|| ಶ್ರೀ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: |
ಗಾಯತ್ರೀ ಛಂದ: |
ಶ್ರೀ ಹನುಮಾನ್ ದೇವತಾ | ರಾಂ ಬೀಜಂ | ಮಂ ಶಕ್ತಿ: |ಚಂದ್ರ ಇತಿ ಕೀಲಕಂ |
ಓಂ ರೌಂ ಕವಚಾಯ ಹುಂ |ಹ್ರೌಂ ಅಸ್ತ್ರಾಯ ಫಟ್ ||
ಭಾವಾರ್ಥ:- ಪಂಚಮುಖಿ ಹನುಮಾನ್ ಕವಚ ಸ್ತೋತ್ರ ಮಹಾ ಮಂತ್ರದ ಋಷಿ ಬ್ರಹ್ಮ . ಇದು ಗಾಯತ್ರೀ ಛಂದಸ್ಸಿನಲ್ಲಿ ಇದ್ದು ಹನುಮಂತನು ಇದರ ಉಪಾಸ್ಯ ದೇವತೆ. "ರಾಂ" ಇದರ ಬೀಜಾಕ್ಷರ. "ಮಂ" ಇದರ ಶಕ್ತಿ; "ಚಂದ್ರ" ಎಂಬುದು ಇದರ ಕೀಲಕ. "ರೌಂ" ಇದರ ಕವಚ. "ಹ್ರೌಂ" ಈ ಸ್ತೋತ್ರಕ್ಕೆ ಬಾಣದ ಹಾಗೆ ಬಲ ಕೊಡುತ್ತದೆ. " ಫಟ್ "
ಇದಕ್ಕೆ ರಕ್ಷಾತ್ಮಕವಾಗಿದೆ.
ಈಶ್ವರ ಉವಾಚ
ಭಾವಾರ್ಥ :- ಈಶ್ವರನು ಪಾರ್ವತೀ ದೇವಿಗೆ ಹೇಳುವನು
ಅಥ ಧ್ಯಾನಂ ಪ್ರವಕ್ಷ್ಯಾಮಿ ಶೃಣು ಸರ್ವಾಂಗ ಸುಂದರಂ |
ಯತ್ಕೃತ್ವಾ ದೇವ ದೇವೇಶಿ ಧ್ಯಾನ: ಹನುಮತ: ಪ್ರಿಯಂ ||೧||
ಪಂಚವಕ್ತ್ರಂ ಮಹಾಬೀಮಂ ಕಪಿಯೂಥ ಸಮನ್ವಿತಂ |
ಬಾಹುಬಿರ್ದಶಭಿರ್ಯುಕ್ತಂ ಸರ್ವ ಕಾಮಾರ್ಥ ಸಿದ್ಧಿದಂ ||೨||
ಪೂರ್ವಂತು ವಾನರಂ ವಕ್ತ್ರಂ ಕೋಟಿಸೂರ್ಯ ಸಮಪ್ರಭಂ |
ದಂಷ್ಠ್ರಾಕರಾಲವದನಂ ಭ್ರುಕುಟೀ ಕುಟಿಲೇಕ್ಷಣಂ ||೩||
ಅಸ್ಯೈವ ದಕ್ಷಿಣಂ ವಕ್ತ್ರಂ ನಾರಸಿಂಹ ಮಹಾದ್ಭುತಂ |
ಅತ್ಯುಗ್ರ ತೇಜೋವಪುಷಂ ಭೀಷಣಂ ಭಯನಾಶನಂ ||೪||
ಪಶ್ಚಿಮೇ ಗಾರುಡಂ ವಕ್ತ್ರಂ ವಕ್ರತುಂಡಂ ಮಹಾಬಲಂ |
ಸರ್ವನಾಶಪ್ರಶಮನಂ ಸರ್ವಭೂತಾದಿ ಕೃಂತನಂ ||೫||
ಉತ್ತರೇ ಸೌಕರಂ ವಕ್ತ್ರಂ ಕೃಷ್ಣ ದೀಪನಭೋಮಯಂ |
ಪಾತಾಲೇ ಸಿದ್ದಿವೇತಾಲಂ ಜ್ವರರೋಗಾದಿ ಕೃಂತನಂ ||೬||
ಊರ್ಧ್ವಂ ಹಯಾನನಂ ಘೋರಂ ದಾನವಾಂತ ಕರಂ ಪರಂ |
ಏನ ವಕ್ತ್ರೇಣ ವಿಪ್ರೇಂದ್ರ ತಾಟಕಾಯ ಮಹಾಹವೇ ||೭||
ದುರ್ಗತೇಶ್ಶರಣಂ ತಸ್ಯ ಸರ್ವಶತ್ರುಹರಂ ಪರಂ |
ಧ್ಯಾತ್ವಾ ಪಂಚಮುಖಂ ರುದ್ರಂ ಹನುಮಂತಂ ದಯಾನಿಧಿಂ ||೮||
ಖಡ್ಗಂ ತ್ರಿಶೂಲಂ ಖಟ್ವಾಂಗಂ ಪಾಶಮಂಕುಶಪರ್ವತಂ |
ಮುಷ್ಟೌಚ ಮೋದಕೌ ವೃಕ್ಷಂ ಧಾರಯಂತಂ ಕಮಂಡಲುಂ ||೯||
ಭಿಂದಿ ಪಾಲಂ ಜ್ಞಾನಮುದ್ರಾಂ ದಶಮಂ ಪುನಿಪುಂಗವ |
ಏತಾನ್ಯಾಯುಧ ಜಾಲಾನಿ ಧಾರಯಂ ತಂ ಭಯಾವಹಂ ||೧೦||
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ |
ಸರ್ವೈಶ್ವರ್ಯಮಯಂ ದೇವಂ ಹನುಮದ್ವಿಶ್ವತೋ ಮುಖಂ ||೧೧||
ಪಂಚಾಸ್ಯಮಚ್ಯುತಮನೇತ ವಿಚಿತ್ರವರ್ಣಂ |
ವಕ್ತ್ರಂ ಸಶಂಖ ವಿಭೃತಂ ಕವಿರಾಜ ವೀರ್ಯಂ ||
ಪೀತಾಂಬರಾದಿ ಮುಕುಟೈರಪಿ ಶೋಭಿತಾಂಗಂ |
ಪಿಂಗಾಕ್ಷಮಂಜನಾಸುತಂ ಹ್ಯನಿಶಂ ಸ್ಮರಾಮಿ ||೧೨||
ಮರ್ಕಟಸ್ಯ ಮಹೋತ್ಸಾಹಂ ಸರ್ವ ಶೋಕವಿನಾಶನಂ |
ಶತೃ ಸಂಹಾರಕಂ ಚೈತಕ್ ಕವಚಂ ಹ್ಯಾಪದಂ ಚರೇತ್ ||೧೩||
||ಓಂ ಹರಿ ಮರ್ಕಟ ಮರ್ಕಟಾಯ ಫಟ್ ಸ್ವಾಹಾ||
ಓಂ ನಮೋ ಭಗವತೇ ಪಂಚವದನಾಯ
ಪೂರ್ವ ಕಪಿಮುಖಾಯ ಸಕಲ ಶತೃ ಸಂಹರಣಾಯ ಫಟ್ ಸ್ವಾಹಾ ||೧೪||
ಓಂ ನಮೋ ಭಗವತೇ ಪಂಚವದನಾಯ
ಉತ್ತರ ಮುಖಾಯ ಆದಿವರಾಹಾಯ
ಸಕಲ ಸಂಪತ್ಕರಾಯ ಫಟ್ ಸ್ವಾಹಾ ||೧೫||
ಓಂ ನಮೋ ಭಗವತೇ ಪಂಚವದನಾಯ
ಊರ್ಧ್ವಮುಖಾಯ ಹಯಗ್ರೀವಾಯ ಕಲಿಜನ ವಶ್ಯಕರಾಯ ಫಟ್ ಸ್ವಾಹಾ ||೧೬||
|| ಇತಿ ಶ್ರೀ ಸುದರ್ಶನ ಸಂಹಿತಾಯಾಂ ಚಿಂತಾಮಣಿ ರಾಮಭದ್ರ ಅಧ್ಯಾಯೇ ಪಂಚಮುಖಿ ಹನುಮಾನ್ ಕವಚ ಸ್ತೋತ್ರಂ ||
ಶ್ಲೋಕಗಳ ಭಾವಾರ್ಥ:- ಪಂಚಮುಖಿ ಹನುಮಂತಂಗೆ ೫ ಮುಖಗಳು ೧೦ ತೋಳುಗಳೂ ಇದ್ದು ಭಕ್ತಾದಿಗಳಿಗೆ ಅನುಗ್ರಹ ನೀಡುವ ರೂಪದಲ್ಲಿ ಇದ್ದು. ಪೂರ್ವ ದಿಕ್ಕಿನಲ್ಲಿ ಮಂಗನ ಮುಖವೂ ; ದಕ್ಷಿಣ ದಿಕ್ಕಿನಲ್ಲಿ ನರಸಿಂಹ ದೇವರ ಮುಖವೂ ; ತೇಜೋಮಯವಾಗಿ ಇದ್ದು. ಪಶ್ಚಿಮ ದಿಕ್ಕಿನಲ್ಲಿ ಗರುಡನ ಮುಖವೂ ; ಉತ್ತರ ದಿಕ್ಕಿನಲ್ಲಿ ಹಂದಿಯ ಮುಖವೂ ಇದ್ದು ನಾಗ ಭೇತಾಳಾದಿ ದುಷ್ಟ ಶಕ್ತಿಗಳನ್ನು ನಾಶ ಪಡಿಸುತ್ತಿದೆ. ಊರ್ಧ್ವ ಮುಖವು [ಮೇಲ್ಮೊಗ] ಕುದುರೆಯ ಮುಖವನ್ನು ಹೋಲುತ್ತಿದ್ದು ದೈತ್ಯ ಶಕ್ತಿಯನ್ನು ನಾಶ ಮಾಡುವ ಶಕ್ತಿ ಹೊಂದಿರುತ್ತದೆ. ಈ ರೀತಿಯಾಗಿರುವಂತಹಾ ದಯಾನಿಧಿಯೂ ದು:ಖ ನಿವಾರಕನೂ ಆಗಿರುವ ಪಂಚ ಮುಖಿ ಹನುಮನನ್ನು ಸ್ಮರಣೆ ಮಾಡಬೇಕು
ಹನುಮಂತನ ಕೈಗಳಲ್ಲಿ ಕತ್ತಿ , ತ್ರಿಶೂಲ , ಪಾಶ , ಮಂಚದ ಕಾಲುಗಳನ್ನು ಹೋಲುವ ಆಯುಧ ,ಅಂಕುಶ , ಬಂಡೆ, ಮೋದಕಂಗಳು ,ಮರ ,ಕಮಂಡಲು ,ಭಿಂದಿ ,ಹಾಗೂ ಜ್ಞಾನಮುದ್ರೆಯೂ ಇದ್ದು. ಈರೀತಿಯಾಗಿರುವ ಹನುಮಂತ ದಿವ್ಯ ಮಂದಾರ ಹೂವಿನ ಮಾಲೆಯನ್ನು ಧರಿಸಿ ಸರ್ವ ಐಶ್ವರ್ಯವನ್ನು ದಯಪಾಲಿಸುವವನಾಗಿರುವನು. ಅಂತಹಾ ಪಂಚವದನ ;ಪಂಚ ವರ್ಣ, ಪೀತಾಂಬರ, ಕಿರೀಟಾದಿಗಳಿಂದ ಶೃಂಗಾರವಾಗಿರುವ ಆಂಜನೇಯ ಸ್ವಾಮಿಯನ್ನು ನಾನು ಧ್ಯಾನಿಸುತ್ತೇನೆ. ಕಪಿ ಸೈನ್ಯಕ್ಕೆ ಉತ್ಸಾಹವದಾಯಕನೂ ; ಎಲ್ಲಾ ಸಂಕಷ್ಟಗಳ ವಿನಾಶಕನೂ , ಶತೃ ಸಂಹಾರಕಾರಕನೂ ಆಗಿರುವ ಹನಮಂತನ ಕವಚ ಆಪತ್ ನಾಶಕವಾಗಿ ಚೈತನ್ಯವನ್ನು ಕೊಡುತ್ತದೆ. ಕಪಿರೂಪದ ಹನುಮಂತನ ನಾಮಸ್ಮರಣೆಯು ಜಪಯಜ್ಞದ ಸ್ವಾಹಾಕಾರವಾಗಿದ್ದು ಐದು ಮುಖಗಳನ್ನು ಹೊಂದಿ ಪೂರ್ವ ದಿಕ್ಕಿನ ಕಪಿ ಮೊಗವು ಶತೃ ಸಂಹಾರಕವಾಗಿದ್ದು. ಉತ್ತರದಿಕ್ಕಿನ ಹಂದಿಯ ಮೊಗದ ಹನುಮಂತನ ನಾಮ ಸ್ಮರಣೆ ಸರ್ವ ಸಂಪತ್ಪ್ರದಾಯಕವಾಗಿದ್ದು. ಐದು ಮೊಗಗಳನ್ನು ಹೊಂದಿ ಮೇಲ್ಮೊಗನಾಗಿರುವ ಸಕಲ ಜನ ವಶೀಕರಣ ಶಕ್ತಿಯ ಅನುಗ್ರಹಿಸುವ ಹನುಮಂತನಿಗೆ ಸ್ವಾಹಾಕಾರ ಸಹಿತವಾಗಿ ನಮಸ್ಕಾರಗಳು.
Comments
Post a Comment