Posts

ಅನಂತಪದ್ಮನಾಭವ್ರತ

    ಅನಂತನೆಂಬ ಹೆಸರು ಉಪನಿಷತ್ಪ್ರಸಿದ್ಧವಾದುದು. 'ಸತ್ಯಂ ಜ್ಞಾನಮನನ್ತಂ ಬ್ರಹ್ಮ' ಎಂಬ ವೇದವಾಕ್ಯವು ಬ್ರಹ್ಮವು ಅನಂತವೆಂದು ತಿಳಿಸುತ್ತದೆ. ದೇಶಕಾಲಗಳಿಂದ ಪರಿಚ್ಛಿನ್ನವಲ್ಲದ ಅಖಂಡವಾದ ವಸ್ತುವೇ ಅನಂತವು. ಬ್ರಹ್ಮದ ಹೊರತು ಬೇರೊಂದು ಇಂಥ ವಸ್ತುವಿರುವದಿಲ್ಲ. ಇದನ್ನು ಕರ್ಮಕಾಂಡದವರು ಸೌಕರ್ಯಕ್ಕಾಗಿ 'ಅನಂತಪದ್ಮನಾಭ'ನೆಂದು ಕಲ್ಪಿಸಿದ್ದಾರೆ. ಅನಂತಶಯನ, ಶೇಷಶಯನ, ಶೇಷಶಾಯೀ - ಎಂಬ ಹೆಸರುಗಳೂ ಬಳಕೆಯಲ್ಲಿವೆ. ಆಗ ಅನಂತನೆಂಬುದು ಒಂದು ನಾಗದೇವತೆಯ ಹೆಸರೆಂದಾಗುವದು. ಈ ನಾಗನು ತನ್ನ ಹೆಡೆಗಳಿಂದ ಭೂಮಿಯನ್ನೇ ಹೊತ್ತಿರುವನೆಂದೂ ಪುರಾಣಗಳು ವರ್ಣಿಸುತ್ತವೆ. ಆತನ ಸಹಸ್ರಾರು ಫಣಗಳೇ ಭೂಮಿಗೆ ಆಧಾರವೆಂದೂ ಆತನೇನಾದರೂ ಆಯಾಸದಿಂದ ಸ್ವಲ್ಪ ಒಂದು ಹೆಡೆಯನ್ನು ಕೊಡವಿದರೆ ಭೂಕಂಪವಾಗುವದೆಂದೂ ಕೆಲವರು ಹೇಳುತ್ತಾರೆ. ವಿಜ್ಞಾನಿಗಳು ಇದನ್ನು ಒಪ್ಪಲಾರರು. ಇರಲಿ, ಈ ಅನಂತನೆಂಬ ಹಾವನ್ನೇ ಹಾಸಿಗೆಯಾಗಿ ಮಾಡಿಕೊಂಡು ಮಹಾವಿಷ್ಣುವು ಕ್ಷೀರಸಮುದ್ರದಲ್ಲಿ ಮಲಗಿರುವನು ಯೋಗಿಗಳು ಈ ತತ್ತ್ವವನ್ನು ಅಧಾರಶಕ್ತಿಯಲ್ಲಿ ನೆಲೆಸಿರುವ ಚತ್ ಎಂಬ ಬ್ರಹ್ಮವೆನ್ನುವರು. ಹೇಗೂ ಶ್ರೀ ಮಹಾವಿಷ್ಣುವು ಶೇಷಶಾಯಿಯಾಗಿ ಭಕ್ತಾನು ಗ್ರಹಮಾಡುತ್ತಿರುವನು. ಭಾರತದ ದಕ್ಷಿಣದ ತುದಿಯಾದ ತಿರುವನಂತಪುರದಲ್ಲಿ ಈ ಪದ್ಮನಾಭನ ದಿವ್ಯ ದೇವಾಲಯವೂ ಇದೆ. ಭಕ್ತರಾದವರು ಈಗಲೂ ಈ ಪದ್ಮನಾಭನ ವ್ರತವನ್ನು ಮಾಡುತ್ತಾರೆ. ಬ್ರಾಹ್ಮಣರು ಮಾತ್ರವಲ್ಲದೆ ಬ್ರಾಹ್ಮಣೇತರರೂ ಈ ವ್ರತಾನುಷ...

ವಾಮನಜಯಂತೀವ್ರತ

    ವಾಮನಜಯಂತಿಯನ್ನು ಒಂದು ವ್ರತವಾಗಿ ಆಚರಿಸುತ್ತಾರೆ. ಶ್ರೀಮಹಾವಿಷ್ಣವು ಆ ದಿನ ವಾಮನನಾಗಿ ಅವತಾರವನ್ನು ಮಾಡಿ ಬ್ರಹ್ಮಚರ್ಯದಿಂದ ಮಹಾಬಲಿಚಕ್ರವರ್ತಿಯನ್ನು ಬೆರಗುಗೊಳಿಸಿ ಅವನಿಂದ ಮೂರು ಹೆಜ್ಜೆಯ ಭೂಮಿಯನ್ನು ಬೇಡಿದನೆಂದೂ ತ್ರಿವಿಕ್ರಮಾವತಾರದಿಂದ ಸ್ವರ್ಗಮರ್ತ್ಯಪಾತಾಳಗಳನ್ನೆಲ್ಲ ವ್ಯಾಪಿಸಿ ಬಲಿಯನ್ನು ತುಳಿದು ಪಾತಾಳಕ್ಕಟ್ಟಿದನೆಂದೂ ಹೇಳುವ ಪುರಾಣದ ಕಥೆಯನ್ನು ಶ್ರೀಮದ್ಬಾಗವತದಲ್ಲಿ ಬಹಳ ಚೆನ್ನಾಗಿ ವಿವರವಾಗಿ ಪ್ರಸ್ತಾಪಿಸಲ್ಪಟ್ಟಿದೆ. 'ವಾಮನಪುರಾಣ'ವೆಂಬ ಒಂದು ಮಹಾಪುರಾಣವೂ ಹದಿನೆಂಟು ಪುರಾಣಗಳಲ್ಲಿ ಒಂದಾಗಿದ್ದು ಈ ಕಥೆಯನ್ನು ತಿಳಿಸುತ್ತದೆ.     ಬಲಿರಾಜನು ರಾಕ್ಷಸನಾದರೂ ಗುಣದಲ್ಲಿ ಸಾತ್ತ್ವಿಕನಾಗಿದ್ದನು. ಪ್ರಹ್ಲಾದನ ಮೊಮ್ಮಗನಾದ್ದರಿಂದ ಅಜ್ಜನಲ್ಲಿದ್ದ ಭಗವದ್ಭಕ್ತಿಯು ಸಂಸ್ಕಾರವು ಈತನಿಗೂ ಇತ್ತು ಗುರುಗಳಾದ ಶುಕ್ರಾಚಾರ್ಯರು ಈತನಿಂದ ಮಾಡಿಸಿದ ವಿಶ್ವಜಿತ್ ಯಜ್ಞದ ಫಲವಾಗಿ ಮೂರು ಲೋಕಗಳಿಗೂ ರಾಜನಾಗಿ 'ಇಂದ್ರಪದವಿ'ಯಲ್ಲಿ ಕುಳಿತುಬಿಟ್ಟನು. ಇದರಿಂದ ದೇವೇಂದ್ರನಿಗೆ ಸ್ಥಾನಭ್ರಷ್ಟತೆಯುಂಟಾಗಿ ದೇವತೆಗಳೊಡಗೂಡಿ ಮಹಾವಿಷ್ಣುವನ್ನು ಮೊರೆಹೊಕ್ಕನು. ಆಗ ಭಗವಂತನು 'ಎಲೈ ದೇವತೆಗಳಿರಾ, ಬಲಿರಾಜನು ತನ್ನ ಪುಣ್ಯ ಫಲವನ್ನು ಅನುಭವಿಸಲೇ ಬೇಕು, ಆದರೆ ಆ ಪುಣ್ಯವು ಕ್ಷಯವಾದಾಗ ನಾನು ವಾಮನನಾಗಿ ಅದಿತಿದೇವಿಯನ್ನು ಅವತರಿಸಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸುವೆನು. ಶಾಂತನು ದಾಂತನೂ, ಜಿತೇಂದ್ರಿಯನೂ ನ...

ಶ್ರೀ ಕೇದಾರೇಶ್ವರ ವ್ರತ ಶುಭಾಶಯಗಳು

Image
  ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ ಆರತಿಯ ಬೆಳಗಿರೆ ದೇವಗೆ ।। ಪಾರ್ವತಿಯ ಅರ್ಧ ದೇಹ ಪಡೆದಂತ ದೇವಗೆ ಪ್ರಥಮಗೈಯೇ ಸಕಲ ಭಾಗ್ಯ ಕೊಡುವಂತ ಈಶಗೆ । ನಂದಿ - ಸ್ಕಂದ - ಗಣಪರೊಡನೆ ಕೈಲಾಸದಿ ಇರುವಗೆ ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।। ನಂಜನುಂಡು ಲೋಕ ಹಿತವ ಬಯಸಿದಂತ ಹರನಿಗೆ ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ । ಭಕ್ತಿಯಿಂದ ಬೇಡೇ ಒಡನೆ ಓಡಿಬರುವ ಈಶಗೆ ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।। ವ್ರತವಗೈಯೇ ಮಾಂಗಲ್ಯದ ಭಾಗ್ಯ ಕೊಡುವ ಸ್ವಾಮಿಗೆ ಭಜಿಸಿ ಬೇಡೇ ಸಂತಾನವ ಕೊಡುವ ಅಮಿತಗೆ । ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।। ಕೋಟಿ ಕೋಟಿ ಜೀವಗಳಿಗೆ ಅನ್ನ ನೀಡೋ ದಾತಗೆ ಉಪವಾಸದ ವ್ರತವಗೈಯೇ ಒಲಿದು ಬರುವ ಈಶಗೆ । "ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।। ನಾದಲೋಲ ನಾಟ್ಯರಾಜ" ಓಂ"ಕಾರದ ರೂಪಗೆ ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ । ನಂದಿ ಅರ್ಧ ರೂಪದಲ್ಲಿ ಕೇದಾರದಿ ಇರುವಗೆ ಪಾಂಡವರ ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।। "ಓಂ ನಮಃ ಶಿವಾಯ...

ಹರಿಕಥಾಮೃತಸಾರ ಗ್ರಂಥಪರಿಚಯ

#ಜಗನ್ನಾಥದಾಸರ_ಆರಾಧನೆ #ಹರಿಕಥಾಮೃತಸಾರ_ಗ್ರಂಥಪರಿಚಯ ಜಗನ್ನಾಥದಾಸರ ಕೃತಿಗಳಲ್ಲೆಲ್ಲಾ “ಹರಿಕಥಾಮೃತಸಾರವೇ ಪ್ರಮುಖವಾಗಿದ್ದು, ಅವರ ೬೮ ನೆಯ ವಯಸ್ಸಿನಲ್ಲಿ ಎ೦ದರೆ ಕ್ರಿ.ಶ. ೧೭೯೬ ರಲ್ಲಿ ಇದರ ರಚನೆ ಮುಗಿದಿದೆ ಎ೦ದು ಹೇಳಲು ಆಧಾರವಿದೆ. ಸರಳವಾದ ಕನ್ನಡ ಭಾಷೆಯಲ್ಲಿ ಸುಲಲಿತವಾದ ಭಾಮಿನೀ ಷಟ್ಪದಿ ಛ೦ದಸ್ಸಿನಲ್ಲಿ ದ್ವೈತ ಸಿದ್ಧಾ೦ತದ ಸಮಸ್ತ ತತ್ವಗಳನ್ನು ಕ್ರೋಢೀಕರಿಸಿ ಉತ್ತಮ ಉದಾಹರಣೆಗಳಿ೦ದ ಮನದಟ್ಟಾಗುವ ರೀತಿಯಲ್ಲಿ ಕಾವ್ಯಮಯ ಶೈಲಿಯಲ್ಲಿ ಈ ಗ್ರ೦ಥ ರಚಿತವಾಗಿದೆ. ಈ ಗ್ರ೦ಥವು ಪ್ರಮೇಯಪು೦ಜ ಗ್ರ೦ಥವಾದುದರಿ೦ದ, ವ್ಯಾಖ್ಯಾನ ಸಾಪೇಕ್ಷವಾಗಿದೆ. ಆದುದರಿ೦ದ ಈ ಗ್ರ೦ಥಕ್ಕೆ ಅನೇಕ ವ್ಯಾಖ್ಯಾನಗಳು ರಚಿತವಾಗಿದ್ದು, ಸ೦ಸ್ಕೃತ ಭಾಷೆಯಲ್ಲಿಯೂ ವ್ಯಾಖ್ಯಾನ ಬರೆಯಲಾಗಿದೆ. ಸುಲಭ ಗ್ರಾಹ್ಯವಾದ ಸರಳ ಶೈಲಿ, ಮೃದು ಬ೦ಧದೊ೦ದಿಗೆ ಉಜ್ವಲ ಕಾವ್ಯ ಗುಣ ವಿಶಿಷ್ಟವಾದ ಗ್ರ೦ಥವಾಗಿದೆ. ವೇದ, ಉಪನಿಷತ್ತುಗಳು, ಸಾಂಚರಾತ್ರ, ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ಮೊದಲಾದ ಅನೇಕ ಸಚ್ಛಾಸ್ತ್ರಗಳಲ್ಲಿ ಹೇಳಿರುವ ಭಗವತ್ತತ್ವದ ಸಾರವನ್ನು ಸಂಕ್ಷೇಪವಾಗಿ ಹೇಳುವ ಕನ್ನಡ ಪದ್ಯಗ್ರಂಥ, ಹರಿಕಥಾಮೃತಸಾರ. ಒಂದೇ ವಿಷಯವನ್ನು ಬಹು ವಿಸ್ತಾರ ರೂಪಗಳಿಂದ ವಿವರಿಸಿರುವ ಅಸದೃಶ ಗ್ರಂಥವಿದು. ಗ್ರಂಥದ ಹೆಸರು ಹರಿಕಥೆಯ ಅಮೃತದ ಸಾರ. ಇದನ್ನು ತಿರುಗಿಸಿದರೆ “ಸಾರ-ಅಮೃತ”.. ಎಂದರೆ “ಅಣು-ಸುಧಾ” ರೂಪವಾಗಿದೆ. “ಶ್ರೀಮನ್ಯಾಯಸುಧಾ” ಗ್ರಂಥದ ಕನ್ನಡದ ಸಣ್ಣ ರೂಪ...

ವರಸಿದ್ಧಿವಿನಾಯಕ ವ್ರತ

    ಈ ವ್ರತಾಧಿದೇವತೆಯನ್ನು 'ಸಿದ್ಧಿವಿನಾಯಕ'ನೆಂದು ಹೆಸರಿಸಿದ್ದಾರೆ. ಈತನು ಚತುರ್ಥೀತಿಥಿಗೆ ಒಡೆಯನು. ಮಾತೃಭಕ್ತಿಸಂಪನ್ನನು ಆದ್ದರಿಂದಲೇ ತೃತೀಯಾ ತಿಥಿಯು ಪ್ರಾತಃಕಾಲದಲ್ಲಿ ಸ್ವಲ್ಪಭಾಗವಿದ್ದು ಮಧ್ಯಾಹ್ನಕ್ಕೆ ಚತುರ್ಥೀ ಬಂದರೆ ಅದೇ ದಿನವೇ ಗೌರಿ-ಗಣಪತಿವ್ರತಗಳು ಒಟ್ಟಿಗೆ ನೆರವೇರುತ್ತವೆ. 'ಮಾತೃವಿದ್ಧಾ ಪ್ರಶಸ್ಯತೇ' ಎಂದು ಧರ್ಮಶಾಸ್ತ್ರವಾಕ್ಯವಿದೆ. ಈ ಗಣಪತಿಯು ವಿನಾಯಕನು ತನಗೆ ಯಾರೂ ನಾಯಕರಿಲ್ಲದವನು ಮತ್ತು ಅರ್ಚಿಸಿದವರಿಗೆ 'ಸಿದ್ಧಿ'ಗಳನ್ನು ಅನುಗ್ರಹಿಸುವವನು ಗಣಪತಿಯು ಭೂಮಿತತ್ತ್ವದವನಾದ್ದರಿಂದ ಮಣ್ಣಿನಿಂದ ಮಾಡಿದ ವಿಗ್ರಹವನ್ನು ಪೂಜಿಸುವ ಪದ್ಧತಿ ಬೆಳೆದುಬಂದಿದೆ. ಚತುರ್ಭುಜನಾಗಿರುವದು ನಾಲ್ಕು ಪುರುಷಾರ್ಥಗಳ ದಾತನೆಂದೂ, ಲಂಬೋದರನಾಗಿರುವದು ಬ್ರಹ್ಮಾಂಡವನ್ನೆಲ್ಲ ತನ್ನ ಉದರದಲ್ಲಿ ಧರಿಸಿರುವನೆಂದೂ, ಗಜಮುಖನಾಗಿರುವದು ಓಂಕಾರ ರೂಪನೆಂಬುದನ್ನೂ, ಅಗಲವಾದ ಕಿವಿಯುಳ್ಳವನಾಗಿರುವದು ಸಾರಗ್ರಾಹಿಯೆಂದೂ, ಸಣ್ಣ ಕಣ್ಣುಗಳುಳ್ಳವನಾಗಿರುವದು ಅಂತರ್ಮುಖದೃಷ್ಟಿಯವನೆಂದೂ ಸೂಚಿಸುತ್ತದೆ. ಬ್ರಹ್ಮಚಾರಿಯೆಂದೂ ಸಿದ್ಧಿಬುದ್ಧಿಯರೇ ಈತನ ಪತ್ನಿಯರೆಂದೂ ಎರಡೂ ವಿಧವಾಗಿ ಹೇಳುವದುಂಟು. ಬ್ರಹ್ಮವಿದನಾದ್ದರಿಂದ 'ಬ್ರಹ್ಮಣ್ಯೇವ ಚರತಿ' ಎಂಬರ್ಥದಲ್ಲಿ ಬ್ರಹ್ಮಚಾರಿಯು ತಪಸ್ಸಿನಿಂದ ಸಿದ್ಧಿಬುದ್ಧಿಗಳನ್ನು ವಶಮಾಡಿಕೊಂಡಿರುವದೇ ಸಿದ್ಧಿವಿನಾಯಕತ್ವವು ಈತನು ಮೋದಕಪ್ರಿಯನೆಂದರೆ ಮಧುರವಾದ ಭಕ್ತಿಪ್ರಿಯನೆಂದರ್ಥ....

||ಶ್ರೀ ಆದಿಶಂಕರಭಗವದ್ಪಾದರು ವಿರಚಿತ ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರಮ್||

|| ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರಮ್ || ಮುದಾಕರಾತ್ತಮೋದಕಂ ಸದಾ ವಿಮುಕ್ತಿ ಸಾಧಕಂ | ಕಲಾಧರಾವತಂಸಕಂ ವಿಲಾಸಿ ಲೋಕರಕ್ಷಕಮ್ || ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ | ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ ||1|| ಸಂತೋಷದಿಂದ ಕಡುಬನ್ನು ಕೈಯಲ್ಲಿ ಹಿಡಿದಿರುವವನೂ, ಮೋಕ್ಷಸಾಧಕನೂ, ಶಿರಸ್ಸಿನಲ್ಲಿ ಚಂದ್ರನನ್ನು ಧರಿಸಿದವನೂ, ಲೀಲೆಯೆಂದು ತಿಳಿದು ಲೋಕವನ್ನು ರಕ್ಷಿಸುವವನೂ, ಅನಾಥರನ್ನು ಕಾಪಾಡುವವನೂ, ಗಜಾಸುರನನ್ನು ಸಂಹರಿಸಿದವನೂ, ನಮಿಸಿದ ಭಕ್ತರ ಸಂಕಷ್ಟಗಳನ್ನು ಪರಿಹರಿಸುವವನೂ ಆದ ಆ ವಿನಾಯಕನನ್ನು (ನಾನು) ನಮಿಸುತ್ತೇನೆ. ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ | ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ || ಸುರೇಶ್ವರಂನಿಧೀಶ್ವರಂ ಗಜೇಶ್ವರಂ ಗಣೇಶ್ವರಂ | ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ ||2|| ವಿನಯದಿಂದ ಶರಣಾಗದವರಿಗೆ ಅತಿ ಭಯಾಕರನೂ, ಉದಯಿಸುವ ಸೂರ್ಯನಂತೆ ವಿರಾಜಿಸುವವನೂ, ದೈತ್ಯರು ಮತ್ತು ದೇವತೆಗಳಿಂದ ವಂದಿತನೂ, ಭಕ್ತರ ಎಲ್ಲ ವಿಪತ್ತುಗಳನ್ನೂ ಪರಿಹರಿಸುವವನೂ, ದೇವತೆಗಳ ಅಧಿಪತಿಯೂ ಎಲ್ಲ ನಿಧಿಗಳ ಒಡೆಯನೂ, ಗಜರಾಜನೂ, ಗಣೇಶ್ವರನೂ, ಪರಾತ್ಪರನೂ ಆದ ಗಣಪತಿಯನ್ನು ಸದಾ (ನಾನು) ಆಶ್ರಯಿಸುತ್ತೇನೆ. ಸಮಸ್ತ ಲೋಕ ಶಂಕರಂ ನಿರಸ್ತದೈತ್ಯ ಕುಂಜರಂ | ದರೇತರೋದರಂ ವರಂ ವರೇಭವಕ್ತ್ರ ಮಕ್ಷರಮ್ || ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ | ಮನಸ್ಕರಂ ನಮಸ್ಕೃರೋಮಿ ಭಾಸ್ವರಮ್ ||3|| ಎಲ್ಲ ಲೋಕಗಳಿಗೂ ಕಲ್ಯಾಣ ಮಾಡುವವನೂ...

|| ಶ್ರೀ ಶಂಕರನಾರಾಯಣ ಸ್ತುತಿ ಸ್ತೋತ್ರಮ್ ||

ಧ್ಯಾಯೇನ್ಮಾಣಿಕ್ಯ ಪೀಠೇ ಸಕಲ ಸುರಗಣೈ:ಸೇವ್ಯಮಾನಂ ಸಮಂತಾತ್ ಬಿಭ್ರಾಣಂ ಪಾಣಿಪದ್ಮೈ: ಪರಶುದರವರಂ ಮಧ್ಯರಾಜತ್ ಕರಾಬ್ಜಂ | ವ್ಯಾಘ್ರ ಶ್ರೀ ಕೃತ್ತಿ ಪೀತಾಂಬರಧರ ಮಹಿರಾಟ್ ಕೌಸ್ತುಭಾ ಕಲ್ಪಮೀಶಂ ಗೌರೀ ಲಕ್ಷ್ಮೀ ಸಮೇತಂ ಸ್ಫಟಿಕ ಮರಕತೋದ್ಭಾಸಿತಾಂಗಂ ಶುಭಾಂಗಂ ||೧|| ಭಾವಾರ್ಥ:-ಸುತ್ತಲೂ ನೆರೆದಿರುವ ಸಮಸ್ತ ದೇವತಾ ಸಮೂಹದಿಂದ ಮಾಣಿಕ್ಯಪೀಠಾರೂಢಳಾಗಿ ಸೇವೆಯನ್ನು ಸ್ವೀಕರಿಸುತ್ತಾ,ಕೈಗಳಲ್ಲಿ ಪರಶುವನ್ನು ಮತ್ತು ಶಂಖವನ್ನು ಹಿಡಿದುಕೊಂಡು,ವ್ಯಾಘ್ರಚರ್ಮ ಹಾಗೂ ಹಳದಿ ವಸನಧಾರಿಯಾಗಿ,ನಾಗರಾಜನೊಡನೆ ಕೌಸ್ತುಭಮಣಿಯನ್ನು ಧರಿಸಿಕೊಂಡು ಒಂದೆಡೆ ಗೌರಿಯನ್ನೂ ಮಗದೊಂದೆಡೆ ಲಕ್ಷ್ಮಿಯನ್ನೂ ಒಡಗೂಡಿ ಸ್ಪಟಿಕದಂತೆ ಸ್ವಚ್ಛವಾಗಿಯೂ,ಪಚ್ಚೆಮಣಿಯ ತೆರದಲ್ಲಿಯೂ ಬೆಳಗುವ ಶರೀರವನ್ನು ಹೊಂದಿರುವ ಶಂಕರನಾರಾಯಣ ಸ್ವಾಮಿಯನ್ನು ಧ್ಯಾನಿಸುತ್ತೇನೆ. ಶೀರ್ಷಸ್ಯಾರ್ಧ ಜಟಂ ತದರ್ದ ಕಬರಿ ಶ್ರೀಮತ್ಕಿರೀಟಾನ್ವಿತಂ ರಾಕಾ ಬಿಂಬಯುತಂ ಕುಠಾರಮಮಲಂ ಶಂಖಂ ದಧಾನಂ ಕರೇ | ಬಾಹ್ವೋರ್ದಕ್ಷಿಣ ವಾಮಯೋರಧರಯೋರಿಷ್ಟ ಪ್ರದಾನಂಕಟಿ ನ್ಯಸ್ತಾಭೀಂ ಗಜಚರ್ಮ ಹೇಮವಸನಂ ಶಂಭ್ವಚ್ಯುತಾಂಗಂ ಭಜೇ ||೨|| ಭಾವಾರ್ಥ:-ತಲೆಯ ಅರ್ಧಭಾಗದಲ್ಲಿ ಜಟೆ,ಉಳಿದರ್ಧ ಭಾಗದಲ್ಲಿ ತುರುಬುನಿಂದ ಕೂಡಿದವನಾಗಿ,ಚಂದ್ರನ ಕಲೆಯಿಂದ ಹೊಳೆವ ಕಿರೀಟವನ್ನು ಧರಿಸಿ,ಹಸ್ತಗಳಲ್ಲಿ ಕೊಡಲಿ ಹಾಗೂ ನಿರ್ಮಲವಾಗಿರುವ ಶಂಖವನ್ನು ಹಿಡಿದುಕೊಂಡು,ಕೆಳಬದಿಯ ಬಲಗೈಯಲ್ಲಿ ವರದ ಮುದ್ರೆಯನ್ನೂ,ಸೊಂಟದ ಮೇಲಿರಿಸಿರುವ ಕೈಯಲ್ಲಿ ಅಭಯಮುದ್ರೆಯನ...