ಶಿವಪ್ರಾತಃಸ್ಮರಣ ಸ್ತೋತ್ರಮ್ - By Adhi Shankara Bhagawat Pada

ಪ್ರಾತಃ ಸ್ಮರಾಮಿ ಭವಭೀತಿಹರಂ ಸುರೇಶಂ |
ಗಂಗಾಧರಂ ವೃಷಭವಾರ್ಷಂ ಅಂಬಿಕೇಶಮ್ ||
ಖಟ್ವಾಂಗಶೂಲವರದಾಭಯ ಹಸ್ತಮೀಶಂ |
ಸಂಸಾರ ರೋಗಹರ ಮೌಷಧಮದ್ವಿತೀಯಮ್ ||1||
ಸಂಸಾರ ಭಯಗಳನ್ನು ನಿವಾರಿಸುವವನೂ, ದೇವತೆಗಳ ಒಡೆಯನೂ, ಗಂಗಾಧರನೂ, ನಂದಿವಾಹನನೂ, ಅಂಬಿಕೆಯ ಪತಿಯೂ, ಖಟ್ವಾಂಗ-ಶೂಲಗಳನ್ನು ಆಯುಧಗಳಾದಿ ಹೊಂದಿರುವವನೂ, ಶರಣಾಗತ ಭಕ್ತರಿಗೆ ಅಭಯಹಸ್ತದಿಂದ ವರಪ್ರದಾನ ಮಾಡುವ ಈಶ್ವರನೂ, ಭಕ್ತರ ಸಂಸಾರ ವ್ಯಾಧಿಯನ್ನು ಹೋಗಲಾಡಿಸುವ ಅದ್ವೀತಿಯ ಜೌಷಧ ರೂಪನಾಗಿರುವ ಪರಮೇಶ್ವರನನ್ನು ನಾನು ಪ್ರಾತಃಕಾಲದಲ್ಲಿ ಸ್ಮರಣೆ ಮಾಡುತ್ತೇನೆ. ||1||

ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧದೇಹಂ |
ಸರ್ಗಸ್ಥಿತಿ ಪ್ರಲಯಕಾರಣಮಾದಿ ದೇವಮ್ ||
ವಿಶ್ವೇಶ್ವರಂ ವಿಜಿತ ವಿಶ್ವಮನೋಭಿರಾಮಂ |
ಸಂಸಾರ ರೋಗಹರ ಮೌಷಧಮ ದ್ವಿತೀಯಮ್ ||2||
ಅರ್ಧನಾರೀಶ್ವರನೂ, ಕೈಲಾಸಪತಿಯೂ, ವಿಶ್ವದ ಉತ್ಪತ್ತಿ-ಸ್ಥಿತಿ-ಲಯಗಳಿಗೆ ಕಾರಣನೂ, ವಿಶ್ವೇಶ್ವರನೂ, ಮನೋಲ್ಲಾಸ ಮಾತ್ರದಿಂದ ವಿಶ್ವವಿಜೇತನಾಗಿರುವವನೂ, ಭಕ್ತರ ಸಂಸಾರ ವ್ಯಾಧಿಯನ್ನು ಹೋಗಲಾಡಿಸುವುದರಲ್ಲಿ ಅದ್ವಿತೀಯ ಜೌಷಧರೂಪನಾಗಿರುವ ಅದ್ವಿತೀಯ ಪರಮೇಶ್ವರನನ್ನು ಪ್ರಾತಃಕಾಲದಲ್ಲಿ ನಾನು ಸ್ಮರಿಸುತ್ತೇನೆ.

ಪ್ರಾತಃಭಜಾಮಿ ಶಿವಮೇಕಮನಂತಮಾಧ್ಯಂ |
ವೇದಾಂತ ವೇದ್ಯಮನಘಂ ಪುರುಷಂ ಮಹಾಂತಮ್ ||
ನಾಮಾಧಿಭೇದರಹಿತಂ ಷಡ್ಭಾವಶೂನ್ಯಂ |
ಸಂಸಾರರೋಗಹರ ಮೌಷಧ ಮದ್ವಿತೀಯಮ್ ||3||
ಅನಂತನೂ, ಆದಿ ಪುರುಷನೂ, ವೇದಾಂತದಿಂದ ಅರಿಯಲ್ಪಡುವವನೂ, ಶುದ್ಧನೂ, ಮಹತ್ ತತ್ವರೂಪನೂ, ನಾಮಾದಿಭೇದವಿಲ್ಲದವನೂ, ಷಡ್ಭಾವರಹಿತನೂ, ಸಂಸಾರವೆಂಬ ರೋಗವನ್ನು ಹೋಗಲಾಡಿಸುವುದರಲ್ಲಿ ಅದ್ವಿತೀಯ ಜೌಷಧರೂಪನಾಗಿರುವ ಶಿವನನ್ನು ನಾನು ಪ್ರಾತಃಕಾಲ ಸಮಯದಲ್ಲಿ ಭಜಿಸುತ್ತೇನೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ