Posts

ಲಲಿತಾ ತ್ರಿಶತೀ ( ಏಕಾರಾದಿನಾಮ ) - 2. ಓಂ ಏಕಾಕ್ಷರ್ಯೈ ನಮಃ

ಮುಖ್ಯವಾದ ಅಕ್ಷರ ಅಥವಾ ಮಾಯೆಯೆಂಬ ಉಪಾಧಿಯುಳ್ಳವಳು. ಮಾಯೆಯು ಈಶ್ವ್ರನಿಗೆ ಉಪಾಧಿಯಾಗಿ ಪ್ರತಿಬಿಂಬದಲ್ಲಿ ಸರ್ವಜ್ಞತ್ವ ಮುಂತಾದ ವಿಶೇಷಗಳನ್ನು ಉಂಟುಮಾಡುವುದು. ಅಂತಹ ಮಾಯೆಯು ಆತ್ಮ ಜ್ಞಾನದಿಂದ ಮುಕ್ತಿಯು ಲಭಿಸುವವರೆಗೂ ನಾಶವಾಗದಿರುವುದರಿಂದ ಕೂಟಸ್ಥವೆಂಬ ಅರ್ಥವನ್ನು ಬೋಧಿಸುವ ಅಕ್ಷ್ರ ಶಬ್ದದಿಂದ ಕರೆಯಲ್ಪಡುವುದು ಅಥವಾ ಓಂಕಾರವೆಂಬ ಏಕಾಕ್ಷರವುಳ್ಳವಳು ಸಕಲ ಶಬ್ದಗಳಿಗೂ ಶಬ್ದಗಳ ಮೂಲಕ ಅರ್ಥಗಳಿಗೂ ಪ್ರಕೃತಿಯು ಓಂಕಾರವು ಇದನ್ನು ಪ್ರತ್ಯೇಕವಾಗಿ ಅವಲಂಬಿಸಿ ಪರ-ಅಪರ ಬ್ರಹ್ಮವಸ್ತುವನ್ನು ಉಪಾಸನೆ ಮಾಡಿ ಪರಾಪರ ಬ್ರಹ್ಮತಾದಾತ್ಮ್ಯವನ್ನು ಹೊಂದಬಹುದು. ಆದ್ದರಿಂದ ದೇವಿಯು ಶಬ್ದಬ್ರಹ್ಮರೂಪವಾದ ಪ್ರಣವಾಕ್ಷರವುಳ್ಳವಳು ಅಥವಾ, ಅಖಂಡಾನಂದ ಚೈತನ್ಯರೂಪನಾದ, ಅನಶ್ವರನಾದ ಪರಮೇಶ್ವ್ರನು ಅರ್ಧ ಶರೀರ ಭಾಗದಲ್ಲಿರುವಳು ಅಥವಾ ಮಾಯಾಬೀಜ ಮುಂತಾದ ವರ್ಣಗಳನ್ನು ಉಪಾಸನಾ ಪ್ರತೀಕವನ್ನಾಗಿ ಹೊಂದಿರುವವಳು ಅಥವಾ ಅಖಂಡಾಕಾರವಾದ ವೃತ್ತಿಯಲ್ಲಿ ಚೈತನ್ಯವು ಪ್ರತಿಬಿಂಬಿಸುವುದರಿಂದ ಅಂತಹ ವೃತ್ತಿವ್ಯಾಪ್ತಿ ಮಾತ್ರ ವಿವಕ್ಷೆಯಿಂದ ಅಕ್ಷರ ಪದದ ಅರ್ಥವಾದ ಚೈತನ್ಯಕ್ಕೆ ವಿಷಯಳಾಗುವವಳು. "ಅಥಪರಾ ಯಯಾ ತದಕ್ಷ್ರಮಧಿಗಮ್ಯತೇ" ಎಂಬ ಶ್ರುತಿಯು ವೃತ್ತಿ ವ್ಯಾಪ್ತಿಯನ್ನು ಅಕ್ಷರ ರೂಪ ಪರಬ್ರಹ್ಮ ವಸ್ತುವಿನಲ್ಲಿ ವರ್ಣಿಸುವುದು. ಸುಗುಣ ಬ್ರಹ್ಮ ವಸ್ತುವಿನಲ್ಲಿರುವ ವಿಶೇಷಣ ಧರ್ಮಗಳು ನಿರ್ಗುಣ ಬ್ರಹ್ಮ ವಸ್ತುವಿನಲ್ಲಿಯೂ ಕಲ್ಪಿತವಾಗಿ ಸಂಸಕ್ತವಾಗುವುವು ಎಂಬುದನ...

ಲಲಿತಾ ತ್ರಿಶತೀ (ಏಕಾರಾದಿನಾಮ) - 1. ಓಂ ಏಕಾರರೂಪಾಯೈ ನಮಃ

Image
ಮಂತ್ರದಲ್ಲಿ ದ್ವಿತೀಯಾಕ್ಷರವಾಗಿದ್ದು ಮಂತ್ರ ಶರೀರಳಾದ ದೇವಿಯನ್ನು ಭೋಧಿಸುವುದರಿಂದ ದೇವಿಯು ಏಕಾರವೆಂಬ ರೂಪವುಳ್ಳವಳು. ಏಕಾರಃ ರೂಪಂ ಯಸ್ಯಾಃ ಎಂದು ವಿಗ್ರಹವು

ಲಲಿತಾ ತ್ರಿಶತೀ -20 ಓಂ ಕರ್ಮಫಲಪ್ರದಾಯೈ ನಮಃ

Image
ಕಾಲಾಂತರದಲ್ಲಿ ಉಂಟಾಗುವ ಫಲಗಳಿಂದ ಕೂಡಿದ ಸತ್ಕರ್ಮಗಳ ಫಲವನ್ನು ಅನುಗ್ರಹಿಸುವಳು. ಅದೃಷ್ಟವು ಕರ್ಮಫಲವನ್ನು ಕೊಡುವುದೆಂದು ಕರ್ಮ ಮಿಮಾಂಸಾ ಶಾಸ್ತ್ರಕಾರ್ರ ಸಿದ್ಧಾಂತವು. ಅದು ಸಮಂಜಸವಾಗಲಾರದು. ಅಚೇತನವೂ ಜಡವೂ ಆದ ಅದೃಷ್ಟಕ್ಕೆ ಚೇತನ ಧರ್ಮವಾದ ಕರ್ಮಫಲದಾನ ಶಕ್ತಿಯು ಸಂಭವಿಸುವುದಿಲ್ಲ. ಶಾಸ್ತ್ರ ಪ್ರಮಿತವಾದ ಕರ್ಮಗಳು ಫಲವನ್ನು ಅವಶ್ಯವಾಗಿ ಕೊಡಬೇಕಾದುದರಿಂದ ಕರ್ಮಾಧ್ಯಕ್ಷಳಾದ ಪರದೇವತೆಯನ್ನು ಅಪೇಕ್ಷಿಸುವುದು. ಪರದೇವತೆಯು ಕರ್ಮಫಲವನ್ನು ಕೊಡುವುದೆಂಬುದನ್ನು  "ಕರ್ಮಾಧ್ಯಕ್ಷಃ"  "ಮಯೈವ ವಿಹಿತಾನ್ ಹಿ ತಾನ್" "ಫಲಮತ ಉಪಪತ್ತೇಃ" ಎಂಬ ಶ್ರುತಿ, ಸ್ಮೃತಿ, ನ್ಯಾಯಗಳು ಸಾರಿ ಹೇಳುವುವು ಆದ್ದರಿಂದ ದೇವಿಯು ಕರ್ಮ ಫಲ ಪ್ರದಾನ ಮಾಡುವವಳು. ಕರ್ಮಣಾಂ ಫಲಂ ಪ್ರದದಾತಿ ಎಂದು ವಿಗ್ರಹವು. ( ಮುಂದುವರೆಯುವುದು...)

ಲಲಿತಾ ತ್ರಿಶತೀ - 19 ಓಂ ಕಾರಯಿತ್ರ್ಯೈ ನಮಃ

Image
ಸ್ರಷ್ಟವ್ಯ ವಸ್ತುವಿನ ಸೃಷ್ಟಿ ವ್ಯಾಪಾರವು ಹುಟ್ಟಲು ಕಾರಣವಾದ ಪೂರ್ವ ಕರ್ಮೋದ್ಬೋಧಕವಾದ ವಿಧಿಪ್ರತ್ಯಯ ರೂಪವಾದ ಶಬ್ದ ಧರ್ಮ ಅಥವಾ ಶಾಸ್ತ್ರ ಸಂಕೇತದಂತೆ ವಿಧಿ ಭಾವನೆಯು ಕಾರ್ಯವನ್ನು ಮಾಡಿಸುವುದು. ಆದರೆ ಅಚೇತನ ಶಬ್ದಗಳಿಎ ಅಜ್ಞಾಪಕತ್ವ ಧರ್ಮವು ಅಸಂಗತವಾದ್ದರಿಂದ ಶಬ್ದಧಿಷ್ಟಾನ ಚೈತನ್ಯ ರೂಪದಿಂದ ವೇದಗಳಿಗೆ ಕಾರಯಿತೃತ್ವವು ಬರುವುದು. "ಸರ್ವೇ ವೇದ ಯತ್ರೈಕಂ ಭವಂತಿ" ಎಂಬ ಶ್ರುತಿ ಪ್ರಮಾಣದಿಂದ ವೇದಗಳು ಆತ್ಮ ಸ್ವರೂಪವಾಗಿವೆ. ಆದ್ದರಿಂದ ಸ್ವಪ್ರಕಾಶಗಳಾದ ವೇದಗಳು ತಮ್ಮ ಅರ್ಥವನ್ನೂ ಮತ್ತು ತನ್ನ ಅರ್ಥಜ್ಞಾನದಲ್ಲಿ ಪ್ರಾಮಾಣ್ಯವನ್ನೂ ಪ್ರಕಾಶಪಡಿಸಿ ಚೈತನ್ಯ ರೂಪದಿಂದ ಪ್ರೇರಕವಾಗಿ ಕರ್ಮಗಳನ್ನು ಮಾಡಿಸುತ್ತವೆ. ಅಂತಹ ಪ್ರೇರಕವಾದ ವೇದ ಶಬ್ದಗಳಿಗೆ ಚೈತನ್ಯ ರೂಪವನ್ನು ಕೊಟ್ಟವಳು.

ಪಿತೃಪಕ್ಷ

Image
    ಭಾದ್ರಪದ ಕೃಷ್ಣಪಕ್ಷವನ್ನು ಪಿತೃಪಕ್ಷವೆಂದು ಕರೆಯುತ್ತಾರೆ. ಈ ಪಕ್ಷದಲ್ಲಿ ಶ್ರಾದ್ಧವನ್ನು ಮಾಡುವದೂ ಪಿತೃತರ್ಪಣವನ್ನು ಅನುಷ್ಠಿಸುವದೂ ಪಿತೃಗಳಿಗೆ ತೃಪ್ತಿಯನ್ನುಂಟುಮಾಡುತ್ತದೆ ಎಂದು ಹಿಂದುಗಳ ನಂಬಿಕೆ.     ವೇದಗಳಲ್ಲಿ ದೇವಯಾನ, ಪಿತೃಯಾನ ಎಂಬ ಎರಡು ಕರ್ಮಗತಿಗಳನ್ನು ವರ್ಣಿಸಿರುತ್ತದೆ. ಉಪಾಸಕರಾದವರು ದೇವಲೋಕಗಳಿಗೆ ಹೋಗಿ ಅಲ್ಲಿ ದೇವತೆಗಳ ಸಾಮಿಪ್ಯ, ಸಾಲೋಕ್ಯ, ಸಾಯುಜ್ಯ - ಎಂಬ ಫಲಗಳನ್ನು ಅನುಭವಿಸುತ್ತಾರೆ. ಕರ್ಮಿಗಳಾದವರು ಪಿತೃಲೋಕಕ್ಕೆ ಹೋಗಿ ಅಲ್ಲಿ ತಮ್ಮ ತಮ್ಮ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಅನುಭವಿಸುತ್ತಾರೆ - ಹೀಗೆಂಬುದು ಶಾಸ್ತ್ರಕಾರರ ಹೇಳಿಕೆ.     ಪಿತೃಗಳಿಗೆ ತೃಪ್ತಿಯಾಗಲೆಂದು ಶ್ರದ್ಧೆಯಿಂದ ಮಾಡುವ ನಿಯತಕಾಲಿಕ ಕರ್ಮವನ್ನು ಶ್ರಾದ್ಧವೆಂದು ಕರೆಯುತ್ತಾರೆ; ಎಳ್ಳುನೀರುಗಳನ್ನು ಪಿತೃತೃಪ್ತ್ಯರ್ಥವಾಗಿ ಬಿಡುವ ಕರ್ಮವನ್ನು ತರ್ಪಣವೆನ್ನುತ್ತಾರೆ. ಶಕ್ತನಾದವನು ಪಿತೃಪಕ್ಷದಲ್ಲಿ ಪ್ರತಿದಿನವೂ ಶ್ರಾದ್ಧವನ್ನು ಮಾಡಿ ತರ್ಪಣವನ್ನು ಕೊಡಬೇಕು; ಅಶಕ್ತರಾದವರು ಗೊತ್ತಾದ ಒಂದು ದಿನವಾದರೂ ಈ ಕರ್ಮವನ್ನು ಮಾಡಬೇಕು. ಈ ಶ್ರಾದ್ಧಕ್ಕೆ ಮಹಾಲಯವೆಂಬ ಹೆಸರು ಬಂದಿರುತ್ತದೆ. ಈ ಪಕ್ಷವನ್ನು ಮಹಾಲಯ ಪಕ್ಷವೆಂದು ಕರೆಯುವ ವಾಡಿಕೆಯೂ ಇದೆ.     ಪಿತೃಗಳಿಗೆಂದು ಶ್ರಾದ್ಧವನ್ನು ಮಾಡಿದರೆ, ತರ್ಪಣವನ್ನು ಕೊಟ್ಟರೆ ಅವರಿಗೆ ಅದು ತೃಪ್ತಿಯನ್ನು ಹೇಗೆ ಮಾಡುತ್ತ...

ಲಲಿತಾ ತ್ರಿಶತೀ - 18 ಓಂ ಕರ್ಮಾದಿಸಾಕ್ಷಿಣ್ಯೈ ನಮಃ

Image
ಕರ್ಮವು ಆದಿಯಾಗಿರುವ ಉಪಾಸನಾ, ಯೋಗ, ಶ್ರವಣ, ಮನನ, ನಿದಿಧ್ಯಾಸನ ಮುಂತಾದವುಗಳಿಗೆ ಸಾಕ್ಷಿ ರೂಪಳು. ಈ ಅರ್ಥದಲ್ಲಿ "ಸಾಕ್ಷೀ ಚೇತಾ" ಎಂಬ ಶ್ರುತಿಯು ಪ್ರಮಾಣವು ಅಥವಾ ಸೃಷ್ಟಿ ಮಾಡುವ ಜಗತ್ತಿಗೆ ಕಾರಣವಾದ ಜೀವಾತ್ಮನಲ್ಲಿರುವ ಕರ್ಮಾದಿಗಳು ಅಕರ್ಮಾತ್ಮ ದರ್ಶನಕ್ಕೆ ಸಾಧನಗಳಾದ್ದರಿಂದ ಸಾಕ್ಷಿಗಳುಳ್ಳವಳು. ಕರ್ಮ ಆದಿರ್ಯೇಷಾಂತಾನಿ, ತೇಷಾಂ ಸಾಕ್ಷಿಣೀ, ಕರ್ಮಾದಯಃ ಸಾಕ್ಷಿ ಭೂತಾಃ ಯಸ್ಯಾಸ್ಸಾ ಎಂದು ವಿಗ್ರಹವು.

ದೇವರಿಗೆ ಅರ್ಪಿಸಬೇಕಾದ ಪುಷ್ಪಗಳು

    ದೇವರಿಗೆ ಪುಷ್ಪಗಳನ್ನು ಅರ್ಪಿಸಿದರೆ ಅನುಗ್ರಹ ಮಾಡುತ್ತಾನೆ, ಆದರೆ ಅದು ಯಾವ ತರಹದ ಪುಷ್ಪಗಳು : ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಂ ಇಂದ್ರಿಯ ನಿಗ್ರಹಃ ಸರ್ವಭೂತದಯಾ ಪುಷ್ಪಂ ಸತ್ಯಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ಧ್ಯಾನಪುಷ್ಪಂ ತಪಃ ಪುಷ್ಪಂ ಕ್ರಿಯಾಪುಷ್ಪಂ ಆರ್ಚತಿ ತುಷ್ಯತಿ ಕೇಶವ ಅಹಿಂಸಾ ಪ್ರಥಮಂ ಪುಷ್ಪಂ : ಮೊಟ್ಟ ಮೊದಲನೇ ಪುಷ್ಪ ಅಹಿಂಸೆ. ಅಂದರೆ ಹಿಂಸೆ ಮಾಡದಿರುವುದು. ಯಾರ ಮನಸ್ಸನ್ನೂ ನೋಯಿಸದೆ ಇರುವುದು. ಹಿಂಸಾತ್ಮಕವಾದ ರೀತಿಯಲ್ಲಿ ಚುಚ್ಚು ಮಾತುಗಳನ್ನು ಆಡದೇ ಇರುವುದು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ಇದನ್ನೇ ಎಲ್ಲಾ ಮಹನೀಯರೂ ಹೇಳಿದ್ದಾರೆ. ಗಾಂಧೀಜಿಯವರೂ ಹೇಳಿದ್ದಾರೆ. 'ಮಾತೇ ಮಾಣಿಕ್ಯ', 'ಮಾತು ಬೆಳ್ಳಿ, ಮೌನ ಬಂಗಾರ' ಎನ್ನುವ ಗಾದೆ ಮಾತೂ ಇವೆ ವಿಶೇಷವಾಗಿ ಮಾತನಾಡುವಾಗ ಜಾಗ್ರತೆ ವಹಿಸಬೇಕೆನ್ನುವುದೇ ಆಗಿದೆ. ಪುಷ್ಪಂ ಇಂದ್ರಿಯ ನಿಗ್ರಹಃ : ಇದು ನಮ್ಮ ಜೀವನದಲ್ಲಿ ತುಂಬಾ ಅವಶ್ಯಕವಾದದ್ದು. ಪರಸ್ತ್ರೀಯರನ್ನು ನೋಡುವ ದೃಷ್ಟಿಯಲ್ಲಿ ಯಾವುದೇ ರೀತಿಯ ಕಲ್ಮಶ ಭಾವನೆಯಿರದೆ ನಮ್ಮ ಮನೆಯವರಂತೆ ಅನ್ನು ಆತ್ಮೀಯತೆ ತುಂಬಿರಬೇಕು ಅಕ್ಕ-ತಂಗಿ, ಹಿರಿಯರನ್ನು ಮಾತಾ-ಪಿತೃಗಳಂತೆ ಗೌರವವಾಗಿ ನೋಡುವುದೇ ಅಲ್ಲದೇ ತಾಯಿಯಲ್ಲಿ, ಅಕ್ಕ-ತಂಗಿಯರುಗಳಲ್ಲಿ ಇರುವ ಪ್ರೇಮವೇ ಬೇರೆ ನಮಗೆ ನಿಯಮಿತವಾದ ಸ್ತ್ರೀಯ ಪ್ರೇಮವೇ ಬೇರೆ. ಹಾಗೆ ಬೇರೆಯವರಲ್ಲಿ ಪ್ರೀತಿ ವಾತ್ಸಲ್ಯಗೌರವದಿಂದ ನಡೆಯುವುದೇ ಇಂದ್ರಿಯ...