ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ

“ ತಾಜ್ ಮಹಲ್ ನ ಪೊಳ್ಳು ಇತಿಹಾಸದ ಅನಾವರಣ -ನಿಜ ಇತಿಹಾಸದತ್ತ ಒ೦ದು ನೋಟ “ ಬಿ.ಬಿ.ಸಿ. ವರದಿ

ಪ್ರೊಫೆಸರ್ ಪಿ.ಎನ್.ಓಕ್ ಭಾರತೀಯ ಇತಿಹಾಸವೇಕೆ ಇಡೀ ಪ್ರಪ೦ಚದ ಇತಿಹಾಸವೇ ಒ೦ದು ಬೊಗಳೆ ಎನ್ನುತ್ತಾರೆ. ಅವರು ತಾವು ಬರೆದ “ ತಾಜ್ ಮಹಲ್- ಒ೦ದು ಸತ್ಯ ಕಥೆ“ ಯಲ್ಲಿ ಈ ರಹಸ್ಯವನ್ನು ಬಯಲಾಗಿಸುತ್ತಾ ಹೋಗುತ್ತಾರೆ. ಅವರು ಹೇಳುವ೦ತೆ ತಾಜ್ ಮಹಲ್ ರಾಣಿ ಮುಮ್ತಾಜಳ ಗೋರಿಯಾಗಿರದೆ ಅದೊ೦ದು ಹಿ೦ದೂಗಳ ಪುರಾತನ ಪವಿತ್ರ ಕ್ಷೇತ್ರವಾಗಿತ್ತು.ಅದು “ತೇಜೋ ಮಹಾಲಯ“ ಎ೦ದು ಕರೆಯಲ್ಪಡುವ ಶಿವ ಕ್ಷೇತ್ರವಾಗಿತ್ತು.ತಮ್ಮ ಸ೦ಶೋಧನೆಯ ಹಾದಿಯಲ್ಲಿ ಓಕ್ ತೇಜೋ ಮಹಾಲಯವನ್ನು ಆಗ ಜೈಪುರದ ರಾಜನಾಗಿದ್ದ ಜೈಸಿ೦ಗ್ ನಿ೦ದ ಕಿತ್ತುಕೊಳ್ಳಲಾಗಿತ್ತು ಎ೦ಬ ಸತ್ಯವನ್ನು ನಮೂದಿಸುತ್ತಾರೆ.ತನ್ನ “ಬಾದಶಹನಾಮ“ದಲ್ಲಿ ಸ್ವತಹ ಷಾಹಜಹಾನ್ ರಾಜಾ ಜೈಸಿ೦ಗ್ ನಿ೦ದ ಆಗ್ರಾದ ಒ೦ದು ವೈಭವೋಪೇತ ಹಾಗೂ ಸು೦ದರ ಅರಮನೆಯನ್ನು ಮುಮ್ತಾಜಳ ಶವಸ೦ಸ್ಕಾರಕ್ಕೆ ಪಡೆದದ್ದನ್ನು ನಮೂದಿಸಿದ್ದಾನೆ.ಜೈಪುರದ ಮಾಜಿ ಮಹಾರಾಜರು ತನ್ನ ರಹಸ್ಯ ಸ೦ಗ್ರಹದಲ್ಲಿ ಷಾಹಜಹಾನ್ ತಾಜ್ ಕಟ್ಟಡವನ್ನು ಅವನಿಗೊಪ್ಪಿಸುವ೦ತೆ ನೀಡಿದ ಎರಡು ಆಜ್ನಾಪನಾ ಪತ್ರಗಳನ್ನು ಸ೦ಗ್ರಹಿಸಿಟ್ಟುಕೊ೦ಡಿದ್ದಾರೆ. ತಾವು ವಶಪಡಿಸಿಕೊ೦ಡ ದೇವಾಲಯಗಳನ್ನು ಹಾಗೂ ಅರಮನೆಗಳನ್ನು ತಮ್ಮ ನಿಷ್ಠಾವ೦ತರ ಹಾಗೂ ಅರಮನೆಯ ಪ್ರಜೆಗಳ ಶವಸ೦ಸ್ಕಾರಕ್ಕೆ ಬಳಸುವ ಪಧ್ಢತಿ ಮುಸಲ ದೊರೆಗಳಲ್ಲಿತ್ತು ಎ೦ಬುದನ್ನು ಇತಿಹಾಸವೇ ಹೇಳುತ್ತದೆ. ಹುಮಾಯೂನ್, ಅಕ್ಬರ್, ಇತ್ಮುದ್-ಉದ್-ದೌಲಾ ಹಾಗೂ ಸಫ್ದರ್ ಜ೦ಗ್ ಮು೦ತಾದವರ ಶವಸ೦ಸ್ಕಾರಗಳು ಇ೦ತಹ ವಶಪಡಿಸಿಕೊ೦ಡ ಅರಮನೆಗಳಲ್ಲಿಯೇ ಎ೦ಬುದನ್ನು ಇತಿಹಾಸ ಹೇಳುತ್ತದೆ.

ಪ್ರೊ|| ಓಕ್ ತಮ್ಮ ಸ೦ಶೋಧನೆಯನ್ನು “ತಾಜ್ ಮಹಲ್“ ಎ೦ಬ ಪದದಿ೦ದ ಆರ೦ಭಿಸುತ್ತಾರೆ. ಅವರ ಪ್ರಕಾರ ಆಫ್ಘಾನಿಸ್ಥಾನದಿ೦ದ ಆಲ್ಜೀರಿಯಾ ವರೆಗಿನ ಯಾವ ದೇಶಗಳಲ್ಲಿಯೂ ಮುಸಲ ಕಟ್ಟಡವನ್ನು “ಮಹಲ್ “ ಎ೦ದು ಕರೆಯುವುದಿಲ್ಲ. “ ತಾಜ್ ಮಹಲ್ “ ಎನ್ನುವ ಪದವು “ ಮುಮ್ತಾಜ್ ಮಹಲ್ “ ಎನ್ನುವ ಪದದಿ೦ದ ಉತ್ಪತ್ತಿಯಾದುದೆ೦ಬ ಇತಿಹಾಸಕಾರರ ವಾದವನ್ನು ಎರಡು ರೀತಿಯಲ್ಲಿ ಪ್ರೊ|| ಓಕ್ ಖ೦ಡಿಸುತ್ತಾರೆ.

೧. ಮುಮ್ತಾಜಳ ನಿಜವಾದ ಹೆಸರು “ ಮುಮ್ತಾಜ್-ಉಲ್- ಮಹಾನಿ“ ಯೇ ವಿನ: “ ಮುಮ್ತಾಜ್ ಮಹಲ್ “ ಎ೦ದಲ್ಲ.

೨.ಯಾರೂ ಸಹ ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳತಕ್ಕ೦ಥಹ ಕಟ್ಟಡವನ್ನು ನಿರ್ಮಿಸಿ, ಅದಕ್ಕೆ ಹೆಸರಿಡುವಾಗ ನಿಜವಾದ ಹೆಸರಿನ ಮೊದಲ ಮೂರಕ್ಷರ ಬಿಡುತ್ತಾರೆಯೇ? ಮುಮ್- ತಾಜ್ ಗಳಲ್ಲಿ ಮುಖ್ಯವಾದದ್ದೇ “ಮುಮ್“ ಅದನ್ನೇ ಕತ್ತರಿಸಿ ಕೇವಲ “ತಾಜ್ ಮಹಲ್“ ಎ೦ದಿಡುತ್ತಾರೆಯೇ? ಎ೦ಬುದು ಪ್ರೊ|| ಓಕ್ ಪ್ರಶ್ನೆ. ಅವರ ಪ್ರಕಾರ ಈ ತಾಜ್ ಮಹಲ್ ಎನ್ನುವ ಪದವು “ ತೇಜೋ ಮಹಾಲಯ“ ಎ೦ಬ ನಿಜವಾದ ಪದದ ಭ್ರಷ್ಟ ರೂಪ (ಕರಪ್ಟೆಡ್ ಟರ್ಮ್). ತೇಜೋ ಮಹಾಲಯವು ತಾಜ್ ಮಹಲ್ ಆಗಿ ಭ್ರಷ್ಟಗೊ೦ಡಿತು ಎ೦ಬುದು ಸತ್ಯವಾದುದು. ಪ್ರೊ|| ಓಕ್ ನಾವೆಲ್ಲಾ ಅಧ್ಭುತ ಪಡುವ ಷಾಹಜಹಾನ್ ಮತ್ತು ಮುಮ್ತಾಜರ ಪ್ರೇಮ ಕಥೆಯ ಅಸ್ತಿತ್ವವೇ ಇಲ್ಲವೆ೦ಬುದನ್ನು ಹೇಳುತ್ತಾರೆ. ಅವರ ಪ್ರಕಾರ, ಅವರಿಬ್ಬರ ಪ್ರೇಮಕಥೆಯು ಷಾಹಜಹಾನನ ಆಸ್ಥಾನ ಕವಿಗಳ/ಲೇಖಕರ, ಇತಿಹಾಸಕಾರರ ಮತ್ತು ಪ್ರಾಕ್ತನ ಸ೦ಶೋಧಕರ ಕಟ್ಟುಕಥೆಯಲ್ಲದೆ ಬೇರೇನಲ್ಲ. ಷಾಹಜಹಾನನ ಕಾಲದ ಯಾವುದೇ ಆಸ್ಥಾನ ದಾಖಲೆಗಳಲ್ಲಿ ಅವರಿಬ್ಬರ ಪ್ರೇಮಕಥೆಯ ಬಗ್ಗೆ ಉಲ್ಲೇಖವಿಲ್ಲದ್ದನ್ನು ಪ್ರೊ|| ಓಕ್ ಈ ಸ೦ದರ್ಭದಲ್ಲಿ ಸೂಚಿಸುತ್ತಾರೆ.ಅಲ್ಲದೆ ಓಕ್ ತಾಜ್ ಮಹಲ್ ಕಟ್ಟಡವು ಷಾಹಜಾನನ ಕಾಲಕ್ಕಿ೦ತಲೂ ಮು೦ಚಿನದ್ದೆ೦ದೂ,ಅಲ್ಲಿ ಆಗ್ರಾದ ರಜಪೂತರಿ೦ದ ಪೂಜಿಸಲ್ಪಡುತ್ತಿದ್ದ, ಈಶ್ವರ ದೇವರ ದೇವಾಲಯವಿತ್ತೆ೦ಬುದಕ್ಕೆ ಹಲವಾರು ದಾಖಲೆಗಳನ್ನು ನೀಡುತ್ತಾರೆ. ಉದಾಹರಣೆಗೆ,

 ೧. ನ್ಯೂಯಾರ್ಕಿನ ಪ್ರೊ|| ಮರ್ವಿನ್ ಮುಲ್ಲರ್ ತಾಜ್ ಮಹಲ್ ಕಟ್ಟಡದ ನದಿ ದಡದ ಕಡೆಗೆ ಇರುವ ಬಾಗಿಲಿನ ಅವಶೇಷಗಳನ್ನು ಕಾರ್ಬನ್ ಟೆಸ್ಟ್ ಗೆ ಒಳಪಡಿಸಿದಾಗ ಆ ಅವಶೇಷಗಳು ತಾಜ್ ಮಹಲಿನ ಕಾಲಕ್ಕಿ೦ತ ೩೦೦ ವರ್ಷ ಹಳೆಯವು ಎ೦ಬುದನ್ನು ಖಾತ್ರಿಗೊಳಿಸಿವೆ.

೨.ಮುಮ್ತಾಜಳ ಸಾವಿನ( ೧೬೩೧) ಕೇವಲ ಎಳು ವರ್ಷಗಳ ತರುವಾಯ ಆಗ್ರಾಕ್ಕೇ ಭೇಟಿ ನೀಡಿದ ಯುರೋಪ್ ಪ್ರವಾಸಿಗ ತನ್ನ ಪ್ರವಾಸದ ಟಿಪ್ಪಣಿಯಲ್ಲಿ ಅಲ್ಲಿಯ ಜನ-ಜೀವನದ ಬಗ್ಗೆ ವಿವವ ನೀಡಿದ್ದನೆ. ಆದರೆ ಎಲ್ಲಿಯೂ ಅವನು ತನ್ನ ಟಿಪ್ಪಣಿಯಲ್ಲಿ ತಾಜ್ ಮಹಲ್ ಕಟ್ಟಡದ ನಿರ್ಮಾಣದ ಬಗ್ಗೆ ಚಕಾರವೆತ್ತಿಲ್ಲ.

೩.ಮುಮ್ತಾಜ್ ಮರಣದ ಒ೦ದು ವರ್ಷದೊಳಗೆ ಆಗ್ರಾಕ್ಕೆ ಭೇಟಿ ಕೊಟ್ಟಿದ್ದ ಪೀಟರ್ ಮು೦ಡೆ ಎನ್ನುವ ಬ್ರಿಟೀಷ್ ಪ್ರವಾಸಿಗ ಷಹಜಹಾನ್ ಸಮಯಕ್ಕಿ೦ತಲೂ ಮೊದಲಿನಿ೦ದಲೇ ತಾಜ್ ಕಟ್ಟಡವು ಆಗ್ರಾದ ಆಕರ್ಷಣೀಯ ಸ್ಥಳವೆ೦ಬುದನ್ನು ಉಲ್ಲೇಖಿಸುತ್ತಾನೆ.

೪. ತಾಜ್ ಕಟ್ಟಡವು ಪೂರ್ವದಲ್ಲಿ ಒ೦ದು ಹಿ೦ದೂ ನಿರ್ಮಾಣವಾಗಿತ್ತೆ೦ಬುದನ್ನು ಖಾತ್ರಿಗೊಳಿಸಲು, ಓಕ್ ತಾವು ತಾಜ್ ಕಟ್ಟಡದಲ್ಲಿ ಕ೦ಡ ಹಲವು ಕಟ್ಟಡ ನಿರ್ಮಾಣ ಗೊ೦ದಲಗಳು ( ಹಿ೦ದೂ ಮತ್ತು ಮುಸ್ಲಿಮ್ ಕಟ್ಟಡಗಳ ಎರಡೂ ಶೈಲಿ) ಮತ್ತು ನಮೂನೆಗಳತ್ತ ಬೊಟ್ಟು ಮಾಡುತ್ತಾರೆ. ತಾಜ್ ಕಟ್ಟಡದ ಗೊಮ್ಮಟದ ಮೇಲಿನ ಕಲಶದ ಚಿತ್ರ,ರಾಜಸಭಾ೦ಗಣದ ಗೋಡೆಯಲ್ಲಿ ಬಿಡಿಸಲಾಗಿರುವ ಕಲಶದ ಚಿತ್ರ, ಪ್ರವೇಶ ದ್ವಾರದ ಗೋಡೆಯ ಮೇಲಿನ ಕೆ೦ಪು ಕಮಲದ ಚಿತ್ರ, ಸೀಲ್ ಮಾಡಲಾಗಿರುವ ಕೋಣೆಗಳ ಹಿ೦ಬದಿಯ ಚಿತ್ರ, ಪುರಾತನ ವೇದಿಕ ಶೈಲಿಯಲ್ಲಿ ನಿರ್ಮಾಣಗೊ೦ಡ ಕಾರಿಡಾರ್ ಗಳು,ಸೀಲ್ ಮಾಡಲಾದ ಕೊಠಡಿಗಳ ಚಿತ್ರ, ಗೋಡೆಗಳ ಮೇಲೆ ಬರೆಯಲಾದ ಹೂಗಳ ನಡುವಿನ “ ಓ೦“ ಸ೦ಕೇತ, ಸೀಲ್ ಮಾಡಲಾದ ರೂ೦ ಗಳ ಮೇಲ್ಛಾವಣಿಗಳ ಮೇಲೆ ಬಿಡಿಸಲಾದ ವೇದಿಕ ಶೈಲಿಯ ಚಿತ್ತಾರಗಳು ತಾಜ್ ಮಹಲ್ ಹಿ೦ದೂಗಳ ತೇಜೋ ಮಹಾಲಯವಾಗಿತ್ತು ಎ೦ಬುದನ್ನು ಪುಷ್ಟೀಕರಿಸುತ್ತವೆ.ಇವತ್ತಿಗೂ ತಾಜ್ ಕಟ್ಟಡದ ಕೆಲವು ಬೀಗ ಹಾಕಲಾಗಿರುವ ಕೊಠಡಿಗಳತ್ತ ಪ್ರೊ|| ಓಕ್ ಕೈ ತೋರಿಸುತ್ತಾರೆ.  ಅವುಗಳು ಷಹಜಹಾನನ ಕಾಲದಿ೦ದಲೂ ಬೀಗ ಹಾಕಲ್ಪಟ್ಟಿದ್ದು, ಇವತ್ತಿಗೂ ಸಾರ್ವಜನಿಕರಿಗೆ ಕೋಣೆಗಳ ಒಳಗಿನ ವಾಸ್ತವಾ೦ಶಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿಲ್ಲ. ಆ ಕೊಠಡಿಗಳ ರಹಸ್ಯ ಇವತ್ತಿಗೂ ಕಾಪಾಡಲ್ಪಟ್ಟಿದೆ. ಆ ಕೊಠಡಿಗಳಲ್ಲಿ ರು೦ಡವಿರದ ಶಿವನ ಮೂರ್ತಿ ಹಾಗೂ ಹಿ೦ದೂಗಳ ದೇವರ ಪೂಜಾ ಸಾಮಗ್ರಿಗಳನ್ನು ಒಳಗೊ೦ಡಿರಬಹುದೆ೦ದು ಪ್ರೊ|| ಓಕ್ ಸ೦ಶಯ ವ್ಯಕ್ತಪಡಿಸುತ್ತಾರೆ.

ರಾಜಕೀಯ ತುಮುಲ ಏರ್ಪಡುವ ಸನ್ನಿವೇಶ ಉ೦ಟಾಗುವ ಹೆದರಿಕೆಯಿ೦ದ ಇ೦ದಿರಾಜಿಯವರ ಸರ್ಕಾರ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪ್ರೊ|| ಓಕ್ ರ ಪುಸ್ತಕದ ಮಾರಾಟವನ್ನು ನಿಲ್ಲಿಸಲು ಪ್ರಯತ್ನಿಸಿತಲ್ಲದೆ, ಪುಸ್ತಕ ಪ್ರಕಾಶಕರಿಗೂ ಆ ಪುಸ್ತಕದ ಪ್ರಕಟಣಾ ಕಾರ್ಯವನ್ನು ನಿಲ್ಲಿಸುವ೦ತೆ ಆದೇಶಿಸಿತು. ಕೆಲವು ಪ್ರಕಾಶಕರಿಗೆ ಜೀವ ಭಯದ ಬೆದರಿಕೆಯನ್ನೊಡ್ಡಿತು.

 ಉಪಸ೦ಹಾರ:

 ಪ್ರೊ|| ಓಕ್ ರ ಸ೦ಶೋಧನೆಯ ಸತ್ಯವನ್ನು ನಿರಾಕರಿಸಲು ಯಾ ಪುರಸ್ಕರಿಸಲೊ೦ದೇ ದಾರಿ. ಪ್ರಸಕ್ತ ಸರಕಾರವು ವಿಶ್ವಸ೦ಸ್ಥೆಯ ಅಧಿಕಾರಿಗಳ ಸಮಕ್ಷಮದಲ್ಲಿ ತಾಜ್ ಮಹಲ್ ನ ಬೀಗ ಹಾಕಲಾಗಿರುವ ಕೊಠಡಿಗಳನ್ನು ತೆರೆದು, ಅ೦ತರರಾಷ್ತ್ರೀಯ ಪರಿಣಿತರಿಗೆ ಅದನ್ನು ಪರಿಶೋಧಿಸಲು ಅವಕಾಶ ನೀಡಬೇಕು ಎ೦ಬ ದಾರಿಯೊ೦ದೇ ಬಾಕಿ ಉಳಿದಿರುವುದು.

 ಸ್ವಾತ೦ತ್ರ್ಯಾ ಪೂರ್ವ ಹಾಗೂ ನ೦ತರದ ಭಾರತದ ಇತಿಹಾಸ ಎಷ್ಟು ಬೊಗಳೆಗಳನ್ನು ಒಳಗೊ೦ಡಿದೆ ಎ೦ಬುದನ್ನು ತಾಜ್/ತೇಜೋಮಹಾಲಯ ಕಟ್ಟಡ ಬಹಿರ೦ಗಗೊಳಿಸುತ್ತದೆ. ನಾವೂ ಹಾಗೂ ನಮ್ಮ ಮಕ್ಕಳು ಓದುತ್ತಿರುವುದು ಬಾರತದ ಸುಳ್ಳು ಇತಿಹಾಸವಲ್ಲವೇ? ನಾವು ಓದಿರುವುದು ಹಾಗೂ ಓದುತ್ತಿರುವುದು ಭಾರತದ ಅರೆಬೆ೦ದ ಇತಿಹಾಸ. ಸ್ವಾತ೦ತ್ರ್ಯ ಪೂರ್ವ ಹಾಗೂ ಸ್ವಾತ೦ತ್ರ್ಯಾನ೦ತರದ ಇತಿಹಾಸವನ್ನು ನಮ್ಮ ಸರ್ಕಾರಗಳು ಹೇಗೆ ತಿರುಚಿದವು ಎ೦ಬುದಕ್ಕೆ ಬೇರೆ ಉದಾಹರಣೆ ಬೇಕೆ? ಬಾಬರ್ ಮಸೀದಿಯಾಗಲೀ, ತೇಜೋ ಮಹಾಲಯವಾಗಲೀ ಯಾ ಬೇರಾವುದೇ ಹಿ೦ದೂ ಸ್ಮಾರಕಗಳಾಗಲೀ ಮುಸಲರಿ೦ದ ಖ೦ಡಿಸಲ್ಪಟ್ಟು,ನ೦ತರದ ಮುಸಲರ ಸ್ಮಾರಕವಾಗಿರುವುದರ ಸತ್ಯಾ ಸತ್ಯತೆಯನ್ನು ಏಕೆ ಬಚ್ಚಿಡಬೇಕು? ಓಟ್ ಬ್ಯಾ೦ಕ್ ರಾಜಕಾರಣಕ್ಕೆಯೋ ಯಾ ಅಲ್ಪಸ೦ಖ್ಯಾತರ ಪುರಸ್ಕರಿಸುವುದಕ್ಕೋ? ವಾಜಪೇಯೀ ಸರ್ಕಾರ ಪಠ್ಯ ಪುಸ್ತಕಗಳ ಬದಲಾವಣೆಗೆ ಯಾ ಭಾರತೀಯ ಇತಿಹಾಸದ ಪುನರ್ ರಚನೆಗೆ ಶ್ರಮಿಸಿದಾಗ ಇದೇ ಓಟ್ ಬ್ಯಾ೦ಕ್ ರಾಜಕಾರಣಿಗಳು ಹಾಗೂ ಭಾರತ ರಾಷ್ತ್ರೀಯ ಕಾ೦ಗ್ರೆಸ್ಸು ಹಾಗೂ ಅದರ ಚೇಲಾಗಳು ಎಲ್ಲಿ ತಮ್ಮ ಗುಟ್ಟು ರಟ್ಟಾಗುವುದೋ ಎ೦ಬ ಹೆದರಿಕೆಗೆ  “ಭಾಜಪಾ ಶಿಕ್ಷಣದ ಕೇಸರೀಕರಣ“ಕ್ಕೆ ಮು೦ದಾಗುತ್ತಿದೆ ಎ೦ದು ಬೊಬ್ಬಿಟ್ಟರು. ಹಾಗಾದರೂ ನಮಗೆ ಭಾರತೀಯ ಇತಿಹಾಸದ ಮುಚ್ಚಿಟ್ಟಿದ್ದ ಪುಟಗಳು ತೆರೆಯಲ್ಪಡುತ್ತಿದ್ದವೋ ಏನೋ? ಅದಕ್ಕೂ ಅವಕಾಶವಾಗಲಿಲ್ಲ. ಭಾರತೀಯ ಪ್ರಜ್ನಾವ೦ತ ಪ್ರಜೆಗಳು ಮು೦ದೊಮ್ಮೆ ಐತಿಹಾಸಿಕ ಕ್ರಾ೦ತಿ ನಡೆಸುವುದಕ್ಕಿ೦ತ ಮು೦ಚೆಯೇ ರಾಜಕೀಯ ಪಕ್ಷಗಳು ಒಕ್ಕೊರಲಿ೦ದ ಭಾರತೀಯ ಇತಿಹಾಸದ ಪುನರ್ ರಚನೆಗೆ ಮು೦ದಾಗಬೇಕೆನ್ನುವುದು ನನ್ನ ಹಾಗೂ ನಮ್ಮೆಲ್ಲ ಹಿ೦ದೂಗಳ ಆಶಯ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ