ಗರ್ಭ

ಉಪನಿಷತ್ :- ಮಂಗಲಮ್--ಓಂ ಸಹನಾವವತು | ಸಹನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ,ಓಂ ಶಾಂತಿಃ, ಶಾಂತಿಃ ಶಾಂತಿಃ || 


ಪದವಿಭಾಗ:- ಸಹ, ನೌ, ಅವತು ,ಸಹ ,ನೌ ,ಭುನಕ್ತು, ಸಹವೀರ್ಯಂ ಕರವಾವಹೈ,ತೇಜಸ್ವಿನೌ, ಅಧೀತಮ್, ಅಸ್ತು,ಮಾ, ವಿದ್ವಿಷಾವಹೈ,ಓಂ ಶಾಂತಿಃ, ಶಾಂತಿಃ ,ಶಾಂತಿಃ,


ಅರ್ಥ:- --ಉಪದೇಶಗಳಲ್ಲಿ ಪ್ರತಿಪಾದಿಸುವ ತತ್ವವು ನಮ್ಮಿಬ್ಬರನ್ನೂ(ಗುರು ಮತ್ತು ಶಿಷ್ಯರನ್ನು ) ರಕ್ಷಿಸಲಿ.ನಮ್ಮಿಬ್ಬರಿಗೆ ನಿತ್ಯ ಸುಖವನ್ನು ಉಂಟುಮಾಡಲಿ.ನಾವಿಬ್ಬರೂ ಜ್ಞಾನವನ್ನು ಬೆಳೆಸುತ್ತೇವೇ. ನಾವಿಬ್ಬರೂ ಮಾಡಿದ ,ಅರ್ಥ ಸಹಿತವಾದ ಕಲಿಕೆಯು ನಮಗೆ ಜ್ಞಾನದ ಪ್ರಕಾಶವನ್ನು ಹೆಚ್ಚಿಸಲಿ. ನಮ್ಮಿಬ್ಬರಲ್ಲಿ ದ್ವೇಷವು ಆಗದಿರಲಿ. ನಮ್ಮ ತಾಪತ್ರಯಗಳು ಶಾಂತವಾಗಲಿ



ಉಪನಿಷತ್ :- ಶುಕ್ಲಃ ರಕ್ತಃ ಧೂಮ್ರಃ ಪೀತಃ ಕಪಿಲಃ ಪಾಂಡರಃ ಇತಿ | ಸಪ್ತಧಾತುಕಮ್ ಇತಿ ಕಸ್ಮಾತ್ | ಯದಾ ದೇವದತ್ತಸ್ಯ ದ್ರವ್ಯಾದಿ ವಿಷಯಾಃ ಜಾಯಂತೆ | ಪರಸ್ಪರ ಸೌಮ್ಯಗುಣತ್ವಾತ್ ಷಡ್ವಿಧಃ ರಸಃ ರಸಾತ್ ಶೋಣಿತಮ್ ಶೋಣಿತಾತ್ ಮಾಂಸಮ್ ಮಾಂಸಾತ್ ಮೇಧಃ ಮೇಧಸಃ ಸ್ನಾಯವಃ ಸ್ನಾಯುಭ್ಯಃ ಅಸ್ಥೀನಿ ಅಸ್ಥಿಭ್ಯಃ ಮಜ್ಜಾ ಮಜ್ಜಾತಃ ಶುಕ್ರಮ್ ಶುಕ್ರಶೋಣಿತಸಂಯೋಗಾತ್ ಆವರ್ತತೆ ಗರ್ಭಃ ಹೃದಿ ವ್ಯವಸ್ಥಾಮ್ ನಯತಿ ಹೃದಯೆ ಅಂತರಾಗ್ನಿಃ ಅಗ್ನಿಸ್ಥಾನೆ ಪಿತ್ತಮ್ ಪಿತ್ತಸ್ಥಾನೆ ವಾಯುಃ ವಾಯುತಃ ಹೃದಯಮ್ಪ್ರಾಜಾಪತ್ಯಾತ್ ಕ್ರಮಾತ್ ||೨|| 


ಪದವಿಭಾಗ:- ಶುಕ್ಲಃ ,ರಕ್ತಃ, ಧೂಮ್ರಃ, ಪೀತಃ, ಕಪಿಲಃ, ಪಾಂಡರಃ, ಇತಿ | ಸಪ್ತಧಾತುಕಮ್, ಇತಿ, ಕಸ್ಮಾತ್ | ಯದಾ, ದೇವದತ್ತಸ್ಯ, ದ್ರವ್ಯಾದಿ, ವಿಷಯಾಃ, ಜಾಯಂತೆ | ಪರಸ್ಪರ ,ಸೌಮ್ಯಗುಣತ್ವಾತ್, ಷಡ್ವಿಧಃ, ರಸಃ, ರಸಾತ್ ,ಶೋಣಿತಮ್ ,ಶೋಣಿತಾತ್, ಮಾಂಸಮ್ ,ಮಾಂಸಾತ್, ಮೇಧಃ , ಮೇಧಸಃ, ಸ್ನಾಯವಃ ,ಸ್ನಾಯುಭ್ಯಃ ,ಅಸ್ಥೀನಿ, ಅಸ್ಥಿಭ್ಯಃ, ಮಜ್ಜಾ, ಮಜ್ಜಾತಃ, ಶುಕ್ರಮ್ ,ಶುಕ್ರಶೋಣಿತಸಂಯೋಗಾತ್ ,ಆವರ್ತತೆ ,ಗರ್ಭಃ, ಹೃದಿ, ವ್ಯವಸ್ಥಾಮ್ ,ನಯತಿ, ಹೃದಯೆ, ಅಂತರಾಗ್ನಿಃ ,ಅಗ್ನಿಸ್ಥಾನೆ, ಪಿತ್ತಮ್ ,ಪಿತ್ತಸ್ಥಾನೆ ,ವಾಯುಃ, ವಾಯುತಃ, ಹೃದಯಮ್,ಪ್ರಾಜಾಪತ್ಯಾತ್, ಕ್ರಮಾತ್.


ಅರ್ಥ:- ಬಿಳಿ ,ಕೆಂಪು, ಬೂದು, ಹಳದಿ, ಕಂದು ಹಳದಿ, ಶುಭ್ರ ಬಿಳಿ,ಇವು ಶರೀರದಲ್ಲಿ ಇರುತ್ತವೆ. ಏಳು ಧಾತುಗಳಿ ಹೇಗೆ? ಯಾವಾಗ ದೇವದತ್ತ ಮೊದಲಾದವರಿಗೆ ದ್ರವ್ಯವೇ ಮೊದಲಾದ ವಿಷಯಗಳ ಇಚ್ಛೆಯು ಉಂಟಾಗುತ್ತದೆ. ರಸಗಳಲ್ಲಿ ಪರಸ್ಪರ ಸಾಮ್ಯವಿರುವುದರಿಂದ, ರಸದಿಂದ ಶೋಣಿತ, ಶೋಣಿತದಿಂದ ಮಾಂಸ, ಮಾಂಸದಿಂದ ಕೊಬ್ಬು, ಕೊಬ್ಬಿನಿಂದ ಸ್ನಾಯುಗಳು, ಸ್ನಾಯುಗಳಿಂದ ಏಲುಬುಗಳು, ಎಲುಬುಗಳಿಂದ ಮಜ್ಜೆ, ಮಜ್ಜೆಯಿಂದ ಶುಕ್ರ, ಶುಕ್ರ ಮತ್ತು ಶೋಣಿತಗಳ ಕೂಡುವಿಕೆಯಿಂದ ಬಸಿರು ಉಂಟಾಗುತ್ತದೆ. ಹೃದಯದಲ್ಲಿ ವ್ಯವಸ್ಥೆಯನ್ನು ಹೊಂದುತ್ತದೆ. ಹೃದಯದಲ್ಲಿ ಬಿಸಿಯು ಇರುತ್ತದೆ. ಇಲ್ಲಿ ಪಿತ್ತರಸವು ಇರುತ್ತದೆ. ಪಿತ್ತರಸದ ಸ್ಥಾನದಲ್ಲಿ ಪ್ರಾಣವು ಸಂಚರಿಸುತ್ತದೆ. ಹೀಗೆ ಕ್ರಮವಾಗಿ ಬ್ರಹ್ಮನಿಂದ ಗರ್ಭವು ಉಂಟುಮಾಡಲ್ಪಡುತ್ತದೆ.



ಉಪನಿಷತ್ :- ಋತುಕಾಲೆ ಸಂಪ್ರಯೋಗಾತ್ ಏಕರಾತ್ರೋಷಿತಮ್ ಕಲಲಮ್ ಭವತಿ | ಸಪ್ತರಾತ್ರೋಷಿತಮ್ ಬುದ್ಬುಧಮ್ ಭವತಿ | ಅರ್ಧಮಾಸಾಭ್ಯಂತರೆ ಪಿಂಡಃ ಭವತಿ | ಮಾಸಾಭ್ಯಂತರೆ ಕಠಿನಃ ಭವತಿ | ಮಾಸದ್ವಯೇನ ಶಿರಃ ಸಂಪದ್ಯತೆ | ಮಾಸತ್ರಯೇಣ ಪಾದಪ್ರದೇಶಃ ಭವತಿ | ಅಥ ಚತುರ್ಥೆ ಮಾಸೆ ಗುಲ್ಫಜಟರಕಟಿಪ್ರದೇಶಾಃ ಭವಂತಿ | ಪಂಚಮೆ ಮಾಸೆ ಪೃಷ್ಟವಂಶಃ ಭವತಿ | ಷಷ್ಠೇ ಮಾಸೆ ಮುಖನಾಸಿಕಾಕ್ಷಿಶ್ರೋತ್ರಾಣಿ ಭವಂತಿ | ಸಪ್ತಮೇ ಮಾಸೆ ಜೀವೇನ ಸಂಯುಕ್ತಃ ಭವತಿ | ಅಷ್ಟಮೇ ಮಾಸೆ ಸರ್ವಲಕ್ಷಣಸಂಪನ್ನಃ ಭವತಿ | ಪಿತುಃ ರೇತಃ ಅತಿರೇಕಾತ್ ಪುರುಷಃ ಮಾತುಃ ರೇತಃ ಅತಿರೇಕಾತ್ ಸ್ತ್ರೀ ಉಭಯೋಃ ಬೀಜತುಲ್ಯತ್ವಾತ್ನಪುಂಸಕಃ ಭವತಿ | ವ್ಯಾಕುಲಿತಮನಸಃ ಅಂಧಾಃ ಖಂಜಾಃ ಕುಬ್ಜಾಃ ವಾಮನಾಃ ಭವಂತಿ | ಅನ್ಯೋನ್ಯವಾಯುಪರಿಪೀಡಿತಶುಕ್ರದ್ವೈವಿಧ್ಯಾತ್ ತನುಃ ಸ್ಯಾತ್ ತತಃ ಯುಗ್ಮಾಃ ಜಾಯಂತೆ | ಪಂಚಾತ್ಮಕಃ ಸಮರ್ಥಃ ಪಂಚಾತ್ಮಿಕಾ ಚೇತಸಾ ಬುದ್ಧಿಃ ಗಂಧರಸಾದಿಜ್ಞಾನಾಕ್ಷರಾಕ್ಷರಮ್ ಓಂಕಾರಮ್ ಚಿಂತಯತಿ ಇತಿ ತತ್ ಏತತ್ ಏಕಾಕ್ಷರಮ್ ಜ್ಞಾತ್ವಾ ಅಷ್ಟೌ ಪ್ರಕೃತಯಃ ಷೋಡಶ ವಿಕಾರಾಃ ಶರೀರೆ ತಸ್ಯ ಏವ ದೇಹಿನಃ | ಅಥ ಮಾತ್ರಾ ಅಶಿತಪೀತನಾಡೀಸೂತ್ರಗತೇನ ಪ್ರಾಣಃ ಆಪ್ಯಾಯತೆ | ಅಥ ನವಮೇ ಮಾಸಿ ಸರ್ವಲಾಕ್ಷಣಜ್ಞಾನಕರಣಸಂಪೂರ್ಣಃ ಭವತಿ | ಪೂರ್ವ ಜಾತಿಮ್ ಸ್ಮರತಿ | ಶುಭಾಶುಭಮ್ ಚ ಕರ್ಮ ವಿಂದತಿ | |೩|| 


ಪದವಿಭಾಗ:- ಋತುಕಾಲೆ, ಸಂಪ್ರಯೋಗಾತ್, ಏಕರಾತ್ರೋಷಿತಮ್, ಕಲಲಮ್, ಭವತಿ | ಸಪ್ತರಾತ್ರೋಷಿತಮ್ ,ಬುದ್ಬುಧಮ್, ಭವತಿ | ಅರ್ಧಮಾಸಾಭ್ಯಂತರೆ, ಪಿಂಡಃ ,ಭವತಿ | ಮಾಸಾಭ್ಯಂತರೆ ,ಕಠಿನಃ, ಭವತಿ | ಮಾಸದ್ವಯೇನ, ಶಿರಃ, ಸಂಪದ್ಯತೆ | ಮಾಸತ್ರಯೇಣ, ಪಾದಪ್ರದೇಶಃ, ಭವತಿ | ಅಥ, ಚತುರ್ಥೆ, ಮಾಸೆ, ಗುಲ್ಫಜಟರಕಟಿಪ್ರದೇಶಾಃ, ಭವಂತಿ | ಪಂಚಮೆ, ಮಾಸೆ ,ಪೃಷ್ಟವಂಶಃ, ಭವತಿ | ಷಷ್ಠೇ ,ಮಾಸೆ, ಮುಖನಾಸಿಕಾಕ್ಷಿಶ್ರೋತ್ರಾಣಿ, ಭವಂತಿ | ಸಪ್ತಮೇ ,ಮಾಸೆ, ಜೀವೇನ, ಸಂಯುಕ್ತಃ, ಭವತಿ | ಅಷ್ಟಮೇ, ಮಾಸೆ, ಸರ್ವಲಕ್ಷಣಸಂಪನ್ನಃ ,ಭವತಿ | ಪಿತುಃ, ರೇತಃ ,ಅತಿರೇಕಾತ್, ಪುರುಷಃ, ಮಾತುಃ, ರೇತಃ, ಅತಿರೇಕಾತ್, ಸ್ತ್ರೀ, ಉಭಯೋಃ ,ಬೀಜತುಲ್ಯತ್ವಾತ್,ನಪುಂಸಕಃ, ಭವತಿ | ವ್ಯಾಕುಲಿತಮನಸಃ, ಅಂಧಾಃ, ಖಂಜಾಃ, ಕುಬ್ಜಾಃ ,ವಾಮನಾಃ, ಭವಂತಿ | ಅನ್ಯೋನ್ಯವಾಯುಪರಿಪೀಡಿತಶುಕ್ರದ್ವೈವಿಧ್ಯಾತ್, ತನುಃ, ಸ್ಯಾತ್, ತತಃ, ಯುಗ್ಮಾಃ, ಜಾಯಂತೆ | ಪಂಚಾತ್ಮಕಃ, ಸಮರ್ಥಃ ,ಪಂಚಾತ್ಮಿಕಾ ,ಚೇತಸಾ, ಬುದ್ಧಿಃ, ಗಂಧರಸಾದಿಜ್ಞಾನಾಕ್ಷರಾಕ್ಷರಮ್ ,ಓಂಕಾರಮ್, ಚಿಂತಯತಿ ,ಇತಿ, ತತ್ ,ಏತತ್, ಏಕಾಕ್ಷರಮ್, ಜ್ಞಾತ್ವಾ, ಅಷ್ಟೌ ,ಪ್ರಕೃತಯಃ, ಷೋಡಶವಿಕಾರಾಃ, ಶರೀರೆ, ತಸ್ಯ ,ಏವ, ದೇಹಿನಃ | ಅಥ, ಮಾತ್ರಾ, ಅಶಿತಪೀತನಾಡೀಸೂತ್ರಗತೇನ, ಪ್ರಾಣಃ ,ಆಪ್ಯಾಯತೆ | ಅಥ, ನವಮೇ, ಮಾಸಿ, ಸರ್ವಲಾಕ್ಷಣಜ್ಞಾನಕರಣಸಂಪೂರ್ಣಃ, ಭವತಿ | ಪೂರ್ವಜಾತಿಮ್, ಸ್ಮರತಿ | ಶುಭಾಶುಭಮ್, ಚ ,ಕರ್ಮ, ವಿಂದತಿ.


ಅರ್ಥ:- ಋತುಕಾಲದಲ್ಲಿ ಉಂಟಾದಗರ್ಭವು ಒಂದುರಾತ್ರಿಯಲ್ಲಿ ಮುದ್ದೆಯಾಗುತ್ತದೆ. ಒಂದು ವಾರದಲ್ಲಿ ಗುಳ್ಳೆಯಾಗುತ್ತದೆ. ಹದಿನೈದು ದಿನದಲ್ಲಿ ಪಿಂಡವಾಗುತ್ತದೆ. ಒಂದು ತಿಂಗಳಿನಲ್ಲಿ ಗಟ್ಟಿಯಾಗುತ್ತದೆ. ಎರಡು ತಿಂಗಳಿನಲ್ಲಿ ತಲೆಯು ಉಂಟಾಗುತ್ತದೆ. ಮೂರು ತಿಂಗಳಲ್ಲಿ ಕಾಲಿನ ಪ್ರದೇಶವು ಉಂಟಾಗುತ್ತದೆ. ನಾಲ್ಕನೇ ತಿಂಗಳಿನಲ್ಲಿ ಕಾಲಿನ ಗಂಟು, ಹೊಟ್ಟೆ, ಸೊಂಟದ ಭಾಗವು ಉಂಟಾಗುತ್ತದೆ. ಐದನೆ ತಿಂಗಳಲ್ಲಿ ಬೆನ್ನುಹುರಿ ಉಂಟಾಗುತ್ತದೆ. ಆರನೆ ತಿಂಗಳಲ್ಲಿ ಬಾಯಿ, ಮೂಗು, ಕಣ್ಣು, ಕಿವಿಗಳು ಉಂಟಾಗುತ್ತವೆ. ಏಳನೆ ತಿಂಗಳಲ್ಲಿ ಚೈತನ್ಯವು ಉಂಟಾಗುತ್ತದೆ.ಎಂಟನೆ ತಿಂಗಳಲ್ಲಿ ಎಲ್ಲ ಲಕ್ಷಣಗಳಿಂದ ಕೂಡಿರುತ್ತದೆ. ಪುರುಷನ ವೀರ್ಯದ ಅಧಿಕತೆಯಿಂದ ಗಂಡು, ಸ್ತ್ರೀಯ ರೇತಸ್ಸಿನ ಅಧಿಕತೆಯಿಂದ ಹೆಣ್ಣು ಸಂತಾನ ಉಂಟಾಗುತ್ತದೆ. ಎರದೂ ಸಮವಾಗಿದ್ದರೆ ನಪುಂಸಕರು ಹುಟ್ಟುತ್ತಾರೆ. ಮನಸ್ಸು ಕ್ಷೋಭೆಗೊಂಡಾಗ , ಕುರುಡ, ಕಿವುಡ, ಕುಳ್ಳ, ಕುಬ್ಜರು ಹುಟ್ಟುತ್ತಾರೆ. ಎರಡು ವಾಯುಗಳಿಂದ ಹಿಂಸಿಸಲ್ಪಟ್ಟಾಗ , ಅವಳಿಗಳು ಹುಟ್ಟುತ್ತಾರೆ.ಹೀಗೆ ಐದು ಭೂತಗಳಿಂದ ಎಲ್ಲರೀತಿಯ ಸಾಮರ್ಥ್ಯವನ್ನು ಹೊಂದಿ, ಐದರಿಂದಾದ ಮನಸ್ಸಿನಿಂದ, ಬುದ್ಧಿಯಿಂದ, ಗಂಧ, ರಸ, ಮೊದಲಾದ ಜ್ಞಾನಗಳನ್ನು ಹೊಂದುವ ಶಕ್ತಿಯನ್ನು ಪಡೆಯುತ್ತಾನೆ. ನಾಶವಾಗದ ಆತ್ಮವನ್ನು ಪ್ರತಿಪಾದಿಸುವ "ಓಂ " ಕಾರವನ್ನು ಧ್ಯಾನಿಸುತ್ತಾನೆ. ಈ ಓಂಕಾರ ಧ್ಯಾನದಿಂದ ಅವನಿಗೆ ತನ್ನ ಶರೀರದಲ್ಲಿ ಎಂತು ಪ್ರಕೃತಿಗಳ , ಹದಿನಾರು ವಿಕಾರಗಳ, ಜ್ಞಾನವು ಉಂಟಾಗುತ್ತದೆ.ಹಿಂದಿನ ಜನ್ಮಗಳನ್ನು ಸ್ಮರಿಸುತ್ತಾನೆ. ಪೂರ್ವಜನ್ಮದ ಪುಣ್ಯ ಪಾಪಗಳನ್ನು ತಿಳಿಯುತ್ತಾನೆ.



ಉಪನಿಷತ್ :- ಪೂರ್ವಯೋನಿಸಹಸ್ರಾಣಿ ದೃಷ್ಟ್ವಾ ಚ ಏವ ತತಃ ಮಯಾ | ಆಹಾರಾಃ ವಿವಿಧಾಃ ಭುಕ್ತಾಃ ಪೀತಾಃ ನಾನಾವಿಧಾಃ ಸ್ತನಾಃ | ಜಾತಃ ಚ ಏವ ಮೃತಃ ಚ ಏವ ಜನ್ಮ ಚಏವ ಪುನಃ ಪುನಃ | ಯತ್ ಮಯಾ ಪರಿಜನಸ್ಯ ಅರ್ಥೆ ಕೃತಮ್ ಕರ್ಮ ಶುಭಾಶುಭಮ್ || ಏಕಾಕೀ ತೇನ ದಹ್ಯೆ ಅಹಮ್ ಹತಾಃ ತೆ ಫಲಭೋಗಿನಃ | ಅಹೋ ದುಃಖೋದಧೌ ಮಗ್ನಃ ನ ಪಶ್ಯಾಮಿ ಪ್ರತಿಕ್ರಿಯಾಮ್ | ಯದಿ ಯೋನ್ಯಾಃ ಪ್ರಮುಚ್ಯೆ ಅಹಮ್ ತತ್ ಪ್ರಪದ್ಯೆ ಮಹೇಶ್ವರಮ್ | ಅಶುಭಕ್ಷಯಕರ್ತಾರಮ್ ಫಲಮುಕ್ತಿಪ್ರದಾಯಕಮ್ | ಯದಿ ಯೋನ್ಯಾಃ ಪ್ರಮುಚ್ಯೆ ಅಹಮ್ ತತ್ ಪ್ರಪದ್ಯೆ ನಾರಾಯಣಮ್ | ಅಶುಭಕ್ಷಯಕರ್ತಾರಮ್ ಫಲಮುಕ್ತಿಪ್ರದಾಯಕಮ್ | ಯದಿ ಯೋನ್ಯಾಃ ಪ್ರಮುಚ್ಯೆ ಅಹಮ್ ತತ್ ಸಾಂಖ್ಯಮ್ ಯೋಗಮ್ ಅಭ್ಯಸೆ | ಅಶುಭಕ್ಷಯಕರ್ತಾರಮ್ ಫಲಮುಕ್ತಿಪ್ರದಾಯಕಮ್ | ಯದಿ ಯೋನ್ಯಾಃ ಪ್ರಮುಚ್ಯೆ ಅಹಮ್ ಧ್ಯಾಯೆ ಬ್ರಹ್ಮ ಸನಾತನಮ್ | ಅಥ ಯೋನಿದ್ವಾರಮ್ ಸಂಪ್ರಾಪ್ತಃ ಯಂತ್ರೇಣ ಆಪೀಡ್ಯಮಾನಃ ಮಹತಾ ದುಃಖೇನ ಜಾತಮಾತ್ರಃ ತು ವೈಷ್ಣವೇನ ವಾಯುನಾ ಸಂಸ್ಪೃಷ್ಟಃ ನ ಸ್ಮರತಿ ಜನ್ಮಮರಣಾನಿ ನ ಚ ಕರ್ಮ ಶುಭಾಶುಭಮ್ ವಿಂದತಿ ||೪|| 


ಪದವಿಭಾಗ:- ಪೂರ್ವಯೋನಿಸಹಸ್ರಾಣಿ, ದೃಷ್ಟ್ವಾ, ಚ, ಏವ, ತತಃ, ಮಯಾ | ಆಹಾರಾಃ, ವಿವಿಧಾಃ, ಭುಕ್ತಾಃ, ಪೀತಾಃ, ನಾನಾವಿಧಾಃ, ಸ್ತನಾಃ | ಜಾತಃ, ಚ, ಏವ, ಮೃತಃ, ಚ, ಏವ, ಜನ್ಮ ,ಚ ,ಏವ, ಪುನಃ, ಪುನಃ | ಯತ್, ಮಯಾ, ಪರಿಜನಸ್ಯ, ಅರ್ಥೆ, ಕೃತಮ್ ,ಕರ್ಮ, ಶುಭಾಶುಭಮ್ || ಏಕಾಕೀ, ತೇನ, ದಹ್ಯೆ, ಅಹಮ್, ಹತಾಃ, ತೆ, ಫಲಭೋಗಿನಃ | ಅಹೋ, ದುಃಖೋದಧೌ, ಮಗ್ನಃ, ನ, ಪಶ್ಯಾಮಿ, ಪ್ರತಿಕ್ರಿಯಾಮ್ | ಯದಿ, ಯೋನ್ಯಾಃ ಪ್ರಮುಚ್ಯೆ, ಅಹಮ್, ತತ್, ಪ್ರಪದ್ಯೆ, ಮಹೇಶ್ವರಮ್ | ಅಶುಭಕ್ಷಯಕರ್ತಾರಮ್, ಫಲಮುಕ್ತಿಪ್ರದಾಯಕಮ್ | ಯದಿ, ಯೋನ್ಯಾಃ, ಪ್ರಮುಚ್ಯೆ, ಅಹಮ್, ತತ್ ,ಪ್ರಪದ್ಯೆ ,ನಾರಾಯಣಮ್ | ಅಶುಭಕ್ಷಯಕರ್ತಾರಮ್, ಫಲಮುಕ್ತಿಪ್ರದಾಯಕಮ್ | ಯದಿ, ಯೋನ್ಯಾಃ, ಪ್ರಮುಚ್ಯೆ, ಅಹಮ್, ತತ್, ಸಾಂಖ್ಯಮ್, ಯೋಗಮ್, ಅಭ್ಯಸೆ | ಅಶುಭಕ್ಷಯಕರ್ತಾರಮ್, ಫಲಮುಕ್ತಿಪ್ರದಾಯಕಮ್ | ಯದಿ, ಯೋನ್ಯಾಃ, ಪ್ರಮುಚ್ಯೆ, ಅಹಮ್, ಧ್ಯಾಯೆ ,ಬ್ರಹ್ಮ, ಸನಾತನಮ್ | ಅಥ, ಯೋನಿದ್ವಾರಮ್, ಸಂಪ್ರಾಪ್ತಃ, ಯಂತ್ರೇಣ, ಆಪೀಡ್ಯಮಾನಃ, ಮಹತಾ ,ದುಃಖೇನ, ಜಾತಮಾತ್ರಃ, ತು, ವೈಷ್ಣವೇನ, ವಾಯುನಾ, ಸಂಸ್ಪೃಷ್ಟಃ, ನ, ಸ್ಮರತಿ, ಜನ್ಮಮರಣಾನಿ ,ನ, ಚ, ಕರ್ಮ, ಶುಭಾಶುಭಮ್, ವಿಂದತಿ.


ಅರ್ಥ:- ನಾನು ಹಿಂದೆ ಅನೇಕ ಜನ್ಮಗಳನ್ನು ಅನುಭವಿಸಿದ್ದೇನೆ. ಅವುಗಳಲ್ಲಿ ಅನೇಕ ರಿತಿಯ ಆಹಾರಗಳನ್ನು ಉಂಡಿದ್ದೇನೆ. ನಾನಾ ರೀತಿಯ ಪಾನೀಯಗಳನ್ನು ಕುಡಿದಿದ್ದೇನೆ. ಆನೇಕ ಸಾರಿ ಹುಟ್ಟಿದ್ದೇನೆ, ಮರಣವನ್ನು ಹೊಂದಿದ್ದೇನೆ. ತಿರುಗಿ ತಿರುಗಿ ಜನ್ಮವನ್ನು ಹೊಂದಿದ್ದೇನೆ. ನಾನು ನನ್ನ ಪರಿವಾರದ ಜನರ ಹಿತಕ್ಕಾಗಿ ಅನೇಕ ಒಳ್ಳೆಯ ಮತ್ತು ದುಷ್ಟಕರ್ಮಗಳನ್ನು ಮಾಡಿದ್ದೇನೆ. ಆ ಕರ್ಮಗಳಿಂದ ನಾನು ಕಷ್ಟವನ್ನು ಅನುಭವಿಸುತ್ತಿದ್ದೇನೆ. ಸುಖವನ್ನು ಆನುಭವಿಸಿದ ಪರಿವಾರದವರು ಮರಣವನ್ನು ಹೊಂದಿದ್ದಾರೆ. ಅಯ್ಯೋ, ಈ ದುಃಖವೆನ್ನುವ ದೊಡ್ಡದಾದ ಸಮುದ್ರದಲ್ಲಿ ಮುಳುಗಿದ್ದೇನೆ. ಪರಿಹಾರವು ಕಾಣಿಸುತ್ತಿಲ್ಲ. ಒಮ್ಮೆ ನಾನು ಈ ಯೋನಿಯಿಂದ ಬಿಡುಗಡೆಯನ್ನು ಹೊಂದಿದರೆ, ಪಾಪಗಳನ್ನು ನಾಶಪಡಿಸುವ, ಮುಕ್ತಿಯನ್ನು ಕರುಣಿಸುವ ಆ ಈಶ್ವರನನ್ನು ಹೊಂದುತ್ತೇನೆ. ಒಮ್ಮೆ ನಾನು ಈ ಯೋನಿಯಿಂದ ಬಿಡುಗಡೆಯನ್ನು ಹೊಂದಿದರೆ,ಪಾಪಗಳನ್ನು ನಾಶಪಡಿಸುವ, ಮುಕ್ತಿಯನ್ನು ಕರುಣಿಸುವ ಆ ನಾರಾಯಣನನ್ನು ಸೇವಿಸುತ್ತೇನೆ. ಒಮ್ಮೆ ನಾನು ಈ ಯೋನಿಯಿಂದ ಬಿಡುಗಡೆಯನ್ನು ಹೊಂದಿದರೆ, ಪಾಪಗಳನ್ನು ನಾಶಪಡಿಸುವ, ಮುಕ್ತಿಯನ್ನು ಕರುಣಿಸುವ ಸಾಂಖ್ಯವನ್ನು ,ಯೋಗವನ್ನು ಅಭ್ಯಾಸ ಮಾಡುತ್ತೇನೆ.ಒಮ್ಮೆ ನಾನು ಈ ಯೋನಿಯಿಂದ ಬಿಡುಗಡೆಯನ್ನು ಹೊಂದಿದರೆ, ಸನಾತನವಾದ ಬ್ರಹ್ಮವನ್ನು ಧ್ಯಾನಿಸುತ್ತೇನೆ. ಈ ರೀತಿಯಾಗಿ ಜ್ಞಾನವನ್ನು ಹೊಂದುತ್ತಾನೆ. ಆಮೇಲೆ ಯೋನಿದ್ವಾರವನ್ನು ತಲುಪಿ, ಯಂತ್ರದಿಂದ ನೋವನ್ನು, ದುಃಖವನ್ನು ಅನುಭವಿಸಿ, ಹುಟ್ಟಿದ ಕೂಡಲೆ ವಿಷ್ಣುಸಂಬಂಧಿಯಾದ ವಾಯುವಿನಿಂದ ಸ್ಪರ್ಶಿಸಲ್ಪಟ್ಟವನಾಗಿ, ಎಲ್ಲ ಜನ್ಮಗಳ, ಪುಣ್ಯ ಮತ್ತು ಪಾಪ ಕರ್ಮಗಳನ್ನು ಮರೆಯುತ್ತಾನೆ.



ಉಪನಿಷತ್ :- ಶರೀರಮ್ ಇತಿ ಕಸ್ಮಾತ್ | ಅಗ್ನಯಃ ಹಿ ಅತ್ರ ಶ್ರಿಯಂತೆ ಜ್ಞಾನಾಗ್ನಿಃ ದರ್ಶನಾಗ್ನಿಃ ಕೋಷ್ಠಾಗ್ನಿಃ ಇತಿ | ತತ್ರ ಕೋಷ್ಠಾಗ್ನಿಃ ನಾಮ ಅಶೀತಪೀತಲೇಹ್ಯಚೋಷ್ಯಮ್ ಪಚತಿ | ದರ್ಶನಾಗ್ನಿಃ ರೂಪಾಣಾಮ್ ದರ್ಶನಮ್ ಕರೋತಿ | ಜ್ಞಾನಾಗ್ನಿಃ ಶುಭಾಶುಭಮ್ ಚ ಕರ್ಮ ವಿಂದತಿ | ತ್ರೀಣಿ ಸ್ಥಾನಾನಿ ಭವಂತಿ ಮುಖೆ ಆಹವನೀಯಃ ಉದರೆ ಗಾರ್ಹಪತ್ಯಃ ಹೃದಯೆ ದಕ್ಷಿಣಾಗ್ನಿಃ ಆತ್ಮಾ ಯಜಮಾನಃ ಮನಃ ಬ್ರಹ್ಮಾ ಲೋಭಾದಯಃ ಪಶವಃ ಧೃತಿಃ ದೀಕ್ಷಾ ಸಂತೋಷಃ ಚ ಬುದ್ಧೀಂದ್ರಿಯಾಣಿ ಯಜ್ಞಪಾತ್ರಾಣಿ ಹವಿಂಷಿ ಕರ್ಮೇಂದ್ರಿಯಾಣಿ ಶಿರಃ ಕಪಾಲಮ್ ಕೇಶಾಃ ದರ್ಭಾಃ ಮುಖಮ್ ಅಂತರ್ವೇದಿಃ ಚತುಷ್ಕಪಾಲಮ್ ಶಿರಃ ಷೋಡಶಪಾರ್ಶ್ವದಂತಪಟಲಾನಿ ಸಪ್ತೋತ್ತರಮ್ ಮರ್ಮಶತಮ್ ಸಾಶೀತಿಕಮ್ ಸಂಧಿಶತಮ್ ಸನವಕಮ್ ಸ್ನಾಯುಶತಮ್ ಸಪ್ತಶಿರಾಶತಾನಿ ಪಂಚಮಜ್ಜಾಶತಾನಿ ಅಸ್ಥೀನಿ ಚ ಹ ವೈ ತ್ರೀಣಿಶತಾನಿ ಷಷ್ಠೀಃ ಸಾರ್ಧಚತಸ್ರಃ ರೋಮಾಣಿ ಕೋಟಯಃ ಹೃದಯಮ್ ಪಲಾನಿ ಅಷ್ಟೌ ದ್ವಾದಶಪಲಾ ಜಿಹ್ವಾ ಪಿತ್ತಪ್ರಸ್ಥಮ್ ಕಫಸ್ಯಾಢಕಮ್ ಶುಕ್ರಮ್ ಕುಡವಮ್ ಮೇದಃ ಪ್ರಸ್ಥೌ ದ್ವೌ ಅನಿಯತಮ್ ಮೂತ್ರಪುರೀಷಮ್ ಆಹಾರಪರಿಮಾಣಾತ್ | ಪೈಪ್ಪಲಾದಮ್ ಮೋಕ್ಷಶಾಸ್ತ್ರಮ್ ಪೈಪ್ಪಲಾದಮ್ ಮೋಕ್ಷಶಾಸ್ತ್ರಮ್ ||೫|| 


ಪದವಿಭಾಗ:- ಶರೀರಮ್, ಇತಿ, ಕಸ್ಮಾತ್ | ಅಗ್ನಯಃ, ಹಿ ,ಅತ್ರ, ಶ್ರಿಯಂತೆ, ಜ್ಞಾನಾಗ್ನಿಃ, ದರ್ಶನಾಗ್ನಿಃ ,ಕೋಷ್ಠಾಗ್ನಿಃ ,ಇತಿ | ತತ್ರ, ಕೋಷ್ಠಾಗ್ನಿಃ ,ನಾಮ, ಅಶೀತಪೀತಲೇಹ್ಯಚೋಷ್ಯಮ್ ಪಚತಿ | ದರ್ಶನಾಗ್ನಿಃ ರೂಪಾಣಾಮ್ ದರ್ಶನಮ್ ಕರೋತಿ | ಜ್ಞಾನಾಗ್ನಿಃ ಶುಭಾಶುಭಮ್ ಚ ಕರ್ಮ ವಿಂದತಿ | ತ್ರೀಣಿ ಸ್ಥಾನಾನಿ ಭವಂತಿ, ಮುಖೆ, ಆಹವನೀಯಃ, ಉದರೆ ,ಗಾರ್ಹಪತ್ಯಃ, ಹೃದಯೆ, ದಕ್ಷಿಣಾಗ್ನಿಃ, ಆತ್ಮಾ, ಯಜಮಾನಃ, ಮನಃ, ಬ್ರಹ್ಮಾ, ಲೋಭಾದಯಃ, ಪಶವಃ, ಧೃತಿಃ, ದೀಕ್ಷಾ, ಸಂತೋಷಃ ,ಚ, ಬುದ್ಧೀಂದ್ರಿಯಾಣಿ ,ಯಜ್ಞಪಾತ್ರಾಣಿ, ಹವಿಂಷಿ, ಕರ್ಮೇಂದ್ರಿಯಾಣಿ, ಶಿರಃ, ಕಪಾಲಮ್, ಕೇಶಾಃ, ದರ್ಭಾಃ, ಮುಖಮ್, ಅಂತರ್ವೇದಿಃ, ಚತುಷ್ಕಪಾಲಮ್, ಶಿರಃ ,ಷೋಡಶಪಾರ್ಶ್ವದಂತಪಟಲಾನಿ ,ಸಪ್ತೋತ್ತರಮ್, ಮರ್ಮಶತಮ್, ಸಾಶೀತಿಕಮ್, ಸಂಧಿಶತಮ್, ಸನವಕಮ್, ಸ್ನಾಯುಶತಮ್, ಸಪ್ತಶಿರಾಶತಾನಿ ,ಪಂಚಮಜ್ಜಾಶತಾನಿ, ಅಸ್ಥೀನಿ, ಚ, ಹ ,ವೈ, ತ್ರೀಣಿಶತಾನಿ, ಷಷ್ಠೀಃ ,ಸಾರ್ಧಚತಸ್ರಃ, ರೋಮಾಣಿ, ಕೋಟಯಃ ,ಹೃದಯಮ್, ಪಲಾನಿ ,ಅಷ್ಟೌ, ದ್ವಾದಶಪಲಾ ,ಜಿಹ್ವಾ, ಪಿತ್ತಪ್ರಸ್ಥಮ್, ಕಫಸ್ಯಾಢಕಮ್, ಶುಕ್ರಮ್, ಕುಡವಮ್, ಮೇದಃ, ಪ್ರಸ್ಥೌ , ದ್ವೌ,ಅನಿಯತಮ್, ಮೂತ್ರಪುರೀಷಮ್ ,ಆಹಾರಪರಿಮಾಣಾತ್ | ಪೈಪ್ಪಲಾದಮ್, ಮೋಕ್ಷಶಾಸ್ತ್ರಮ್, ಪೈಪ್ಪಲಾದಮ್, ಮೋಕ್ಷಶಾಸ್ತ್ರಮ್,.


ಅರ್ಥ:- ಶರೀರವೆನ್ನುವದು ಹೇಗೆ? ಜ್ಞಾನಾಗ್ನಿ, ದರ್ಶನಾಗ್ನಿ ಮತ್ತು ಕೋಷ್ಠಾಗ್ನಿ ಎನ್ನುವ ಅಗ್ನಿಗಳು ಇಲ್ಲಿ ಆಶ್ರಯವನ್ನು ಹೊಂದಿವೆ .ಕೋಷ್ಠಾಗ್ನಿ ಎಂದರೆ, ತಿಂದಿರುವುದನ್ನು, ಕುಡಿದಿರುವುದನ್ನು, ನೆಕ್ಕಿರುವುದನ್ನು, ಹೀರಲ್ಪಟ್ಟಿರುವುದನ್ನು ಜೀರ್ಣವಾಗುವಂತೆ ಮಾಡುತ್ತದೆ. ದರ್ಶನಾಗ್ನಿಯು ರೂಪದ ಜ್ಞಾನವನ್ನು ಉಂಟುಮಾಡುತ್ತದೆ. ಜ್ಞಾನಾಗ್ನಿಯು ಶುಭ ಮತ್ತು ಅಶುಭ ಕರ್ಮಗಳನ್ನು ತಿಳಿಸುತ್ತದೆ. ಅಗ್ನಿಗಳಿಗೆ ಶರೀರದಲ್ಲಿ ಮೂರು ಸ್ಥಾನಗಳು ಇವೆ, ಬಾಯಿಯಲ್ಲಿ ಆಹವನೀಯ, ಹೊಟ್ಟೆಯಲ್ಲಿ ಗಾರ್ಹಪತ್ಯ, ಹೃದಯದಲ್ಲಿ ದಕ್ಷಿಣಾಗ್ನಿಯು ಇರುತ್ತದೆ. ಆದ್ಯಾತ್ಮಿಕ ಯಜ್ಞದಲ್ಲಿ,ಆತ್ಮನು ಯಜಮಾನ, ಮನಸ್ಸು ಬ್ರಹ್ಮ, ಲೋಭ ಮೊದಲಾದವು ಪಶುಗಳು, ಧಾರಣೆ ಮತ್ತು ಸಂತೋಷಗಳು ದೀಕ್ಷೆ, ಜ್ಞಾನೇಂದ್ರಿಯಗಳು ಯಜ್ಞದ ಪಾತ್ರೆಗಳು, ಕರ್ಮೇಂದ್ರಿಯಗಳು ಹವಿಸ್ಸು, ತಲೆಯು ಕಪಾಲ, ಕೂದಲು ದರ್ಭೆಗಳು, ಮುಖವು ಅಂತರ್ವೇದಿ, ತಲೆಯು ನಾಲ್ಕು ಕಪಾಲಗಳು, ಹದಿನಾರು ದವಡೆಯ ಹಲ್ಲುಗಳು, ೧೦೭ ಮರ್ಮ ಸ್ಥಾನಗಳು, ೧೮೦ ಸಂಧಿಗಳು, ೧೦೯ ಸ್ನಾಯುಗಳು, ೧೦೭ ನಾಡಿಗಳು, ೧೦೫ ಮಜ್ಜೆಗಳು, ೩೬೦ ಎಲುಬುಗಳು, ೪೫೦೦೦೦೦ ಕೂದಲುಗಳು, ಹೃದಯ ೮ ಪಲ ಭಾರ, ೧೨ ಪಲ ಭಾರ ನಾಲಿಗೆ, ಒಂದು ಮೊರದಷ್ಟು ಪಿತ್ತ, ಕಫ ಒಂದು ಕೊಳಗ , ಕುಡವದಷ್ಟು( ಮೊರದ ಕಾಲು ಭಾಗ ) ವೀರ್ಯ, ಕೊಬ್ಬು ಎರಡು ಮೊರ, ಮಲ ಮೂತ್ರಗಳು ಆಹಾರದ ಪ್ರಮಾಣವನ್ನು ಅವಲಂಬಿಸಿದೆ. ಇದು ಪೈಪ್ಪಲಾದರ ಮೋಕ್ಷಶಾಸ್ತ್ರವಾಗಿದೆ. ಇಲ್ಲಿಗೆ ಉಪನಿಷತ್ತು ಮುಗಿದಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ