ಭಗವಾನ್ ಎಂದರೇನು?
'ಭಗವಾನ್' ಎನ್ನುವ ಪದವನ್ನು ನಮ್ಮ ವ್ಯವಹಾರದಲ್ಲಿ ನಿತ್ಯವೂ ಹೇರಳವಾಗಿ ಬಳಸುತ್ತೇವೆ. ಪರಮಾತ್ಮನನ್ನು 'ಹೇ ಭಗವಾನ್' ಎಂದು ಸಂಬೋಧಿಸುತ್ತೇವೆ. ಇದೇ ಶಬ್ದವನ್ನು ಕೆಲವು ಜ್ಞಾನಿಗಳ ನಾಮಧೇಯಗಳ ಹಿಂದೆ ಗೌರವಪೂರ್ವಕವಾಗಿ ಉಪಯೋಗಿಸುತ್ತೇವೆ ಉದಾ ಭಗವಾನ್ ಶಂಕರಾಚಾರ್ಯರು, ಭಗವಾನ್ ರಮಣಮಹರ್ಷಿಗಳು ಇತ್ಯಾದಿ. ಧನವುಳ್ಳವನು ಧನವಾನ್, ವಿದ್ಯಾವಂತನು ವಿದ್ಯಾವಾನ್, ಗುಣವುಳ್ಳವನು ಗುಣವಾನ್ ಮುಂತಾದ ಶಬ್ದಗಳ ಉತ್ಪತ್ತಿಯಂತೆಯೇ ಭಗವುಳ್ಳವನು ಭಗವಾನ್ ಎನ್ನಬಹುದು, ಹಾಗಾದರೆ ಭಗವಾನ್ ಎಂಬ ಶಬ್ದದ ಅರ್ಥವನ್ನು ತಿಳಿಯಲು ವಿಷ್ಣುಪುರಾಣದಲ್ಲಿ (6-5-78,79) ಎರಡು ಶ್ಲೋಕಗಳಿವೆ. 1. ಉತ್ಪತ್ತಿಂಚ ವಿನಾಶಂಚ ಭೂತಾನಾಮಾಗತಿಂ ಗತಿಂ | ವೇತ್ತಿ ವಿದ್ಯಾಮವಿದ್ಯಾಂಚ ಸ ವಾಚ್ಯೋ ಭಗವಾನಿತಿ || ಪ್ರಾಣಿಗಳ ಉತ್ಪತ್ತಿಯನ್ನೂ ಪ್ರಲಯವನ್ನೂ ಆಗು-ಹೋಗುಗಳನ್ನೂ ವಿದ್ಯೆಯನ್ನು ಅವಿದ್ಯೆಯನ್ನೂ ಅರಿತಿರುವಾತನನ್ನು ಭಗವಂತನೆನ್ನಬೇಕು. 2. ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರಿಯಃ | ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀರಣಾ || ಸಮಗ್ರವಾದ ಐಶ್ವರ್ಯ (ಬೇಕಾದಂತೆ ಆಳುವ ಸಾಮರ್ಥ್ಯ, ಸ್ವಾತಂತ್ರ್ಯ), ಧರ್ಮ, ಯಶಸ್ಸು, ಸಂಪತ್ತು ಜ್ಞಾನ ಮತ್ತು ವೈರಾಗ್ಯ ಈ ಆರು ಗುಣಗಳನ್ನು 'ಭಗ'ವೆಂದು ಹೇಳಲಾಗುತ್ತದೆ. ಇವು ಯಾವಾಗಲೂ ಭಗವಂತನ ಸ್ವರೂಪವೇ ಆಗಿದೆ ಆದುದರಿಂದ ಮೇಲೆ ಹೇಳಿದ...