Posts

ಅಭಿಲಾಷಾಷ್ಟಕಂ

Image
ಕದಾ ಪಕ್ಷೀಂದ್ರಾಂಸೋಪರಿ ಗತಮಜಂ ಕಂಚನಯನಂ ರಮಾಸಂಶ್ಲಿಷ್ಟಾಂಗಂ ಗಗನರುಚಮಾಪೀತವಸನಂ | ಗದಾಶಂಖಾಂಭೋಜಾರಿವರಮಾಲೋಕ್ಯ ಸುಚಿರಂ ಗಮಿಷ್ಯತ್ಯೇತನ್ಮೇ ನನು ಸಫಲತಾಂ ನೇತ್ರಯುಗಲಂ || 1 ||     ಪಕ್ಷಿಗಳ ರಾಜನನ್ನು ವಾಹನವಾಗಿಸಿಕೊಂಡಿರುವ, ಜನ್ಮರಹಿತನಾದ, ಕಮಲದ ಕಣ್ಣುಗಳುರುವ, ಶರೀರವೆಲ್ಲಾ ರಮಾಳಿಂದ ( ಲಕ್ಷ್ಮೀದೇವಿಯಿಂದ ) ಆಲಂಗಿಸಿರುವ, ಆಕಾಶದ ನೀಲವರ್ಣವಿರುವ, ಪೀತಾಂಬರವನ್ನು ಧರಿಸಿರುವ, ಶಂಖ - ಚಕ್ರ - ಗದಾ - ಪದ್ಮಗಳನ್ನು ಹಿಡಿದಿರುವ ಅವನನ್ನು ಈ ನನ್ನ ಕಣ್ಣುಗಳು ನೋಡುವ ಸೌಭಾಗ್ಯವೆಂದು ? ಕದಾ ಕ್ಷೀರಾಬ್ಧ್ಯಂತಃ ಸುರತರುವನಾಂತರ್ಮಣಿಮಯೇ ಸಮಾಸೀನಂ ಪೀಠೇ ಜಲಧಿತನಯಾಲಿಂಗಿತತನುಂ | ಸ್ತುತಂ ದೇವೈರ್ನಿತ್ಯಂ ಮುನಿವರಕದಂಬೈರಭಿನುತಂ ಸ್ತವೈಃ ಸಂತೋಷ್ಯಾಮಿ ಶ್ರುತಿವಚನಗರ್ಭೈ ಸುರಗುರುಂ || 2 ||     ಕ್ಷೀರಸಾಗರದಲ್ಲಿ, ಕಲ್ಲವೃಕ್ಷದ ನೆರಳಿನಲ್ಲಿ ಮಣಿಗಳಿಂದ ಅಲಂಕೃತವಾದ ಪೀಠದಲ್ಲಿ ಆಸೀನವಾಗಿರುವ, ಸಮುದ್ರ ರಾಜನ ಮಗಳ ( ಲಕ್ಷ್ಮಿಯ ) ಕಣ್ಣುಗಳಿಂದ ಆಲಂಗಿಸಲ್ಪಟ್ಟ, ದೇವ - ಮುನಿಗಳಿಂದ ಸ್ತುತಿಸಲ್ಪಡುವವನನ್ನು ನಾನೆಂದು ಹಾಡಿ ಸ್ತುತಿಸಲು ಶಕ್ತನಾಗುವೆನು ? ಕದಾಮಾಭೀತಂ ಭಯಜಲಧಿತಸ್ತಾಪಸತನುಂ ಗತಾ ರಾಗಂ ಗಂಗಾತಟಗಿರಿಗುಹಾವಾಸಸಹನಂ | ಲಪಂತಂ ಹೇ ವಿಷ್ಣೋ ಸುರವರ ರಮೇಶೇತಿ ಸತತಂ ಸಮಭ್ಯೇತ್ಯೋದಾರಂ ಕಮಲನಯನೋ ವಕ್ಷ್ಯತಿ ವಚಃ || 3 ||     ಸಂಸಾರ ಸಾಗರದಿಂದ ಭಯಗೊಂಡು ಗಂಗಾತೀರದ ಪರ್ವತ...

ಶ್ರೀ ಶಂಕರ ಭಗವತ್ಪಾದಾಚಾರ್ಯರ ಗುಣಕಥನ

Image
    ಯಾವನು ಮತ್ತೊಬ್ಬರಿಗೆ ಹಿತವಾದದ್ದನ್ನು ಉಪದೇಶಿಸುವನೋ ಅವನೇ ಗುರುವು. ಆಸ್ತಿಕರಾಗಲಿ ನಾಸ್ತಿಕರಾಗಲಿ ತಮಗೆ ಹಿತವನ್ನು ಹೇಳುವ ನಿಸ್ವಾರ್ಥರಾದ ಗುರುಗುಳನ್ನು ಸೇವಿಸುತ್ತಾರೆ. ತಾಯಿ, ತಂದೆ, ಉಪಾಧ್ಯಾಯರು - ಮುಂತಾದವರು ಎಷ್ಟೆಷ್ಟು ಮಟ್ಟಿಗೆ ನಮಗೆ ಹಿತಾನುಶಾಸನವನ್ನು ಮಾಡುವರೋ ಅಷ್ಟಷ್ಟು ಮಟ್ಟಿಗೆ ಗುರುಸ್ಥಾನಕ್ಕೆ ತಕ್ಕವರಾಗುವರು. ಆದರೆ ಇಂಥ ಗುರುಗಳಿಗಿಂತಲೂ ಧರ್ಮಗುರುಗಳಿಗೆ ಗೌರವ ಹೆಚ್ಚು, ಏಕೆಂದರೆ ಅವರು ಈ ಲೋಕ, ಈ ಜನ್ಮ-ಇವೆರಡಲ್ಲಿಯೇ ನಮ್ಮ ಜೀವನವು ಮುಗಿಯುವದಿಲ್ಲವೆಂದೂ ಲೋಕಾಂತರ ಜನ್ಮಾಂತರಗಳಲ್ಲಿಯೂ ಕರ್ಮಫಲವನ್ನನು ಭವಿಸುವ ನಮ್ಮ ಜೀವಸ್ವರೂಪವೊಂದು ಇದೆಯೆಂದೂ ತಿಳಿಸಿಕೊಡುತ್ತಾರೆ. ಎಲ್ಲಾ ಮತಗಳಲ್ಲಿಯೂ ದೇವರನ್ನೂ ಜನ್ಮಾಂತರವನ್ನೂ ಒಪ್ಪುವದಿಲ್ಲವೆಂಬುದು ನಿಜ; ಆದರೆ ಮನುಷ್ಯನ ಜೀವನದಲ್ಲಿ ಧರ್ಮವೆಂಬುದು ಒಂದು ಹೆಚ್ಚಿನ ಶಕ್ತಿಯೆಂದು ಅನೀಶ್ವರವಾದಿಗಳೂ ಕೂಡ ಒಪ್ಪಿರುತ್ತಾರೆ. ಇಂಥ ಧರ್ಮವನ್ನು ಜೀವನದಲ್ಲಿ ಅನುಭವಕ್ಕೆ ತಂದುಕೊಡುವ ಗುರುವಿನ ಲೌಕಿಕ ಗುರುವಿಗಿಂತ ಹೆಚ್ಚಿನ ಸ್ಥಾನವು ದೊರೆಯುವದು ಸಹಜವಾಗಿಯೇ ಇರುತ್ತದೆ.     ಆದರೆ ಇಂಥ ಧರ್ಮಗುರುಗಳ ಪರಂಪರೆಯಲ್ಲಿ ಬಂದವರು ಕೆಲವರು ಸಂಕುಚಿತ ದೃಷ್ಟಿಯನ್ನು ಹೊಂದಿ "ನಮ್ಮ ಮತವೇ ಸತ್ಯವು, ಮಿಕ್ಕವೆಲ್ಲವೂ ತಪ್ಪುಹಾದಿಗಳು" ಎಂದು ಉಪದೇಶಿಸುತ್ತಾ ಬಂದಿರುತ್ತಾರೆ. ಇದರಿಂದ ಧರ್ಮದ ಹೆಸರಿನಲ್ಲಿ ಕೂಡ ರಾಗದ್ವೇಷದಿಗಳು ಹೆಚ್ಚವದಕ್ಕೆ ಅವಕ...

ತತ್ ತ್ವಂ ಅಸಿ

Image
        'ತತ್ ತ್ವಂ ಅಸಿ' ಅಂದರೆ ಯಾವುದು ಎಲ್ಲದರ ಸಾರವೋ (ಮೂಲವೋ) ಅದು ತನ್ನ ಆತ್ಮವನ್ನೂ ಹೊಂದಿದೆ. ಅದೇ ಆತ್ಮವು. ಅದೇ ಸತ್ಯವು ತತ್ ಅದು ತ್ವಂ ನೀನೇ, ಅಸಿ ನೀನೇ ಆಗಿರುವೆ. ತಾತ್ಪರ್ಯ ಆ ಸದ್ ವಸ್ತುವೇ ನೀನಾಗಿರುವೆ.     'ತತ್ ತ್ವಂ ಅಸಿ' ಎಂಬುದರ ಅರ್ಥವನ್ನು ಇನ್ನೂ ವಿಶದೀಕರಿಸಲು ಛಾಂದೋಗ್ಯ ಉಪನಿಷತ್ ನಲ್ಲಿ ಬರುವ 'ಉದ್ದಾಲಕ - ಶ್ವೇತ ಕೇತು' ಅವರ ಸಂವಾದವನ್ನು ನೋಡೋಣ. ಉದ್ದಾಲಕ :- ಶ್ವೇತಕೇತು! ಯಾವುದರಿಂದ ನಾವು ಕಿವಿಯಿಂದ ಕೇಳಾಲಾರದುದನ್ನು ಕೇಳುವೆವೋ, ಕಣ್ಣಿನಿಂದ ದರ್ಶಿಸಲಾರದನ್ನು ಕಾಣುವೆವೋ, ಅರಿವಿಗೆ ನಿಲುಕದ್ದನ್ನು ಅರಿಯವೆವೋ, ಆ ವಿದ್ಯೆ ಯಾವುದು ಗೊತ್ತೇ ನಿನಗೆ? ಶ್ವೇತಕೇತು :- ಸ್ವಾಮಿನ್, ತಾವೇ ಆ ವಿದ್ಯೆಯನ್ನು ತಿಳಿಸಿದರೆ.... ನನಗೆ ತುಂಬಾ ಉಪಕಾರವಾಗುವುದು. ಉದ್ದಾಲಕ :- ಹಾಗೇ ಆಗಲಿ ಕೇಳು, ವತ್ಸಾ ನಿನಗೆ ಜೇಡಿ ಮಣ್ಣು ಪರಿಚಯ ಉಂಟು ಅಷ್ಟೆ. ಅದರಿಂದ ಕುಡಿಕೆ, ಮಡಿಕೆ, ತಟ್ಟೆ, ಮುಚ್ಚಳಗಳನ್ನು ಮಾಡುತ್ತಾರೆ ಆದರೆ ಈ ಬದಲಾವಣೆ ಶಬ್ದಗಳ ಆಧಾರದಿಂದ ಹೆಸರುಗಳು ಅಗಿರುತ್ತೆ. ವಸ್ತುತಃ ಎಲ್ಲ ಮಣ್ಣೇ ಆಗಿದೆಯಷ್ಟೆ. ಅಂತೆಯೇ ಆ ವಿದ್ಯೆಯು. ಶ್ವೇತಕೇತು :- ಸ್ಮಾಮಿನ್ ! ನನಗೆ ಇನ್ನಷ್ಟು ವಿಶದವಾಗಿ ತಿಳಿಸಿರಿ. ಉದ್ದಾಲಕ :- ಆಗಲಿ ಸೌಮ್ಯ! ನೋಡು ಮಗು, ನ್ಯಗ್ರೋಧ (ಆಲದಮರದ) ಮರದ ಹಣ್ಣೊಂದನ್ನು ತೆಗೆದು ಕೊಂಡು ಬಾ.... ಶ್ವೇತಕೇತು :- ಗುರುಗಳೇ! ಇದೋ ತಂದಿ...

ದೇವತೆಗಳ ವಾಹನಗಳು

Image
    ವೇದಪುರಾಣಗಳಲ್ಲಿ ದೇವತೆಗಳ ವಾಹನಗಳ ಬಗ್ಗೆ ವಿಶಿಷ್ಟ ವಿವರಗಳಿವೆ ಅವರು ಬೇರೆ ಬೇರೆಯಾದ ವಿಮಾನಗಳನ್ನಲ್ಲದೆ ವೃಷಭ, ಮಹಿಷ, ಮೂಷಿಕ, ಆನೆ, ಗರುಡ, ಕಾಗೆ ಇತ್ಯಾದಿ ಪಶುಪಕ್ಷಿಗಳನ್ನೂ ವಾಹನಗಳನ್ನಾಗಿ ಮಾಡಿಕೊಂಡಿದ್ದರು ಇಂದಿನ ಬುದ್ಧಿಜೀವಿಗಳಿಗೆ ಇದೊಂದು ಆಶ್ಚರ್ಯಕರ ವಿಷಯವಾಗಿದ್ದರೂ, ಪೌರಾಣಿಕ ಸಾಹಿತ್ಯಕ ದೃಷ್ಟಿಯಿಂದ ಇವೆಲ್ಲವೂ ಸತ್ಯವಾಗಿದ್ದವು.     ದೇವತೆಗಳು ಬ್ರಹ್ಮ ಲೋಕಕ್ಕೆ ಹೋಗಲು ಅಲ್ಲಿಂದ ವಿಷ್ಣು ಲೋಕ, ಶಿವ ಲೋಕ್ಕಕ್ಕೆ ಹೋಗಬೇಕಾದರೆ ಅವರು ವಿವಿಧ ರೀತಿಯ ವಿಮಾನಗಳಲ್ಲಿ ಹೋಗುತ್ತಿದ್ದರು ಎಂಬುದು ಶತಸ್ಸಿದ್ಧ. ಈ ವಿಮಾನಗಳು ಇಂದಿನ ಆದುನಿಕ ವಿಮಾನಗಳಿಗಿಂತಲೂ ತಾಂತ್ರಿಕ ವೈಶಿಷ್ಟಪೂರ್ಣವಾದುವೂ ಹೆಚ್ಚು ಶಕ್ತಿಶಾಲಿಯಾದುವೂ ಆಗಿದ್ದವು, ಅವು ಮನೋವೇಗಕ್ಕಿಂತ ಹೆಚ್ಚು ವೇಗವಾಗಿ ಹೋಗುವಂತಹವೂ, ತೀವ್ರಗಾಮಿಗಳೂ ಆಗಿದ್ದವು.     ಹರಿದ್ವಾರದಲ್ಲಿ ಸನಕಾದಿ ಮುನೀಶ್ವರರು ನಾರದರಿಗೆ ಶ್ರೀಮದ್ಭಾಗವತದ ಕಥಾನಕವನ್ನು ವಿವಿರಿಸುತ್ತಿದ್ದರು ಆ ಸಮಯದಲ್ಲಿ ದೇವತೆಗಳು ಆಕಾದಲ್ಲಿನ ವಿಮಾನಗಳಲ್ಲಿ ಕುಳಿತುಕೊಂಡು ಪಾರಿಜಾತ, ಹರಿಚಂದನ ಇತ್ಯಾದಿ ಕಲ್ಪವೃಕ್ಷದ ಪುಷ್ಪಗಳನ್ನು ಸುರಿಸಿರು. ವಿಮಾನಾನಿ ಸಮಾರು ಹ್ಯ ಕಿಯಂತೋ ದೇವನಾಯಕಾ ಕಲ್ಪವೃಕ್ಷ ಪಸರಸೂನೈಸ್ತಾನ್ ಸರ್ವಾಂಸ್ತತ್ರ ಸಮಾಕಿರನ್ || (ಪದ್ಮಪುರಾಣ-ಉತ್ತರಖಂಡ)     ಮೇರು ಗಿರಿಯಲ್ಲಿ ಸ್ಕಂದ ಸರೋವರ ಒಂದ ಸುಂದರ ...

ಶ್ರೀ ಯಾದವಗಿರಿ ಕಲ್ಯಾಣೀತೀರ್ಥ ಮತ್ತು ಸುಚರಿತನೆಂಬ ಬ್ರಾಹ್ಮಣನ ಕಥೆ

Image
ಧಾತ್ರೀಮುದ್ಧೃತ್ಯ ಪೋತ್ರೀ ಶ್ರಮಜಲ ಮಸೃಜಸ್ಸ್ವಸ್ಯ ಸರ್ವಾಂ ಗಜಾತಂ ಕಲ್ಯಾಣಂ ನಾಮ ತೀರ್ಥಂ ತದಭವದಿಹ ಸಾ ಸರ್ವಪಾಪಾ ಪಹರ್ತ್ರೀ | ಗಂಗಾ ಸರ್ವೈಶ್ಚ ತೀರ್ಥೈ ಸ್ಸಹ ವಸತಿ ನಿಜಂ ಪಾಪ ಮು ನ್ಮೋಚಯಂತೀ ಪ್ರತ್ಯಬ್ದಂ ಫಾಲ್ಗುನೇ ಮಾಸ್ಯಪಿಚ ಶತಗುಣಂ ಯತ್ರ ಪುಣ್ಯಂ ಕೃತಂ ಸ್ಯಾತ್ ||     ಆದಿವರಾಹಮೂರ್ತಿಯು ಭೂದೇವಿಯನ್ನು ಎತ್ತಿಕೊಂಡು ಬಂದಾಗ ಶ್ರಮದಿಂದ ತನ್ನ ಸರ್ವಾಂಗಗಳಿಂದಲೂ ಸ್ರವಿಸಿದ ಬೆವರು ನೀರು "ಕಲ್ಯಾಣ" ಎಂಬ ತೀರ್ಥವಾಯಿತು ಮತ್ತು ಸ್ನಾನಾದಿಗಳಿಂದ ಎಲ್ಲರ ಪಾಪವನ್ನೂ ಪರಿ ಹರಿಸುವ ಗಂಗಾನದಿಯು ಸಕಲ ತೀರ್ಥಗಳೊಡನೆ ಕೂಡಿ ತನ್ನ ಪಾಪವನ್ನು ಪರಿಹರಿಸಿಕೊಳ್ಳುವುದಕ್ಕೋಸ್ಕರ ಪ್ರತಿವರ್ಷವೂ ಫಾಲ್ಗುಣ ಮಾಸದಲ್ಲಿ ಈ ಕಲ್ಯಾಣ ತೀರ್ಥದಲ್ಲಿ ವಾಸಮಾಡುವಳು ಮತ್ತು ಇದರ ತೀರದಲ್ಲಿ ಮಾಡಿದ ತಪೋ ದಾನಾದಿ ಪುಣ್ಯ ಕಾರ್ಯಗಳು ಇತರ ಕಡೆಗಳಲ್ಲಿ ತಾವು ಕೊಡತಕ್ಕ ಫಲಕ್ಕಿಂತಲೂ ಬಹಳ ಭಾಗ ಅಧಿಕವಾಗಿ ಕೊಡುವುದು. ತೀರ್ಥ ಕ್ಷೇತ್ರಾದಿ ನಿಷ್ಠ ಸ್ಸುಚರಿತ ಇತಿ ಯಃ ಕಶ್ಚಿ ದಾಸೀದ್ದ್ವಿ ಜಾಗ್ರ್ಯಃ ಪುತ್ರಾಭ್ಯಾಂ ಭಾರ್ಯಯಾ ಚ ಸ್ವಯಮತಿ ಜರಠೋ ದುರ್ವಿಧಾಗ್ರೇಸರಶ್ಚ | ಸೋಯಂ ಕಲ್ಯಾಣತೀರ್ಥಂ ಯದುಗಿರಿ ಮಪಿ ವಾ ಶುಶ್ರುವಾ ನ್ನೈವ ಪೂರ್ವಂ ಗಂಗಾ ಸ್ನಾನಾರ್ಥ ಮಾಗಾ ತ್ಸುರ ಸರಿದಪಿ ತದ್ದೃಷ್ಟಿಮಾರ್ಗಂ ನ ಲೇಭೇ ||     ಯಾವಾಗಲೂ ತೀರ್ಥ ಕ್ಷೇತ್ರಾದಿ ಯಾತ್ರಾಪರನಾಗಿಯೂ ಮುದುಕನಾಗಿಯೂ ದರಿದ್ರನಾಗಿಯೂ ಇದ್ದ ಸುಚರಿತನೆಂಬ ಒಬ್ಬ ಬ್ರಾಹ...

ಯಾದವಗಿರಿ ಮತ್ತು ವೈರಮುಡೀ ಕಿರೀಟ

Image
ಸಹ್ಯಾದ್ರೇಃ ಪೂರ್ವತೋವಾ ತದುದಿತ ಸರಿತಶ್ಚೋತ್ತರಸ್ಯಾಂ ಗಿರೀ ನ್ದ್ರೋನಾನಾಶೃಂಗಃ ಫಣೀಂದ್ರಾವತರ ಉರತರಪ್ರೇಮಪಾತ್ರಂ ತು ವಿಷ್ಣೋಃ | ಯೋವಾಚೀನೋ ಬದರ್ಯಾಶ್ರಮ ಇತಿ ಕಥಿತೋ ಮಂತ್ರ ದೈವಾಶ್ರಿತಶ್ಚ ಕ್ಷೇತ್ರಂ ವೈಕುಂಠವೃದ್ಧಿಪ್ರದ ಮಿತಿ ಪರಿತೋ ಯೋಜನೇ ದ್ವೇಪ್ರಕ್ಲ್‌ಪ್ತಃ ||     ಯಾವ ಯಾದವಗಿರಿಯು ಸಹ್ಯಪರ್ವತಕ್ಕೆ ಪೂರ್ವದಲ್ಲಿಯೂ ಕಾವೇರೀನದಿಗೆ ಉತ್ತರದಲ್ಲಿಯೂ ಇದ್ದು ಅನೇಕ ಶಿಖರಗಳಿಂದೊಡಗೂಡಿ ಸಾಕ್ಷಾಚ್ಛೇಷರೂಪಿಯಾಗಿದ್ದು, ಭಗವಂತನಿಗೆ ವೈಕುಂಠಕ್ಕಿಂತಲೂ ಅತ್ಯಂತ ಪ್ರೀತಿಪಾತ್ರವಾಗಿಯೂ, ದಕ್ಷಿಣಬದರಿಕಾಶ್ರಮವೆಂತಲೂ ಸುತ್ತಲೂ ಎರಡು ಯೋಜನದವರಿಗೂ ವೈಕುಂಠವರ್ಧನಕ್ಷೇತ್ರವೆಂದೂ ಪ್ರಸಿದ್ಧವಾಗಿಯೂ, ಅಷ್ಟಾಕ್ಷರ ಮಂತ್ರ ಪ್ರತಿಪಾದ್ಯ ದೇವತೆಯಾದ ಶ್ರೀಮನ್ನಾರಾಯಣನಿಗೆ ಆಶ್ರಯವಾಗಿಯೂ ಇದೆಯೋ, ಮತ್ತು ದತ್ತಾತ್ರೇಯ ಶ್ಯ್ರುತೀನಾಂ ಪ್ರವಚನಮತನೋದತ್ರ ತದ್ವೇದಶೈಲೋ ನಾಮ್ನಾ ನಾರಾಯಣಾದ್ರಿ ಸ್ತದನು ಭಗವತ ಸ್ಸನ್ನಿಧಾನಾ ದ್ಬಭೂವ | ಯದ್ವದ್ರಿರ್ನಾಮತೋ ಭೂದ್ಯದುಕುಲಭಜನಾ ದ್ದ್ವಾಪರಾಂತೇ ಕಲಾ ವಪ್ಯಂತೋ ನನ್ತಸ್ಯ ಕಶ್ಚಿದ್ಯಶಿರಪಿ ಭವಿತಾ ತೇನ ತಚ್ಛೈಲಸಂಜ್ಞಃ ||     ಪೂರ್ವದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದಗಳನ್ನು ಪ್ರವಚನ ಮಾಡಿದರಾದ್ದರಿಂದ ವೇದಪರ್ವತವೆಂತಲೂ, ಇಲ್ಲಿ ಶ್ರೀ ನಾರಾಯಣನ ಸಾನ್ನಿಧ್ಯ ಉಂಟಾದಮೇಲೆ ನಾರಾಯಣಾದ್ರಿ ಎಂತಲೂ, ದ್ವಾಪರಯುಗದ ಕೊನೆಯಲ್ಲಿ ಯಾದವರುಗಳು ಬಂದು ಸೇವಿಸು...

ಲಲಿತಾ ತ್ರಿಶತೀ - 14 ಓಂ ಕರ್ಪೂರವೀಟೀಸೌರಭ್ಯಕಲ್ಲೋಲಿತ ಕಕುಪ್ತಟಾಯೈ ನಮಃ

Image