ಕನಕದಾಸರ ಮೋಹನತರಂಗಿಣಿ

    ಕನಕದಾಸರ ಪ್ರಾರಂಭದ ಕೃತಿ ಭೋಗಮೂಲವಾದ ಶೃಂಗಾರವೇ ವಸ್ತು ಇದು ಭಕ್ತಿ ಸಾಹಿತ್ಯ ಪರಂಪರೆಗೆ ಸೇರಿದ್ದಲ್ಲ 42 ಸಂಧಿಗಳಿವೆ ಸಾಂಗತ್ಯಗಳಿರುವುದು 2700 ಇದರ ಇನ್ನೊಂದು ಹೆಸರು ಕೃಷ್ಣಚರಿತೆ ಶ್ರೀ ಕೃಷ್ಣರುಕ್ಮಿಣಿ ರತಿಮನ್ಮಥ ಉಷಾಅನಿರುದ್ಧರ ಪ್ರೇಮಗಥೆಯನ್ನು ದಾಸರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ.
    ದೈವೀಪಾತ್ರಗಳನ್ನು ಶೃಂಗಾರಕಾವ್ಯಗಳಲ್ಲಿ ಜೀವಂತವಾಗಿರಿಸಿದ ಶ್ರೇಯಸ್ಸು ಇವರದ್ದು, ಮೋಹನತರಂಗಿಣಿಗೆ ಕಥಾ ವಸ್ತುವನ್ನು ಆಯ್ದುಕೊಂಡಿರುವುದು ಮಹಾಭಾರತ ಭಾಗವತ ಮತ್ತು ಪುರಾಣಗಳಿಂದ ವಿಜಯನಗರದ ಸಮಕಾಲೀನ ಜೀವನವನ್ನು ನಮ್ಮ ಕಣ್ಮುಂದೆ ಪೌರಾಣಿಕ ಪಾತ್ರಗಳ ಹಿನ್ನೆಲೆಯಲ್ಲಿ ಇರಿಸಿರುವುದರಿಂದ ಅವರನ್ನು ಅಕಾಲದ ಚರಿತ್ರೆಕಾರರ ಸಾಲಿಗೆ ಸೇರಿಸಿದೆ ವಿಜಯನಗರದ ಸಾಮ್ರಾಜ್ಯದ ಸುವರ್ಣ ಯುಗದಲ್ಲಿ ಈ ಕೃತಿ ರಚಿಸಿಸ್ಪಟ್ಟಿತು ಎಂಬುದು ಗಮನಿಸಬೇಕಾದ ಸಂಗತಿ.
    ಮೋಹನತರಂಗಿಣಿಯಲ್ಲಿನ ಶ್ರೀ ಕೃಷ್ಣನ ದ್ವಾರಕೆ ಮತ್ತು ವಿದೆ ಶ್ರೀಪ್ರವಾಸಿಗಳ ವಿಜಯನಗರದ ವರ್ಣನೆ ಇವುಗಳಲ್ಲಿನ ಸಾಮ್ಯತೆಯನ್ನು ನಾವು ಗುರುತಿಸಬಹುದು. ಪುರಾಣಪುರುಷ ಶ್ರೀ ಕೃಷ್ಣನ್ನು ವಿಜಯನಗರದ ಶ್ರೀಕೃಷ್ಣದೆ ವರಾಯನೊಂದಿಗೆ ಕಾವ್ಯದಲ್ಲಿ ಹೋಲಿಸಿದ್ದಾರೆ ಶ್ರೀಕೃಷ್ಣದೇವರಾಯನನ್ನು ಸ್ತುತಿಸಲೆಂದೇ ಕನಕದಾಸರು ಮೋಹನತರಿಂಗಿಣಿ ರಚಿಸಿದರೆಂದು ಹೇಳುವವರಿದ್ದಾರೆ ಡಾ. ಜಿ ವರದರಾಜರಾವ್ ಅವರು ಪೌರಾಣಿಕವಾದ ಕಥಾವಸ್ತುವನ್ನು ಜನಪ್ರಿಯವಾದ ಧಾಟಿಯಲ್ಲಿ ಕಾವ್ಯಮಯವಾದ ಶೈಲಿಯಲ್ಲಿ ನಿರೂಪಿಸಿರುತ್ತಾರೆ ವಸ್ತುವಿನ ದೃಷ್ಟಿಯಿಂದ ಕನ್ನಡ ಕಾವ್ಯಗಳಲ್ಲಿ ಈ ಕವಿಗೆ ಒಂದು ಸ್ಥಾನ ಸಲ್ಲುತ್ತದೆ ಎಂದಿದ್ದಾರೆ.
    ಸೌರಾಷ್ಟ್ರ ದ್ವಾರಕಾಪುರ ಕುಸುಮಾವಟಿ ಶೋಣೀತಪುರ ಇವುಗಳ ವರ್ಣನೆಯನ್ನು ಕನಕದಾಸರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ವಿಜಯನಗರದ ಸಂಪತ್ತು ಎಷ್ಟಿತ್ತು ಎಂಬುದಕ್ಕೆ ಮುಂದಿನ ಪದ್ಯದ ಉದಾಹರಣೆ ಸಾಕು
ಸೋಮಸೂರಿಯ ವೀಥಿ ವೀಥಿಯಿಕ್ಕೆಲದಲ್ಲಿ
ಹೇಮನಿರ್ವಿತ ಸೌಧದೋಳಿ
ರಾಮಣೀಯತೆವೆತ್ತ ಕಳಸದಂದಡಿಯಿರ್ದು
ವಾ ಮಹಾದ್ವಾರಕಾಪುರದೆ (3-11)
ಭೋಜಿರ ಕರ್ಪೂರ ಕಸ್ತೂರಿ ಜೀರ್ಣಜ
ವಾಜಿ ಪುಣುಗು ಬಹುತೈಲ
ಸೋಜಿಗವಡೆದ ಸುಗಂಧದಂಗಡಿಗಳು
ರಾಜಿಸುತಿರ್ದುವಿಕ್ಕೆಲದಿ
ಚಪ್ಪನ್ನದೇಶದ ನಾಣೆಯಂಗಳ ನೋಟ
ತುಪ್ಪದ ಚಪಲ ಸೆಟ್ಟಿಗಳು
ಒಪ್ಪವಡೆದು ಕುಳಿತಿರ್ದರು ಹಣಹೊಸ
ಕುಪ್ಪೆಯ ವಂದಿಟ್ಟುಕೊಂಡು
ಒರೆಗಲ್ಲ ರಜವ ಮೇಣದೊಳೊತ್ತಿ ತೆಗೆದದ
ಕರಗಿಸುವರ್ಣ ಬಂಡುಗವ
ನೆರೆದ ಯಾಚಕರಿಗೆ ಹಂಚಿಕುಡುವ ಚಿನ್ನ
ವರದರೊಪ್ಪಿದರು ಕಟ್ಟೆಯಲಿ
ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರಸಂಖ್ಯೆಯಲಿ ತೂಗುವರು ಬೇಡಿದರೆ ಉ
ಬೇರಂಗೆ ಕಡವ ಕುಡುವರು
    ಚಿನ್ನದಿಂದ ನಿರ್ಮಿಸಲ್ಪಟ್ಟ ಉಪ್ಪರಿಗೆ ಮನೆಗಳು ಸುವರ್ಣವನ್ನೇ ಮುಂದಿಟ್ಟು ಕುಳಿತಿರುವ ಶೆಟ್ಟರು ಹಡಗಿನ ವ್ಯಾಪಾರದಿಂದ ಗಳಿಸಿದ ಹಣವನ್ನು ಭಾರಸಂಖ್ಯೆಯಲ್ಲಿ ತೂಗವೆ ಬೇಡಿದರೆ ಕುಬೇರನಿಗೂ ಕಡನೀಡುವ ಶ್ರೀಮಂತರಿದ್ದರು ಎಂದರೆ ಅದು ಎಂಥ ವೈಭವದ ಕಾಲ ಎನಿಸುವುದು ವಿದೇಶಿ ಪ್ರವಾಸಿಗರು ಉಲ್ಲೇಖಿಸಿರುವ ವಿಜಯನಗರದಲ್ಲಿ ಕಳ್ಳಕಾಕರ ಭೀತಿ ಭಯವಿರಲಿಲ್ಲ ಮುತ್ತು ರತ್ನಗಳನ್ನು ಬೀದಿಯ ಇಕ್ಕೆಲಗಳಲ್ಲಿ ಇಟ್ಟುಕೊಂಡು ಮಾರುತ್ತಿದ್ದುದು ಸತ್ಯ ಎಂಬುದಕ್ಕೆ ಕನಕದಾಸರ ಕಾವ್ಯಗಳೆ ನಿದರ್ಶನ ಯುದ್ಧದ ವರ್ಣನೆಯು ಅತ್ಯಂತ ಸಮರ್ಪಕವಾಗಿ ಕಾವ್ಯದಲ್ಲಿ ಮೂಡಿಬಂದಿದೆ ಶ್ರೀಕೃಷ್ಣ ಬಾಣಾಸುರನ ಶೋಣೀತಪುರಕ್ಕೆ ದಂಡೆತ್ತಿ ಹೋಗುವಾಗಿನ ವರ್ಣನೆಯನ್ನು ನೋಡಿ
ಮುತ್ತಿನ ಗದ್ದುಗೆ ಗರುಡನ ಹೆಗಲಿನೊ
ಳೆತ್ತಿಸಿ ಬಿಗಿದು ಹಲ್ಲಣಿಸಿ
ಅತ್ಯಂತ ಸೌಖ್ಯವ ಮಾಡಿ ಸಂತಸದಿಂದೆ
ಹತ್ತಿದ ಶ್ರೀಕೃಷ್ಣರಾಯ |
    ಇಲ್ಲಿ ಶ್ರೀ ಕೃಷ್ಣದೇವರಾಯ ಬಿಜಾಪುರದ ಅದಿಲಷಾನ ಮೇಲೆ ಯುದ್ಧಕ್ಕೆ ಹೊರಟಿರುವದನ್ನು ಹೋಲಿಸಬಹುದಾಗಿದೆ ಮುಂದೆ ದಾಸರು ಶ್ರೀಕೃಷ್ಣ ದೇವರಾಯ ಸುಖಸಂತೋಷದಿಂದ ಸಾಮ್ರಾಜ್ಯ ಆಳಿದನು ಎಂಬುದನ್ನು ಉಲ್ಲೇಖಿಸಿದ್ದಾರೆ ಒಂದೆಡೆ ಅವರು ವಿಜಯನಗರದ ಕಾಲದ ಸವಿಯೂಟವನ್ನು ಬಣ್ಣಿಸಿದ್ದಾರೆ
ಜೇನು ಸಕ್ಕರೆ ಕ್ಷೀರ ರಸವಪ್ಪ ಫೇಣಿ ಸು
ಖೀನುಂಡೆ ವಡೆ ಗಾರಿಗೆಯ
ನಾನಾಭಕ್ಷ್ಯ ಭೊ ಜ್ಯಂಗಳ ಪರಮ ಸು
ಮ್ಮಾನದೆ ಬಡಿಸಿದರೊಲಿದು
    ವಾರವನಿತೆಯರನ್ನು ಬಣ್ಣಿಸುವಾಗ ಪದ್ಮಿನಿ ಶಂಖಿನಿ ಹಸ್ತಿನಿ ಚಿತ್ತಿನಿ ಮುಂತಾದ ಹೆಣ್ಣುಗಳೆಂದು ಹೆಸರಿಸಿರುವುದು ಅವರಿಗಿದ್ದ ಕಾಮಶಾಸ್ತ್ರಪಾಂಡಿತ್ಯಕ್ಕೆ ಸಾಕ್ಷಿ ಕಾವ್ಯದಲ್ಲಿ ಶೃಂಗಾರ ಒಮ್ಮೊಮ್ಮೆ ಹದ್ದುಮೀರಿರುವ ಪ್ರಸಂಗಗಳೂ ಉಂಟು ರತಿ ಮಗುವಾಗಿದ್ದ ತನ ಗಂಡನೊಡನೆ ನಡೆದುಕೊಳ್ಳುತ್ತಿದ್ದ ರೀತಿ ಅವಳ ಕಾವ್ಯದ ಇಚ್ಚೆಯನ್ನು ಎತ್ತಿತೋರಿಸುತ್ತದೆ
ನೆಟ್ಟನೆ ಮೊಗ ನೋಡಿ ಮುದ್ದಿಪಳ್ ತರಳನ
ಪುಟ್ಟ ಕೈಗಳ ತಂದು ತನ್ನ
ಬಟ್ಟ ಬಲ್ಮೊಲೆಗಡರ್ಚುವಳು ಬಾಯೊಳು ಬಾಯ
ನಿಟ್ಟು ಗಲ್ಲವ ಪೀಡಿಪಳು
    ಕನಸಿನಲ್ಲಿ ಪ್ರಣಯ ಭೇಟಿ ಚಿತ್ರಲೇಖೆಯ ಯಕ್ಷಿಣಿ ಪ್ರದ್ಯುಮ್ನನನ್ನು ಕಂಡಾಗ ರುಕ್ಮಿಣಿಯ ಮೊಲೆಹಾಲು ಚಿಮ್ಮುವಿಕೆ ಇವೆಲ್ಲಾ ಅತ್ಯಂತ ಸೊಗಸಾಗಿ ಮುಡಿ ಬಂದಿದೆ ಆದರೆ ಬಲಿಷ್ಟವಾಗಿ ಬರಬೇಕಾದ ಅನಿರುದ್ಧನ ಪಾತ್ರಪೋಷಣೆ ಆಗದಿರುವುದು ಒಂದು ಕೊರತೆ ಬಾಣನ ಪಾತ್ರ ಶ್ರೀಕೃಷ್ಣನ ಶೃಂಗಾರವಿಲಾಸಗಳು ವಿಶಿಷ್ಟವಾಗಿ ಬಂದಿವೆ ಉಷೆಯ ಅರಮನೆಯಿಂದ ರಣಾಂಗಣಕ್ಕೆ ಹೊರಡುವ ಅನಿರುದ್ಧನನ್ನು ಮನೆಯ ಸ್ತ್ರೀಯರು ಬೀಳ್ಕೊಡುವುದು ಯುದ್ಧಕ್ಕೆ ತೆರಳುವ ವಿಜಯನಗರದ ವೀರರನ್ನು ಅವರ ಪತ್ನಿಯರು ಬೀಳ್ಕೊಡುತ್ತಿದ್ದರು ಎಂಬುದನ್ನು ಜ್ಞಾಪಿಸುತ್ತದೆ ಆಕಾಲದ ಉಡುಗೆ ತೊಡುಗೆಯ ಬಗ್ಗೆಯೂ ಕಾವ್ಯದಲ್ಲಿ ಉಲ್ಲೇಖವಿದೆ ನಾಡೊಳಗುಳ್ಳ ಜಾಣರು ಜಾಣೆಯರೊಡನೆಯಾಡುವ ಮಾತುಗಳು ಸಕ್ಕದ ಕನ್ನಡ ಬಳಸಿಕೊಂಡಿದ್ದೇನೆಂದು ಕನಕದಾಸರು ಹೇಳಿಕೊಂಡಿದ್ದಾರೆ ಆದರೂ ಅಲ್ಲಲ್ಲಿ ಸಂಸ್ಕೃತದ ಬಳಕೆಯಿದೆ ಆಕಲದ ಪಂಡಿತರ ಮೆಚ್ಚುಗೆಗಳಿಸ ಬೇಕೆಂದು ಅವರು ಹೀಗೆ ಮಾಡಿರಬಹುದು ಅವರು ಬಳಸಿದ ಒಂದೆರಡು ನುಡಿಗಟ್ಟುಗಳು ಸೊಗಸಾಗಿವೆ.
    ಮೂಢರಂದೊಳು ಗುದ್ದಲಿಯನು ಕೊಂಡು ನಾಡ ಕಾಲುವೆ ತಿದ್ದುವೆರೆ ಕನಸಿನ ಭತ್ತಕ್ಕೆ ಗೋಣಿಯನಾಂತರೆ

    ಶ್ರೀಕೃಷ್ಣ ರುಕ್ಮಿಣಿಯರ ವಿವಾಹೋತ್ಸವ ಶೃಂಗಾರದಿಂದ ಪ್ರಾರಂಭವಾಗುವ ಕಥೆ ದ್ವಾರಕೆಯಲ್ಲಿ ಉಷೆಯನು ಮನೆಗೆ ತುಂಬಿಸಿಕೊಳ್ಳುವಲ್ಲಿ ಕೊನೆಗೊಳ್ಳುವುದು ಕಾವ್ಯ ಪ್ರಪಂಚದಲ್ಲಿ ಮೋಹನತರಂಗಿಣೀ ಮಹಾಕಾವ್ಯದ ವರ್ಗಕ್ಕೆ ಸೇರಿದ್ದು ಮಹಾಕಾವ್ಯಕ್ಕೆ ಅವಶ್ಯಕವಾದ 18 ಅಂಗಗಳು ಅದರಲ್ಲಿ ಉಂಟು ಕನಕದಾಸರ ಪ್ರಾಯೋಗಿ ಕಥೆ ಮತ್ತು ಪ್ರಾಮಾಣಿಕ ಯತ್ನಗಳನ್ನು ಇಲ್ಲಿ ಕಾಣಬಹುದು. 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ