ತತ್ ತ್ವಂ ಅಸಿ


        'ತತ್ ತ್ವಂ ಅಸಿ' ಅಂದರೆ ಯಾವುದು ಎಲ್ಲದರ ಸಾರವೋ (ಮೂಲವೋ) ಅದು ತನ್ನ ಆತ್ಮವನ್ನೂ ಹೊಂದಿದೆ. ಅದೇ ಆತ್ಮವು. ಅದೇ ಸತ್ಯವು ತತ್ ಅದು ತ್ವಂ ನೀನೇ, ಅಸಿ ನೀನೇ ಆಗಿರುವೆ. ತಾತ್ಪರ್ಯ ಆ ಸದ್ ವಸ್ತುವೇ ನೀನಾಗಿರುವೆ.

    'ತತ್ ತ್ವಂ ಅಸಿ' ಎಂಬುದರ ಅರ್ಥವನ್ನು ಇನ್ನೂ ವಿಶದೀಕರಿಸಲು ಛಾಂದೋಗ್ಯ ಉಪನಿಷತ್ ನಲ್ಲಿ ಬರುವ 'ಉದ್ದಾಲಕ - ಶ್ವೇತ ಕೇತು' ಅವರ ಸಂವಾದವನ್ನು ನೋಡೋಣ.

ಉದ್ದಾಲಕ :- ಶ್ವೇತಕೇತು! ಯಾವುದರಿಂದ ನಾವು ಕಿವಿಯಿಂದ ಕೇಳಾಲಾರದುದನ್ನು ಕೇಳುವೆವೋ, ಕಣ್ಣಿನಿಂದ ದರ್ಶಿಸಲಾರದನ್ನು ಕಾಣುವೆವೋ, ಅರಿವಿಗೆ ನಿಲುಕದ್ದನ್ನು ಅರಿಯವೆವೋ, ಆ ವಿದ್ಯೆ ಯಾವುದು ಗೊತ್ತೇ ನಿನಗೆ?

ಶ್ವೇತಕೇತು :- ಸ್ವಾಮಿನ್, ತಾವೇ ಆ ವಿದ್ಯೆಯನ್ನು ತಿಳಿಸಿದರೆ.... ನನಗೆ ತುಂಬಾ ಉಪಕಾರವಾಗುವುದು.

ಉದ್ದಾಲಕ :- ಹಾಗೇ ಆಗಲಿ ಕೇಳು, ವತ್ಸಾ ನಿನಗೆ ಜೇಡಿ ಮಣ್ಣು ಪರಿಚಯ ಉಂಟು ಅಷ್ಟೆ. ಅದರಿಂದ ಕುಡಿಕೆ, ಮಡಿಕೆ, ತಟ್ಟೆ, ಮುಚ್ಚಳಗಳನ್ನು ಮಾಡುತ್ತಾರೆ ಆದರೆ ಈ ಬದಲಾವಣೆ ಶಬ್ದಗಳ ಆಧಾರದಿಂದ ಹೆಸರುಗಳು ಅಗಿರುತ್ತೆ. ವಸ್ತುತಃ ಎಲ್ಲ ಮಣ್ಣೇ ಆಗಿದೆಯಷ್ಟೆ. ಅಂತೆಯೇ ಆ ವಿದ್ಯೆಯು.

ಶ್ವೇತಕೇತು :- ಸ್ಮಾಮಿನ್ ! ನನಗೆ ಇನ್ನಷ್ಟು ವಿಶದವಾಗಿ ತಿಳಿಸಿರಿ.

ಉದ್ದಾಲಕ :- ಆಗಲಿ ಸೌಮ್ಯ! ನೋಡು ಮಗು, ನ್ಯಗ್ರೋಧ (ಆಲದಮರದ) ಮರದ ಹಣ್ಣೊಂದನ್ನು ತೆಗೆದು ಕೊಂಡು ಬಾ....

ಶ್ವೇತಕೇತು :- ಗುರುಗಳೇ! ಇದೋ ತಂದಿರುವೆ,

ಉದ್ದಾಲಕ :- ಅದನ್ನು ಒಡೆದು, ಅದರಲ್ಲೇನು ಕಾಣುತ್ತಿರುವುದು ಹೇಳು?

ಶ್ವೇತಕೇತು :- ಅತ್ಯಂತ ಸಣ್ಣದಾದ ಬೀಜಗಳು ಸ್ವಾಮಿನ್ !

ಉದ್ದಾಲಕ :- ಓ ಸೌಮ್ಯ! ಆ ಬೀಜಗಳಲ್ಲೊಂದನ್ನು ಒಡೆದು, ಅದರಲ್ಲಿ ಏನಿದೆ ನೋಡು.....

ಶ್ವೇತಕೇತು :- ಎನೂ ಕಾಣುವುದೇ ಇಲ್ಲ, ಗುರುಗಳೇ!

ಉದ್ದಾಲಕ :- ವತ್ಸಾ! ಅಲ್ಲಿ ನಿನ್ನ ಕಣ್ಣಿಗೆ ಕಾಣಿಸದಿರುವ ಸೂಕ್ಷ್ಮಸಾರವಿದೆಯಲ್ಲ - ಆ ಸಾರದಿಂದಲೇ ಈ ಮಹತ್ತಾದ ನ್ಯಗ್ರೋದ ವೃಕ್ಷ ಉಂಟಾಗುವುದು, ಅದೇ ಮೂಲವಾದ ಆತ್ಮಶಕ್ತಿಯನ್ನು ಹೊಂದಿದೆ ಅದೇ ಸತ್ಯವು ಅದೇ ತತ್-ತ್ವಂ-ಅಸಿ ಆಗಿದೆ ಶ್ವೇತಕೇತು ತಿಳಿಮಗು....

ಶ್ವೇತಕೇತು :- ಗುರುಗಳೇ! ಮತ್ತಷ್ಟು ವಿಶದವಾಗಿ ವಿವರಿಸಿ....

ಉದ್ದಾಲಕ :- ಹಾಗೇ ಆಗಲಿ ವತ್ಸ! ಗಮನವಿಟ್ಟು ಕೇಳು ತೆಗೆದುಕೋ ಈ ಹಿಡಿ ಉಪ್ಪನ್ನು ಒಂದು ಪಾತ್ರೆ ನೀರಿನೊಳ್ಕೆ ಹಾಕಿ, ಮತ್ತೆ ನಾಳೆ ಬೆಳಗ್ಗೆ ನನ್ನ ಬಳಿ ಬಾ.

ಶ್ವೇತಕೇತು :- (ಮರುದಿನ ಬೆಳಗ್ಗೆ - ಗುರುಗಳು ಹೇಳಿದಂತೆ ಮಾಡಿ - ಬಂದಾಗ )

ಶ್ವೇತಕೇತು :- ಆಚಾರ್ಯರೇ! ಇಗೋ ಉಪ್ಪು ಕರಗಿದ ಪಾತ್ರೆಯನ್ನು ಹಿಡಿದು ತಂದಿದ್ದೇನೆ.

ಉದ್ದಾಲಕ :- ಈ ವತ್ಸಾ ಪಾತ್ರೆಯ ನೀರಿನಲ್ಲಿ, ಆ ಹಿಡಿ ಉಪ್ಪನ್ನು ತೆಗೆದುಕೊಡು.

ಶ್ವೇತಕೇತು :- ಗುರುಗಳೇ! ಎಲ್ಲಾ ಕರಗಿ ಹೋಗಿದೆಯಲ್ಲಾ......

ಉದ್ದಾಲಕ :- ಸರಿ..... ಆ ಪಾತ್ರೆಯ ನೀರನ್ನು..... ಮೇಲಿನಿಂದ-ಮಧ್ಯದಿಂದ ಕೆಳಭಾಗದಿಂದ ರುಚಿ ನೋಡಿ ಹೇಳು ಹೇಗಿದೆ?

ಶ್ವೇತಕೇತು :- ಸ್ವಾಮಿನ್! ಮೇಲಿನ-ಮಧ್ಯದ-ಕೆಳಗಿನ ನೀರು ಉಪ್ಪೇ ಆಗಿದೆ.....

ಉದ್ದಾಲಕ :- ವತ್ಸಾ! ಈಗ ಪಾತ್ರೆಯಲ್ಲಿ ಉಪ್ಪು ಇದೆ ಅಲ್ಲವೇ!

ಶ್ವೇತಕೇತು :- ಹೌದು ಇದೇ! ಗುರುಗಳೇ !

ಉದ್ದಾಲಕ :- ಹಾಗೇಯೇ! ಸೌಮ್ಯ!.... ಈ ದೇಹ ದೃಷ್ಟಿಯಲ್ಲಿ ಸತ್ಯವನ್ನು ಕಾಣಲಾರೆ.... ಸದ್ ವಸ್ತುವನ್ನು ಕಾಣಲಾರೆ.... ಆದರೂ... ಆ ಆತ್ಮವಸ್ತು ಇದೆ... ಅದೇ ಎಲ್ಲಕ್ಕೂ ಸಾರವಸ್ತು, ತತ್ ತ್ವಂ ಅಸಿ ಅದೇ ಸದ್ ವಸ್ತುವೇ ನೀನಾಗಿರುವೆ.

ಶ್ವೇತಕೇತು :- ಅರಿವಿನ ಅರಣೋದಯವಾಯಿತು ಸ್ವಾಮಿನ್ ಕೃತಾರ್ಥನಾದೆ.


Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ