ನವಗ್ರಹ ಸ್ತೋತ್ರಮ್
ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ |
ಗುರುಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: ||
ನವಗ್ರಹರಾದ ಸೂರ್ಯ,ಚಂದ್ರ, ಕುಜ,ಬುಧ,ಗುರು,ಶುಕ್ರ,ಶನಿ ರಾಹು ಮತ್ತು ಕೇತು ಗ್ರಹಗಳಿಗೆ ಪ್ರಣಾಮಗಳು.
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||೧||
ದಾಸವಾಳ ಪುಷ್ಪದ ಸಾದೃಶ್ಯವುಳ್ಳವನೂ, ಕಶ್ಯಪ ತನಯನೂ, ಮಹಾ ಕಾಂತಿಯಿಂದ ಕೂಡಿದವನೂ,ಕತ್ತಲಿನ ವೈರಿಯೂ, ಸರ್ವ ಪಾಪಗಳ ವಿನಾಶಕನೂ ಆಗಿರುವ ಸೂರ್ಯ ದೇವನಿಗೆ ನಮಸ್ಕರಿಸುವೆ.
ದಧಿ ಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್ |
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ ||೨||
ಮೊಸರು,ಶಂಖ,ಹಾಗೂ ಮಂಜಿನಹನಿಗಳವರ್ಣವುಳ್ಳವನೂ,ಕ್ಷೀರಸಾಗರದಿಂದ ಉದ್ಭವಿಸಿದವನೂ,ಪರಶಿವನ ಶಿರೋಭೂಷಣನೂ ಆಗಿರುವ ಸೌಮ್ಯಸ್ವರೂಪಿಯಾಗಿರುವ ಚಂದ್ರನಿಗೆ ನಾನು ನಮಸ್ಕರಿಸುವೆ.
ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಮ್ ||೩||
ಪೃಥ್ವಿಯ ಗರ್ಭ ಸಂಜಾತನೂ,ವಿದ್ಯುತ್ತಿನ ಪ್ರಕಾಶ ಸದೃಶವಾದ ಬೆಳಕನ್ನು ಹೊಂದಿರುವವನೂ,ಕುಮಾರನೂ ಶಕ್ತಿಹಸ್ತನೂ ಆಗಿರುವ ಮಂಗಲದಾಯಕನಾದ ಕುಜನಿಗೆ ನಾನು ನಮಸ್ಕರಿಸುವೆ.
ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||೪||
ಹಿಪ್ಪಲಿಯ ಮೊಗ್ಗಿನಂತೆ ನೀಲವರ್ಣನೂ,ಅಪ್ರತಿಮರೂಪವುಳ್ಳವನೂ,ಸೌಮ್ಯ ಸ್ವಭಾವದವನೂ,ಶಾಸ್ತ್ರಗಳ ಬಗ್ಗೆ ಅಪಾರವಾದ ಜ್ಞಾನಿಯೂ,ಸೌಮ್ಯಮೂರುತಿಯೂ ಆಗಿರುವ ಬುಧನಿಗೆ ನಾನು ನಮಸ್ಕರಿಸುವೆ.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||೫||
ದೇವರ್ಕಳಿಗೂ ಋಷಿಮುನಿಗಳಿಗೂ ಗುರುವೂ,ಹೊಂಬಣ್ಣದ ಶರೀರವುಳ್ಳವನೂ,ಬುದ್ಧಿಸ್ವರೂಪನೂ,ಮೂರು ಲೋಕಗಳಿಗೆ ಒಡೆಯನೂ ಆಗಿರುವ ಆ ಗುರುಮೂರ್ತಿಗೆ ನಾನು ನಮಸ್ಕರಿಸುವೆ.
ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||೬||
ಮಂಜಿನಹನಿ ಬೀಳುವ ಕಾಲದ ಮಲ್ಲಿಗೆಯ ಮತ್ತು ಕಮಲ ನಾಳದ ವರ್ಣವನ್ನು ಹೊಂದಿರುವವನೂ,ಅಸುರರ ಗುರುವೂ, ಸಮಸ್ತ ಶಾಸ್ತ್ರಗಳ ಭೋಧಕನೂ ಆಗಿರುವ ಭಾರ್ಗವನೆಂಬ ನಾಮವುಳ್ಳ ಆ ಶುಕ್ರನಿಗೆ ನಾನು ನಮಸ್ಕರಿಸುವೆ.
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||೭||
ನೀಲ ಬಣ್ಣದ ಕಾಡಿಗೆಯ ಬಣ್ಣದವನೂ,ಸೂರ್ಯ ತನಯನೂ,ಯಮನ ಅಗ್ರಜನೂ,ಛಾಯೆಯಲ್ಲಿ ಸೂರ್ಯನಿಂದ ಪುತ್ರನಾಗಿ ಜನಿಸಿದವನೂ,ಆಗಿರುವ ಆ ಶನೈಶ್ಚರನಿಗೆ ನಾನು ನಮಸ್ಕರಿಸುವೆ.
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ದನಮ್ |
ಸಿಂಹಿಕಾ ಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ ||೮||
ಅರ್ಧದೇಹವುಳ್ಳವನೂ,ಮಹಾ ಶಕ್ತಿಶಾಲಿಯೂ, ಚಂದ್ರ ಸೂರ್ಯರನ್ನು ಪೀಡಿಸುವವನೂ,ಸಿಂಹಿಕೆಯ ಗರ್ಭದಲ್ಲಿ ಜನಿಸಿದವನೂ ಆಗಿರುವ ರಾಹುವಿಗೆ ನಾನು ನಮಸ್ಕರಿಸುತ್ತೇನೆ.
ಪಲಾಶ ಪುಷ್ಪ ಸಂಕಾಶಂ ತಾರಕಾಗ್ರಹ ಮಸ್ತಕಮ್ |
ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಮ್ ||೯||
ಮುತ್ತುಗದ ಹೂವಿನ ವರ್ಣವುಳ್ಳವನೂ,ಗ್ರಹ ನಕ್ಷತ್ರಗಳ ಶಿರವಾಗಿರುವವನೂ,ರುದ್ರನೂ,ಕ್ರೋಧಾತ್ಮನೂ,ಘೋರನೂ ಆಗಿರುವ ಕೇತುವಿಗೆ ನಾನು ನಮಸ್ಕರಿಸುವೆ.
ಇತಿ ವ್ಯಾಸ ಮುಖೋದ್ಗೀತಂ ಯ: ಪಠೇತ್ಸುಸಮಾಹಿತ: |
ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿರ್ಭವಿಷ್ಯತಿ ||೧೦||
ವ್ಯಾಸ ಮಹರ್ಷಿಗಳು ಸ್ತೋತ್ರ ಮಾಡಿದ ಈ ಗೀತಗಳನ್ನು ಶಾಂತ ಮನೋಭಾವದಿಂದ ಹಗಲು ಅಥವಾ ರಾತ್ರೆ ಓದುವವನ ವಿಘ್ನಾದಿ ಸಂಕಷ್ಟಗಳು ದೂರವಾಗುವವು.
ನರ ನಾರೀ ನೃಪಾಣಾಂ ಚ ಭವೇದ್ದು:ಸ್ವಪ್ನನಾಶನಮ್ |
ಐಶ್ವರ್ಯಮತುಲಂ ತೇಷಾಂ ಆರೋಗ್ಯಂ ಪುಷ್ಟಿವರ್ಧನಮ್ ||೧೧||
ಸ್ತ್ರೀಪುರುಷರಾದಿಯಾಗಿ ರಾಜರುಗಳೇ ಮೊದಲಾದ ಸಮಸ್ತರಿಗೂ ಉಂಟಾಗಿರುವ ಘೋರ ಸ್ವಪ್ನಗಳು ನಾಶವಾಗುವವು.ಅವರಿಗೆ ಹೋಲಿಕೆಗೆ ಅಸಾಧ್ಯವಾಗುವಂತಹಾ ಐಶ್ವರ್ಯ,ಆರೋಗ್ಯ, ದೇಹಪುಷ್ಟಿಯುಂಟಾಗಿ ಬೆಳೆಯುವರು.
ಗ್ರಹ ನಕ್ಷತ್ರಜಾ: ಪೀಡಾಸ್ತಸ್ಕರಾಗ್ನಿ ಸಮುದ್ಭವಾ: |
ತಾ: ಸರ್ವಾ: ಪ್ರಶಮಮ್ ಯಾಂತಿ ವ್ಯಾಸೋ ಬ್ರೂತೇ ನ ಸಂಶಯ: ||೧೨||
ಗ್ರಹಗಳಿಂದ,ನಕ್ಷತ್ರಗಳಿಂದ,ಹಾಗೆಯೇ ಕಳ್ಳಕಾಕರಿಂದ,ಅಗ್ನಿ ಪೀಡಾದಿಗಳಿಂದ ಉಂಟಾಗುವ ಸಮಸ್ತ ಪೀಡೆಗಳು ಪರಿಹಾರವಾಗುವವು ಎಂಬ ವ್ಯಾಸಮಹರ್ಷಿಗಳ ಮಾತುಗಳಲ್ಲಿ ಯಾವ ಸಂದೇಹವಿಲ್ಲ.
|| ಇತಿ ನವಗ್ರಹಸ್ತೋತ್ರಮ್ ||

Comments
Post a Comment