ಮಾಘಮಾಸ

    ಇದರಲ್ಲಿ ಕುಂಭಸಂಕ್ರಾಂತಿ ಹಿಂದೆ ಹದಿನಾರು ಘಟಿಗಳು ಪುಣ್ಯಕಾಲವು ಮಾಘದಲ್ಲಿ "ವೇಣೀಸ್ನಾನ"ಕ್ಕೆ ವಿಶೇಷ ಮಹತ್ವವಿದೆ. ಪುರಾಣದಲ್ಲಿ ಹೇಳಿರುವದೇನೆಂದರೆ "ಮಾಘಮಾಸದಲ್ಲಿ ಗಂಗಾ, ಯಮುನೆಗಳಲ್ಲಿ ಸ್ನಾನಮಾಡುವದರಿಮದ ನೂರಾರು ಕೋಟಿವರ್ಷಪರ್ಯಂತ ಪುನರಾವರ್ತಿಯಿಲ್ಲ. ಎಲ್ಲೆಡೆಯಲ್ಲಾದರೂ ಗಂಗಾಸ್ನಾನಮಾಡಿದರೆ ಕುರುಕ್ಷೇತ್ರದ ಪುಣ್ಯವು ಲಭಿಸುವದು. ವಿಂಧ್ಯದಲ್ಲಿ ಅದರ ಹತ್ತುಪಟ್ಟು ಪುಣ್ಯವು, ಕಾಶಿಯಲ್ಲಿ ನೂರುಪಟ್ಟು, ಗಂಗಾ-ಯಮುನಾ ಸಂಗಮದಲ್ಲಿ ಕಾಶಿಗಿಂತ ನೂರುಪಟ್ಟು ಹೆಚ್ಚು, ಪಶ್ಚಿಮವಾಹಿನಿಯಲ್ಲಿ ಸ್ನಾನಮಾಡಿದರೆ ಅದಕ್ಕಿಂತ ಸಾವಿರಪಟ್ಟು ಹೆಚ್ಚು ಪುಣ್ಯವು." ಎಂದು ಪುರಾಣವಚನವಿದೆ. ಮಾಘದಲ್ಲಿ ತಿಲಪಾತ್ರದಾನವು ಪ್ರಶಸ್ತವು ಅದರ ಪ್ರಯೋಗ ಹೀಗಿದೆ :- ಹದಿನಾರು ಪಲತೂಕದ ತಾಮ್ರದ ಪಾತ್ರೆಯಲ್ಲಿ ತಿಲಗಳನ್ನಿಟ್ಟು ತನ್ನ ಶಕ್ತ್ಯನುಸಾರ ಹಿರಣ್ಯವನ್ನಿರಿಸಿ ಬ್ರಾಹ್ಮಣನಿಗೆ ದಾನಮಾಡತಕ್ಕದ್ದು. "ವಾಙ್ಮನಃಕಾಯಜ ತ್ರಿವಿಧ ಪಾಪನಾಶನಪೂರ್ವಕಂ ಬ್ರಹ್ಮಲೋಕ ಪ್ರಾಪ್ತಿಕಾಮಃ ತಿಲಪಾತ್ರದಾನಂ ಕರಿಷ್ಯೇ" ಹೀಗೆ ಸಂಕಲ್ಪಿಸಿ ಹೇಳಿದ ಪರಿಮಾಣದ ತಾಮ್ರಪಾತ್ರೆಯಲ್ಲಿ ಕರ್ಷಪರಿಮಾಣದ ಸುವರ್ಣ, ಪ್ರಸ್ಥಪರಿಮಾಣದ ಎಳ್ಳುಗಳನ್ನಿಟ್ಟು ಅಥವಾ ಯಥಾಶಕ್ತಿ ಸುವರ್ಣವನ್ನಿಟ್ಟು ಬ್ರಾಹ್ಮಣನನ್ನು ಪೂಜಿಸಿ "ದೇವದೇವ ಜಗನ್ನಾಥ ವಾಂಛಿತಾರ್ಥ ಫಲಪ್ರದಃ ತಿಲಪಾತ್ರಂ ಪ್ರದಾಸ್ಯಾಮಿ ತವಾಗ್ರೇ ಸಂಸ್ಥಿತೋಹ್ಯ ಹಂ||" ಈ ಮಂತ್ರದಿಂದ ದಾನಮಾಡತಕ್ಕದ್ದು.

ತಿಲಸ್ನಾನಾದಿಗಳು
    'ತಿಲಸ್ನಾಯೀ ತಿಲೋದ್ವರ್ತೀ ತಲೋದಕೀ | ತಿಲಭುಕ್ ತಿಲದಾತಾ ಚ ಷಟ್‌ತಿಲಾಃ ಪಾಪನಾಶನಾಃ ||' ಇತ್ಯಾದಿ ವಚನಗಳಂತೆ 'ತಿಲಸ್ನಾಯೀ' ಎಂದರೆ ತಿಲಯುಕ್ತವಾದ ಜಲದಿಂದ ಸ್ನಾನ, 'ತಿಲೋದ್ವರ್ತೀ' ಎಂದರೆ ತಿಲಕಲ್ಕದಿಂದ ಮೈಗೆ ಲೇಪಿಸಿಕೊಳ್ಳುವದು. 'ತಿಲಹೋಮಿ' ಅಂದರೆ ಹತ್ತು ಲಕ್ಷ ಅಥವಾ ಲಕ್ಷತಿಲಹೋಮಾತ್ಮಕವಾದ ಗ್ರಹಯಜ್ಞ ಮಾಡುವದು 'ತಿಲೋದಕೀ' ಎಂದರೆ ತಿಲಯುಕ್ತವಾದ ಜಲದಿಂದ ದೇವತಾಪೂಜಾ, ತರ್ಪಣ, ಸಂಧ್ಯಾವಂದನ, ಪಾನ ಇತ್ಯಾದಿ "ತಿಲಭುಕ್" ಅಂದರೆ ತಿಲವನ್ನು ತಿನ್ನುವದು. "ತಿಲದಾತಾ" ಅಂದರೆ ತಿಲದಾನ ಮಾಡುವದು ಹೀಗೆ ತಿಲಗಳ ಆರು ವಿನಿಯೋಗಗಳಿಂದ ಸಕಲ ಪಾಪಗಳೂ ನಾಶವಾಗುವವು ತಿಲಹೋಮ ವಿಷಯದಲ್ಲಿ ಹತ್ತುಸಾವಿರ ಹೋಮ, ಲಕ್ಷಹೋಮ, ಕೋಟಿಹೋಮ ಹೀಗೆ ಹೋಮವು ಮೂರುವಿಧವಾದದ್ದು ಇದು ಸರ್ವಕಾಮಫಲವನ್ನು ಕೊಡತಕ್ಕದ್ದು ಇದರ ಕುಂಡಮಂಟಪ ನಿರ್ಮಾಣ ಹಾಗೂ ಲಕ್ಷಹೋಮಾದಿ ಪ್ರಯೋಗಗಳನ್ನು ಕೌಸ್ತುಭ-ಮಯೂಖಾದಿ ಗ್ರಂಥಗಳಲ್ಲಿ ನೋಡತಕ್ಕದ್ದು.
    ಮಾಘಶುಕ್ಲ ಚತುರ್ಥಿಯಲ್ಲಿ ಢುಂಢೀರಾಜ ಗಣಪತಿಯ ಉದ್ದಿಶ್ಯ ನಕ್ತವ್ರತ, ಹಾಗೂ ಪೂಜಾ, ತಿಲಲಡ್ಡುಕಾದಿ ನೈವೇದ್ಯ, ತಿಲಭಕ್ಷಣ ಇತ್ಯಾದಿಗಳನ್ನು ಹೇಳಿದೆ. ಇದು ಪ್ರದೋಷವ್ಯಾಪಿನಿಯಾದದ್ದು ಗ್ರಾಹ್ಯವು ಇದರಲ್ಲಿ ಮಾಗಿಮಲ್ಲಿಗೆ ಪುಷ್ಪಗಳಿಂದ ಶಿವನನ್ನು ಪೂಜಿಸಿ ಉಪವಾಸ ಅಥವಾ ನಕ್ತಭೋಜನ ಮಾಡತಕ್ಕದ್ದು ಅದರಿಂದ ಐಶ್ವರ್ಯಪ್ರಾಪ್ತಿಯಾಗುವದು. ಈ ವಿನಾಯಕ ವ್ರತದ ನಿರ್ಣಯವನ್ನು ಭಾದ್ರಪದ ಶುಕ್ಲ ಚತುರ್ಥಿಯಂತೆಯೇ ತಿಳಿಯತಕ್ಕದ್ದು.
    ಮಾಘ ಶುಕ್ಲ ಪಂಚಮಿಯು ವಸಂತ ಪಂಚಮಿಯ ಅದರಲ್ಲಿ ವಸಂತೋತ್ಸವ ಪ್ರಾರಂಭವು ಇದರಲ್ಲಿ ರತಿ ಕಾಮರ ಪೂಜೆಯನ್ನು ಹೇಳಿದೆ ಪರದಿನ ಪೂರ್ವಾಹ್ಣವ್ಯಾಪ್ತಿಯಿದ್ದರೆ ಅದೇ ಗ್ರಾಹ್ಯವು ಇಲ್ಲವಾದರೆ ಪೂರ್ವದಿನವು ಗ್ರಾಹ್ಯವು.
    ಮಾಘಶುಕ್ಲ ಸಪ್ತಮಿಯು ರಥಸಪ್ತಮಿಯು ಅದು ಅರುಣೋದಯವ್ಯಾಪ್ತಿಯಿದ್ದದ್ದು ಗ್ರಾಹ್ಯವು ಎರಡು ದಿನ ಅರುಣೋದಯ ವ್ಯಾಪ್ತಿಯಿದ್ದರೆ ಪೂರ್ವವೂ ಗ್ರಾಹ್ಯವು ಘಟಿಕಾದಿಮಾತ್ರವಿದ್ದ ಷಷ್ಠಿಯಲ್ಲಿ ಸಪ್ತಮಿಯು ಕ್ಷಯ (ಉಪರಿ)ವಾಗಿ ಪರದಲ್ಲಿ ಅರುಣೋದಯವನ್ನು ವ್ಯಾಪಿಸಿರದಿದ್ದರೆ ಆಗ ಷಷ್ಠೀಯುತವಾದದ್ದು ಗ್ರಾಹ್ಯವು ಷಷ್ಠಿಯಲ್ಲಿ ಸಪ್ತಮೀ ಕ್ಷಯಘಟಿಗಳ ಸ್ಪರ್ಶವಿರುವ ಅರುಣೋದಯದಲ್ಲಿ "ಸ್ನಾನ"ವು "ಯದಾಜನ್ಮಕೃತಂಪಾಪಂ ಮಯಾಜನ್ಮ ಸುಜನ್ಮಸು | ತನ್ಮೇರೋಗಂ ಚ ಶೋಕಂಚ ಮಾಕರೀ ಹಂತು ಸಪ್ತಮೀ || ಏತಜ್ಜನ್ಮಕೃತಂಪಾಪಂ ಯಚ್ಚಜನ್ಮಾಂತರಾರ್ಜಿತಂ | ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇಚಯೇಪುನಃ || ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಕೇ | ಸಪ್ತವ್ಯಾಧಿ ಸಮಾಯುಕ್ತಂ ಹರಮಾಕರಿ ಹರಮಾ ಸಪ್ತಮಿ||" ಇದು ಸ್ನಾನದ ಮಂತ್ರವು ಇನ್ನು ಅರ್ಘ್ಯಮಂತ್ರ :- "ಸುಪ್ತಸಪ್ತಿವಹಪ್ರೀತ ಸಪ್ತಲೋಕ ಪ್ರದೀಪನ | ಸಪ್ತಮೀ ಸಹಿತೋದೇವ ಗೃಹಾಣಾರ್ಘ್ಯ ದಿವಾಕರ|| ಹೀಗೆ ಹೇಳಿ ಅರ್ಘ್ಯವನ್ನು ಕೊಡುವದು ಈ ಸಪ್ತಮಿಯ "ಮನ್ವಾದಿ"ಯು ಈ "ಮನ್ವಾದಿ"ಯ ಶುಕ್ಲ ಪಕ್ಷದ್ದಾದುದರಿಂದ ಪೂರ್ವಾಹ್ಣವ್ಯಾಪಿನಿಯಾದದ್ದು ಗ್ರಾಹ್ಯವು.

    ಮಾಘಶುಕ್ಲ ಅಷ್ಟಮಿಯು "ಭೀಷ್ಮಾಷ್ಟಮೀ" ಈ ಭೀಷ್ಮಾಷ್ಟಮಿಯಲ್ಲಿ ಭೀಷ್ಮನ ಉದ್ದೇಶದಿಂದ ಶ್ರಾದ್ಧಮಾಡಿದವರಿಗೆ ಸಂತತಿ ಪ್ರಾಪ್ತಿಯಾಗುವದು. ಈ ಶ್ರಾದ್ಧವು "ಕಾಮ್ಯ"ವು ತರ್ಪಣಮಾತ್ರ "ನಿತ್ಯ"ವು ತರ್ಪಣಮಾಡಿದಲ್ಲಿ ಇಡೀವರ್ಷದಲ್ಲಿ ಮಾಡಿದ ಪಾಪವು ಪರಿಹಾರವಾಗುವದು ಮಾಡದಿದ್ದರೆ ಪುಣ್ಯನಾಶವು; ಎಂದು ಹೇಳಿದೆ. "ವೈಯ್ಯಾಘ್ರ ಪದ್ಮ ಗೋತ್ರಾಯ ಸಾಂಕೃತ್ಯ ಪ್ರವರಾಯಚ | ಗಂಗಾಪುತ್ರಾಯ ಭೀಷ್ಮಾಯ ಆಜನ್ಮ ಬ್ರಹ್ಮಚಾರಿಣೇ || ಅಪುತ್ರಾಯಜಲಂ ದದ್ಮಿ ನಮೋಭೀಷ್ಮಾಯ ವರ್ಮಣೇ | ಭೀಷ್ಮಃಶಾಂತನವೋವೀರಃ ಸತ್ಯವಾದೀ ಜಿತೇಂದ್ರಿಯಃ || ಆಭಿರದ್ಭಿವಾಪ್ನೋತು ಪುತ್ರಪೌತ್ರೋಚಿತಾಂಕ್ರಿಯಾಂ|" ಈ ಮಂತ್ರದಿಂದ ಅಪಸವ್ಯವಾಗಿ ತರ್ಪಣ ಮಾಡಿ ಆಚಮನಮಾಡಿ ಸವ್ಯದಿಂದ ಅರ್ಘ್ಯವನ್ನು ಕೊಡತಕ್ಕದ್ದು "ವಸೂನಾಮವತಾರಾಯ ಶಂತನೋರಾತ್ಮಜಾಯಚ | ಅರ್ಘ್ಯಂದದಾಮಿ ಭೀಷ್ಮಾಯ ಆಬಾಲ್ಯ ಬ್ರಹ್ಮಚಾರಿಣೇ ||" ಇದು ಅರ್ಘ್ಯಮಂತ್ರವು ಇದರಲ್ಲಿ ಜೀವತ್ಪಿತೃಕನಿಗೆ ಅಧಿಕಾರವಿಲ್ಲೆಂದು ಕೌಸ್ತುಭ ಮತವು ಅಧಿಕಾರವುಂಟೆಂದು ಬಹುಸಮ್ಮತವು ಇದರಲ್ಲಿ ಶ್ರಾದ್ಧಾದಿಗಳು ಏಕೋದ್ದಿಷ್ಟವಾದುದರಿಂದ ಈ ಅಷ್ಟಮಿಯನ್ನು ಮಧ್ಯಾಹ್ನವ್ಯಾಪಿನಿಯಾದದ್ದನ್ನು ಸ್ವೀಕರಿಸತಕ್ಕದ್ದು.

    ಮಾಘ ಶುಕ್ಲ ದ್ವಾದಶಿಯಲ್ಲಿ "ತಿಲೋತ್ಪತ್ತಿ"ಯು ಇದರಲ್ಲಿ ಉಪವಾಸ, ತಿಲಸ್ನಾನ, ತಿಲಗಳಿಂದ ವಿಷ್ಣುಪೂಜೆ, ತಿಲನೈವೇದ್ಯ, ತಿಲತೈಲದಿಂದ ದೀಪಹಚ್ಚುವದು, ತಿಲಹೋಮ, ತಿಲದಾನ ಇವುಗಳನ್ನು ಹೇಳಿದೆ.
    "ಮಾಘ ಪೂರ್ಣಿಮೆ" ಪರಿವಿದ್ಧವಾದದ್ದು ಗ್ರಾಹ್ಯವು ಇದರಲ್ಲಿ ಕೆಲ ಕೃತ್ಯಗಳನ್ನು ಹೇಳಿದೆ. "ಮಾಘವಸಾನ"ದಲ್ಲಿ ಯಥೇಷ್ಟ ಭೋಜನ ಮಾಡಿಸತಕ್ಕದ್ದು. ಬ್ರಾಹ್ಮಣ ದಂಪತಿಗಳನ್ನು ವಸ್ತ್ರಾದಿಗಳಿಂದಲೂ ಭೋಜನದಿಂದಲೂ ತೃಪ್ತಿ ಪಡಿಸತಕ್ಕದ್ದು. ಕಂಬಳಿ, ಅಜಿನ, ಕೆಂಪುವಸ್ತರ, ಹತ್ತಿಯ ನೂಲಿನ ರವಿಕೆ, ಅಂಗಿ, ಪಾದರಕ್ಷೆ, ಹೊದೆಯುವ ಚಾದರ ಇತ್ಯಾದಿಗಳನ್ನೆಲ್ಲ "ಮಾಧವಃ ಪ್ರೀತಾಂ" ಹೀಗೆ ಹೇಳಿ ದಾನಮಾಡತಕ್ಕದ್ದು. "ಕೃತಸ್ಯ ಮಾಘಸ್ನಾನಸ್ಯ ಸಾಂಗತಾರ್ಥಂ ಉದ್ಯಾಪನಂ ಕರಿಷ್ಯೇ" ಹೀಗೆ ಸಂಕಲ್ಪಿಸಿ "ಸವಿತ್ರೇ ಪ್ರಸವಿತ್ರೇಚ ಪರಂಧಾಮ ಜಲೇಮಮ| ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ|| ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ | ಪರಿಪೂರ್ಣಂ ಕರಿಷ್ಯೇ ಹಂ ಮಾಘಸ್ನಾನಂ ತವಾಜ್ಞಯಾ||" ಈ ಮಂತ್ರಗಳನ್ನೂ ಸಂಕಲ್ಪದಲ್ಲಿಯೇ ಹೇಳತಕ್ಕದ್ದು ಚತುರ್ದಶಿಯಲ್ಲಿ ಸಂಕಲ್ಪ, ಉಪವಾಸ, ಅಧಿವಾಸ, ಮಾಧವ ಪೂಜನ ಇವುಗಳನ್ನು ಮಾಡಿ, ಹುಣ್ಣಿವೆಯಲ್ಲಿ ತಿಲ, ಚರು, ಆಜ್ಯಗಳಿಂದ ಅಷ್ಟೋತ್ರ ಶತಹೋಮವನ್ನು ಮಾಡಿ, ಎಳ್ಳು-ಸಕ್ಕರೆಗಳನ್ನು ಮಿಶ್ರಮಾಡಿದ ಮೂವತ್ತು ಮೋದಕಗಳನ್ನಿಟ್ಟು ವಾಯನದಾನ ಮಾಡತಕ್ಕದ್ದು ಅದಕ್ಕೆ ಈ ಮುಂದೆ ಬರೆದಂತೆ ಮಂತ್ರಗಳು :- "ಸವಿತ ಪ್ರಸವಸ್ತ್ವಂಹಿ ಪರಂಧಾಮ ಜಲೇಮಮ | ತೃತ್ತೇಜಸಾ ಪರಿಭ್ರಷ್ಟಂ ಪಾಪಂಯಾತು ಸಹಸ್ರಧಾ || ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ | ಪರಿಪೂರ್ಣಂ ಕುರುಷ್ವೇಹ ಮಾಘಸ್ನಾನಮುಷಃ ಪತೇ ||" ಇವೇ ಆ ಮಂತ್ರಗಳು ಆ ಮೇಲೆ ದಂಪತಿಗಳಿಗೆ ಸೂಕ್ಷ್ಮವಸ್ತ್ರಗಳನ್ನೂ ಸಪ್ತಧಾನ್ಯಗಳನ್ನು ಕೊಟ್ಟು ಬ್ರಾಹ್ಮಣದಂಪತಿಗಳಿಗೆ ಷಡ್ರಸಾನ್ನ ಭೋಜನ ಮಾಡಿಸುವದು (ಮಂತ್ರ) "ಸೂರ್ಯೋಮೇಪ್ರೀಯತಾಂದೇವೋ ವಿಷ್ಣುಮೂರ್ತಿರ್ನಿರಂಜನಃ" ಈ ಮಂತ್ರದಿಂದ ಪ್ರಾರ್ಥಿಸುವದು. "ಮಾಘಸ್ನಾನ ಮಾಡಿದವನೂ, ಯೋಗಯುಕ್ತನಾದ ಸಂನ್ಯಾಸಿಯೂ, ರಣರಂಗದಲ್ಲಿ ಮಡಿದವನೂ ರವಿಮಂಡಲವನ್ನು ಭೇದಿಸಿ ಬ್ರಹ್ಮಲೋಕಾದಿಗಳಿಗೆ ಹೋಗುವನು "ಹೀಗೆ ವಚನವಿದೆ" ಚತುರಷ್ಟಕಾ ಶ್ರಾದ್ಧಸಹಿತವಾದ "ಏಕಾಷ್ಟಕಾ ಶ್ರಾದ್ಧ"ವನ್ನು ಮಾಡತಕ್ಕದ್‌ದು ಇದನ್ನು ಮೂರುದಿನ ಮಾಡಲಾಗದಿದ್ದರೆ ಅಷ್ಟಮಿಯಲ್ಲಿ ಅಷ್ಟಕಾ ಶ್ರಾದ್ಧವನ್ನೊಂದನ್ನಾದರೂ ಮಾಡತಕ್ಕದ್ದು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ