ಅಗ್ನಿಹೋತ್ರ
ವೇದೋಕ್ತವಾದ ಯಜ್ಞಗಳಲ್ಲಿ ಅಗ್ನಿಹೋತ್ರವು ಬಹು ಸಣ್ಣದು
ಅಧಿಕಾರಿಯಾದ ಪುರುಷನು ವಿವಾಹಾನಂತರ ಧಾರಯಾಗ್ನಿಯನ್ನು ಇಟ್ಟುಕೊಂಡು ಪ್ರತಿ ದಿನವೂ
ಸೂರ್ಯೋದಯ, ಸೂರ್ಯಾಸ್ತಕಾಲಗಳಲ್ಲಿ ಈ ಹೋಮವನ್ನು
ಮಾಡಬೇಕೆಂದು ವೇದದ ಅಪ್ಪಣೆಯಿದೆ ಆದರೆ ಇಂಥ ಕರ್ಮಠರು ಈಗ ವಿರಳರಾಗಿದ್ದಾರೆ. ಹೀಗಿದ್ದರೂ
ಅಲ್ಲಲ್ಲಿ ಈ ಅಗ್ನಿಹೋತ್ರದ ಸುದ್ದಿಗಳೂ ಇದನ್ನು ಕುರಿತ ಸ್ತುತಿಪಾಠಗಳೂ
ಕೇಳಬರುತ್ತಿವೆ. ವಿದೇಶಗಳಲ್ಲಿಯೂ ಈ ವೈದಿಕಕರ್ಮದ ವಿಚಾರವಾಗಿ ಜನರಲ್ಲಿ ಆಸಕ್ತಿಯೂ
ಶ್ರದ್ಧೆಯೂ ಬೆಳೆದಿರುವದು ಭಾರತೀಯರಾದ ನಮಗೇ ನಾಚಿಕೆಯನ್ನುಂಟುಮಾಡುವಂತಿದೆ ಒಂದೆರಡು
ವಿಷಯಗಳನ್ನು ಈಗ ಮನನಮಾಡೋಣ.
ಅಮೇರಿಕಾದ ಪ್ರಸಿದ್ಧ ಮನೋವೈಜ್ಞಾನಿಕರಾದ ಶ್ರೀ ಬ್ಯಾರಿ ರಥನೇರ್ ಎಂಬುವರು ಪುಣೆ
ವಿಶ್ವವಿದ್ಯಾಲಯದಲ್ಲಿ ಅಗ್ನಿಹೋತ್ರದ ಮೇಲೆ ಪ್ರಯೋಗ ನಡೆಯಿಸಿ ಹೀಗೆನ್ನುತ್ತಾರೆ.
"ಅಗ್ನಿಹೋತ್ರವು ವಾತಾವರಣದಲ್ಲಿ ಕೆಲವು ವಿಶೇಷ ಪರಿಣಾಮಗಳನ್ನು ಉಂಟುಮಾಡುತ್ತದೆ; ಅದು
ಮನುಷ್ಯನ ಮನಸ್ಸಿನಮೇಲೂ ಪರಿಣಾಮಮಾಡುತ್ತದೆ. ಜಗತ್ತಿನಲ್ಲಿ ಅಗ್ನಿಹೋತ್ರವನ್ನು ಮಾಡದ
ಯಾವ ಜನಾಂಗವೂ ಇಲ್ಲ. ಇದು ನಿಜವಾಗಿಯೂ ಆಶ್ವರ್ಯಜನಕವಾದರೂ ಸಂತೋಷ ಜನಕವಾಗಿದೆ. ಈಗ್ಗೆ
ಅಮೆರಿಕಾ, ಚಿಲಿ, ಪೋಲೆಂಡ್ ಮತ್ತು ಪಶ್ಚಿಮ ಜಮ್ನಿಗಳಲ್ಲಿ ಇದು ಹೆಚ್ಚುತ್ತಿದೆ.
ಅಮೆರಿಕಾದಲ್ಲಿ New Age Movement ಎಂದು ಅಗ್ನಿಹೋತ್ರಮಾಡುವವರ ಚಳುವಳಿಯೇ ನಡೆದಿದೆ. ಆ
ದೇಶದ ಪೂರ್ವ ಹಾಗೂ ಪಶ್ಚಿಮಸಮುದ್ರಗಳ ದಂಡೆಯಲ್ಲಿ ಅಗ್ನಿಹೋತ್ರಿಗಳು
ಹೆಚ್ಚಾಗಿರುತ್ತಾರೆ. ಆ ಸ್ಥಳದ ಹೆಸರು ಬಾಲ್ಟಿ ಮೋರ್ ಮೇರಿಲ್ಯಾಂಡ್ - ಎಂದಿದೆ. ಅದನ್ನು
ಈಗ 'ಅಗ್ನಿಹೋತ್ರ ಪ್ರೆಸ್ ಫೋರ್ಸ್' ಎಂದೇ ಕರೆಯುತ್ತಾರೆ. ಅಮೆರಿಕಾದ ರಾಜಧಾನಿಯಾದ
ವಾಷಿಂಗ್ ಟನ್‌ನಿಂದ ಅಲ್ಲಿಗೆ ಕಾರಿನಲ್ಲಿ ಕೇವಲ ಒಂದು ಗಂಟೆಯಲ್ಲಿ ಹೋಗಬಹುದು. ಹಾಗೆಯೇ
ಕೇವಲ ಒಂದೂವರೆಗಂಟೆಯಲ್ಲಿಯೇ ಮುಟ್ಟಬಹುದಾದ 'ಮ್ಯಾಡಿಸನ್ ವರ್ಜೀನಿಯಾ' ಎಂಬ ಮತ್ತೊಂದು
ಸ್ಥಳವೂ ಇದೆ. ಇಲ್ಲಿರುವ ಪರ್ವತಶ್ರೇಣಿಗಳ ಉನ್ನತಸ್ಥಾನದಲ್ಲಿ ವೇದಾಗ್ನಿಯನ್ನು
ಹೊತ್ತಿಸುವದಕ್ಕಾಗಿಯೇ ಒಂದು ಅಗ್ನಿ ಮಂದಿರವನ್ನು ಕಟ್ಟಿದ್ದಾರೆ. ಪ್ರತಿದಿನವೂ
ಸೂರ್ಯೋದಯ-ಸೂರ್ಯಾಸ್ತಮಯಕಾಲಕ್ಕೆ ಸರಿಯಾಗಿ ಅಗ್ನಿಹೋತ್ರವನ್ನು ಮಾಡಲಾಗುತ್ತದೆ.
ಚೈಲ ದೇಶದ ಎಂಡಿಸ್ ಪರ್ವತಗಳಲ್ಲಿ ಒಂದು ವಿಶೇಷವಾದ ಅಗ್ನಿಮಂದಿರವಿದೆ. ಅಲ್ಲಿಗೆ ಬಂದವರ ರೋಗಗಳು ಪರಿಹಾರವಾಗಿವೆಯಂತೆ ಪ್ರಾಣಿಗಳೂಕೂಡ ಅಲ್ಲಿ ಬಂದು ವಾಸಮಾಡಿ ರೋಗಮುಕ್ತವಾಗಿವೆಯಂತೆ ಹಾಗೆಯೇ ಪೋಲೆಂಡ್‌ನಲ್ಲಿ ಅಗ್ನಿಹೋತ್ರಪದ್ಧತಿಯಿದೆ, ಅಲ್ಲಿಯ ಜನರು ಅಗ್ನಿಹೋತ್ರವನ್ನು ಹೋಮ್ ಥೆರಪಿ (Home Theropy) ಎಂದು ಕರೆಯುತ್ತಾರೆ. ವಿಜ್ಞಾನಿಗಳೇ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದಾರೆ. ಪಶ್ಚಿಮ ಜರ್ಮನಿಯಲ್ಲಿಯೂ ಅಗ್ನಿಹೋತ್ರ ಕೇಂದ್ರಗಳಿವೆ ಅಲ್ಲಿ ಅಗ್ನಿಹೋತ್ರದ ಭಸ್ಮವನ್ನು ಚರ್ಮರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ. ಅಗ್ನಿಹೋತ್ರವಾತಾವರಣದಲ್ಲಿ ವನಸ್ಪತಿಗಳು ಹೆಚ್ಚು ಸಮೃದ್ಧವಾಗಿ ಬೆಳೆಯುವವೆಂದು ಕಂಡುಹಿಡಿಯಲಾಗಿದೆ. ಅಮೆರಿಕಾದಲ್ಲಿ ವಾಷಿಂಗ್‌ಟನ್‌ನಲ್ಲಿಯೇ ಅಗ್ನಿ ಹೋತ್ರ ವಿಶ್ವವಿದ್ಯಾನಿಲಯವಿದೆ. ಅಲ್ಲಿಂದ Home Theropy farming Bulletine ಎಂಬ ಪ್ರಕಟನೆಯನ್ನು ಹೊರಡಿಸುತ್ತಾರೆ. ಪೈರುಗಳು ಅಗ್ನಿಹೋತ್ರ ಹೋಮದಿಂದ ಎಂಟುಪಟ್ಟು ಹೆಚ್ಚಾಗಿ ಬೆಳೆಯುವವೆಂದು ಕಂಡುಕೊಳ್ಳಲಾಗಿದೆ.
ಪಾಶ್ಚಾತ್ತ್ಯರು ಮಾಡುವ ಅಗ್ನಿಹೋತ್ರಕ್ರಮವು ಹೀಗಿದೆ. ಆರು ಇಂಚು ಉದ್ದ-ಅಗಲವುಳ್ಳ ಮತ್ತು ಮೂರು ಇಂಚು ಎತ್ತರದ ತಾಮ್ರದ ತಟ್ಟೆಯಲ್ಲಿ ಅಗ್ನಿಯನ್ನು ಸ್ಥಾಪಿಸಿ ಹಸುವಿನ ಸಗಣಿಯನ್ನು ಒಣಗಿಸಿ ತಯಾರಿಸಿದ ಉಂಡೆಗಳಿಂದ ಅಗ್ನಿಯನ್ನು ಪ್ರಜ್ವಲಿಸಿ ಪರಿಶುದ್ಧವಾದ ಹಸುವಿನ ತುಪ್ಪ ಹಾಗೂ ಅಕ್ಕಿಯನ್ನು ಅದರಲ್ಲಿ ಹೋಮಮಾಡುತ್ತಾರೆ. ಅಕ್ಕಿಗೆ ರಾಸಾಯನಿಕ ಶಕ್ತಿಯಿದ್ದು ಒಣಗಿದ ಸಗಣಿಗೆ ಗಾಯವನ್ನು ಮಾಯಿಸುವ ಗುಣವಿದೆಯಂತೆ ತುಪ್ಪವೂ ವಿಶೇಷ ಪರಿಣಾಮವನ್ನುಂಟುಮಾಡುತ್ತದೆಯಂತೆ ತಾಮ್ರದ ಪಾತ್ರೆಗಂತೂ ವಿಶೇಷಶಕ್ತಿಯಿರುವದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೇರಳದಲ್ಲಿ ತಾಮ್ರದ ಪಾತ್ರೆಗಳಲ್ಲಿಯೇ ಅನ್ನಮಾಡುತ್ತಾರೆ ಹೊಟ್ಟೆನೋವು ಇದ್ದರೆ ತಾಮ್ರದ ಕೊಡಗಳಲ್ಲಿ ತುಂಬಿಟ್ಟು ನೀರನ್ನು ಕುಡಿಯುತ್ತಾರೆ ಸೂರ್ಯೋದಯ-ಸೂರ್ಯಾಸ್ತಕಾಲಗಳಲ್ಲಿಯೇ ಅಗ್ನಿಹೋತ್ರಮಾಡಿದರೆ ಸೂರ್ಯನಿಂದ ಸೂಕ್ಷ್ಮಶಕ್ತಿಗಳು ಬರುತ್ತವೆಯೆಂದು ವೈಜ್ಞಾನಿಕವಾಗಿ ಪಾಶ್ಚಾತ್ತ್ಯರು ಕಂಡುಕೊಂಡಿರುತ್ತಾರೆ. ಮಾನವಜನಾಂಗದ ಹಾಗೂ ಸಕಲಜೀವಿಗಳ ಉಳಿವು-ಬೆಳವಣಿಗೆಗಳಿಗೆ ಅಗ್ನಿಹೋತ್ರವು ಬಹಳ ಅವಶ್ಯವೆಂದು ತಿಳಿದರೆ ನಮಗೆ ಒಳ್ಳೆಯದಲ್ಲವೆ? ವೇದೋಕ್ತವಾದ ಆಚರಣೆಗಳೆಲ್ಲವೂ ಮಾನವಕಲ್ಯಾಣಕ್ಕಾಗಿ ಇರುವವೆಂದು ನಮ್ಮ ಜನರಿಗೆ ಅರಿವಾದಷ್ಟೂ ಶ್ರೇಯಸ್ಸಾಗುವದು.

ತುಂಬಾ ಉಪಯುಕ್ತ ಮಾಹಿತಿ. ಅಗ್ನಿಹೋತ್ರ ಮಾಡುವವರು ಮಾಂಸಾಹಾರ ಸೇವನೆ ಮಾಡಬಹುದಾ ಅಥವಾ ಸಸ್ಯಾಹಾರಿಗಳಿಗೆ ಮಾತ್ರ ಸೀಮಿತವಾ?
ReplyDeleteಯಾರು ಬೇಕಾದರೂ ಮಾಡಬಹುದು
ReplyDeleteಅಗ್ನಿ ಹೋತ್ರ ಹೋಮದಿಂದ ರೆಮುಟೈಡ್ ಅರ್ಥರೈಟಿಸ್ ಗುಣವಾಗುತ್ತ ತಿಳಿಸಿ
ReplyDeleteಇ
ReplyDeleteಅಗ್ನಿ ಹೋತ್ರ ಹೋಮವನ್ನು ತ್ರಾಮ ಇಲ್ಲವಾದರೆ ಬೇರೆ ಯಾವುದರಲ್ಲಿ ಮಾಡಬಹುದು
ReplyDeleteಅಗ್ನಿ ಹೋತ್ರ ಮಾಡುವ ವಿಧಾನ ಕುರಿತ ತರಬೇತಿ ಯಾರು ಕೂಡುವರು,
ReplyDeleteವಿಳಾಸವನ್ನು ತಿಳಿಸಿ