ವಿಷ್ಣುಸೂಕ್ತ
ಓಂ ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ |
ಪೃಥಿವ್ಯಾಃ ಸಪ್ತಧಾಮಭಿಃ ||1||
ವಿಷ್ಣುವು ಅಸುರರ ವಶದಲ್ಲಿದ್ದ ಭೂಮಿಯೇ ಮೊದಲಾದ ಏಳು ಲೋಕಗಳನ್ನು ಆಕ್ರಮಿಸಿ ದೇವತೆಗಳನ್ನು ಅವರಿಗೆ ಯೋಗ್ಯವಾದ ಸ್ಥಾನಗಳಲ್ಲಿ ಸ್ಥಾಪಿಸಿದ್ದಾನೆ. ಅಂಥಹ ದೇವತೆಗಳು ನಮ್ಮನ್ನು ರಕ್ಷಿಸಲಿ.
ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಂ |
ಸಮೂಹ್ಳಮಸ್ಯ ಪಾಂಸುರೇ ||2||
ವಿಷ್ಣುವು ಕೇವಲ ಮೂರು ಹೆಜ್ಜೆಗಳನ್ನು ಇಟ್ಟು ಇಡೀ ವಿಶ್ವವನ್ನೇ ಆಕ್ರಮಿಸಿದನು. ವಿಶ್ವವು ವಿಷ್ಣುವಿನ ಪಾದದಲ್ಲಿ ಧೂಳಿನಂತೆ ಶೋಭಿಸಿತು.
ತ್ರೀಣಿ ಪದಾ ವಿಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ |
ತತೋ ಧರ್ಮಾಣಿ ಧಾರಯನ್ ||3||
ಅಮಿತ ಶಕ್ತಿಯುಳ್ಳ ವಿಷ್ಣುವು ಮೂರು ಲೋಕಗಳನ್ನು ಮೀರಿ ನಿಂತವನು. ಅವುಗಳಿಗೆ ಆತ ರಕ್ಷಕನಾಗಿರುವನು. ವಿಶ್ವಧಾರಕನೂ ಆಗಿರುವುದರಿಂದ ದೇವತೆಗಳಿಗೂ ಅವನೇ ಧಾರಕನಾಗಿರುವನು.
ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ |
ಇಂದ್ರಸ್ಯ ಯುಜ್ಯಸ್ಸಖಾ ||4||
ವಿಷ್ಣುವು ಮಾಡುವ ಲೀಲೆಗಳನ್ನು ನೋಡಿರಿ. ಜೀವಿಗಳ ಎಲ್ಲ ಕಾರ್ಯಗಳೂ ಅವನಿಂದಲೇ ನಡೆಯುತ್ತಿವೆ. ಅವನು ಇಂದ್ರ ಮತ್ತುವಾಯುವಿಗೆ ಸದಾ ಜೊತೆಯಲ್ಲಿರುವ ಮಿತ್ರನಾಗಿದ್ದಾನೆ.
ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ |
ದಿವೀವ ಚಕ್ಷುರಾತತಮ್ ||5||
ಆ ವಿಷ್ಣುವಿನ ಶ್ರೇಷ್ಠವಾದ ಸ್ವರೂಪವನ್ನು ಯೋಗಿಗಳು ಸದಾಕಾಲವೂ ನೋಡುತ್ತಿರುತ್ತಾರೆ. ತೇಜೋರೂಪವಾದ ಅವನ ಪ್ರಭೆಯು ಆಕಾಶದಲ್ಲಿ ಹರಡಿದ್ದರೂ ಅವನು ಸಾಮಾನ್ಯ ಕಣ್ಣಿಗೆ ಗೋಚರನಾಗನು.
ತದ್ವಿಪ್ರಾಸೋ ವಿಪನ್ಯವೋ ಜಾಗೃವಾಂಸಃ ಸಮಿಂಧತೇ |
ವಿಷ್ಣೋರ್ಯತ್ಪರಮಂ ಪದಮ್ ||6||
ಜೀವನ್ಮುಕ್ತರೆನಿಸಿದ ವೇದಋಷಿಗಳು ವೇದಗಳಲ್ಲಿ ಮುಖ್ಯವಾಗಿ ಸರ್ವೋತ್ತಮನಾದ ವಿಷ್ಣುವಿನ ಸ್ವರೂಪವನ್ನೇ ವಣಿ್ಸಿರುವರು.
(ಇತಿ ವಿಷ್ಣುಸೂಕ್ತಮ್)

Comments
Post a Comment