Posts

ದೀಪಾವಳಿ-ಗೀತಾಜಯಂತಿ

    ಪ್ರತಿವರ್ಷವೂ ಕಾರ್ತಿಕಮಾಸದಲ್ಲಿ ದೀಪಾವಳಿಯು ಬರುತ್ತದೆ. ಮಾರ್ಗಶೀರ ಮಾಸದಲ್ಲಿ ಗೀತಾಜಯಂತಿಯು ಬರುತ್ತದೆ. ದೀಪಾವಳಿಯನ್ನು ಬಹು ಮಟ್ಟಿಗೆ ಎಲ್ಲರೂ ಅನುಷ್ಠಿಸುತ್ತಾರೆ. ಆಗ್ಗೆ ಅಭ್ಯಂಗನಸ್ನಾನ, ಹೊಸಬಟ್ಟೆಗಳನ್ನು ಉಡುವದು, ಪಟಾಕಿಗಳನ್ನು ಸುಡುವದು, ಬಂಧು-ಮಿತ್ರರೊಡನೆ ಕಲೆತು ಮೃಷ್ಟಾನ್ನಭೋಜನಮಾಡುವದು ಮುಂತಾದವುಗಳನ್ನು ಜನರು ಆಚರಿಸುತ್ತಾರೆ, ಪತ್ರಿಕಾಪ್ರಪಂಚದವರು 'ವಿಶೇಷಾಂಕ'ಗಳನ್ನು ಹೊರಡಿಸಿ ಜನರನ್ನು ಆಕರ್ಷಿಸುತ್ತಾರೆ. ವಿದ್ಯುಚ್ಛಕ್ತಿಯ ವಿವಿಧವಾದ ದೀಫಗಳನ್ನು ಬೆಳಗಿಸಿ ಕೆಲವರು ತಮ್ಮ ಗೃಹಗಳನ್ನೂ ದೇವಾಲಯ- ಸಭಾಮಂದಿರಗಳನ್ನೂ ಅಲಂಕರಿಸುತ್ತಾರೆ. ಆದರೆ ಅನಂತರ ಪ್ರಾಪ್ತವಾಗುವ 'ಗೀತಾಜಯಂತಿ'ಯನ್ನು ಮಾತ್ರ ಎಲ್ಲಿಯೋ ಕೆಲವರು ನಡೆಯಿಸುತ್ತಾರೆ. ಜಹುಜನರಿಗೆ ಗೀತಾಜಯಂತಿ ಎಂಬ ಹಬ್ಬಮೊಂದಿದೆ ಎಂಬುದೇ ತಿಳಿದಿಲ್ಲ. ಪತ್ರಿಕೆಗಳವರು ಎಲ್ಲಾ ವಿಧವಾದ ಜಾಹಿರಾತುಗಳು, ಕಥೆಗಳು, ನಾಟಕ, ವಿಡಂಬನೆ, ರಾಜಕೀಯ, ವರ್ಷಬವಿಷ್ಯ, ಸಿನೆಮ-ಕ್ರೀಡಾಸುದ್ದಿಗಳು ಮುಂತಾದ ವಿಪುಲ ಸಾಹಿತ್ಯವನ್ನು ಪ್ರಕಟಿಸಿ ಪ್ರಚಾರಮಾಡುತ್ತಾರಾದರೂ 'ಯಾವ ವಿಶೇಷಸಂಚಿಕೆಯಲ್ಲೂ - ಅದು ಎಷ್ಟೇ ಗಾತ್ರದ್ದಿರಲಿ ಅರ್ಧ ಪುಟದಷ್ಟು ಕೂಡ ಗೀತೆಯ ವಿಚಾರಗಳಿರುವದಿಲ್ಲ ಅಧ್ಯಾತ್ಮವಿದ್ಯಾಪೀಠಗಳಾದ ಮಠಗಳಲ್ಲಿ ಕೂಡ ವಿನಾಯಕಚತುರ್ಥಿ, ಶಂಕರಜಯಂತಿ, ಶರನ್ನವರಾತ್ರಿ, ಮಧ್ವನವಮಿ, ತಿರುನಕ್ಷತ್ರಗಳಲ್ಲಿ ಉತ್ಸವಗಳು ನಡೆಯುವಂತೆ ಗೀತಾಜಯಂತಿ ಉತ್ಸವವು ವೈಭವದಿಂದ...

ಸಂಧ್ಯಾವಂದನೆ

    ಸಂಧ್ಯೆ ಎಂಬುದು ಕಾಲವಾಚಕಶಬ್ದವು. ಹಗಲುರಾತ್ರಿಗಳಂತೆ ಪ್ರತಿದಿನವೂ ಸಂಧ್ಯೆಯು ಬೆಳಗ್ಗೆ ಹಾಗೂ ಸಾಯಂಕಾಲಗಲ್ಲಿ ಪ್ರಾಪ್ತವಾಗುತ್ತಿರುವದು ಮಾನವನ ಆಯುಷ್ಯದಲ್ಲಿ ಅತ್ಯಂತಬೆಲೆಬಾಳುವ ವಸ್ತುವೆಂದರೆ ಕಾಲವು, ಇದನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಳ್ಳುವದು ಕೂಡ ಸಾಧ್ಯವಾಗುವದಿಲ್ಲ ವ್ಯವಹಾರದ ಸಮಯದಲ್ಲಿ ಹಣದ ಕೊರತೆಯಾದರೆ ಬೇರೊಬ್ಬರಿಂದ ಎರವಲು ಪಡೆಯಬಹುದು ಆದರೆ ಕಾಲವು ಸಾಲದೆ ಹೋದರೆ ಬೇರೊಬ್ಬರಿಂದ ತೆಗೆದುಕೊಳ್ಳಲಾದೀತೆ? ಅವಿವೇಕಿಗಳಿಗೆ ಕಾಲದ ಬೆಲೆಯೇ ತಿಳಿದಿರುವದಿಲ್ಲ ವಿವೇಕಿಗಳೆನಿಸಿಕೊಂಡವರಿಗೂ ಕಾಲವನ್ನು ಈ ಪ್ರಪಂಚದ ಸುಖಕ್ಕಾಗಿ ಮಿಸಲಿಡುವಂತೆಯೇ ಸ್ವಲ್ಪಭಾಗವನ್ನಾದರೂ ನಾವು ದೇಹವನ್ನು ಬಿಟ್ಟ ಅನಂತರ ಹೊಂದಬೇಕಾಗಿರವ ಪ್ರಪಂಚದ ಸುಖಕ್ಕಾಗಿ ಮಿಸಲಿಡಬೇಕೆಂಬುದು ಶಾಸ್ತ್ರ-ಗುರುಗಳ ಮಾರ್ಗದರ್ಶನವಿಲ್ಲದೆ ಹೊಳೆಯುವಂತಿಲ್ಲ ಆದ್ದರಿಂದ ನಾವು ಮೊದಲು ಕಾಲದ ಅಮೂಲ್ಯವಾದ ಬೆಲೆಯನ್ನರಿತು ಪ್ರತಿದಿನವೂ ಸ್ವಲ್ಪಹೊತ್ತನ್ನಾದರೂ ನಮ್ಮ ಆತ್ಮಕಲ್ಯಾಣಕ್ಕಾಗಿ ಬಳಸಿಕೊಳ್ಳಲು ಮಿಸಲಿರಿಸಿಕೊಳ್ಳಬೇಕು.     ಕರ್ಮಗಳನ್ನೆಲ್ಲ ನಾವು ಕಾಲನಿಯಮಕ್ಕೆ ಒಳಪಟ್ಟೇ ಮಾಡುವೆವು. ಯಾವ ಕರ್ಮಗಳಿಗೆ ಒಂದು ದಿನವೂ ಬಿಡುವಿರುವದಿಲ್ಲವೋ ಅಂಥವನ್ನು ನಿತ್ಯಕರ್ಮಗಳೆನ್ನಬಹುದು, ಆದರೆ ಆಹಾರಸೇವನೆ, ನಿದ್ರೆ, ಜಲಮಲವಿಸರ್ಜನೆ - ಮುಂತಾದವು ಪ್ರತಿದಿನವೂ ಪ್ರತಿಯೊಬ್ಬನಿಗೂ ಅನಿವಾರ್ಯವಾದರೂ ನಿತ್ಯಕರ್ಮಗಳೆನಿಸುವದಿಲ್ಲ, ಏಕೆಂದರೆ...

ಸರಸ್ವತೀ ವ್ರತ

    ವ್ರತವಿವೇಕದಂತೆ ಪೂಜೆಯನ್ನು ಪುಸ್ತಕಮಂಡಲದಲ್ಲಿ ಆಶ್ವಯುಜ ಶುಕ್ಲ ಪಕ್ಷದಲ್ಲಿ ಮೂಲಾನಕ್ಷತ್ರದ ದಿನ ಮಾಡಬೇಕೆಂದು ಹೇಳಿದೆ. ಜಗನ್ಮೂಲಳಾದ ಪ್ರಕೃತಿಮಾತೆಯೇ ಸರಸ್ವತಿಯೆಂದು ತಿಳಿಸಲು ಈ ನಕ್ಷತ್ರವನ್ನು ಪೂಜೆಗೆ ಹೇಳಿರಬಹುದು. ಆ ದಿನದಿಂದ ನಾಲ್ಕು ದಿನಗಳು ದೇವೀಪೂಜೆಗೆ ಪ್ರಶಸ್ತವೆಂದೂ ತಿಳಿಸಿದೆ. ಶ್ರವಣನಕ್ಷತ್ರದ ಕೊನೆಯಲ್ಲಿ ವಿಸರ್ಜನೆಮಾಡಬೇಕೆಂಬುದು ನಿಯಮವು. ಪುಸ್ತಕಮಂಡಲದಲ್ಲಿ ಸದಾಕಾಲವೂ ದೇವಿಯ ಸಾನ್ನಿಧ್ಯವಿದ್ದೇ ಇರುತ್ತದೆ. ಪೂಜೆಗಾಗಿ ಮಾತ್ರ ನಾವು ಆಗ್ಗೆ ಭಾವನೆಮಾಡಿಕೊಳ್ಳಬೇಕಾಗಿದೆ. ಹಿಂದಿನ ಕಾಲಕ್ಕೆ ಸೂತಿಕಾಗೃಹದಿಂದ 11ದಿನ ಶಿಶುವಿಗೆ ಸ್ನಾನಮಾಡಿಸಿ ಒಳಕ್ಕೆ ಕರೆದು ಕೊಂಡಾಗ ಮೊರದಲ್ಲಿ ಮಲಗಿಸಿ ತಲೆದಿಂಬಿನಂತೆ ಒಂದು ಪುಸ್ತಕವನ್ನು ಮಸ್ತಕದ ಸಮಿಪದಲ್ಲಿಡುತ್ತಿದ್ದರು, ಈಗಿನ ನಾಗರಿಕತೆಯ ಪ್ರಭಾವದಿಂದ ಇದು ಲೋಪವಾಗಿದೆ, ಈ ಆಚರಣೆಗೆ ಮಗುವು ವಿದ್ಯಾವಂತನಾಗಲೆಂಬುದೇ ಹಿಂದಿನವರ ಉದ್ದೇಶವಾಗಿರಬೇಕು ಇರಲಿ, ಹೀಗೆ ಪುಸ್ತಕಮಂಡಲದಲ್ಲಿ ಕುರಿತ ದಿನದಲ್ಲಿ ದೇವಿಯನ್ನು ಆವಾಹಿಸಿ ಪೂಜಿಸಬೇಕು, ಪೂಜಾದ್ರವ್ಯಗಳ ಸಂಖ್ಯೆಯು ಎಲ್ಲವೂ ಹದಿನಾಲ್ಕು ಇರಬೇಕೆಂದು ವಿಧಿಸಿದೆ, ಹದಿನಾಲ್ಕು ವಿದ್ಯೆಗಳಲ್ಲಿ ನಿಪುಣನಾದವನನ್ನು ಚತುರ್ದಶವಿದ್ಯಾಪಾರಂಗತನೆನ್ನುವರು. ಸರಸ್ವತಿಯ ಆರಾಧಕನಿಗೆ ಈ ಫಲವುಂಟಾಗಲು ಹೀಗೆ ವಿಧಿಸಿದೆ. ಈಗ ದೇವಿಯ ಧ್ಯಾನಶ್ಲೋಕವನ್ನು ನೋಡೋಣ. ವಿದ್ಯಾತ್ಮಾನಮಶೇಷಲೋಕಜನನೀಂ ದೇವೀಮಿಮಾಮಿಷ್ಟದಾಂ ಇಚ್ಚಾಕಲ್ಪ...

ಶಕ್ತಿಪೀಠಗಳು

    ದೇವಿಯು ಹಲವು ರೀತಿಗಳಲ್ಲಿ ವ್ಯಕ್ತಗೊಳ್ಳುತ್ತಾಳೆ, ಭಕ್ತರು ಅದನ್ನು ತಿಳಿಯ ಬೇಕು, ದೇವಿಯ ಅಭಿವ್ಯಕ್ತವಾದ, ಪವಿತ್ರವಾದ ಸ್ಥಳಗಳನ್ನು ಪೀಠಗಳೆನ್ನುತ್ತೇವೆ.     ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಹೀಗೆ ಪವಿತ್ರವಾದ ಸ್ಥಳಗಳಲ್ಲಿ ದೇವಿಯನ್ನು ಪೂಜಿಸಿ ಕೋಟ್ಯಂತರ ಭಕ್ತರು ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ. ಪುರಾಣಗಳಲ್ಲಿ ಹಲವಾರು ರೀತಿಯಲ್ಲಿ ಈ ಶಕ್ತಿಪೀಠಗಳ ವರ್ಣನೆಯನ್ನು ಕಾಣುತ್ತೇವೆ.     ನಮ್ಮ ಬಯಕೆಗಳನ್ನು ನೆರವೇರಿಸಿಕೊಳ್ಳಲು ನಾವು ದೇವಿಯನ್ನು ಪೂಜಿಸುತ್ತೇವೆ. ಮೋಕ್ಷ ಪ್ರಾಪ್ತಿಗಾಗಿ ದೇವಿಯನ್ನು ಪೂಜಿಸುವುದು ಎಲ್ಲದಕ್ಕಿಂತ ಶ್ರೇಷ್ಠವಾದುದು. ಒಂದು ಸಾರಿ ಈ ಸಂಸಾರ ಬಂಧನದಿಂದ ಬಿಡುಗಡೆ ದೊರೆಯಿತೆಂದರೆ ಸಾಕು ಉಳಿದ ಬಯಕೆಗಳೆಲ್ಲವೂ ಇಲ್ಲವಾಗುತ್ತವೆ. ಆದುದರಿಂದ ಮೋಕ್ಷಾರ್ಥಿಯಾಗಿ ದೇವಿಯನ್ನು ಬೇಡುವುದು ಎಲ್ಲದಕ್ಕಿಂತ ಮಿಗಿಲಾದುದು.     ಋಗ್ವೇದದಲ್ಲಿ ಉಕ್ತವಾಗಿರುವ ದಕ್ಷಯಜ್ಞದ ಕಥೆಯು ಮುಂದೆ ಹಲವಾರು ಪುರಾಣಗಳಲ್ಲಿ ವಿಸ್ತೃತಗೊಂಡು ಬೆಳೆದಿದೆ ದಕ್ಷ ಪ್ರಜಾಪತಿಯು ಯಜ್ಞವನ್ನು ಮಾಡಿದನು ಎಂಬ ಇತಿಹಾಸವು ಮಹಾಭಾರತದಲ್ಲಿಯೂ, ಮತ್ಯೃ, ಪದ್ಮ, ಕೂರ್ಮ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರವಾಗಿ ವಿಸ್ತೃತವಾಗಿದೆ. ಕಾಳಿದಾಸನು ಕುಮಾರ ಸಂಭವ ಎಂಬ ಕಾವ್ಯವನ್ನೇ ರಚಿಸಿರುತ್ತಾನೆ.     ಸತಿಯು ದಕ್ಷಪ್ರಜಾಪತಿಯ ಮಗಳು. ದಕ್ಷ ಪ...

ದೇವಿ ಸ್ಮರಣೆ

    ಪುರಾಣಗಳ ಅಭಿವ್ಯಕ್ತಿ ಮೊದಲು ವೇದಗಳಲ್ಲಿಯೇ ಆಗಿದೆ ಛಾಂದೋಗ್ಯೋಪನಿಷತ್ತಿನಲ್ಲಿ ಸನತ್ಕುಮಾರನಾರದ ಸಂವಾದದಲ್ಲಿ "ಋಗ್ವೇದಂ ಭಗವೋಧ್ಯೇಮಿ. ಇತಿಹಾಸಂ ಪುರಾಣಂ ಪಂಚಮಂ ವೇದಾನಾಂ ವೇದಮ್" || (ಛಾಂ 7-1-2)ರಲ್ಲಿ ಅಕಾಲದಲ್ಲಿ ಪ್ರಚಲಿತವಿದ್ದು ಶಾಸ್ತ್ರಗಳು ನಿರ್ದಿಷ್ಟವಾಗಿವೆ. "ಋಚಃ ಸಾಮಾನಿ ಛಂದಾಂಸಿ ಪುರಾಣಂ ಯಜುಷಾಸಹ|" (ಉಚ್ಛಿಷ್ಟನೆಂಬ ಋಷಿಯಿಂದ ನಾಲ್ಕು ವೇದಗಳ ನಂತರ ಪುರಾಣಗಳು ಉತ್ಪನ್ನವಾದವೆಂದು ಉಕ್ತವಾಗಿದೆ. ಆದರೆ ಮೂಲಪುರಾಣಗಳು ಈಗ ಉಪಲಬ್ದವಿಲ್ಲ. ಇವು ಯಾವದೋ ಒಂದು ಶತಮಾನಗಳ ನಿರ್ದಿಷ್ಟ ರಚನೆಗಳೂ ಅಲ್ಲ. ಯಾವಾಗ ವೇದಗಳ ಭಾಷೆಯು ಸಾಧಾರಣ ಜನತೆಗೆ ಅರ್ಥವಾಗದಾಯಿತೋ, ಆಗ ಅದರ ತತ್ತ್ವಗಳನ್ನು ಜನತೆಗೆ ತಿಳಿಸಲು ಪುರಾಣಗಳ ರಚನೆಯಾಯಿತು. ನಮಗೆ ಅರ್ಥವಾಗುವ ಭಾಷೆಯಲ್ಲಿ ರಚಿತವಾಗಿರುವದರಿಂದ ಅವು ಬೇಗ ನಮ್ಮ ಹೃದಯಕ್ಕೆ ಮುಟ್ಟುತ್ತವೆ. ಧಾರ್ಮಿಕದೃಷ್ಟಿಯಿಂದ ಪುರಾಣಗಳು ಅತ್ಯಂತ ಮಹತ್ತ್ವವಾದವುಗಳು ಆದ್ದರಿಂದಲೇ ಮಹಾಭಾರತದಲ್ಲಿ. ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಭಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ || ಎಂದಿರುವದು. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ.     ಪುರಾಣಗಳು ಮಹರ್ಷಿಗಳಿಂದ ಪರಂಪರೆಯಾಗಿ ನಮಗೆ ಬಂದು ಸೇರಿದ ಆಸ್ತಿ ಅವುಗಳಲ್ಲಿ ಭಾಗವತವು ತುಂಬ ಆದರಕ್ಕೆ ಪಾತ್ರವಾದ ಗ್ರಂಥ ಭಾಗವತದ ವಿಭಿನ್ನಸ್ವರೂಪದ ಎರಡು ಗ್ರಂಥಗಳು ದೊರೆಯುತ್ತವೆ. ಅಷ...