ಸರಸ್ವತೀರಹಸ್ಯ ಉಪನಿಷತ್

ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

******************************

ಉಪನಿಷತ್ :- ಓಂ ಋಷಯೋ ಹ ವೈ ಭಗವಂತಮಾಶ್ವಲಾಯನಂ ಸಂಪೂಜ್ಯ ಪಪ್ರಚ್ಛುಃ ||

ಪದವಿಭಾಗ:- ಋಷಯಃ,ಹ, ವೈ, ಭಗವಂತಮ್,ಆಶ್ವಲಾಯನಂ, ಸಂಪೂಜ್ಯ ,ಪಪ್ರಚ್ಛುಃ ,.

ಅರ್ಥ:- ಋಷಿಗಳು ಆರು ಐಶ್ವರ್ಯಗಳನ್ನುಹೊಂದಿದ ಆಶ್ವಲಾಯನ ಎನ್ನುವ ಋಷಿಯನ್ನು ಗೌರವದಿಂದ ಪ್ರಶ್ನಿಸಿದರು.

******************************
ಉಪನಿಷತ್ :- ಕೇನೋಪಾಯೇನ ತತ್ ಜ್ಞಾನಂ ತತ್ಪದಾರ್ಥಾವಭಾಸಕಂ|ಯದುಪಾಸನಯಾತತ್ವಂಜಾನಾಸಿ ಭಗವನ್ ವದ||

ಪದವಿಭಾಗ:- ಕೇನ ,ಉಪಾಯೇನ, ತತ್, ಜ್ಞಾನಂ, ತತ್,ಪದಾರ್ಥ,ಅವಭಾಸಕಂ,|ಯತ್,ಉಪಾಸನಯಾ ,ತತ್ವಮ್,ಜಾನಾಸಿ, ಭಗವನ್, ವದ.

ಅರ್ಥ:- ಭಗವಂತನೇ" ತತ್" ಎನ್ನುವ ಪದದ ಅರ್ಥವನ್ನು ಪ್ರಕಾಶಿಸುವ ಜ್ಞಾನವು ಯಾವ ಉಪಾಯದಿಂದ ಉಂಟಾಗುತ್ತದೆ.ನೀನು ಯಾವ ಉಪಾಸನೆಯಿಂದ ಪರಮಾರ್ಥ ತತ್ವವನ್ನು ತಿಳಿದಿರುವೆ. ಅದನ್ನು ನಮಗೆ ಹೇಳು.

****************************
ಉಪನಿಷತ್ :- ಸರಸ್ವತೀ ದಶಶ್ಲೋಕ್ಯಾ ಸಋಚಾ ಬೀಜಮಿಶ್ರಯಾ | ಸ್ತುತ್ವಾ ಜಪ್ತ್ವಾ ಪರಾಂ ಸಿದ್ಧಿಂ ಅಲಭನ್ ಮುನಿಪುಂಗವಾಃ||

ಪದವಿಭಾಗ:- ಸರಸ್ವತೀ, ದಶಶ್ಲೋಕ್ಯಾ, ಸಋಚಾ, ಬೀಜಮಿಶ್ರಯಾ, | ಸ್ತುತ್ವಾ ,ಜಪ್ತ್ವಾ, ಪರಾಂ, ಸಿದ್ಧಿಂ, ಅಲಭನ್,ಮುನಿಪುಂಗವಾಃ

ಅರ್ಥ:- :ಬೀಜಮಂತ್ರಗಳಿಂದ ಕೂಡಿದ ಸರಸ್ವತೀದೇವಿಯ ಹತ್ತು ಶ್ಲೋಕರೂಪವಾದ ಋಕ್ ಮಂತ್ರಗಳಿಂದ , ಅವಳನ್ನು ಸ್ತುತಿಸಿ ಆ ಮಂತ್ರಗಳನ್ನು ಜಪಿಸಿ ಮುನಿಶ್ರೇಷ್ಠರು ಉತ್ತಮವಾದ ಸಿದ್ದಿಯನ್ನು ಪಡೆದರು.ಎಂದು ಆಶ್ವಲಾಯನರು ಹೇಳಿದರು.

*****************************
ಉಪನಿಷತ್ :- ಋಷಯಃ ಊಚುಃ ಕಥಂ ಸಾರಸ್ವತ ಪ್ರಾಪ್ತಿಃ ಕೇನಧ್ಯಾನೇನ ಸುವ್ರತ |ಮಹಾಸರಸ್ವತೀ ಯೇನ ತುಷ್ಟಾ ಭಗವತಿ ವದ||

ಪದವಿಭಾಗ:- ಋಷಯಃ, ಊಚುಃ, ಕಥಂ, ಸಾರಸ್ವತ, ಪ್ರಾಪ್ತಿಃ, ಕೇನ ,ಧ್ಯಾನೇನ, ಸುವ್ರತ, |ಮಹಾಸರಸ್ವತೀ, ಯೇನ, ತುಷ್ಟಾ, ಭಗವತೀ, ವದ,||

ಅರ್ಥ:- ಋಷಿಗಳು ಕೇಳಿದರು-ನಿಯಮಗಳನ್ನು ಉತ್ತಮವಾಗಿ ಪಾಲಿಸುವ ಋಷಿಯೇ, ಯಾವ ಉಪಾಸನೆಯಿಂದ ಮತ್ತು ಹೇಗೆ ಸರಸ್ವತಿಯ ಪರಮಾರ್ಥ ತತ್ವದ ಜ್ಞಾನವು ಆಗುತ್ತದೆ?.ಯಾವ ಉಪಾಸನೆಯಿಂದ ಭಗವತೀ ಸರಸ್ವತಿಯು ಸಂತುಷ್ಟಳಾಗುತ್ತಾಳೆ?.ಅದನ್ನು ನಮಗೆ ಹೇಳು.

***************************
ಉಪನಿಷತ್ :- ಸಹೋವಾಚಾಶ್ವಲಾಯನಃ |ಅಸ್ಯ ಶ್ರೀ ಸರಸ್ವತೀದಶಶ್ಲೋಕಿ ಮಹಾಮಂತ್ರಸ್ಯ|ಅಹಮಾಶ್ವಲಾಯನ ಋಷಿಃ| ಅನುಷ್ಟುಪ್ ಛಂದಃ| ಶ್ರೀ ವಾಗೀಶ್ವರೀ ದೇವತಾ |ಯದ್ವಾಗಿತಿ ಬೀಜಮ್| ದೇವೀಂ ವಾಚಮಿತಿ ಶಕ್ತಿಃ |ಪ್ರಣೋದೇವೀತಿ ಕೀಲಕಮ್|ವಿನಿಯೋಗಸ್ತತ್ಪ್ರೀತ್ಯರ್ಥೆ| ಶ್ರದ್ಧಾ ಮೇಧಾ ಪ್ರಜ್ಞಾ ಧಾರಣಾ ವಾಗ್ದೇವತಾ ಮಹಾಸರಸ್ವತೀತ್ಯೇತೈರಂಗನ್ಯಾಸಃ|

ಪದವಿಭಾಗ:- ಸಃ, ಹ, ಉವಾಚ, ಆಶ್ವಲಾಯನಃ,ಅಸ್ಯ, ಶ್ರೀ ,ಸರಸ್ವತೀ,ದಶಶ್ಲೋಕಿ , ಮಹಾಮಂತ್ರಸ್ಯ,|ಅಹಮ್,ಆಶ್ವಲಾಯನ, ಋಷಿಃ,| ಅನುಷ್ಟುಪ್ , ಛಂದಃ,| ಶ್ರೀ ,ವಾಗೀಶ್ವರೀ, ದೇವತಾ, |ಯತ್,ವಾಕ್, ಇತಿ, ಬೀಜಮ್,| ದೇವೀಂ ,ವಾಚಮ್,ಇತಿ, ಶಕ್ತಿಃ, |ಪ್ರಣೋದೇವೀ,ಇತಿ, ಕೀಲಕಮ್,|ವಿನಿಯೋಗಃ,ತತ್,ಪ್ರೀತ್ಯರ್ಥೆ,| ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣಾ, ವಾಗ್ದೇವತಾ, ಮಹಾಸರಸ್ವತೀ,ಇತಿ,ಎತೈಃ,ಅಂಗನ್ಯಾಸಃ.

ಅರ್ಥ:- ಆಶ್ವಲಾಯನ ಋಷಿಯು ಹೇಳಿದನು.ಈ ಸರಸ್ವತೀ ದೇವಿಯ ದಶಶ್ಲೋಕಿ ಎನ್ನುವ ಮಂತ್ರಕ್ಕೆ ಆಶ್ವಲಾಯನ ಎನ್ನುವ ನಾನೆ ಋಷಿಯು ಇದು ,| ಅನುಷ್ಟುಪ್ ಎನ್ನುವ ಛಂದಸ್ಸಿನಲ್ಲಿದೆ ,ವಾಗೀಶ್ವರೀಯು(ಸರಸ್ವತಿ) ದೇವತೆಯಾಗಿದ್ದಾಳೆ."ಯದ್ವಾಗ್ವದಂತಿ" ಎನ್ನುವ ಮಂತ್ರವು ಬೀಜವಾಗಿದೆ. " ದೇವೀಂ ವಾಚಮ್" ಎಂದು ಪ್ರಾರಂಭವಾಗುವ ಮಂತ್ರವೇ ಶಕ್ತಿಯಾಗಿದೆ. "ಪ್ರಣೋದೇವೀ" ಎಂದು ಪ್ರಾರಂಭವಾಗುವ ಮಂತ್ರವೇ ಕೀಲಕವಾಗಿದೆ. ಸರಸ್ವತೀ ದೇವಿಯ ಅನುಗ್ರಹಕ್ಕಾಗಿಈ ಹತ್ತು ಮಂತ್ರಗಳನ್ನು ವಿನಿಯೋಗಿಸಬೇಕು. ಶ್ರದ್ಧಾ, ಮೇಧಾ, ಪ್ರಜ್ಞಾ,ಧಾರಣಾ, ವಾಗ್ದೇವತಾ, ಮಹಾಸರಸ್ವತೀ ಎನ್ನುವ ನಾಮ ಮಂತ್ರದಳಿಂದ ಅಂಗನ್ಯಾಸ ಮತ್ತು ಕರನ್ಯಾಸಗಳನ್ನು ಮಾಡಬೇಕು.

****************************
ಉಪನಿಷತ್ :- ನೀಹಾರಹಾರ ಘನಸಾರಸುಘಾಕರಾಭಾಮ್,ಕಲ್ಯಾಣದಾಂ ಕನಕಚಂಪಕದಾಮಭೂಷಾಮ್| ಉತ್ತುಂಗಪೀನಕುಚಕುಂಭಮನೋಹರಾಂಗೀಮ್,ವಾಣೀಂ ನಮಾಮಿಮನಸಾ ವಚಸಾಂ ವಿಭೂತ್ಯೈ|

ಪದವಿಭಾಗ:- ನೀಹಾರ,ಹಾರ,ಘನಸಾರ,ಸುಧಾಕರಾಭಾಮ್,ಕಲ್ಯಾಣದಾಂ ,ಕನಕ,ಚಂಪಕ,ದಾಮ,ಭೂಷಾಮ್| ಉತ್ತುಂಗ,ಪೀನ,ಕುಚ,ಕುಂಭ,ಮನೋಹರಾಂಗೀಮ್,ವಾಣೀಂ, ನಮಾಮಿ,ಮನಸಾ, ವಚಸಾಂ ,ವಿಭೂತ್ಯೈ.|

ಅರ್ಥ:- ಹಿಮದ ಮಾಲೆ,ಕರ್ಪೂರ ,ಚಂದ್ರನಂತೆ ಬೆಳ್ಳಗಾದ ಕಾಂತಿಯನ್ನು ಹೊಂದಿದ, ಕಲ್ಯಾಣವನ್ನು ಉಂಟುಮಾಡುವ ಬಂಗಾರದ ಸಂಪಿಗೆಯ ಮಾಲೆಯಿಂದ ಅಲಂಕಾರಗೊಂಡಿರುವ ಎತ್ತರವಾದ ದುಂಡಗಾದ ದೊಡ್ಡದಾದಸ್ತನಗಳಿಂದ ಸುಂದರವಾದ ಶರೀರವನ್ನು ಹೊಂದಿರುವ,ಸರಸ್ವತಿಯನ್ನು ಉತ್ತಮವಾದ ಭಾಷೆಯನ್ನು ಹೊಂದಲುಮನಸ್ಸಿನಿಮ್ದ ನಮಸ್ಕರಿಸುತ್ತೇನೆ.

*****************************
ಉಪನಿಷತ್ :- ಓಮ್,ಪ್ರಣೋ ದೇವೀತ್ಯಸ್ಯ ಮಂತ್ರಸ್ಯ ಭರದ್ವಾಜ ಋಷಿಃ|ಗಾಯತ್ರೀ ಛಂದಃ| ಶ್ರೀ ಸರಸ್ವತಿ ದೇವತಾ |ಪ್ರಣವೇನ ಬೀಜ ಶಕ್ತಿ ಕೀಲಕಂ|ಇಷ್ಟಾರ್ಥೇ ವಿನಿಯೋಗಃ| ಮಂತ್ರೇಣ ನ್ಯಾಸಃ||

ಪದವಿಭಾಗ:- ಓಮ್,ಪ್ರಣೋ ದೇವೀ,ಇತಿ,ಅಸ್ಯ, ಮಂತ್ರಸ್ಯ, ಭರದ್ವಾಜ, ಋಷಿಃ,|ಗಾಯತ್ರೀ, ಛಂದಃ,| ಶ್ರೀ ಸರಸ್ವತಿ, ದೇವತಾ, |ಪ್ರಣವೇನ, ಬೀಜ, ಶಕ್ತಿ, ಕೀಲಕಂ|,ಇಷ್ಟಾರ್ಥೇ, ವಿನಿಯೋಗಃ, ಮಂತ್ರೇಣ, ನ್ಯಾಸಃ.||

ಅರ್ಥ:- ಪ್ರಣೋ ದೇವೀ" ಎಂದು ಪ್ರಾರಂಭವಾಗುವ ಮಂತ್ರಕ್ಕೆ ಭರದ್ವಾಜ, ಋಷಿಯು, ಗಾಯತ್ರೀ ಛಂದಸ್ಸು ಸರಸ್ವತಿಯು ದೇವತೆಯಾಗಿದ್ದಾಳೆ. ಓಂ ಎನ್ನುವದು ಬೀಜ, ಶಕ್ತಿ,ಮತ್ತು ಕೀಲಕವಾಗಿದೆ.ಈ ಮಂತ್ರದಿಂದಲೇ ಕರ ಮತ್ತು ಅಂಗ ನ್ಯಾಸಗಳನ್ನು ಮಾಡಬೇಕು.

*****************************
ಉಪನಿಷತ್ :- ಯಾ ವೇದಾಂತಾರ್ಥತತ್ತ್ವೈಕಸ್ವರೂಪಾ ಪರಮಾರ್ಥತಃ |ನಾಮರೂಪಾತ್ಮನಾ ವ್ಯಕ್ತಾ ಸಾಮಾಂ ಪಾತು ಸರಸ್ವತಿ||

ಪದವಿಭಾಗ:- ಯಾ ವೇದಾಂತ,ಅರ್ಥ,ತತ್ವ,ಏಕ ,ಸ್ವರೂಪಾ, ಪರಮಾರ್ಥತಃ, |ನಾಮರೂಪಾತ್ಮನಾ, ವ್ಯಕ್ತಾ, ಸಾ,ಮಾಂ, ಪಾತು, ಸರಸ್ವತಿ

ಅರ್ಥ:- :.ಯಾವ ಸರಸ್ವತಿ ದೇವಿಯು ಉಪನಿಷತ್ತುಗಳಲ್ಲಿ ನಿರೂಪಿಸಿರುವ ಒಂದೇ ಆದ ಪರಮಾರ್ಥವಾದ ತತ್ವವಾಗಿದ್ದು ,ಈ ಜಗತ್ತಿನ ರೂಪದಲ್ಲಿ ವ್ಯಕ್ತವಾಗಿದ್ದಾಳೋ ಅವಳು ನನ್ನನ್ನು ರಕ್ಷಿಸಲಿ.

****************************
ಉಪನಿಷತ್ :- ಓಂ ಪ್ರಣೇ ದೇವೀ ಸರಸ್ವತೀ ವಾಜೇಭಿರ್ವಾಜಿನೀವತಿ | ಧೀನಾಮವಿತ್ರ್ಯವತು||

ಪದವಿಭಾಗ:- ಓಂ ಪ್ರಣೋ, ದೇವೀ, ಸರಸ್ವತೀ, ವಾಜೇಭಿಃ,ವಾಜಿನೀವತಿ ,| ಧೀನಾಮವಿತ್ರಿ,ಅವತು

ಅರ್ಥ:- ಓಂಕಾರದಿಂದ ಉಪಾಸ್ಯಳಾಗಿರುವ ಸ್ವಪ್ರಕಾಶವುಳ್ಳ , ಕರ್ಮಗಳಿಂದ ಉಂಟಾದ ಫಲಗಳಿಗೆ ಕೊಡಬೇಕಾದ ಫಲಗಳಿಂದ ತುಂಬಿರುವ ಸರಸ್ವತಿಯು ಬುದ್ಧಿಗಳನ್ನು ಪ್ರಚೋದಿಸುತ್ತಾ ನಮ್ಮನ್ನು ಕಾಪಡಲಿ.

******************************
ಉಪನಿಷತ್ :- ಆನೋ ದಿವ ಇತಿ ಮಂತ್ರಸ್ಯ ಅತ್ರಿ ಋಷಿಃ |ತ್ರಿಷ್ಟುಪ್ ಛಂದಃ| ಸರಸ್ವತೀ ದೇವತಾ| ಹ್ರೀಮಿತಿ ಬೀಜ ಶಕ್ತಿ ಕೀಲಕಂ| ಇಷ್ಟಾರ್ಥೇ ವಿನಿಯೋಗಃ| ಮಂತ್ರೇಣ ನ್ಯಾಸಃ||

ಪದವಿಭಾಗ:- ಆನೋ, ದಿವ ,ಇತಿ, ಮಂತ್ರಸ್ಯ, ಅತ್ರಿ ಋಷಿಃ, |ತ್ರಿಷ್ಟುಪ್, ಛಂದಃ,| ಸರಸ್ವತೀ, ದೇವತಾ,| ಹ್ರೀಂ,ಇತಿ, ಬೀಜ ,ಶಕ್ತಿ ,ಕೀಲಕಂ,| ಇಷ್ಟಾರ್ಥೇ, ವಿನಿಯೋಗಃ,| ಮಂತ್ರೇಣ, ನ್ಯಾಸಃ.||

ಅರ್ಥ:- ಆನೋ ದಿವ " ಎಂದು ಪ್ರಾರಂಭವಾಗುವ ಮಂತ್ರಕ್ಕೆ ಅತ್ರಿಯು ಋಷಿಯು. ತ್ರಿಷ್ಟುಪ್ ಛಂದಸ್ಸು.ಹ್ರೀಂ ಎನ್ನುವದು ಬೀಜ ,ಶಕ್ತಿ ,ಕೀಲಕವಾಗಿದೆ.ಈ ಮಂತ್ರದಿಂದಲೇ ಕರ ಮತ್ತು ಅಂಗ ನ್ಯಾಸಗಳನ್ನು ಮಾಡಬೇಕು.

****************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

****************************
ಉಪನಿಷತ್ :- ಯಾ ಸಾಂಗೋಪಾಂಗ ವೇದೇಷು ಚತುರ್ಷ್ವೇಕೈವ ಗೀಯತೆ| ಅದ್ವೈತಾ ಬ್ರಹ್ಮಣಶ್ಶಕ್ತಿಸ್ಸಾ ಮಾಂ ಪಾತು ಸರಸ್ವತಿ||

ಪದವಿಭಾಗ:- ಯಾ, ಸಾಂಗ,ಉಪಾಂಗ, ವೇದೇಷು, ಚತುರ್ಷು, ಏಕಾ,ಏವ, ಗೀಯತೆ,| ಅದ್ವೈತಾ, ಬ್ರಹ್ಮಣಃ,ಶಕ್ತಿಃ ಸಾ, ಮಾಂ, ಪಾತು ,ಸರಸ್ವತಿ.

ಅರ್ಥ:- ಯಾವ ಸರಸ್ವತಿಯು, ವೇದಗಳ ಅಂಗ ಮತ್ತು ಉಪಾಂಗಗಳಲ್ಲಿ ನಾಲ್ಕೂ ವೇದಗಳಲ್ಲಿ ಒಬ್ಬಳೇ ಎಂದು ಹೇಳಲ್ಪಟ್ಟಿರುವ ,ಎರಡಿಲ್ಲದ ಪರಬ್ರಹ್ಮದ ಶಕ್ತಿಯಾದ ಅವಳು ನನ್ನನ್ನು ರಕ್ಷಿಸಲಿ.

**************************
ಉಪನಿಷತ್ :- ಹ್ರೀಂ ಆನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಂ| ಹವಂ ದೇವೀ ಜುಜುಷಾಣಾ ಘೃತಾಚೀಶಗ್ಮಾನ್ನೋ ವಚಮುಶತೀ ಶೃಣೋತು||

ಪದವಿಭಾಗ:- ಪದವಿಭಾಗ= ಹ್ರೀಂ, ಆನೋ, ದಿವಃ,ಬೃಹತಃ, ಪರ್ವತಾದಾ, ಸರಸ್ವತೀ, ಯಜತಾ, ಗಂತು, ಯಜ್ಞಂ,| ಹವಂ, ದೇವೀ, ಜುಜುಷಾಣಾ, ಘೃತಾಚೀ,ಶಗ್ಮಾತ್,ನಃ, ವಾಚಮ್,ಉಶತೀ, ಶೃಣೋತು.

ಅರ್ಥ:- ಹ್ರೀಂ ಎನ್ನುವ ಬೀಜದಿಂದ ಉಪಾಸ್ಯಳಾದ ಸರಸ್ವತಿಯು ದಿವ್ಯವಾದ ಅವಳ ಲೋಕದಿಂದ ನಮ್ಮ ಯಜ್ಞಕ್ಕೆ ಬರಲಿ.ನಮ್ಮ ಆಹ್ವಾನವನ್ನು ಅಂಗೀಕರಿಸಿ, ಸರಸ್ವತಿಯು ನಮಗೆ ಸುಖವನ್ನುಂಟುಮಾಡಿ ,ಪ್ರೀತಿಯಿಂದ ನಮ್ಮ ಮಾತನ್ನು ಕೇಳಲಿ.

****************************
ಉಪನಿಷತ್ :- ಪಾವಕಾನ ಇತಿ ಮಂತ್ರಸ್ಯ ಮಧುಚ್ಛಂದಾ ಋಷಿಃ |ಗಾಯತ್ರೀ ಛಂದಃ | ಸರಸ್ವತೀ ದೇವತಾ|ಶ್ರೀಂಮಿತಿ ಬೀಜ ಶಕ್ತಿ ಕೀಲಕಂ|ಇಷ್ಟಾರ್ಥೇ ವಿನಿಯೋಗಃ| ಮಂತ್ರೇಣ ನ್ಯಾಸಃ||

ಪದವಿಭಾಗ:- ಪಾವಕಾ,ನ, ಇತಿ, ಮಂತ್ರಸ್ಯ ,ಮಧುಚ್ಛಂದಾ, ಋಷಿಃ |ಗಾಯತ್ರೀ, ಛಂದಃ | ಸರಸ್ವತೀ, ದೇವತಾ| ಶ್ರೀಂ,ಇತಿ, ಬೀಜಮ್, ಶಕ್ತಿ ,ಕೀಲಕಂ|ಇಷ್ಟಾರ್ಥೇ, ವಿನಿಯೋಗಃ| ಮಂತ್ರೇಣ ,ನ್ಯಾಸಃ||

ಅರ್ಥ:- ಪಾವಕಾನ" ಎಂದು ಪ್ರಾರಂಭವಾಗುವ ಮಂತ್ರಕ್ಕೆ ಮಧುಚ್ಛಂದಸನೇ ಋಷಿಯು ಗಾಯತ್ರಿಯೇ ಛಂದಸ್ಸು ,ಸರಸ್ವತಿಯೇ ದೇವತೆ,ಶ್ರೀಂ ಎನ್ನುವದುಬೀಜ ,ಶಕ್ತಿ ,ಕೀಲಕವಾಗಿದೆ.ಈ ಮಂತ್ರದಿಂದಲೇ ಕರ ಮತ್ತು ಅಂಗ ನ್ಯಾಸಗಳನ್ನು ಮಾಡಬೇಕು.

**************************
ಉಪನಿಷತ್ :- ಯಾ ಪದವಾಕ್ಯಾರ್ಥ ಸ್ವರೂಪೇಣೈವ ವರ್ತತೆ |ಅನಾದಿನಿಧನಾನಂತಾ ಸಾ ಮಾಂ ಪಾತು ಸರಸ್ವತಿ|

ಪದವಿಭಾಗ:- ಯಾ ಪದ ವಾಕ್ಯ,ಅರ್ಥ, ಸ್ವರೂಪೇಣ,ಏವ, ವರ್ತತೆ, |ಅನಾದಿ,ನಿಧನಾ,ಅನಂತಾ, ಸಾ, ಮಾಂ, ಪಾತು, ಸರಸ್ವತಿ

ಅರ್ಥ:- ಯಾವ ಸರಸ್ವತಿಯು ಪದ ವಾಕ್ಯ ಮತ್ತು ಅರ್ಥಗಳ ಸ್ವರೂಪದಿಂದಲೇ ಇರುವಳೋ,ಕಾರಣವಿಲ್ಲದವಳೂ, ನಾಶವಿಲ್ಲದವಳೂ ಆದವಳು ನನ್ನನ್ನು ರಕ್ಷಿಸಲಿ

*****************************
ಉಪನಿಷತ್ :- ಶ್ರೀಂ ಪಾವಕಾನಃ ಸರಸ್ವತಿ ವಾಜೇಭಿರ್ವಾಜಿನೀವತಿ | ಯಜ್ಞಂ ವಷ್ಟು ಧಿಯಾ ವಸುಃ |

ಪದವಿಭಾಗ:- ಶ್ರೀಂ, ಪಾವಕಾ,ನಃ, ಸರಸ್ವತಿ ,ವಾಜೇಭಿಃ, ವಾಜಿನೀವತಿ, | ಯಜ್ಞಂ, ವಷ್ಟು, ಧಿಯಾ,ವಸುಃ.

ಅರ್ಥ:- ಶ್ರೀಂ ಎನ್ನುವ ಮಂತ್ರದಿಂದ ಉಪಾಸ್ಯಳಾದ ದೇವಿಯು ,ನಮ್ಮ ಅಜ್ಞಾನವನ್ನು ನಿವಾರಿಸಿ ಜ್ಞಾನದಿಂದ ಬೆಳಗುವಂತೆ ಮಾಡಲಿ.ನಾವು ಮಾಡುವ ಕರ್ಮಗಳಿಂದ ತೃಪ್ತಳಾಗಿ ನಮಗೆ ಫಲಗಳನ್ನು ಕೊಡಲಿ .ನಾವುಮಾಡುವ ಕರ್ಮಗಳನ್ನು ಪ್ರೀತಿಯಿಂದ ಸ್ವೀಕರಿಸಲಿ.

**********************************
ಉಪನಿಷತ್ :- ಚೋದಯಿತ್ರೀತಿ ಮಂತ್ರಸ್ಯ ಮಧುಚ್ಛಂದಾ ಋಷಿಃ |ಗಾಯತ್ರೀ ಛಂದಃ | ಸರಸ್ವತೀ ದೇವತಾ| ಬ್ಲೂಂ ಇತಿ ಶ್ರೀಂಮಿತಿ ಬೀಜ ಶಕ್ತಿ ಕೀಲಕಂ| ಮಂತ್ರೇಣ ನ್ಯಾಸಃ||

ಪದವಿಭಾಗ:- ಚೋದಯಿತ್ರೀ,ಇತಿ, ಮಂತ್ರಸ್ಯ, ಮಧುಚ್ಛಂದಾ, ಋಷಿಃ |ಗಾಯತ್ರೀ, ಛಂದಃ | ಸರಸ್ವತೀ, ದೇವತಾ| ಬ್ಲೂಂ, ಇತಿ , ಬೀಜ, ಶಕ್ತಿ, ಕೀಲಕಂ| ಮಂತ್ರೇಣ, ನ್ಯಾಸಃ.||

ಅರ್ಥ:- ಚೋದಯಿತ್ರೀ ಎಂದು ಪ್ರಾರಂಭವಾಗುವ ಮಂತ್ರಕ್ಕೆ ಮಧುಚ್ಛಂದಸನೇ ಋಷಿಯು ಗಾಯತ್ರಿಯೇ ಛಂದಸ್ಸು ,ಸರಸ್ವತಿಯೇ ದೇವತೆ,ಬ್ಲೂಂ, ಎನ್ನುವದು ಬೀಜ ,ಶಕ್ತಿ ,ಕೀಲಕವಾಗಿದೆ.ಈ ಮಂತ್ರದಿಂದಲೇ ಕರ ಮತ್ತು ಅಂಗ ನ್ಯಾಸಗಳನ್ನು ಮಾಡಬೇಕು.

**************************************
ಉಪನಿಷತ್ :- ಅಧ್ಯಾತ್ಮಮಧಿದೈವಂ ಚ ದೇವಾನಾಂ ಸಮ್ಯಗೀಶ್ವರೀ | ಪ್ರತ್ಯಗಾಸ್ತೇ ವದಂತೀ ಯಾ ಸಾ ಮಾಂ ಪಾತು ಸರಸ್ವತಿ||

ಪದವಿಭಾಗ:- ಅಧ್ಯಾತ್ಮಮ್,ಅಧಿದೈವಮ್, ಚ, ದೇವಾನಾಂ ,ಸಮ್ಯಗೀಶ್ವರೀ, | ಪ್ರತ್ಯಕ್,ಆಸ್ತೇ, ವದಂತೀ ,ಯಾ ,ಸಾ ,ಮಾಂ, ಪಾತು, ಸರಸ್ವತಿ.

ಅರ್ಥ:- ಅಧ್ಯಾತ್ಮ ಮತ್ತು ಅಧಿದೈವ ವಿಷಯದಲ್ಲಿ ದೇವತೆಗಳಿಗೆ ನಿಜವಾದ ತತ್ವವನ್ನು ನಿರೂಪಿಸುವವಳಾಗಿ ಎಲ್ಲರಿಗೂ ಆತ್ಮ ಸ್ವರೂಪಳಾಗಿರುವ ಸರಸ್ವತಿಯು ನನ್ನನ್ನು ರಕ್ಷಿಸಲಿ.

**********************************
ಉಪನಿಷತ್ :- ಬ್ಲೂಮ್ ಚೋದಯಿತ್ರೀ ಸೂನೃತಾನಾಂ ಚೇತಂತಿ ಸುಮತೀನಾಂ | ಯಜ್ಞ್ಂ ದಧೆ ಸರಸ್ವತಿ ||

ಪದವಿಭಾಗ:- ಬ್ಲೂಮ್ ,ಚೋದಯಿತ್ರೀ, ಸೂನೃತಾನಾಂ, ಚೇತಂತಿ, ಸುಮತೀನಾಂ | ಯಜ್ಞ್ಂ, ದಧೆ ,ಸರಸ್ವತಿ ||

ಅರ್ಥ:- ಬ್ಲೂಂ ಎನ್ನುವ ಅಕ್ಷರದಿಂದ ಉಪಸ್ಯಳಾದ ಒಳ್ಳೆಯ ಮಾತುಗಳನ್ನು ,ಒಳ್ಳೆಯಬುದ್ಧಿಯನ್ನು ಪ್ರೇರೆಪಿಸಿ,ವೇದ ಪ್ರತಿಪಾದಿತ ಕರ್ಮಗಳು ನಮಗೆ ಸ್ಫುರಿಸುವಂತೆ ಮಾಡಲಿ.

***********************************
ಉಪನಿಷತ್ :- ಮಹೋ ಅರ್ಣೇತಿ ಮಂತ್ರಸ್ಯ ಮಧುಚ್ಛಂದಾ ಋಷಿಃ |ಗಾಯತ್ರೀ ಛಂದಃ | ಸರಸ್ವತೀ ದೇವತಾ| ಸೌರಿತಿ ಬೀಜಮ್ ಶಕ್ತಿ ಕೀಲಕಂ| ಇಷ್ಟಾರ್ಥೇ ವಿನಿಯೋಗಃ|| ಮಂತ್ರೇಣ ನ್ಯಾಸಃ||

ಪದವಿಭಾಗ:- ಮಹೋ, ಅರ್ಣೇ,ಇತಿ ,ಮಂತ್ರಸ್ಯ, ಮಧುಚ್ಛಂದಾ, ಋಷಿಃ |ಗಾಯತ್ರೀ, ಛಂದಃ | ಸರಸ್ವತೀ, ದೇವತಾ| ಸೌಃ,ಇತಿ ಬೀಜಮ್ ಶಕ್ತಿ ಕೀಲಕಂ | ಇಷ್ಟಾರ್ಥೇ ವಿನಿಯೋಗಃ ||

ಅರ್ಥ:- ಮಹೋ ಅರ್ಣ ಎಂದು ಪ್ರಾರಂಭವಾಗುವ ಮಂತ್ರಕ್ಕೆ ಮಧುಚ್ಛಂದಸನೇ ಋಷಿಯು ಗಾಯತ್ರಿಯೇ ಛಂದಸ್ಸು ,ಸರಸ್ವತಿಯೇ ದೇವತೆ,ಸೌಃ, ಎನ್ನುವದು ಬೀಜ ,ಶಕ್ತಿ ,ಕೀಲಕವಾಗಿದೆ.ಈ ಮಂತ್ರದಿಂದಲೇ ಕರ ಮತ್ತು ಅಂಗ ನ್ಯಾಸವನ್ನು ಮಾಡಿಕೊಳ್ಳಬೇಕು.

************************************
ಉಪನಿಷತ್ :- ಅಂತರ್ಯಾಮ್ಯಾತ್ಮನಾ ವಿಶ್ವಮ್ ತ್ರೈಲೋಕ್ಯಂ ಯಾ ನಿಯಚ್ಛತಿ|ರುದ್ರಾದಿತ್ಯಾದಿ ರೂಪಸ್ಥಾ ಸಾ ಮಾಂ ಪಾತು ಸರಸ್ವತಿ ||

ಪದವಿಭಾಗ:- ಅಂತರ್ಯಾಮಿ,ಆತ್ಮನಾ, ವಿಶ್ವಮ್,ತ್ರೈಲೋಕ್ಯಂ, ಯಾ ,ನಿಯಚ್ಛತಿ,|ರುದ್ರ,ಆದಿತ್ಯ,ಆದಿ, ರೂಪಸ್ಥಾ, ಸಾ ,ಮಾಂ, ಪಾತು, ಸರಸ್ವತಿ

ಅರ್ಥ:- ಯಾವದೇವಿಯು ಮೂರು ಲೋಕಗಳನ್ನು ಅಂತರ್ಯಾಮಿ ರೂಪದಿಂದ ನಿಯಂತ್ರಿಸುತ್ತಾಳೋ ,ರುದ್ರ ಆದಿತ್ಯ ಮೊದಲಾದವರ ರೂಪದಿಂದ ಇರುತ್ತಾಳೋ, ಅವಳು ನನ್ನನ್ನು ರಕ್ಷಿಸಲಿ .

****************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

*********************************
ಉಪನಿಷತ್ :- ಸೌಃ ಮಹೋ ಅರ್ಣಃ ಸರಸ್ವತಿ ಪ್ರಚೇತಯತಿ ಕೇತುನಾ |ಧಿಯೋ ವಿಶ್ವಾ ವಿರಾಜತಿ||

ಪದವಿಭಾಗ:- ಸೌಃ, ಮಹೋ ,ಅರ್ಣಃ ,ಸರಸ್ವತಿ, ಪ್ರಚೇತಯತಿ, ಕೇತುನಾ |ಧಿಯೋ, ವಿಶ್ವಾ, ವಿರಾಜತಿ.

ಅರ್ಥ:- ಸೌಃ ಎನ್ನುವ ವರ್ಣದಿಂದ ಉಪಾಸ್ಯಳಾದ ಸರಸ್ವತುಯು ನೀರನ್ನು ಬಹಳವಾಗಿ ಹರಿಯುವಂತೆ ಮಾಡಿ,ತನ್ನ ದೇವತಾ ರೂಪದಲ್ಲಿ ಜನರ ಬುದ್ಧಿಗಳನ್ನು ಉಜ್ವಲಿಸುವಂತೆ ಮಾಡುತ್ತಾಳೆ.

*********************************
ಉಪನಿಷತ್ :- ಚತ್ವಾರಿ ವಾಗಿತಿಮಂತ್ರಸ್ಯ ಉಚಥ್ಯ ಋಷಿಃ| ತ್ರಿಷ್ಟುಪ್ ಛಂದಃ |ಸರಸ್ವತೀ ದೇವತಾ | ಐಮಿತಿ ಬೀಜಶಕ್ತಿ ಕೀಲಕಮ್ |ಮಂತ್ರೇಣ ನ್ಯಾಸಃ|

ಪದವಿಭಾಗ:- ಚತ್ವಾರಿ, ವಾಕ್,ಇತಿ,ಮಂತ್ರಸ್ಯ ,ಉಚಥ್ಯ, ಋಷಿಃ,| ತ್ರಿಷ್ಟುಪ್, ಛಂದಃ ,|ಸರಸ್ವತೀ,ದೇವತಾ | ಐಂ,ಇತಿ, ಬೀಜ,ಶಕ್ತಿ, ಕೀಲಕಮ್, |ಮಂತ್ರೇಣ, ನ್ಯಾಸಃ

ಅರ್ಥ:- ಚತ್ವಾರಿ ವಾಕ್ ಎಂದು ಪ್ರಾರಂಭವಾಗುವ ಮಂತ್ರಕ್ಕೆ ಉಚಥ್ಯನು ಋಷಿಯು ,ತ್ರಿಷ್ಟುಪ್ ಛಂದಸ್ಸು, ಸರಸ್ವತೀಯು ದೇವತೆ,ಐಂ, ಎನ್ನುವದು ಬೀಜ ಶಕ್ತಿ ಕೀಲಕವಾಗಿದೆ.ಮಂತ್ರದಿಂದ ನ್ಯಾಸ ಮಾಡಿಕೋಳ್ಳಬೇಕು,

***********************************
ಉಪನಿಷತ್ :- ಯಾ ಪ್ರತ್ಯಕ್ದೃಷ್ಟಿಭಿರ್ಜೀವೈಃ ವ್ಯಜ್ಯಮಾನಾನುಭುಯತೆ | ವ್ಯಾಪಿನಿ ಜ್ಞಪ್ತಿರೂಪೈಕಾ ಸಾಮಾಂ ಪಾತು ಸರಸ್ವತಿ |

ಪದವಿಭಾಗ:- ಯಾ,ಪ್ರತ್ಯಕ್,ದೃಷ್ಟಿಭಿಃ, ಜೀವೈಃ, ವ್ಯಜ್ಯಮಾನಾ,ಅನುಭೂಯತೆ,| ವ್ಯಾಪಿನಿ ಜ್ಞಪ್ತಿರೂಪಾ,ಏಕಾ ,ಸಾ,ಮಾಂ, ಪಾತು, ಸರಸ್ವತಿ.

ಅರ್ಥ:- ಯಾವ ಸರಸ್ವತಿಯು ,ಆತ್ಮದ ಕಡೆಗೆ ತಿರುಗಿಸಲ್ಪಟ್ಟ ನೋಟದಿಂದ ವ್ಯಕ್ತವಾಗಿ ಅನುಭಕ್ಕೆ ಬರುತ್ತಾಳೆ. ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ಅನುಭವರೂಪಿಯಾದ ಅವಳು ನನ್ನನ್ನು ರಕ್ಷಿಸಲಿ.

*************************
ಉಪನಿಷತ್ :- ಐಂ ಚತ್ವಾರಿ ವಾಕ್ಪರಿಮಿತಾ ಪದಾನಿ ತಾನಿ ವಿದುರ್ಬಾಹ್ಮಣಾ ಯೇ ಮನೀಷಿಣಃ| ಗುಹಾ ತ್ರೀಣಿನಿಹಿತಾ ನೇಂಗಯಂತಿ ತುರೀಯಂ ವಾಚೋ ಮನುಷ್ಯಾ ವದಂತಿ ||

ಪದವಿಭಾಗ:- ಐಂ,, ಚತ್ವಾರಿ, ವಾಕ್,ಪರಿಮಿತಾ, ಗುಹಾ ,ತ್ರೀಣಿ,ನಿಹಿತಾ, ನೇಂಗಯಂತಿ, ತುರೀಯಂ, ವಾಚೋ, ಮನುಷ್ಯಾ, ವದಂತಿ

ಅರ್ಥ:- ವಾಕ್ಕಿನ ನಾಲ್ಕು ರೂಪಗಳು ಸರಸ್ವತಿಯೇ ಆಗಿದ್ದಾಳೆ.ಈ ನಾಲ್ಕು ರೂಪಗಳನ್ನು ಶಬ್ದಬ್ರಹ್ಮವನ್ನು ತಿಳಿದಿರಿವ ಜ್ಞಾನಿಗಳುಎಂದು ಪರಾ ,ಪಶ್ಯಂತೀ, ಮಧ್ಯಮಾ ಮತ್ತು ವೈಖರೀ ನಿರೂಪಿಸಿದ್ದಾರೆ.ಇವುಗಳಲ್ಲಿ ಮೊದಲಿನ ಮೂರು ಬುದ್ಧಿಯಲ್ಲಿ ಇಡಲ್ಪಟ್ಟಿವೆ.ಅಂದರೆ ಈಮೂರು ಕೇವಲ ಅಂತಃಕರಣ ವೇದ್ಯವಾಗಿದೆ. ಶ್ರವಣೇಂದ್ರಿಯಕ್ಕೆ ಕೇಳಿಸುವದಿಲ್ಲ.ನಾಲ್ಕನೆಯದನ್ನು ಮಾತ್ರ ಮನುಶ್ಫ಼ರು ವ್ಯವಹಾರದಲ್ಲಿ ಉಪಯೋಗಿಸುತ್ತಾರೆ.

**********************************
ಉಪನಿಷತ್ :- ಯದ್ವಾಗ್ವದಂತೀತಿ ಮಂತ್ರಸ್ಯ ಭಾರ್ಗವ ಋಷಿಃ| ತ್ರಿಷ್ಟುಪ್ ಛಂದಃ| ಸರಸ್ವತಿ ದೇವತಾ| ಕ್ಲೀಂ ಇತಿ ಬೀಜಶಕ್ತಿ ಕೀಲಕ್ಂ |ಮಂತ್ರೇಣ ನ್ಯಾಸಃ|

ಪದವಿಭಾಗ:- ಯದ್,ವಾಕ್,ವದಂತಿ ,ಇತಿ,ಮಂತ್ರಸ್ಯ ,ಭಾರ್ಗವ, ಋಷಿಃ,| ತ್ರಿಷ್ಟುಪ್ ,ಛಂದಃ | ಸರಸ್ವತಿ, ದೇವತಾ | ಕ್ಲೀಂ, ಇತಿ, ಬೀಜ,ಶಕ್ತಿ ,ಕೀಲಕ್ಂ, |ಮಂತ್ರೇಣ, ನ್ಯಾಸಃ |

ಅರ್ಥ:- ಯದ್ವಾಗ್ವದಂತೀ" ಎನ್ನುವ ಮಂತ್ರಕ್ಕೆ ,ಭಾರ್ಗವನೇ ಋಷಿಯು,ತ್ರಿಷ್ಟುಪ್ ಛಂದಸ್ಸು,ಸರಸ್ವತೀಯು ದೇವತೆ,ಕ್ಲೀಂ ಎನ್ನುವದು ಬೀಜ ಶಕ್ತಿ ಕೀಲಕವಾಗಿದೆ.ಮಂತ್ರದಿಂದ ನ್ಯಾಸ ಮಾಡಿಕೋಳ್ಳಬೇಕು.

************************************
ಉಪನಿಷತ್ :- ನಾಮಜಾತ್ಯಾದಿಭಿರ್ಭೇದೈಃ ಅಷ್ಟಧಾ ಯಾ ವಿಕಲ್ಪಿತಾ |ನಿರ್ವಿಕಲ್ಪಾತ್ಮನಾವ್ಯಕ್ತಾ ಸಾಮಾಮ್ ಪಾತು ಸರಸ್ವತಿ |

ಪದವಿಭಾಗ:- ನಾಮಜಾತ್ಯಾದಿಭಿಃ,ಭೇದೈಃ.,ಅಷ್ಟಧಾ, ಯಾ ,ವಿಕಲ್ಪಿತಾ, |ನಿರ್ವಿಕಲ್ಪಾತ್ಮನಾ,ಅವ್ಯಕ್ತಾ ,ಸಾ,ಮಾಮ್, ಪಾತು, ಸರಸ್ವತಿ.

ಅರ್ಥ:- ಪರಾ ,ಪಶ್ಯಂತೀ, ಮಧ್ಯಮಾ ಮತ್ತು ವೈಖರೀ ,ನಾಮ,ಜಾತಿ,ಗುಣ ,ಕ್ರಿಯಾ ಎಂದು ಎಂಟು ರೀತಿಯಲ್ಲಿ ಬೇರೆಯಾದ ಮತ್ತು ತತ್ವ ರೂಪದಲ್ಲಿ ಅವ್ಯಕ್ತಳೂ ಸರ್ವವಿಕಲ್ಪ ರಹಿತಳೂ ಆದ ಸರಸ್ವತಿಯು ನನ್ನನ್ನು ರಕ್ಷಿಸಲಿ.

***********************************
ಉಪನಿಷತ್ :- ಕ್ಲೀಂ ಯದ್ವಾಗ್ವದಂತ್ಯವಿಚೇತನಾನಿ ರಾಷ್ಟ್ರೀ ದೇವಾನಾಂ ನಿಷಸಾದ ಮನ್ದ್ರಾ| ಚತಸ್ರ ಊರ್ಝಂ ದುದುಹೆ ಪಯಾಂಸಿ ಕ್ವಸ್ವಿದಸ್ಯಾ ಪರಮಂ ಜಗಾಮ ||

ಪದವಿಭಾಗ:- ಕ್ಲೀಂ, ಯತ್,ವಾಕ್,ವದಂತಿ,ಅವಿಚೇತನಾನಿ, ರಾಷ್ಟ್ರೀ, ದೇವಾನಾಂ, ನಿಷಸಾದ, ಮನ್ದ್ರಾ,| ಚತಸ್ರ ,ಊರ್ಝಂ, ದುದುಹೆ, ಪಯಾಂಸಿ ,ಕ,ಉ,,ಸ್ವಿತ್,ಅಸ್ಯಾ, ಪರಮಂ, ಜಗಾಮ ||

ಅರ್ಥ:- ಕ್ಲೀಂ ಎನ್ನುವ ಮಂತ್ರದಿಂದ ಉಪಾಸ್ಯಳಾದ ದೇವಿಯು ತತ್ವ ರೂಪದಲ್ಲಿ ಮೊದಲು ಅವ್ಯಕ್ತಳಾಗಿದ್ದು, ಪಶುಪಕ್ಷಿಗಳಲ್ಲಿ ಅಲ್ಪ ವಿಕಾಸವನ್ನು ಹೊಂದಿ ,ದೇವ ಮತ್ತು ಮನುಷ್ಯರಲ್ಲಿ ಭಾಷಾರೂಪವನ್ನು ಹೊಂದಿದಳು. ನಾಲ್ಕೂ ದಿಕ್ಕುಗಳಲ್ಲಿ ಭಾಷಾರೂಪವನ್ನು ಹೊಂದಿದ ದೇವಿಯಿಂದ,ಹಾಲು ಮೊದಲಾದ ವಸ್ತುಗಳು ಎಲ್ಲರಿಗೂ ದೊರೆಯುವಂತಾಗಿವೆ.ಈ ರೀತಿಯಾದ ದೇವಿಯ ತತ್ವವನ್ನು ಜ್ಞಾನಿಗಳು ಮಾತ್ರ ಕಂಡಿರುತ್ತಾರೆ.

*************************************
ಉಪನಿಷತ್ :- ದೇವೀಂವಾಚಮಿತಿ ಮಂತ್ರಸ್ಯ ಭಾರ್ಗವ ಋಶಿಃ| ತ್ರಿಷ್ಟುಪ್ ಛಂದಃ| ಸರಸ್ವತಿ ದೇವತಾ| ಸೌರಿತಿ ಬೀಜಶಕ್ತಿ ಕೀಲಕ್ಂ |ಮಂತ್ರೇಣ ನ್ಯಾಸಃ||

ಪದವಿಭಾಗ:- ದೇವೀಂ, ವಾಚಮ್,ಇತಿ ,ಮಂತ್ರಸ್ಯ, ಭಾರ್ಗವ, ಋಷಿಃ,| ತ್ರಿಷ್ಟುಪ್, ಛಂದಃ,| ಸರಸ್ವತೀ, ದೇವತಾ,| ಸೌಃ,ಇತಿ ,ಬೀಜ,ಶಕ್ತಿ ,ಕೀಲಕ್ಂ ,|ಮಂತ್ರೇಣ ,ನ್ಯಾಸಃ||

ಅರ್ಥ:- ದೇವೀಂ, ವಾಚಮ್ ಎಂದುಪ್ರಾರಂಭವಾಗುವ ಮಂತ್ರಕ್ಕೆ ,ಭಾರ್ಗವನೇ ಋಷಿಯು,ತ್ರಿಷ್ಟುಪ್ ಛಂದಸ್ಸು,ಸರಸ್ವತೀಯು ದೇವತೆ,ಸೌಃ ಎನ್ನುವದು ಬೀಜ ಶಕ್ತಿ ಕೀಲಕವಾಗಿದೆ.ಮಂತ್ರದಿಂದ ನ್ಯಾಸ ಮಾಡಿಕೋಳ್ಳಬೇಕು

************************************
ಉಪನಿಷತ್ :- ವ್ಯಕ್ತಾವ್ಯಕ್ತಗಿರಸ್ಸರ್ವಾಃವೇದಾದ್ಯ ವ್ಯಾಹರಂತಿ ಯಾಂ| ಸರ್ವಕಾಮದುಘಾ ಧೇನುಸ್ಸಾ ಮಾಂ ಪಾತು ಸರಸ್ವತೀ| |

ಪದವಿಭಾಗ:- ವ್ಯಕ್ತಾ, ಅವ್ಯಕ್ತ,ಗಿರಃ,ಸರ್ವಾಃ, ವೇದಃ,ಆದ್ಯಾಃ,ವ್ಯಾಹರಂತಿ, ಯಾಂ, ಸರ್ವಕಾಮದುಘಾ,ಧೇನುಃ,ಸಾ,ಮಾಂ,ಪಾತು,ಸರಸ್ವತೀ

ಅರ್ಥ:- ವೇದವೇ ಮೊದಲಾದವ್ಯಕ್ತವಾದ ಮತ್ತು ಅವ್ಯಕ್ತವಾದ ಭಾಷಾ ರೂಪಗಳು ಯಾವ ದೇವಿಯನ್ನು ವಿವರಿಸುತ್ತಿವೆಯೋ,ಆ ದೇವಿಯು ಕಾಮಧೇನುವಿನಂತೆ ನಮ್ಮ ಎಲ್ಲ ಕಾಮನೆಗಳನ್ನು ನೆರವೇರಿಸಿ ಕಾಪಾಡಲಿ.

*************************************
ಉಪನಿಷತ್ :- ಸೌಃ ದೇವೀಂ ವಾಚಮಜನಯಂತ ದೇವಾಃ ತಾಂ ವಿಶ್ವರೂಪಾಃ ಪಶವೋ ವದಂತಿ| ಸಾ ನೋ, ಮಂದ್ರೇಷ ಮೂರ್ಜಂದುಹಾನಾ ಧೇನುರ್ವಾಗಸ್ಮಾನುಪಸುಷ್ಟುತೈತು||

ಪದವಿಭಾಗ:- ಸೌಃ ,ದೇವೀಂ ,ವಾಚಮ್,ಅಜನಯಂತ, ದೇವಾಃ, ತಾಂ, ವಿಶ್ವರೂಪಾಃ, ಪಶವಃ, ವದಂತಿ| ಸಾ, ನೋ, ಮಂದ್ರೇಷಮ್,ಊರ್ಜಂ,ದುಹಾನಾ ,ಧೇನುಃ,ವಾಕ್,ಅಸ್ಮಾನ್,ಉಪಸುಷ್ಟುತೈತು,||

ಅರ್ಥ:- ಸೌಃ ಎನ್ನುವ ಬೀಜದಿಂದ ಉಪಾಸ್ಯಳಾದ ಸರಸ್ವತಿಯು ಸಂಪೂರ್ಣ ವಾಙ್ಮಯಕ್ಕೆ ಅಭಿಮಾನಿ ದೇವತೆಯಾಗಿದ್ದಾಳೆ. ದೇವಿಯ ವ್ಯಕ್ತ ರೂಪವಾದ ಭಾಷೆಯನ್ನು ದೇವತೆಗಳು ಉಂಟು ಮಾಡಿದರು.ಮಾನವರು ಬಳಸುವಂತೆ ಮಾಡಿದರು . ಭಾಷೆಯ ಅಲ್ಪ ವ್ಯಕ್ತ ರೂಪವನ್ನು ಪಶುಗಳು ಆಡುತ್ತವೆ, ಈ ದೇವಿಯು ನಮಗೆ ರಸ ವಸ್ತುಗಳನ್ನು ದೊರೆಯುವಂತೆ ಮಾಡಿ ನಮ್ಮನ್ನು ರಕ್ಷಿಸಲಿ.

*******************************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

*********************************
ಉಪನಿಷತ್ :- ಉತತ್ವ ಇತಿ ಮಂತ್ರಸ್ಯ ಬೃಹಸ್ಪತಿ ಋಷಿಃ|ತ್ರಿಷ್ಟುಪ್ ಛಂದಃ|ಸರಸ್ವತೀ ದೇವತಾ| ಸಂಇತಿ ಬೀಜ ಶಕ್ತಿ ಕೀಲಕಂ| ಮಂತ್ರೇಣ ನ್ಯಾಸಃ|

ಪದವಿಭಾಗ:- ಉತತ್ವ, ಇತಿ, ಮಂತ್ರಸ್ಯ, ಬೃಹಸ್ಪತಿ, ಋಷಿಃ,ತ್ರಿಷ್ಟುಪ್, ಛಂದಃ,|ಸರಸ್ವತೀ ,ದೇವತಾ,| ಸಂ,ಇತಿ, ಬೀಜ ,ಶಕ್ತಿ, ಕೀಲಕಂ,| ಮಂತ್ರೇಣ, ನ್ಯಾಸಃ,|

ಅರ್ಥ:- ಉತತ್ವ ಎಂದು ಪ್ರಾರಂಭವಾಗುವ ಮಂತ್ರಕ್ಕೆ ಬೃಹಸ್ಪತಿ, ಋಷಿಯು. ತ್ರಿಷ್ಟುಪ್ ಛಂದಸ್ಸು. ಸಂ,ಎನ್ನುವದು , ಬೀಜ ,ಶಕ್ತಿ, ಕೀಲಕವಾಗಿದೆ..ಮಂತ್ರದಿಂದ ನ್ಯಾಸ ಮಾಡಿಕೋಳ್ಳಬೇಕು.

************************************
ಉಪನಿಷತ್ :- ಯಾಂ ವಿದಿತ್ವಾಖಿಲಂ ಬಂಧಂ ನಿರ್ಮಥ್ಯಾಖಿಲವರ್ತ್ಮನಾ| ಯೋಗೀ ಯಾತಿ ಪರಂ ಸ್ಥಾನಂ ಸಾ ಮಾಂ ಪಾತು ಸರಸ್ವತೀ|

ಪದವಿಭಾಗ:- ಯಾಂ, ವಿದಿತ್ವಾ,ಅಖಿಲಂ, ಬಂಧಂ, ನಿರ್ಮಥ್ಯ,ಅಖಿಲ,ವರ್ತ್ಮನಾ,| ಯೋಗೀ, ಯಾತಿ, ಪರಂ, ಸ್ಥಾನಂ, ಸಾ, ಮಾಂ, ಪಾತು ,ಸರಸ್ವತೀ.

ಅರ್ಥ:- ಮೇಲೆ ಹೇಳಿದ ರೀತಿಯಲ್ಲಿ ದೇವಿಯ ಸಗುಣ ಮತ್ತು ನಿರ್ಗುಣ ತತ್ವವನ್ನು ಯಾವ ಯೋಗಿಯು ತಿಳಿಯುತ್ತಾನೋ ,ಅವನು ಎಲ್ಲಾ ಮಾರ್ಗಗಳಿಂದ ಉಂಟಾದ ಸಂಸಾರ ಬಂಧನವನ್ನು ನಾಶಮಾದಿಕೊಂಡು ಶ್ರೇಷ್ಠವಾದ ಗತಿಯನ್ನು ಪಡೆಯುತ್ತಾನೆ. ಅಂತಹ ಸರಸ್ವತಿಯು ನನ್ನನ್ನು ರಕ್ಷಿಸಲಿ

**************************************
ಉಪನಿಷತ್ :- ಸಂ ಉತತ್ವಃ ಪಶ್ಯನ್ನದದರ್ಶ ವಾಚಮುತತ್ವಶ್ಶೃಣ್ವನ್ನಶೃಣೋತ್ಯೇನಾಮ್| ಉತೋತ್ವಸ್ಮೈ ತನ್ವಂ ವಿಸಸ್ರೆ ಜಾಯೇವ ಪತ್ಯ ಉಶತೀ ಸುವಾಸಾಃ|

ಪದವಿಭಾಗ:- ಸಂ, ಉತತ್ವಃ, ಪಶ್ಯನ್,ನ,ದದರ್ಶ, ವಾಚಮ್,ಉತತ್ವ,ಶೃಣ್ವನ್,ನ,ಶೃಣೋತಿ,ಏನಾಮ್,ಉತೋತಃ,ಅಸ್ಮೈ, ತನ್ವಂ ,ವಿಸಸ್ರೆ, ಜಾಯಾ,ಇವ ,ಪತ್ಯ ,ಉಶತೀ ,ಸುವಾಸಾಃ.

ಅರ್ಥ:- ಸಂ ವರ್ಣದಿಂದ ಉಪಾಸ್ಯಳಾದ ಸರಸ್ವತಿಯು , ಸಮೀಪದಲ್ಲಿದ್ದರೂ ತಿಳಿಯುವ ಸಾಮರ್ಥ್ಯ ಇಲ್ಲದಿರುವವನು ವಾಕ್ ತತ್ವವನ್ನುತಿಳಿಯಲಾರನು. ಕೆಲವರು ಕೇಳಿದರೂ ತಿಳಿಯುವ ಸಾಮರ್ಥ್ಯ ಇಲ್ಲದಿರುವುದರಿಂದ ತಿಳಿಯಲಾರರು. ತಿಳಿಯುವ ಸಾಮರ್ಥ್ಯ ಇರುವವನಿಗೆ ತತ್ವವು ತಿಳಿಯುತ್ತದೆ, ಹೇಗೆಂದರೆ ಅಲಂಕೃತಳಾದ ಹೆಂಡತಿಯು ಗಂಡನಿಗೆ ತನ್ನ ಸ್ವರೂಪವನ್ನು ತೋರಿಸುವಂತೆ ಸರಸ್ವತಿಯು ಉಪಾಸಕನಿಗೆ ತನ್ನ ತತ್ವವನ್ನು ತೋರಿಸುತ್ತಾಳೆ.

*****************************************
ಉಪನಿಷತ್ :- ಅಂಭಿತಮ ಇತಿ ಮಂತ್ರಸ್ಯ ಗೃತ್ಸಮದ ಋಷಿಃ | ಅನುಷ್ಟುಪ್ ಛಂದಃ| ಸರಸ್ವತೀ ದೇವತಾ| ಐಮಿತಿ ಬೀಜಶಕ್ತಿ ಕೀಲಕಂ| ಮಂತ್ರೇಣ ನ್ಯಾಸಃ|

ಪದವಿಭಾಗ:- ಅಂಭಿತಮ, ಇತಿ ,ಮಂತ್ರಸ್ಯ, ಗೃತ್ಸಮದ, ಋಷಿಃ | ಅನುಷ್ಟುಪ್, ಛಂದಃ| ಸರಸ್ವತೀ ,ದೇವತಾ| ಐಮ್,ಇತಿ, ಬೀಜ,ಶಕ್ತಿ ,ಕೀಲಕಂ| ಮಂತ್ರೇಣ, ನ್ಯಾಸಃ|

ಅರ್ಥ:- "ಅಂಬಿತಮೆ" ಎಂದು ಪ್ರಾರಂಭವಾಗುವ ಮಂತ್ರಕ್ಕೆ ಗೃತ್ಸಮದನು ಋಷಿಯು,ಅನುಷ್ಟುಪ್ ಛಂದಸ್ಸು,ಐಮ್ ಎನ್ನುವದು ಬೀಜ ಶಕ್ತಿ ಮತ್ತು ಕೀಲಕವಾಗಿದೆ. ಮಂತ್ರದಿಂದ ನ್ಯಾಸ ಮಾಡಿಕೊಳ್ಳಬೇಕು.

**************************************
ಉಪನಿಷತ್ :- ನಾಮರೂಪಾತ್ಮಕಂ ಸರ್ವಂ ಯಸ್ಯಾಂ ಆವೇಶ್ಯತಾಂ ಪುನಃ| ಧ್ಯಾಯಂತಿ ಬ್ರಹ್ಮರೂಪೈಕಾ ಸಾ ಮಾಮ್ ಪಾತುಸರಸ್ವತಿ|

ಪದವಿಭಾಗ:- ನಾಮ,ರೂಪಾತ್ಮಕಂ ,ಸರ್ವಂ ,ಯಸ್ಯಾಂ, ಆವೇಶ್ಯತಾಂ ,ಪುನಃ,| ಧ್ಯಾಯಂತಿ, ಬ್ರಹ್ಮರೂಪಾ,ಏಕಾ, ಸಾ,ಮಾಮ್, ಪಾತು,ಸರಸ್ವತಿ,|

ಅರ್ಥ:- ನಾಮ ಮತ್ತು ರೂಪಗಳೆ ಸ್ವರೂಪವಾಗಿರುವ ಈ ಜಗತ್ತನ್ನು ಕಾರಣವಾದ ತತ್ವದಲ್ಲಿ ಲಯಗೋಳಿಸಿ ,ಪುನಃ ಯೋಗಿಗಳು ಒಂದೇ ಆಗಿರುವ ಮತ್ತು ಬ್ರಹ್ಮ ರೂಪ ವಾಗಿರುವ ಯಾವ ತತ್ವವನ್ನು ಧ್ಯಾನಿಸುತ್ತಾರೋ ಆ ತತ್ವರೂಪಿಯಾದ ಸರಸ್ವತಿಯು ನನ್ನನ್ನು ರಕ್ಷಿಸಲಿ.

*************************************
ಉಪನಿಷತ್ :- ಐಂ ಅಂಬಿತಮೇ ನದೀತಮೇ ದೇವಿತಮೇ ಸರಸ್ವತಿ| ಅಪ್ರಶಸ್ತಾ ಇವಸ್ಮಸಿ ಪ್ರಶಸ್ತಿಮಂಬ ನಸ್ಕೃಧಿ||

ಪದವಿಭಾಗ:- ಐಂ, ಅಂಬಿತಮೇ, ನದೀತಮೇ ,ದೇವಿತಮೇ, ಸರಸ್ವತಿ,| ಅಪ್ರಶಸ್ತಾ, ಇವ,ಸ್ಮಸಿ ,ಪ್ರಶಸ್ತಿಮ್,ಅಂಬ, ನಃ,ಕೃಧಿ||

ಅರ್ಥ:- ಐಂ,ಎನ್ನುವ ಮಂತ್ರದಿಂದ ಉಪಾಸ್ಯಳಾದ ತಾಯಿಯರಲ್ಲಿ ಉತ್ತಮಳೂ, ನದಿಗಳಲ್ಲಿ ಉತ್ತಮಳೂ, ದೇವತೆಗಳಲ್ಲಿ ಉತ್ತಮಳೂ, ಆದ ಸರಸ್ವತಿಯೇ,ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದದ ನಮಗೆ ಸಮೃದ್ಧಿಯನ್ನು ಉಂಟುಮಾಡು .

***********************************
ಉಪನಿಷತ್ :- ಚತುರ್ಮುಖ ಮುಖಾಂಬೋಜ ವನ ಹಂಸ ವಧೂರ್ಮಮ|ಮಾನಸೇ ರಮತಾಂ ನಿತ್ಯಮ್ ಸರ್ವಶುಕ್ಲಾ ಸರಸ್ವತಿ||

ಪದವಿಭಾಗ:- ಚತುರ್ಮುಖ, ಮುಖಾಂಬೋಜ, ವನಹಂಸ, ವಧೂಃ,ಮಮ,|ಮಾನಸೇ, ರಮತಾಂ ,ನಿತ್ಯಮ್, ಸರ್ವಶುಕ್ಲಾ ,ಸರಸ್ವತಿ,||

ಅರ್ಥ:- ನಾಲ್ಕುಮುಖಗಳನ್ನು ಹೊಂದಿದ ಬ್ರಹ್ಮನಮುಖ ಕಮಲಗಳೆಂಬ ಅರಣ್ಯಕ್ಕೆ ಹಂಸದಂತಿರುವ , ಬಿಳಿಯದಾದ ಕಾಂತಿಯನ್ನು ಹೊಂದಿದ ಸರಸ್ವತಿಯು ಸದಾ ನನ್ನ ಮನಸ್ಸಿನಲ್ಲಿ ನೆಲಸಲಿ.

************************************
ಉಪನಿಷತ್ :- ನಮಸ್ತೆ ಶಾರದೆ ದೆವಿ ಕಾಶ್ಮೀರಪುರವಾಸಿನಿ | ತ್ವಾಮಹಮ್ ಪ್ರಾರ್ಥಯೇ ನಿತ್ಯಮ್ ವಿದ್ಯಾ ದಾನಂಚ ದೇಹಿಮೇ||

ಪದವಿಭಾಗ:- ನಮಸ್ತೆ ,ಶಾರದೆ, ದೇವಿ, ಕಾಶ್ಮೀರಪುರವಾಸಿನಿ, | ತ್ವಾಮ್,ಅಹಮ್, ಪ್ರಾರ್ಥಯೇ, ನಿತ್ಯಮ್, ವಿದ್ಯಾದಾನಂ,ಚ, ದೇಹಿ,ಮೇ.

ಅರ್ಥ:- ಕಾಶ್ಮೀರಪುರದಲ್ಲಿ ವಾಸಿಸುವ ಶಾರದೇ ಎಂದು ಪ್ರಸಿದ್ಧಳಾದ ಅಲೌಕಿಕವಾದ ಪ್ರಕಾಶವುಳ್ಳ ಸರಸ್ವತಿಗೆ ನಮಸ್ಕಾರವು. ನಾನುನಿನ್ನನ್ನು ನಿತ್ಯವೂ ಪ್ರಾರ್ಥಿಸುತ್ತೆನೆ. ನನಗೆ ಜ್ಞಾನವನ್ನು ಕರುಣಿಸು.

************************************
ಉಪನಿಷತ್ :- ಅಕ್ಷಸೂತ್ರಾಂಕುಶಧರಾ ಪಾಶ ಪುಸ್ತಕಧಾರಿಣಿ| ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಠತು ಮೇ ಸದಾ||

ಪದವಿಭಾಗ:- ಅಕ್ಷಸೂತ್ರಾಂಕುಶಧರಾ, ಪಾಶ, ಪುಸ್ತಕಧಾರಿಣಿ,| ಮುಕ್ತಾಹಾರ, ಸಮಾಯುಕ್ತಾ, ವಾಚಿ, ತಿಷ್ಠತು, ಮೇ,ಸದಾ.

ಅರ್ಥ:- ಜಪಮಾಲೆ ಅಂಕುಶ ಪಾಶ ಪುಸ್ತಕಗಳನ್ನು ಕೈಗಳಲ್ಲಿ ಧರಿಸಿರುವ ಮುತ್ತಿನ ಮಾಲೆಗಳಿಂದ ಭೂಷಿತಳಾದ ಸರಸ್ವತಿಯು ನನ್ನ ಮಾತಿನಲ್ಲಿ ಸದಾ ನೆಲೆಸಲಿ

*************************************
ಉಪನಿಷತ್ :- ಕಬುಕಂಠೀ ಸುತಾಮ್ರೋಷ್ಠೀ ಸರ್ವಾಭರಣ ಭೂಷಿತಾ |ಮಹಾಸರಸ್ವತೀ ದೇವೀ ಜಿಹ್ವಾಗ್ರೇ ಸಂನಿವೇಶ್ಯತಾಮ್||

ಪದವಿಭಾಗ:- ಕಬುಕಂಠೀ, ಸುತಾಮ್ರೋಷ್ಠೀ, ಸರ್ವಾಭರಣ, ಭೂಷಿತಾ, |ಮಹಾಸರಸ್ವತೀ ,ದೇವೀ, ಜಿಹ್ವಾಗ್ರೇ, ಸಂನಿವೇಶ್ಯತಾಮ್

ಅರ್ಥ:- ದುಂಡಗಾದ ಕುತ್ತಿಗೆ ,ಕೆಂಪಾದ ತುಟಿ,ಮತ್ತು ಎಲ್ಲ ಆಭರಣಗಳಿಂದ ಅಲಂಕರಿಸಿಕೊಂಡಿರುವ ಮಹಾಸರಸ್ವತಿ ದೇವಿಯು ನನ್ನ ನಾಲಿಗೆಯ ತುದಿಯಲ್ಲಿ ನೆಲಸಲಿ.

**************************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

***********************************
ಉಪನಿಷತ್ :- ಯಾ ಶ್ರದ್ಧಾ ಧಾರಣಾ ಮೇಧಾ ವಾಗ್ದೇವೀ ವಿಧಿವಲ್ಲಭಾ| ಭಕ್ತಜಿಹ್ವಾಗ್ರಸದನಾ ಶಮಾದಿ ಗುಣದಾಯಿನಿ||

ಪದವಿಭಾಗ:- ಯಾ,ಶ್ರದ್ಧಾ, ಧಾರಣಾ, ಮೇಧಾ ,ವಾಗ್ದೇವೀ ,ವಿಧಿವಲ್ಲಭಾ,| ಭಕ್ತಜಿಹ್ವಾಗ್ರಸದನಾ, ಶಮಾದಿ ,ಗುಣದಾಯಿನಿ,||

ಅರ್ಥ:- ಸರಸ್ವತಿಯು ಶ್ರದ್ಧಾ( ವೇದ ವಾಕ್ಯಗಳಲ್ಲಿ ಅಚಲವಾದ ವಿಶ್ವಾಸ) ಧಾರಣಾ(ಕೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಶಕ್ತಿ) ಮೇಧಾ(ಉತ್ತಮವಾದ ನೆನಪಿನ ಶಕ್ತಿ) ಭಾಷೆಗಳಿಗೆ ಅಭಿಮಾನಿಯಾದ ದೇವತೆ ,ಚತುರ್ಮುಖ ಬ್ರಹ್ಮನ ಪತ್ನೀ,ಭಕ್ತರ ನಾಲಿಗೆಯ ಮೇಲೆ ನೆಲಸಿರುವವಳು,ಶಮಾದಿ ಗುಣಗಳನ್ನು ಉಂಟುಮಾಡುವವಳೂ ಆಗಿದ್ದಾಳೆ.

*************************************
ಉಪನಿಷತ್ :- ನಮಾಮಿ ಯಾಮಿನಿನಾಥರೇಖಲಂಕೃತಕುಂತಲಾಮ್| ಭವಾನೀಮ್ ಭವಸಂತಾಪನಿರ್ವಾಪಣ ಸುಧಾನದೀಮ್||

ಪದವಿಭಾಗ:- ನಮಾಮಿ ,ಯಾಮಿನಿನಾಥ,ರೇಖಲಂಕೃತ,ಕುಂತಲಾಮ್,| ಭವಾನೀಮ್, ಭವ,ಸಂತಾಪ,ನಿರ್ವಾಪಣ, ಸುಧಾ,ನದೀಮ್,||

ಅರ್ಥ:- ಚಂದ್ರಬಿಂಬದಿಂದ ಅಲಂಕೃತಳಾದ ಮುಡಿಯನ್ನು ಹೊಂದಿದ ಸಂಸಾರದಿಂದ ಉಂಟಾಗುವ ದುಃಖಗಳನ್ನು ಹೋಗಲಾಡಿಸುವ ಭವಾನಿಯನ್ನು ನಮಸ್ಕರಿಸುತ್ತೇನೆ.

**************************************
ಉಪನಿಷತ್ :- ಯಃ ಕವಿತ್ವಂ ನಿರಾತಂಕಂ ಭುಕ್ತಿಮುಕ್ತಿ ಚ ವಾಂಛತಿ | ಸೋಭ್ಯರ್ಚೈನಾಮ್ ದಶಶ್ಲೋಕ್ಯಾ ನಿತ್ಯಂ ಸ್ತೌತಿ ಸರಸ್ವತಿ||

ಪದವಿಭಾಗ:- ಯಃ, ಕವಿತ್ವಂ, ನಿರಾತಂಕಂ ,ಭುಕ್ತಿ,ಮುಕ್ತಿ, ಚ ,ವಾಂಛತಿ ,| ಸಃ,ಅಭ್ಯರ್ಚ್ಯ,ಏನಾಮ ,ದಶಶ್ಲೋಕ್ಯಾ, ನಿತ್ಯಂ, ಸ್ತೌತಿ, ಸರಸ್ವತಿ.

ಅರ್ಥ:- ಯಾರು ಅಡೆ ತಡೆಗಳಿಲ್ಲದೆ ಕಾವ್ಯರಚನಾ ಶಕ್ತಿಯನ್ನು ,ಲೌಕಿಕ ಭೋಗವನ್ನು ಮತ್ತು ಮೋಕ್ಷವನ್ನು ಬಯಸುತ್ತನೋ,ಅವನು ಪ್ರತಿನಿತ್ಯದಲ್ಲಿ ಸರಸ್ವತಿಯ ದಶಶ್ಲೋಕಿ ಮಂತ್ರವನ್ನು ಪಠಿಸಬೇಕು.

********************************************
ಉಪನಿಷತ್ :- ತಸ್ಯೈವಂ ಸ್ತುವತೋ ನಿತ್ಯಂ ಸಮಭ್ಯರ್ಚ್ಯ ಸರಸ್ವತಿಮ್| ಭಕ್ತಿ ಶ್ರದ್ಧಾಭಿಯುಕ್ತಸ್ಯ ಷಾಣ್ಮಾಸಾತ್ ಪ್ರತ್ಯಯೋ ಭವೇತ್

ಪದವಿಭಾಗ:- ತಸ್ಯ,ಏವಂ, ಸ್ತುವತೋ, ನಿತ್ಯಂ ,ಸಮಭ್ಯರ್ಚ್ಯ, ಸರಸ್ವತಿಮ್,| ಭಕ್ತಿ ,ಶ್ರದ್ಧಾಭಿಯುಕ್ತಸ್ಯ, ಷಾಣ್ಮಾಸಾತ್ ,ಪ್ರತ್ಯಯೋ ,ಭವೇತ್,||

ಅರ್ಥ:- ಮೇಲೆ ಹೇಳಿದ ರೀತಿಯಲ್ಲಿ ಸರಸ್ವತಿಯನ್ನು ಶ್ರದ್ಧಾ ಭಕ್ತಿಯಿಂದ ಉಪಾಸಿಸುವವನಿಗೆ ಆರು ತಿಂಗಳುಗಳಲ್ಲಿ ಮಂತ್ರ ಸಿದ್ಧಿಯ ಚಿನ್ಹೆಯು ಉಂಟಾಗುತ್ತದೆ.

*******************************************
ಉಪನಿಷತ್ :- ತತಃ ಪ್ರವರ್ತತೆ ವಾಣೀ ಸ್ವೇಚ್ಛಯಾಲಲಿತಾಕ್ಷರಾ | ಗದ್ಯಪದ್ಯಾತ್ಮಕೈಃ ಶಬ್ದೈರಪ್ರಮೇಯೈರ್ವಿವಿಕ್ಷಿತೈಃ||

ಪದವಿಭಾಗ:- ತತಃ, ಪ್ರವರ್ತತೆ, ವಾಣೀ, ಸ್ವೇಚ್ಛಯಾ,ಲಲಿತಾಕ್ಷರಾ, | ಗದ್ಯಪದ್ಯಾತ್ಮಕೈಃ, ಶಬ್ದೈಃ,ಅಪ್ರಮೇಯೈಃ,ವಿವಿಕ್ಷಿತೈಃ.

ಅರ್ಥ:- ಆಮೇಲೆ ಉಪಾಸಕನಿಗೆ ,ಸಾಮಾನ್ಯ ಜನರಿಗೆ ತಿಳಿಯಲು ಕಷ್ಟವಾದ ವಿಷಯಗಳಲ್ಲಿ,ಗದ್ಯಪದ್ಯ ರೂಪವಾದ ವಾಕ್ಯಗಳು ಸ್ವತಂತ್ರವಾಗಿ ,ಸುಂದರವಾಗಿ ಹೊರ ಹೊಮ್ಮುತ್ತವೆ.

************************************
ಉಪನಿಷತ್ :- ಅಶ್ರುತೋ ಬುಧ್ಯತೆ ಗ್ರಂಥಃ ಪ್ರಾಯಸ್ಸಾರಸ್ವತಃ ಕವಿಃ | ಇತ್ಯೇವಮ್ ನಿಶ್ಚಯಮ್ ವಿಪ್ರಾಸ್ಸಾ ಹೋವಾಚ ಸರಸ್ವತಿ||

ಪದವಿಭಾಗ:- ಅಶ್ರುತಃ,ಬುಧ್ಯತೆ, ಗ್ರಂಥಃ, ಪ್ರಾಯಃ,ಸಾರಸ್ವತಃ ,ಕವಿಃ, | ಇತಿ,ಏವಮ್ ,ನಿಶ್ಚಯಮ್, ವಿಪ್ರಾಃ,ಸಾ, ಹ,ಉವಾಚ ,ಸರಸ್ವತಿ,||

ಅರ್ಥ:- ಉಪಾಸಕನಿಗೆ ಈ ಮೋದಲು ಕೇಳದೇ ಇರುವ ಗ್ರಂಥಗಳು ತಿಳಿದು ಬರುತ್ತವೆ, ಅವನು ಸರಸ್ವತಿಯ ವರಕವಿಯೇ ಆಗಿರುತ್ತಾನೆ.ಓ ಋಷಿಗಳೇ ಈ ರೀತಿಯಾಗಿ ನಿಶ್ಚಯವನ್ನು ಆ ಸರಸ್ವತಿಯು ಹೇಳಿದ್ದಾಳೆ.

**************************************
ಉಪನಿಷತ್ :- ಆತ್ಮ ವಿದ್ಯಾ ಮಯಾ ಲಬ್ಧಾ ಬ್ರಹ್ಮಣೈವ ಸನಾತನೀ| ಬ್ರಹ್ಮತ್ವಂ ಮೇ ಸದಾ ನಿತ್ಯಂ ಸಚ್ಚಿದಾನಂದ ರೂಪತಃ||

ಪದವಿಭಾಗ:- ಆತ್ಮ ,ವಿದ್ಯಾ, ಮಯಾ ,ಲಬ್ಧಾ, ಬ್ರಹ್ಮಣಾ,ಏವ, ಸನಾತನೀ,| ಬ್ರಹ್ಮತ್ವಂ ,ಮೇ, ಸದಾ, ನಿತ್ಯಂ,ಸಚ್ಚಿದಾನಂದ, ರೂಪತಃ,||

ಅರ್ಥ:- ಶಾಶ್ವತವಾದ ಆತ್ಮ ವಿದ್ಯೆಯು ನನಗೆ ಬ್ರಹ್ಮನಿಂದ ದೊರಕಿದೆ. ಸಚ್ಚಿದಾನಂದ ಸ್ವರೂಪವಾದ ಬ್ರಹ್ಮತತ್ವದಲ್ಲಿ ಇರುವಿಕೆಯು ನನಗೆ ನಿತ್ಯ ಸಿದ್ಧವಾಗಿದೆ

*************************************
ಉಪನಿಷತ್ :- ಪ್ರಕೃತಿತ್ವಂ ತತಃ ಸೃಷ್ಟಂ ಸತ್ವಾದಿಗುಣಸಾಮ್ಯತಃ| ಸತ್ಯೇವಾಭಾತಿ ಚಿಚ್ಛಾಯಾದರ್ಪಣೇ ಪ್ರತಿಬಿಂಬವತ್||

ಪದವಿಭಾಗ:- ಪ್ರಕೃತಿತ್ವಂ, ತತಃ ,ಸೃಷ್ಟಂ, ಸತ್ವಾದಿ,ಗುಣಸಾಮ್ಯತಃ,| ಸತ್ಯ,ಇವ,ಆಭಾತಿ, ಚಿತ್,ಛಾಯಾ,ದರ್ಪಣೇ, ಪ್ರತಿಬಿಂಬವತ್,||

ಅರ್ಥ:- ಆ ನಂತರ ,ಸತ್ವ,ರಜ ಮತ್ತು ತಮ ಎನ್ನುವ ಮೂರು ಗುಣಗಳು ಸಮವಾಗಿರುವ ಪ್ರಕೃತಿಯು ಉತ್ಪತ್ತಿಯಾಯಿತು. ಪ್ರಕೃತಿಯಲ್ಲಿ ಪ್ರತಿಬಿಂಬಿತವಾದ ಚೈತನ್ಯವು ಸತ್ಯವೋ ಎನ್ನುವಂತೆ ತೋರುತ್ತದೆ.

*************************************
ಉಪನಿಷತ್ :- ತೇನ ಚಿತ್ಪ್ರತಿಬಿಂಬೇನ ತ್ರಿವಿಧಾ ಭಾತಿ ಸಾ ಪುನಃ| ಪ್ರಕೃತ್ಯವಚ್ಛಿನ್ನತಯಾ ಪುರುಷತ್ವಂ ಪುನಶ್ಚ ಮೇ||

ಪದವಿಭಾಗ:- ತೇನ ಚಿತ್ಪ್ರತಿಬಿಂಬೇನ ತ್ರಿವಿಧಾ ಭಾತಿ ಸಾ ಪುನಃ| ಪ್ರಕೃತ್ಯವಚ್ಛಿನ್ನತಯಾ ಪುರುಷತ್ವಂ ಪುನಶ್ಚ ಮೇ||

ಅರ್ಥ:- ಪ್ರಕೃತಿಯಲ್ಲಿ ಚೈತನ್ಯವು ಪ್ರತಿಬಿಂಬಿತವಾಗಿರುವುದರಿಂದ ಪ್ರಕೃತಿಯು ಪುನಃ ಮೂರು ವಿಧವಾಗಿ ತೋರುತ್ತದೆ.ಪ್ರಕೃತಿಯಲ್ಲಿ ಚೈತನ್ಯವು ಪ್ರತಿಬಿಂಬಿತವಾಗಿರುವುದರಿಂದ ನನಗೆ ( ಸರಸ್ವತಿಗೆ) ಪುರುಷತ್ವವು ( ಜೀವತ್ವವು) ತಿರುಗಿ ತಿರುಗಿ ಉಂಟಾಗುತ್ತದೆ.

****************************************
ಉಪನಿಷತ್ :- ಪ್ರಕೃತಿಯಲ್ಲಿ ಚೈತನ್ಯವು ಪ್ರತಿಬಿಂಬಿತವಾಗಿರುವುದರಿಂದ ಪ್ರಕೃತಿಯು ಪುನಃ ಮೂರು ವಿಧವಾಗಿ ತೋರುತ್ತದೆ.ಪ್ರಕೃತಿಯಲ್ಲಿ ಚೈತನ್ಯವು ಪ್ರತಿಬಿಂಬಿತವಾಗಿರುವುದರಿಂದ ನನಗೆ ( ಸರಸ್ವತಿಗೆ) ಪುರುಷತ್ವವು ( ಜೀವತ್ವವು) ತಿರುಗಿ ತಿರುಗಿ ಉಂಟಾಗುತ್ತದೆ.

ಪದವಿಭಾಗ:- ಶುದ್ಧಸತ್ವಪ್ರಧಾನಾಯಾಮ್, ಮಾಯಾಯಾಮ್, ಬಿಂಬಿತಃ,ಹಿ, ಅಜಃ| ಸತ್ವಪ್ರಧಾನಾ ,ಪ್ರಕೃತಿಃ ,ಮಾಯಾ,ಇತಿ, ಪ್ರತಿಪಾದ್ಯತೆ,||

ಅರ್ಥ:- ಶುದ್ಧಸತ್ವಪ್ರಧಾನವಾದ (ಅಂದರೆ ಅರ್ಧ ಭಾಗವು ಸತ್ವಗುಣ ಉಳಿದ ಕಾಲು ಭಾಗವು ರಜೋಗುಣ ಮತ್ತು ತಮೋಗುಣ) ಮಾಯೆಯಲ್ಲಿ ಯಾವುದೇ ವಿಕಾರಗಳಿಲ್ಲದ ಚೈತನ್ಯವು ಪ್ರತಿಬಿಂಬಿಸುತ್ತದೆ. ಸತ್ವಗುಣವು ಪ್ರಧಾನವಾದ ಪ್ರಕೃತಿಯು "ಮಾಯೆ" ಎಂದು ವ್ಯವಹರಿಸಲ್ಪಡುತ್ತದೆ,

*******************************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

*************************************
ಉಪನಿಷತ್ :- ಸಾ ಮಾಯಾ ಸ್ವವಶೋಪಾಧಿಸ್ಸರ್ವಜ್ಞಸ್ಯೇಶ್ವರಸ್ಯ ಹಿ| ವಶ್ಯಮಾಯತ್ವಮೇಕತ್ವಂ ಸರ್ವಜ್ಞತ್ವಂ ಚ ತಸ್ಯ ತು||

ಪದವಿಭಾಗ:- ಸಾ, ಮಾಯಾ ,ಸ್ವ,ವಶಃ,ಉಪಾಧಿಃ,ಸರ್ವಜ್ಞಸ್ಯ,ಈಶ್ವರಸ್ಯ, ಹಿ| ವಶ್ಯ,ಮಾಯತ್ವಮ್,ಏಕತ್ವಂ ,ಸರ್ವಜ್ಞತ್ವಂ, ಚ ,ತಸ್ಯ, ತು,||

ಅರ್ಥ:- ಆ ಮಾಯೆಯು ಈಶ್ವರನಿಗೆ ಅಧೀನವಾದ ಉಪಾಧಿಯಾಗಿದೆ. ಮಾಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವದು,ಒಂದೇ ಆಗಿರುವುದು ಎಲ್ಲವನ್ನು ತಿಳಿಯುವ ಶಕ್ತಿಯು ಈ ಚೈತನ್ಯಕ್ಕೆ ಮಾತ್ರ ಇರುತ್ತದೆ.

***************************************
ಉಪನಿಷತ್ :- ಸಾತ್ವಿಕತ್ವಾತ್ ಸಮಷ್ಟಿತ್ವಾತ್ ಸಾಕ್ಷಿತ್ವಾತ್ ಜಗತಾಮಪಿ| ಜಗತ್ ಕರ್ತುಂ ಅಕರ್ತುಮ್ ವಾ ಚಾನ್ಯಥಾ ಕರ್ತುಮೀಶತೇ||

ಪದವಿಭಾಗ:- ಸಾತ್ವಿಕತ್ವಾತ್, ಸಮಷ್ಟಿತ್ವಾತ್, ಸಾಕ್ಷಿತ್ವಾತ್, ಜಗತಾಮ್,ಅಪಿ,| ಜಗತ್, ಕರ್ತುಂ, ಅಕರ್ತುಮ್, ವಾ, ಚ,ಅನ್ಯಥಾ, ಕರ್ತುಮ್,ಈಶತೇ,||

ಅರ್ಥ:- ಸಾತ್ವಿಕವಾಗಿರುವುದರಿಂದ ಎಲ್ಲ ಚೈತನ್ಯಗಳ ಸಮಷ್ಟಿ(ಒಟ್ಟುಗೂಡಿದ)ರೂಪವಾಗಿರುವುದರಿಂದ ,ಎಲ್ಲ ವ್ಯವಹಾರಗಳಿಗೆ ಸಾಕ್ಷೀಯಾಗಿರುವುದರಿಂದ,ಆ ಬ್ರಹ್ಮಚೈತನ್ಯವು, ಈ ಪ್ರಪಂಚದ ಕಾರ್ಯವನ್ನು ಮಾಡಲು, ಮಾಡದೇ ಇರಲು ಇನ್ನೊಂದು ರೀತಿಯಲ್ಲಿ ಮಾಡಲು ಸ್ವತಂತ್ರವಾಗಿರುತ್ತದೆ.

***********************************
ಉಪನಿಷತ್ :- ಯಸ್ಸ ಈಶ್ವರ ಇತ್ಯುಕ್ತಃ ಸರ್ವಜ್ಞತ್ವಾದಿಭಿರ್ಗುಣೈಃ| ಶಕ್ತಿದ್ವಯಂ ಹಿ ಮಾಯಾಯಾ ವಿಕ್ಷೇಪಾವೃತಿರೂಪಕಮ್||

ಪದವಿಭಾಗ:- ಯಃ,ಸಃ,ಈಶ್ವರಃ, ಇತಿ,ಉಕ್ತಃ, ಸರ್ವಜ್ಞತ್ವಾದಿಭಿಃ,ಗುಣೈಃ| ಶಕ್ತಿದ್ವಯಂ, ಹಿ, ಮಾಯಾಯಾಃ, ವಿಕ್ಷೇಪ,ಆವೃತಿ,ರೂಪಕಮ್.

ಅರ್ಥ:- ಮಾಯೆಯಲ್ಲಿ ಪ್ರತಿಬಿಂಬಿತವಾದ ಬ್ರಹ್ಮಚೈತನ್ಯವನ್ನೇ ಸರ್ವಜ್ಞತ್ವಾದಿ ಗುಣಗಳಿಂದ ಕೂಡಿದ ಈಶ್ವರನೆಂದು ವ್ಯವಹರಿಸುತ್ತಾರೆ. ಈ ಮಾಯೆಗೆ ಆವರಣ ಮತ್ತು ವಿಕ್ಷೇಪ ಎಂದು ಎರಡು ಶಕ್ತಿಗಳಿವೆ.

***************************************
ಉಪನಿಷತ್ :- ವಿಕ್ಷೇಪಶಕ್ತಿರ್ಲಿಂಗಾದಿ ಬ್ರಹ್ಮಾಂಡಾಂತಂ ಜಗತ್ ಸೃಜೇತ್|

ಪದವಿಭಾಗ:- ವಿಕ್ಷೇಪಶಕ್ತಿಃ,ಲಿಂಗಾದಿ ,ಬ್ರಹ್ಮಾಂಡಾಂತಂ, ಜಗತ್ ,ಸೃಜೇತ್

ಅರ್ಥ:- ಮಾಯೆಯ ವಿಕ್ಷೇಪಶಕ್ತಿಯು ಸೂಕ್ಷ್ಮಶರೀರದಿಂದಾರಂಭಿಸಿ ಬ್ರಹ್ಮಾಂಡದವರೆಗಿನ ಈ ಪ್ರಪಂಚವನ್ನು ಸೃಷ್ಟಿಸುತ್ತದೆ.

*****************************
ಉಪನಿಷತ್ :- ಅಂತರ್ದೃಗ್ದೃಶ್ಯಯೋರ್ಭೇದಮ್ ಬಹಿಶ್ಚ ಬ್ರಹ್ಮಸರ್ಗಯೋಃ| ಆವೃಣೋತ್ಯಪರಾಶಕ್ತಿಃ ಸಾ ಸಂಸಾರಸ್ಯ ಕಾರಣಮ್||

ಪದವಿಭಾಗ:- ಅಂತಃ ದೃಕ್, ದೃಶ್ಯಯೋಃ,ಭೇದಮ್ ,ಬಹಿಃ,ಚ, ಬ್ರಹ್ಮಸರ್ಗಯೋಃ,| ಆವೃಣೋತಿ,ಅಪರಾಶಕ್ತಿಃ, ಸಾ, ಸಂಸಾರಸ್ಯ, ಕಾರಣಮ್,||

ಅರ್ಥ:- ಒಳಗಿನ ದೃಕ್ ಅಂದರೆ ನೋಡುವ ಕ್ರಿಯೆಯನ್ನು ಮಾಡುವ ಜೀವ,ದೃಶ್ಯ ಅಂದರೆ ನಮ್ಮ ಅನುಭವಕ್ಕೆ ಬರುವ ಈ ಪ್ರಪಂಚ ,ಇವುಗಳ ಭೇದ, ಹೊರಗಿನದಾದ ಪ್ರಪಂಚ ಮತ್ತು ಬ್ರಹ್ಮ,ಇವುಗಳ ಭೇದದ ಜ್ಞಾನವಾಗದಂತೆ ಮಾಡುತ್ತದೆ.ಇದು ಮಾಯೆಯ ಇನ್ನೊಂದು ಶಕ್ತಿ ಇದು ಸಂಸಾರಕ್ಕೆ ಕಾರಣವಾಗಿದೆ.ಇದಕ್ಕೆ "ಆವರಣಶಕ್ತಿ" ಎಂದು ಹೆಸರು.

*********************************
ಉಪನಿಷತ್ :- ಸಾಕ್ಷಿಣಃ ಪುರತೋ ಭಾಂತಮ್ ಲಿಂಗದೇಹೆನ ಸಂಯುತಮ್| ಚಿತಿಚ್ಛಾಯಾಸಮಾವೇಶಾತ್ ಜೀವಸ್ಸ್ಯಾತ್ ವ್ಯಾವಹಾರಿಕಃ||

ಪದವಿಭಾಗ:- ಸಾಕ್ಷಿಣಃ ,ಪುರತೋ, ಭಾಂತಮ್ ,ಲಿಂಗದೇಹೆನ, ಸಂಯುತಮ್,| ಚಿತಿಚ್ಛಾಯಾಸಮಾವೇಶಾತ್ , ಜೀವಃ,ಸ್ಯಾತ್ ,ವ್ಯಾವಹಾರಿಕಃ,

ಅರ್ಥ:- ಸಾಕ್ಷಿಯ ಎದುರುಗಡೆ ತೋರುವ ಲಿಂಗದೇಹದಿಂದ ಕೂಡಿದ (ಲಿಂಗದೇಹ ರೂಪ ಉಪಾಧಿಯಲ್ಲಿ ಪ್ರತಿಬಿಂಬಿತವಾದ )ಚೈತನ್ಯದ ಪ್ರತಿಬಿಂಬವು ವ್ಯವಹಾರದಲ್ಲಿ "ಜೀವ"ಎಂದು ಕರೆಯಲ್ಪಡುತ್ತದೆ.

***********************************
ಉಪನಿಷತ್ :- ಅಸ್ಯ ಜೀವತ್ವಮಾರೋಪಾತ್ ಸಾಕ್ಷಿಣ್ಯಪ್ಯವಭಾಸತೆ| ಆವೃತೌ ತು ವಿನಷ್ಟಾಯಾಮ್ ಭೇದೆಯಾತೆ ಪ್ರಯಾತಿ ತತ್||

ಪದವಿಭಾಗ:- ಅಸ್ಯ, ಜೀವತ್ವಮ್, ಆರೋಪಾತ್, ಸಾಕ್ಷಿಣಿ,ಅಪಿ, ಅವಭಾಸತೆ,ಆವೃತೌ ,ತು ,ವಿನಷ್ಟಾಯಾಮ್, ಭೇದೆ,ಯಾತೆ ,ಪ್ರಯಾತಿ, ತತ್.

ಅರ್ಥ:- ಜೀವನ ಜೀವತ್ವವು ಭ್ರಮೆಯಿಂದ(ಒಂದು ವಸ್ತುವಿನಲ್ಲಿ ಇಲ್ಲದ ಧರ್ಮವು ಆ ವಸ್ತುವಿನಲ್ಲಿ ಕಂದುಬಂದರೆ ಅದು ಭ್ರಮೆ) ಸಾಕ್ಷಿಚೈತನ್ಯದಲ್ಲಿ ತೋರುತ್ತದೆ. ಮಾಯೆಯ ಆವರಣವು ನಾಶವಾದಾಗ ಭೆದವೂ ನಾಶವಾಗಿ ಭ್ರಮೆಯು ನಾಶವಾಗುತ್ತದೆ.

***********************************
ಉಪನಿಷತ್ :- ತಥಾ ಸರ್ಗಬ್ರಹ್ಮಣೋಶ್ಚ ಭೇದಮಾವೃತ್ಯ ತಿಷ್ಠತಿ| ಯಾ ಶಕ್ತಿಸ್ತದ್ವಶಾತ್ ಬ್ರಹ್ಮ ವಿಕೃತತ್ವೇನ ಭಾಸತೆ||

ಪದವಿಭಾಗ:- ತಥಾ,ಸರ್ಗಬ್ರಹ್ಮಣೋಃ,ಚ,ಭೇದಮ್, ಆವೃತ್ಯ,ತಿಷ್ಠತಿ,| ಯಾ,ಶಕ್ತಿಃ, ತತ್, ವಶಾತ್, ಬ್ರಹ್ಮ, ವಿಕೃತತ್ವೇನ ,ಭಾಸತೆ,.

ಅರ್ಥ:- ಮಾಯೆಯ ಆವರಣ ಶಕ್ತಿಯು ಜೀವ ಮತ್ತು ಸಾಕ್ಷಿ ಚೈತನ್ಯವನ್ನು ಆವರಿಸುವದೋ ಹಾಗೆ,ಈ ಸಂಸಾರ ಮತ್ತು ಬ್ರಹ್ಮದ ಭೇದವನ್ನು ಆವರಿಸುತ್ತದೆ, ಈ ಆವರಣ ಶಕ್ತಿಯ ಪ್ರಭಾವದಿಂದ ವಿಕಾರ ರಹಿತವಾದ ಬ್ರಹ್ಮವು ಜೀವ, ಸಂಸಾರ ರೂಪದಲ್ಲಿ ವಿಕಾರವಾಗಿ ಕಂಡುಬರುತ್ತದೆ.

****************************************
ಉಪನಿಷತ್ :- ಅತ್ರಾಪ್ಯಾವೃತ್ತಿ ನಾಶೇನ ವಿಭಾತಿ ಬ್ರಹ್ಮಸರ್ಗಯೋಃ | ಭೇದಸ್ತಯೋರ್ವಿಕಾರಸ್ಸ್ಯಾತ್ ಸರ್ಗೇ ನ ಬ್ರಹ್ಮಣಿ ಕ್ವಚಿತ್| |

ಪದವಿಭಾಗ:- ಅತ್ರ,ಅಪಿ,ಆವೃತಿನಾಶೇನ, ವಿಭಾತಿ ,ಬ್ರಹ್ಮಸರ್ಗಯೋಃ,ಭೇದಃ,ತಯೋಃ,ವಿಕಾರಃ,ಸ್ಯಾತ್, ಸರ್ಗೇ, ನ ,ಬ್ರಹ್ಮಣಿ,ಕ್ವಚಿತ್.

ಅರ್ಥ:- ಇಲ್ಲಿಯೂ ಸಹ ಆವರಣವು ನಾಶವಾಗುವುದರಿಂದ ,ಸಂಸಾರಮತ್ತು ಬ್ರಹ್ಮದ ಭೇದವು ತಿಳಿಯುತ್ತದೆ.ಸಂಸಾರ ಮತ್ತು ಬ್ರಹ್ಮ ಇವುಗಳಲ್ಲಿ ವಿಕಾರವು ಸಂಸಾರಕ್ಕೇ ವಿನಃ ಬ್ರಹ್ಮಕ್ಕೆ ಅಲ್ಲ.

**************************************
ಉಪನಿಷತ್ :- ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಮ್| ಆದ್ಯಂ ತ್ರಯಂ ಬ್ರಹ್ಮರೂಪಂ ಜಗದೂಪಂ ತತೋ ದ್ವಯಮ್||

ಪದವಿಭಾಗ:- ಅಸ್ತಿ ,ಭಾತಿ, ಪ್ರಿಯಂ, ರೂಪಂ ,ನಾಮ, ಚ,ಇತಿ,ಅಶಪಂಚಕಮ್,| ಆದ್ಯಂ, ತ್ರಯಂ, ಬ್ರಹ್ಮರೂಪಂ, ಜಗದೂಪಂ ,ತತೋ, ದ್ವಯಮ್,||

ಅರ್ಥ:- ಇರುವಿಕೆ,ಪ್ರಕಾಶ,ಪ್ರೇಮ ,ಬೇರೆಬೇರೆ ಆಕಾರಗಳು, ಬೇರೆಬೇರೆ ಹೆಸರುಗಳು,ವಸ್ತುವಿನ ಅಂಶಗಳಾಗಿವೆ. ಮೊದಲಿನ ಮೂರು ಬ್ರಹ್ಮದ ಸ್ವರೂಪವಾಗಿದೆ.ಕೊನೆಯ ಎರಡು ಸಂಸಾರದ ಸ್ವರೂಪವಾಗಿದೆ.

************************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

***********************************
ಉಪನಿಷತ್ :- ಉಪೇಕ್ಷ್ಯ ನಾಮರೂಪೇ ದ್ವೇ ಸಚ್ಚಿದಾನಂದ ತತ್ಪರಃ|ಸಮಾಧಿಂ ಸರ್ವದಾ ಕುರ್ಯಾತ್ ಹೃದಯೇ ವಾಥವಾ ಬಹಿಃ||

ಪದವಿಭಾಗ:- ಉಪೇಕ್ಷ್ಯ, ನಾಮರೂಪೇ, ದ್ವೇ ,ಸಚ್ಚಿದಾನಂದತತ್ಪರಃ,|ಸಮಾಧಿಂ ,ಸರ್ವದಾ, ಕುರ್ಯಾತ್, ಹೃದಯೇ, ವಾ,ಅಥವಾ, ಬಹಿಃ.

ಅರ್ಥ:- ಸಚ್ಚಿದಾನಂದಸ್ವರೂಪವನ್ನು ತಿಳಿಯಲು ಬಯಸುವ ಉಪಾಸಕರು ನಾಮಮತ್ತು ರೂಪಗಳನ್ನು ಮುಖ್ಯವೆಂದು ತಿಳಿಯದೆ,ಸಚ್ಚಿದಾನಂದ ಸ್ವರೂಪವನ್ನು ಮುಖ್ಯವೆಂದು ತಿಳಿದು ಮನಸ್ಸಿನಲ್ಲಿ ಅಥವಾ ಸಗುಣ ಮೂರ್ತಿಗಳಲ್ಲಿ ಮನಸ್ಸನ್ನು ನಿಲ್ಲಿಸಿ ಸಮಾಧಿಯನ್ನು ಹೊಂದಬೇಕು

***************************************
ಉಪನಿಷತ್ :- ಸವಿಕಲ್ಪೋ ನಿರ್ವಿಕಲ್ಪಸ್ಸಮಾಧಿರ್ದ್ವಿವಿಧೋ ಹೃದಿ| ದೃಶ್ಯ ಶಬ್ದಾವೇಧೇನಸವಿಕಲ್ಪಃ ಪುನರ್ದ್ವಿಧಾ||

ಪದವಿಭಾಗ:- ಸವಿಕಲ್ಪಃ, ನಿರ್ವಿಕಲ್ಪಃ,ಸಮಾಧಿಃ,ದ್ವಿವಿಧಃ, ಹೃದಿ| ದೃಶ್ಯ ,ಶಬ್ದಃ,ಅನುವೇಧೇನ,ಸವಿಕಲ್ಪಃ, ಪುನಃ,ದ್ವಿಧಾ||

ಅರ್ಥ:- ಸಮಾಧಿಯು ಸವಿಕಲ್ಪಮತ್ತು ನಿರ್ವಿಕಲ್ಪ ಎಂದು ಎರಡು ವಿಧವಾಗಿದೆ.ಸವಿಕಲ್ಪವು ದೃಶ್ಯ ಮತ್ತು ಶಬ್ದ ಸಹಿತವೆಂದು ಎರಡು ವಿಧವಾಗಿದೆ.

*********************************
ಉಪನಿಷತ್ :- ಕಾಮಾದ್ಯಾಃ ಚಿತ್ತಗಾ ದೃಶ್ಯಾಃ ತತ್ಸಾಕ್ಷಿತ್ವೇನ ಚೇತನಮ್|ಧ್ಯಾಯೇದ್ದೃಶ್ಯಾನುವಿದ್ಧೋ$ಯಂ ಸಮಾಧಿಸ್ಸವಿಕಲ್ಪಕಃ||

ಪದವಿಭಾಗ:- ಕಾಮಾದ್ಯಾಃ,ಚಿತ್ತಗಾ, ದೃಶ್ಯಾಃ ,ತತ್,ಸಾಕ್ಷಿತ್ವೇನ ,ಚೇತನಮ್, ಧ್ಯಾಯೇತ್,ದೃಶ್ಯಾನುವಿದ್ಧಃ, ಅಯಮ್,ಸಮಾಧಿಃ, ಸವಿಕಲ್ಪಕಃ,|

ಅರ್ಥ:- ಮನಸ್ಸಿನಲ್ಲಿ ಉಂಟಾಗುವ ಕಾಮವೇ ಮೊದಲಾದ ವೃತ್ತಿಗಳೇ ದೃಶ್ಯಗಳು, ಇವುಗಳಿಗೆ ಸಾಕ್ಷಿಯಾಗಿರುವುದು ಚೈತನ್ಯವು.ಈ ಚೈತನ್ಯದಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ದೃಶ್ಯಸವಿಕಲ್ಪಸಮಾಧಿಯು.

************************************
ಉಪನಿಷತ್ :- ಅಸಂಗಸ್ಸಚ್ಚಿದಾನಂದಸ್ಸ್ವಪ್ರಭೋ ದ್ವೈತವರ್ಜಿತಃ|ಅಸ್ಮೀತಿ ಶಬ್ದವಿದ್ಧೋ$ಯಂ ಸಮಾಧಿಃ ಸವಿಕಲ್ಪಕಃ||

ಪದವಿಭಾಗ:- ಅಸಂಗಃ, ಸಚ್ಚಿದಾನಂದಃ,ಸ್ವಪ್ರಭಃ,ದ್ವೈತವರ್ಜಿತಃ,| ಅಸ್ಮಿ,ಇತಿ, ಶಬ್ದವಿದ್ಧಃ,ಅಯಮ್,ಸಮಾಧಿಃ, ಸವಿಕಲ್ಪಕಃ

ಅರ್ಥ:- ಯಾವುದೇ ವಸ್ತುವಿನೊಡನೆ ಸಂಬಂಧವಿಲ್ಲದ,ಸಚ್ಚಿದಾನಂದಸ್ವರೂಪವಾದ , ಸ್ವಯಂಪ್ರಕಾಶವಾದ,ಎರಡನೆಯ ವಸ್ತುವಿಲ್ಲದ, ಕೇವಲ ಚೈತನ್ಯವು ನಾನಾಗಿದ್ದೇನೆ ಎಂದು ಮನಸ್ಸನ್ನು ಏಕಾಗ್ರಗೊಳಿಸುವುದು ಶಬ್ದಸವಿಕಲ್ಪಸಮಾಧಿ ಎನಿಸಿದೆ.

************************************
ಉಪನಿಷತ್ :- ಸ್ವಾನುಭೂತಿರಸಾವೆಶಾತ್ ದೃಶ್ಯಶಬ್ದಾವುಪೇಕ್ಷ್ಯತು| ನಿರ್ವಿಕಲ್ಪಸಮಾಧಿಸ್ಸ್ಯಾತ್ ನಿವಾತಸ್ಥಿತ ದೀಪವತ್||

ಪದವಿಭಾಗ:- ಸ್ವಾನುಭೂತಿರಸಾವೆಶಾತ್, ದೃಶ್ಯಶಬ್ದೌ,ಉವುಪೇಕ್ಷ್ಯತು| ನಿರ್ವಿಕಲ್ಪಸಮಾಧಿಃ,ಸ್ಯಾತ್, ನಿವಾತಸ್ಥಿತ, ದೀಪವತ್

ಅರ್ಥ:- ಸವಿಕಲ್ಪ ಸಮಾಧಿಯು ಸಿದ್ಧವಾದ ಮೇಲೆ ದೃಶ್ಯ ಮತ್ತು ಶಬ್ದಗಳನ್ನು ಮೀರಿ ನಿರ್ವಿಕಲ್ಪ ಸಮಾಧಿಯು ಉಂಟಾಗುತ್ತದೆ. ಇಲ್ಲಿ ಮನಸ್ಸು "ಗಾಳಿಯು ಬಿಸದೇ ಇರುವಾಗ ದೀಪವು ನೇರವಾಗಿರುವ ಹಾಗೆ ಮನಸ್ಸು ಏಕಾಗ್ರತೆಯನ್ನು ಹೊಂದಿರುತ್ತದೆ.

***********************************
ಉಪನಿಷತ್ :- ಹೃದಿ ವಾ ಬಾಹ್ಯದೇಶೇ$ಪಿ ಯಸ್ಮಿನ್ ಕಸ್ಮಿಂಶ್ಚ ವಸ್ತುನಿ |ಸಮಾಧಿರಾದ್ಯಸ್ಸನ್ಮಾತ್ರಾತ್ ನಾಮರೂಪ ಪ್ರೃಥಕ್ಕೃತಿಃ|ಸ್ತಬ್ಧೀಭಾವೋ ರಸಾಸ್ವಾದಾತ್ ತೃತೀಯಃ ಪೂರ್ವವನ್ಮತಃ||

ಪದವಿಭಾಗ:- ಹೃದಿ ವಾ ಬಾಹ್ಯದೇಶೇ$ಪಿ ಯಸ್ಮಿನ್ ಕಸ್ಮಿಂಶ್ಚ ವಸ್ತುನಿ |ಸಮಾಧಿರಾದ್ಯಸ್ಸನ್ಮಾತ್ರಾತ್ ನಾಮರೂಪ ಪ್ರೃಥಕ್ಕೃತಿಃ|ಸ್ತಬ್ಧೀಭಾವೋ ರಸಾಸ್ವಾದಾತ್ ತೃತೀಯಃ ಪೂರ್ವವನ್ಮತಃ||

ಅರ್ಥ:- vಅಂತರಂಗದಲ್ಲಿ ಅಥವಾ ಬಾಹ್ಯವಾದ ವಸ್ತುವಿನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಸವಿಕಲ್ಪಸಮಾಧಿ.ಈ ಸ್ಥಿತಿಯಲ್ಲಿ ಸಾಧಕನು ಕ್ರಮವಾಗಿ ನಾಮ ರೂಪಗಳನ್ನು ಚೈತನ್ಯದಿಂದ ಬೇರ್ಪಡಿಸಿ ,ಚೈತನ್ಯವನ್ನು ಮಾತ್ರ ಧ್ಯಾನಿಸುವುದು ಎರಡನೇ ಸವಿಕಲ್ಪಸಮಾಧಿ. ಸಾಧಕನು ಕೇವಲ ಚೈತನ್ಯಸ್ವರೂಪವೇ ಆಗುವುದು ನಿರ್ವಿಕಲ್ಪಸಮಾಧಿ.

*************************************
ಉಪನಿಷತ್ :- ಏತೈಃ ಸಮಾಧಿಭಿಃ ಷಡ್ಭಿಃ ನಯೇತ್ ಕಾಲಂ ನಿರಂತರಮ್||

ಪದವಿಭಾಗ:- ಏತೈಃ, ಸಮಾಧಿಭಿಃ ,ಷಡ್ಭಿಃ,ನಯೇತ್, ಕಾಲಂ, ನಿರಂತರಮ್

ಅರ್ಥ:- ಈ ಆರು ರೀತಿಯ ಸಮಾಧಿಗಳನ್ನು,ತಮ್ಮ ತಮ್ಮ ಯೋಗ್ಯಎಪ್ತೆಗೆ ಅನುಸಾರವಾಗಿ ಆಚರಿಸುತ್ತಾ ಉಪಾಸಕರು ನಿರಂತರವಾಗಿ ಮುಂದುವರೆಯ ಬೇಕು.

*********************************
ಉಪನಿಷತ್ :- vದೇಹಾಭಿಮಾನೇ ಗಲಿತೆ ವಿಜ್ಞಾತೇ ಪರಮಾತ್ಮನಿ |ಯತ್ರ ಯತ್ರ ಮನೋ ಯಾತಿ ತತ್ರತತ್ರಪರಾಮೃತಮ್

ಪದವಿಭಾಗ:- vದೇಹಾಭಿಮಾನೇ ,ಗಲಿತೆ, ವಿಜ್ಞಾತೇ, ಪರಮಾತ್ಮನಿ ,ಯತ್ರ ,ಯತ್ರ ,ಮನೋ, ಯಾತಿ, ತತ್ರ,ತತ್ರ,ಪರಾಮೃತಮ್

ಅರ್ಥ:- ಹೀಗೆ ನಿರಂತರವಾಗಿ ಸಮಾಧಿಯನ್ನು ಸಾಧಿಸುವ ಸಾಧಕನಿಗೆ ಶರೀರದಲ್ಲಿ ನಾನು,ನನ್ನದು ಎನ್ನುವ ಅಭಿಮಾನವು ಶಿಥಿಲವಾಗಿ ಕೊನೆಯಲ್ಲಿ ನಾಶವಾಗುತ್ತದೆ.ಆಗ ಜೀವಾತ್ಮ ಮತ್ತು ಪರವಾದ ಚೈತನ್ಯವು ಒಂದೆ ಎನ್ನುವ ತತ್ವಸಾಕ್ಷಾತ್ಕಾರವು ಆಗುತ್ತದೆ. ಆಗ ಮನಸ್ಸು ಯಾವ ವಿಷಯದಲ್ಲಿದ್ದರೂ ಅವೆಲ್ಲವೂ ಬ್ರಹ್ಮವೇ ಆಗುತ್ತದೆ.

**********************************
ಉಪನಿಷತ್ :- ಭಿದ್ಯತೇ ಹೃದಯ ಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ|ಕ್ಷೀಯಂತೇ ಚಾಸ್ಯ ಕ್ರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ||

ಪದವಿಭಾಗ:- ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ ಸರ್ವಸಂಶಯಾಃ | ಕ್ಷೀಯಂತೇ ಚ,ಅಸ್ಯ ಕರ್ಮಾಣಿ, ತಸ್ಮಿನ್ ,ದೃಷ್ಟೇ, ಪರಾವರೇ||

ಅರ್ಥ:- ಈ ರೀತಿಯಾಗಿ ಜೀವವೇ ಬ್ರಹ್ಮ ಎನ್ನುವ ಅಭೇದ ಜ್ಞಾನವಾದಾಗ ಸಾಧಕನ ಅವಿದ್ಯಾ ಗ್ರಂಥಿಯು ,ಎಲ್ಲಾ ಸಂಶಯಗಳೂ ನಾಶವಾಗುತ್ತವೆ.ಈ ಅದ್ವೈತ ಜ್ಞಾನದಿಂದ ಎಲ್ಲಾ ಕರ್ಮಗಳೂ ನಾಶವಾಗುತ್ತವೆ.

*********************************
ಉಪನಿಷತ್ :- ಮಯಿ ಜೀವತ್ವಮೀಶತ್ವಂ ಕಲ್ಪಿತಂ ವಸ್ತುತೋ ನಹಿ|ಇತಿ ಯಸ್ತು ವಿಜಾನಾತಿ ಸಮುಕ್ತೋ ನಾತ್ರ ಸಂಶಯಃ||

ಪದವಿಭಾಗ:- ಮಯಿ, ಜೀವತ್ವಂ,ಈಶತ್ವಂ, ಕಲ್ಪಿತಂ, ವಸ್ತುತಃ, ನಹಿ | ಇತಿ, ಯಃ,ತು, ವಿಜಾನಾತಿ, ಸಃ,ಮುಕ್ತಃ, ನ,ಅತ್ರ ,ಸಂಶಯಃ,||

ಅರ್ಥ:- ನನ್ನಲ್ಲಿ(ಸರಸ್ವತಿ) ಜೀವತ್ವವು ಮತ್ತು ಈಶ್ವರತ್ವವು ಕಲ್ಪಿತವಾಗಿದೆ.ಇವೆರಡೂ ವಸ್ತುತಃ ಇಲ್ಲ.ಈ ರೀತಿಯಾಗಿ ಯಾರು ತಿಳಿಯುತ್ತಾರೋ ಅವರು ಮುಕ್ತರಾಗುತ್ತಾರೆ. ಇದರಲ್ಲಿ ಸಂಶಯವಿಲ್ಲ.

*************************************
ಮಂಗಲ - ವಾಙ್ಮೆ ಮನಸಿ ಪ್ರತಿಷ್ಠಿತಾ |ಮನೋ ಮೇ ವಾಚಿ ಪ್ರತಿಷ್ಠಿತಂ|ಆವಿರಾವೀರ್ಮ ಏಧಿ|ವೇದಸ್ಯಮ ಆಣೀಸ್ಥಃ| ಶ್ರುತಂ ಮೆ ಮಾ ಪ್ರಹಾಸೀಃ|ಅನೇನ ಅಧೀತೇನ ಅಹೋರಾತ್ರಾನ್ ಸಂದಧಾಮಿ,|||ಋತಂ ವದಿಷ್ಯಾಮಿ |ಸತ್ಯಂ ವದಿಷ್ಯಾಮಿ | ತನ್ಮಾಮವತು|ತದ್ವಕ್ತಾರಮವತು|ಅವತು ಮಾಂ|ಅವತು ವಕ್ತಾರಂ ಅವತು ವಕ್ತಾರಂ||ಓಂ ಶಾಂತಿಃ ಶಾಂತಿಃ ಶಾಂತಿಃ||

ಪದವಿಭಾಗ - ವಾಕ್.ಮೇ, ಮನಸಿ, ಪ್ರತಿಷ್ಠಿತಾ, |ಮನಃ, ಮೇ, ವಾಚಿ, ಪ್ರತಿಷ್ಠಿತಮ್,|ಆವಿಃ,ಆವಿಃ,ಮೇ, ಏಧಿ,|ವೇದಸ್ಯ,ಮೇ, ಆಣೀಸ್ಥಃ,|ಶ್ರುತಂ, ಮೆ, ಮಾ, ಪ್ರಹಾಸೀಃ,|ಅನೇನ, ಅಧೀತೇನ, ಅಹೋರಾತ್ರಾನ್, ಸಂದಧಾಮಿ,||ಋತಂ, ವದಿಷ್ಯಾಮಿ, ಸತ್ಯಂವದಿಷ್ಯಾಮಿ ತತ್,ಮಾಮ್,ಅವತು,ತತ್,ವಕ್ತಾರಮ್,ಅವತು,ಅವತು, ಮಾಂ,|ಅವತು, ವಕ್ತಾರಂ , ಅವತು, ವಕ್ತಾರಂ,|| ಓಂ ಶಾಂತಿಃ, ಶಾಂತಿಃ,ಶಾಂತಿಃ||

ಅರ್ಥ - ನನ್ನ ಮಾತು ಮನಸ್ಸಿನಲ್ಲಿ ನೆಲಸಲಿ. ಮನಸ್ಸು ಮಾತಿನಲ್ಲಿ ನೆಲಸಲಿ.ಪ್ರಕಾಶಮಾನವಾದ ಚೈತನ್ಯವು ಮನಸ್ಸಿನಲ್ಲಿ ವೃದ್ಧಿಸಲಿ ವೇದವಾಕ್ಯಗಳಲ್ಲಿ ನಿರೂಪಿಸಿರುವ ಸೂಕ್ಷ್ಮವಾದ ವಸ್ತುವು ತಿಳಿಯುವಂತೆ ಮಾಡಿರಿ.ಕೇಳಿರುವ ವಾಕ್ಯಾರ್ಥವು ಮರೆಯದೇ ಇರಲಿ.ವಾಕ್ಯಾರ್ಥವನ್ನು ಅನುಸಂಧಾನ ಮಾಡುತ್ತಾ ಹಗಲುರಾತ್ರಿಗಳನ್ನು ಕಳೆಯುತ್ತೇನೆ. ವೇದವಾಕ್ಯಗಳಿಗೆ ಅನುಸಾರವಾಗಿ ನಿಶ್ಚಯವಾಗಿ ತಿಳಿದಿರುವದನ್ನು ಹೇಳುತ್ತೇನೆ.ಹೀಗೆ ಅರಿತಿರುವ ವಿಷಯದ ಆಚರಣೆಯನ್ನು ಹೇಳುತ್ತೇನೆ.ಬ್ರಹ್ಮವು ನನ್ನನ್ನು ರಕ್ಷಿಸಲಿ.ಗುರುವನ್ನು ರಕ್ಷಿಸಲಿ. ತಾಪತ್ರಯಗಳು ಶಾಂತವಾಗಲಿ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ