಳು. ಹನುಮಂತ ಲಂಕೆಗೆ ಹಾರಿಹೋಗುವಾಗ ಅವಳು ಹನುಮನನ್ನೂ ಅಡ್ಡಗಟ್ಟುತ್ತಾಳೆ. ಅವನ ಜೊತೆಗೆ ಯುದ್ಧ ನಡೆಯುತ್ತದೆ. ನಂತರ ಅವಳು ಅವನನ್ನೂ ನುಂಗುತ್ತಾಳೆ. ನಂತರ ಹನುಮ ಅವಳನ್ನೇ ಸೀಳಿಕೊಂಡು ಹೊರಬರುತ್ತಾನೆ. ಹೀಗೆ ಅವಳ ಅಂತ್ಯವಾಗುವ ಪ್ರಸಂಗವಿದೆ. ರಾಮಾಯಣವನ್ನು ನಂಬುತ್ತೇವೆ ಆದರೆ ಇದು ಉತ್ಪ್ರೇಕ್ಷೆಯ ಕಥೆಯಷ್ಟೇ ಎನ್ನುವವರಿದ್ದಾರೆ. ಇದು ಸತ್ಯ ಘಟನೆ ಏಕೆ ಆಗಿರಬಾರದು?
ನಮ್ಮ ಕಥೆಗಳಲ್ಲಿ ಬಹಳಷ್ಟು ಗೂಢಾರ್ಥಗಳಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವಿಷ್ಟೆ. ಸಾಗರದ ಮೂಲಕವಾಗಲೀ, ವಾಯುಮಾರ್ಗದ ಮೂಲಕವಾಗಲೀ ಲಂಕೆಗೆ ಹೋಗಲು ಸಾಧ್ಯವಿರಲಿಲ್ಲ. ಹೋಗಲು ಪ್ರಯತ್ನಪಟ್ಟವರೆಲ್ಲರೂ ಪುನಃ ಹಿಂದಿರುಗಿ ಬರುತ್ತಿರಲಿಲ್ಲ. ಹನುಮಂತನೆಂಬುವವನು ಬಹಳ ಪ್ರಯತ್ನ ಪಟ್ಟು ಅಡೆತಡೆಗಳನ್ನೆಲ್ಲವನ್ನೂ ಸರಿಪಡಿಸಿದನು.
ಇಂದಿಗೂ ಇದು ಸತ್ಯವಾಗಿರುವ ಘಟನೆಯಲ್ಲವೇ?
Bermuda triangle ಹೆಸರು ಕೇಳಿರುತ್ತೀರ. ಇದು ದಕ್ಷಿಣ Florida, ಬಹಾಮಾ, Fortorico ದೇಶಗಳನ್ನು ಬಳಸಿ ಬೆರ್ಮುಡಾದವರೆಗೆ ಅಟ್ಲಾಂಟಿಕ್ ಸಾಗರದಲ್ಲಿರುವ ತ್ರಿಕೋಣಕೃತಿಯ ಪ್ರದೇಶ. ಈ ಪ್ರದೇಶದಲ್ಲಿ ಹಡಗಿನ ಮೂಲಕವಾಗಲೀ ಅಥವಾ ವಿಮಾನದ ಮೂಲಕವಾಗಲೀ ಸಂಚರಿಸಲು ಹೋದವರು ಹಿಂಬಂದಿದ್ದಿರಲಿ, ಅವರ ಕುರುಹು ಕೂಡಾ ಸಿಕ್ಕಿಲ್ಲಾ. ಇದರ ರಹಸ್ಯ ಇಂದಿಗೂ ವಿಜ್ಞಾನಕ್ಕೆ ನಿಲುಕಿಲ್ಲ. ಇಂದಿಗೂ ಇದರ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಇರಲಿ.. ಒಮ್ಮೆ ಇದನ್ನು ಹನುಮಂತನ ಕಥೆಯ ಜೊತೆ ತಾಳೆಮಾಡಿ ನೋಡಿ. ಲಂಕೆಯ ರಕ್ಷಣೆ ಮಾಡುತ್ತಿದ್ದ ಆ ರಾಕ್ಷಸಿಗೂ ಬೆರ್ಮುಡಾ ಟ್ರ್ಯಾಂಗಲ್ಗೂ ಅಕ್ಷರಶಃ ಹೊಂದಾಣಿಕೆಯಿಲ್ಲವೇ? ಆ ರಾಕ್ಷಸಿ ಮಾಡುತ್ತಿದ್ದ ಕಾರ್ಯಗಳೇ ಈ ಬೆರ್ಮುಡಾ ಟ್ರ್ಯಾಂಗಲ್ನಲ್ಲಿ ಸಂಭವಿಸುತ್ತಿರುವ ಘಟನೆಗಳಲ್ಲವೇ?
ಬಹುಶಃ ಇಲ್ಲಿಯೂ ಈ ತರಹದ triangle ಇದ್ದಿರಬಹುದು. ಕಾರಣ ಇಲ್ಲಿ ರಾಕ್ಷಸಿ ಎಂದು ಹೆಣ್ಣಿನ ಸಂಭೋದನೆ ಇದೆ. ವಾಮಾಚಾರ ಮುಂತಾದ ತಾಂತ್ರಿಕ ಕ್ರಿಯೆಗಳಲ್ಲಿ ತ್ರಿಕೋಣವನ್ನು ಹೆಣ್ಣಿನ ಗುರುತಾಗಿ ಬಳಸುತ್ತಾರೆ.
ಆದರೆ ಹನುಮಂತ ಮಾಡಿದ ಭೇದಿಸುವ ಕೆಲಸ ಇನ್ನೂ ಮನುಷ್ಯರಿಗೆ ಸಾಧ್ಯವಾಗಿಲ್ಲ. ಆಸಕ್ತರಿಗೆ, ಸಂಶೂಧಕರಿಗೆ, ಇಲ್ಲಿ ಇನ್ನೂ ಹೇರಳವಾದ ಅವಕಾಶವಿದೆ.
ಹೀಗೆ ನಮ್ಮ ಇತಿಹಾಸದ ಕಥೆಗಳಲ್ಲಿ ಈ ತರಹದ ಸಾಂಕೇತಿಕ ರಹಸ್ಯಗಳು ಬಹಳಷ್ಟಿದ್ದು ಸಂಶೋಧಕರಿಗೆ ಬೇಕಾದ ಹೇರಳ ವಿಷಯಗಳು ಅಡಕವಾಗಿವೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ