ಶ್ರೀದತ್ತಾತ್ರೇಯ ಧ್ಯಾನಸ್ತೋತ್ರಮ್
ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತ: |
ದೂರಾದೇವ ಪಲಾಯಂತೇ ದತ್ತಾತ್ರೇಯಂ ನಮಾಮಿ ತಮ್ ||೧||
ಯಾರ ಸ್ಮರಣೆ ಮಾತ್ರದಿಂದಲೇ ಭೂತ ಪ್ರೇತ ಪಿಶಾಚಾದಿಗಳು ದೂರವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಯನ್ನಾಮಸ್ಮರಣಾದ್ದೈನ್ಯಂ ಪಾಪಂ ತಾಪಶ್ಚ ನಶ್ಯತಿ |
ಭೀತಿಗ್ರಹಾರ್ತಿದು:ಸ್ವಪ್ನಂ ದತ್ತಾತ್ರೇಯಂ ನಮಾಮಿ ತಮ್ ||೨||
ಯಾವಾತನ ಸ್ಮರಣೆ ಮಾತ್ರದಿಂದಲೇ ಪಾಪ,ದೈನ್ಯ,ತಾಪತ್ರಯ,ದು:ಸ್ವಪ್ನಾದಿಗಳು ಪರಿಹಾರಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ದದ್ರು-ಸ್ಪೋಟಕ ಕುಷ್ಠಾದಿ- ಮಹಾಮಾರೀ ವಿಷೂಚಿಕಾ |
ನಶ್ಯಂತ್ಯನ್ಯೇಪಿ ರೋಗಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೩||
ಚರ್ಮರೋಗ-ಗೌಪ್ಯವಾಗಿರುವ ಕುಷ್ಠರೋಗ-ಸಾಂಸರ್ಗಿಕ ರೋಗವಾಗಿರುವ ಬಲಿಷ್ಟವಾದ ಮಾರಿಕಾಬೇನೆ[ಕಾಲೆರಾ]ಗಳನ್ನು ನಾಶಮಾಡುವುದರೊಂದಿಗೆ ಇತರ ರೋಗಗಳನ್ನೂ ನಾಶಮಾಡುವ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಸಂಗಜಾ ದೇಶಕಾಲೋತ್ಥಾ ಅಪಿ ಸಾಂಕ್ರಾಮಿಕಾ ಗದಾ: |
ಶಾಮ್ಯಂತಿ ಯತ್ ಸ್ಮರಣತೋ ದತ್ತಾತ್ರೇಯಂ ನಮಾಮಿ ತಮ್ ||೪||
ಸಂಸರ್ಗದಿಂದ ಉಂಟಾಗುವ ಹಾಗೂ ದೇಶಕಾಲ-ನಿಸರ್ಗ ದೋಷಗಳಿಂದುಂಟಾಗುವ ರೋಗಾದಿಗಳು;ವಿಪತ್ತುಗಳಿಗೆ ಸಿಲುಕುವುದರಿಂಟಾಗಬಹುದಾದ ಹಾನಿಗಳು;ಸಾಂಕ್ರಾಮಿಕರೋಗಗಳು,ಆಯುಧಗಳಿಂದುಂಟಾಗಬಹುದಾದ ಬಲಿಷ್ಠವಾದ ಹಾನಿಗಳೆಲ್ಲವೂ ಯಾರ ಸ್ಮರಣೆ ಮಾತ್ರದಿಂದಲೇ ನಾಶವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಸರ್ಪ ವೃಶ್ಚಿಕದಂಷ್ಟ್ರಾನಾಂ ವಿಷಾರ್ತಾನಾಂ ಶರೀರಿಣಾಮ್ |
ಯನ್ನಾಮ ಶಾಂತಿದಂ ಶೀಘ್ರಂ ದತ್ತಾತ್ರೇಯಂ ನಮಾಮಿ ತಮ್ ||೫||
ಸರ್ಪ,ಚೇಳು ಮೊದಲಾದ ವಿಷ ಜಂತುಗಳ ವಿಷದ ಸಂಕಟಕ್ಕೆ ಸಿಲುಕಿ ತೊಂದರೆಗೊಳಗಾದ ದೇಹದವನ ದು:ಖವು ಯಾವಾತನ ನಾಮಸ್ಮರಣೆಯಿಂದ ಶೀಘ್ರವಾಗಿ ಶಾಂತಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ತ್ರಿವಿಧೋತ್ಪಾತಶಮನಂ ವಿವಿಧಾರಿಷ್ಠನಾಶನಮ್ |
ಯನ್ನಾಮ ಕ್ರೂರಭೀತಿಘ್ನಂ ದತ್ತಾತ್ರೇಯಂ ನಮಾಮಿ ತಮ್ ||೬||
ವಾತ-ಪಿತ್ಥ-ಕಫಗಳು,ಹಾಗೂ ಭೀಕರವಾಗಿರುವ ಭೀತಿಗಳು ಶಮನಗೊಳ್ಳುವುದರೊಂದಿಗೆ ವಿವಿಧ ಶಾಪ ದೋಷಗಳು ಯಾವಾತನ ನಾಮಸ್ಮರಣೆಯಿಂದ ಶೀಘ್ರವಾಗಿ ಶಾಂತಗೊಳ್ಳುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ವೈರ್ಯಾದಿಕೃತಮಂತ್ರಾದಿಪ್ರಯೋಗಾ ಯಸ್ಯ ಕೀರ್ತನಾತ್ |
ನಶ್ಯಂತಿ ದೇವಭಾಧಾಶ್ಚ ದತ್ತಾತ್ರೇಯಂ ನಮಾಮಿ ತಮ್ ||೭||
ಶತ್ರುಗಳು ಮಾಡಿರುವ ಮಾಟ ಮಂತ್ರಾದಿ ದುಷ್ಟ ಪ್ರಯೋಗಗಳು,ದೇವತೆಗಳ ಬಾಧಾದೋಷಗಳು ಯಾರ ಕೀರ್ತನೆಯಿಂದ ಇಲ್ಲವಾಗುವವೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಯಚ್ಛಿಷ್ಯಸ್ಮರಣಾತ್ ಸದ್ಯೋ ಗತಂನಷ್ಟಾದಿ ಲಭ್ಯತೇ |
ಯ ಈಶ: ಸರತಸ್ತ್ರಾತಾ ದತ್ತಾತ್ರೇಯಂ ನಮಾಮಿ ತಮ್ ||೮||
ಯಾವಾತನ ಮನ:ಪೂರ್ವಕ ಸ್ಮರಣೆ ಮಾಡುವುದರಿಂದ ಕಳೆದು ಹೋದಹಾಗೂ ನಷ್ಟವಾದ ವಸ್ತುಗಳು ದೊರಕುವವೋ ,ಯಾರು ಒಡೆಯನೋ,ಸರ್ವತ್ರನಾಗಿರುವನೋ ಅಂತಹಾ ದತ್ತಾತ್ರೇಯಸ್ವಾಮಿಯೇ ನಿನಗೆ ವಂದಿಸುವೆ.
ಜಯಲಾಭಯಶ:ಕಾಮದಾತುರ್ದತ್ತಸ್ಯ ಯ: ಸ್ತವಮ್ |
ಭೋಗಮೋಕ್ಷಪ್ರದಸ್ಯೇಮಂ ಪಠೇದ್ದತ್ತಪ್ರಿಯೋ ಭವೇತ್ ||೯||
ಈ ಸ್ತೋತ್ರವನ್ನು ಪಠಿಸುವುದರಿಂದ ಜಯ,ಲಾಭ,ಯಶಸ್ಸು,ಇಷ್ಟಾರ್ಥಗಳು ಪೂರ್ಣವಾಗಿ ಒದಗಿಬರುವುದರೊಂದಿಗೆ ಅವರಿಗೆ ಸುಖಾದಿ ಭೋಗಗಳು ದೊರಕುವುದರೊಡನೆ,ಮೋಕ್ಷ ಪ್ರಾಪ್ತಿಯಾಗುವುದು.ಇವುಗಳ ಜೊತೆಯಲ್ಲಿ ದತ್ತಾತ್ರೇಯ ಸ್ವಾಮಿಯ ಪ್ರೀತಿಗೆ ಪಾತ್ರರಾಗುವರು.
|| ಇತಿ ಶ್ರೀ ದತ್ತಾತ್ರೇಯ ಧ್ಯಾನಸ್ತೋತ್ರಮ್ ||
Comments
Post a Comment