ಅಭಿಲಾಷಾಷ್ಟಕಂ
ಕದಾ ಪಕ್ಷೀಂದ್ರಾಂಸೋಪರಿ ಗತಮಜಂ ಕಂಚನಯನಂ ರಮಾಸಂಶ್ಲಿಷ್ಟಾಂಗಂ ಗಗನರುಚಮಾಪೀತವಸನಂ |
ಗದಾಶಂಖಾಂಭೋಜಾರಿವರಮಾಲೋಕ್ಯ ಸುಚಿರಂ ಗಮಿಷ್ಯತ್ಯೇತನ್ಮೇ ನನು ಸಫಲತಾಂ ನೇತ್ರಯುಗಲಂ || 1 ||
ಪಕ್ಷಿಗಳ ರಾಜನನ್ನು ವಾಹನವಾಗಿಸಿಕೊಂಡಿರುವ, ಜನ್ಮರಹಿತನಾದ, ಕಮಲದ ಕಣ್ಣುಗಳುರುವ, ಶರೀರವೆಲ್ಲಾ ರಮಾಳಿಂದ ( ಲಕ್ಷ್ಮೀದೇವಿಯಿಂದ ) ಆಲಂಗಿಸಿರುವ, ಆಕಾಶದ ನೀಲವರ್ಣವಿರುವ, ಪೀತಾಂಬರವನ್ನು ಧರಿಸಿರುವ, ಶಂಖ - ಚಕ್ರ - ಗದಾ - ಪದ್ಮಗಳನ್ನು ಹಿಡಿದಿರುವ ಅವನನ್ನು ಈ ನನ್ನ ಕಣ್ಣುಗಳು ನೋಡುವ ಸೌಭಾಗ್ಯವೆಂದು ?
ಕದಾ ಕ್ಷೀರಾಬ್ಧ್ಯಂತಃ ಸುರತರುವನಾಂತರ್ಮಣಿಮಯೇ ಸಮಾಸೀನಂ ಪೀಠೇ ಜಲಧಿತನಯಾಲಿಂಗಿತತನುಂ |
ಸ್ತುತಂ ದೇವೈರ್ನಿತ್ಯಂ ಮುನಿವರಕದಂಬೈರಭಿನುತಂ ಸ್ತವೈಃ ಸಂತೋಷ್ಯಾಮಿ ಶ್ರುತಿವಚನಗರ್ಭೈ ಸುರಗುರುಂ || 2 ||
ಕ್ಷೀರಸಾಗರದಲ್ಲಿ, ಕಲ್ಲವೃಕ್ಷದ ನೆರಳಿನಲ್ಲಿ ಮಣಿಗಳಿಂದ ಅಲಂಕೃತವಾದ ಪೀಠದಲ್ಲಿ ಆಸೀನವಾಗಿರುವ, ಸಮುದ್ರ ರಾಜನ ಮಗಳ ( ಲಕ್ಷ್ಮಿಯ ) ಕಣ್ಣುಗಳಿಂದ ಆಲಂಗಿಸಲ್ಪಟ್ಟ, ದೇವ - ಮುನಿಗಳಿಂದ ಸ್ತುತಿಸಲ್ಪಡುವವನನ್ನು ನಾನೆಂದು ಹಾಡಿ ಸ್ತುತಿಸಲು ಶಕ್ತನಾಗುವೆನು ?
ಕದಾಮಾಭೀತಂ ಭಯಜಲಧಿತಸ್ತಾಪಸತನುಂ ಗತಾ ರಾಗಂ ಗಂಗಾತಟಗಿರಿಗುಹಾವಾಸಸಹನಂ |
ಲಪಂತಂ ಹೇ ವಿಷ್ಣೋ ಸುರವರ ರಮೇಶೇತಿ ಸತತಂ ಸಮಭ್ಯೇತ್ಯೋದಾರಂ ಕಮಲನಯನೋ ವಕ್ಷ್ಯತಿ ವಚಃ || 3 ||
ಸಂಸಾರ ಸಾಗರದಿಂದ ಭಯಗೊಂಡು ಗಂಗಾತೀರದ ಪರ್ವತ ಗುಹೆಗಳನ್ನೇ ವಾಸಸ್ಥಾನ ಮಾಡಿಕೊಂಡ ಹೇ ವಿಷ್ಣು! ದೇವೋತ್ತಮನೆಂದೂ, ರಮೇಶನೆಂದೂ ಸತತವಾಗಿ ನಿನ್ನನ್ನು ಸ್ತುತಿಸುತ್ತಾ ಕಾಯುತ್ತಿರುವ ನಾನು ಕಮಲ ನಯನನಾದ ನಿನ್ನ ಮಧುರ ಮಾತುಗಳನ್ನೆಂದು ಕೇಳುವೆನು ?
ಕದಾ ಮೇ ಹೃದ್ಪದ್ಮೇ ಭ್ರಮರ ಇವ ಪದ್ಮೇ ಪ್ರತಿವಸನ್ ಸದಾ ಧ್ಯಾನಾಭ್ಯಾಸಾದನಿಶಮುಪಹೂತೋ ವಿಭುರಸೌ |
ಸ್ಫುರಜ್ಜೋತೀರೂಪೋ ರವಿರಿವರಸಾಸೇವ್ಯಚರಣೋ ಹರಿಷ್ಯತ್ಯಜ್ಞಾನಾಜ್ಜ ನಿತತಿಮಿರಂ ತೂರ್ಣಮಖಿಲಂ || 4 ||
ಹೃದಯ ಕಮಲದಲ್ಲಿ ದುಂಬಿಯಂತೆ ಸದಾ ವಾಸಿಸುವ, ಧ್ಯಾನದಿಂದ ಆರಾಧಿತನಾದ ಮತ್ತು ಸದಾ ಸೇವಿಸಲ್ಪಟ್ಟ, ರವಿಕಿರಣಗಳ ತೇಜಸ್ಸಿನಂತಿರುವ, ಲಕ್ಷ್ಮಿಯಿಂದ ಸೇವಿಸಲ್ಲಟ್ಟ ಚರನಗಳುರುವ ಅವನು ನನ್ನ ದೃಷ್ಟಿಯನ್ನು ಮಾಸಿರುವ ಮೋಹದ ಪೊರೆಯನ್ನೆಂದು ತೆಗೆವನು ?
ಕದಾ ಮೇ ಭೋಗಾಶಾ ನಿಬಿಡಭವಪಾಶಾದು ಪರತಂ ತಪಃ ಶುದ್ಧಂ ಗುರುವಚನತೋದೈರಚಪಲಂ |
ಮನೋ ಮೌನಂ ಕೃತ್ವಾ ಹರಿಚರಣಯೋಶ್ಚಾರು ಸುಚಿರಂ ಸ್ಥಿತಿಂ ಸ್ಥಾಣುಪ್ರಾಯಾಂ ಭವಭಯಹರಾಂ ಯಾಸ್ಯತಿ ಪರಾಂ || 5 ||
ಎಂದು ನನ್ನ ಮನಸ್ನು ಭೌತಿಕ ಭೋಗಗಳ ಮೋಹಗಳಿಂದ, ಅವುಗಳ ಬಂಧನದಿಂದ ಮುಕ್ತವಾಗಿ ಸ್ಥಿರವಾಗುವುದು? ಎಂದು ತಪಸ್ಸಿನಿಂದ, ಗುರು ವಚನಗಳಿಂದ ಶುದ್ಧವಾಗಿ ಮನಸ್ಸು ಮೌನವಾಗಿ ಹರಿಯ ಚರಣಗಳಲ್ಲಿ ದೃಢವಾಗಿ ಬೇರೂರುವುದು?
ಕದಾ ಮೇ ಸಂರುದ್ಧಾಖಿಲಕರಣಜಾಲಸ್ಯ ಪರಿತೋ ಜಿತಾಶೇಷಪ್ರಾಣಾನಿಲಪರಿಕರಸ್ಯ ಪ್ರಜಪತಃ |
ಸದೋಂಕಾರಂ ಚಿತ್ತಂ ಹರಿಪದಸರೋಜೇ ಧೃತವತಃ ಸಮೇಷ್ಯತ್ಯುಲ್ಲಾಸಂ ಮುಹುರಖಿಲರೋಮಾವಲಿರಿಯಂ || 6 ||
ಎಂದು ನಾನು ಅತಿ ಉಲ್ಲಾಸದಿಂದ ರೋಮಾಂಚನಗೊಂಡು ನಿನಗಾಗಿ ಹಂಬಲಿಸುವೆನು? ಎಂದು ನಾನು ಇಂದ್ರಿಯಗಳನ್ನು, ಪ್ರಾಣವಾಯುವನ್ನು ಸಂಪೂರ್ಣವಾಗಿ ನಿಯಂತ್ರಿಸುವೆನು? ಎಂದು ಮಹತ್ಪುಣ್ಯಕರವಾದ ಓಂಕಾರವನ್ನೇ ಪಠಿಸುತ್ತಾ ಹರಿಯ ಪಾದಕಮಲಗಳಲ್ಲಿ ಮನವಿಡುವೆನು?
ಕದಾ ಪ್ರಾರಬ್ಧಾಂತೇ ಪರಿಶಿಥಿಲತಾಂ ಗಚ್ಛತಿಶನೈಃ ಶರೀರೇ ಚಾಕ್ಷೌಘೇಪ್ಯುಪರತವತಿ ಪ್ರಾಣಪವನೇ |
ವದತ್ಯೂರ್ಧ್ವಂ ಶಶ್ವನ್ಮಮ ವದನಕಂಜೇ ಮುಹುರಹೋ ಕರಿಷ್ಯತ್ಯಾವಾಸಂ ಹರಿರಿತಿಪದಂ ಪಾವನತಮಂ || 7 ||
ದೇಹದ ಅಂಗಗೆಳಲ್ಲವೂ ಬಲಹೀನವಾದಾಗ, ಪ್ರಾಣವೇ ಹೋಗುವಂತಿರುವಾಗಲಾದರೂ ಅಮೃತವೆಂದರಿತು ಪಾವನವಾದ ಹರಿನಾಮವನ್ನು ನನ್ನ ಬಾಯಿಂದ ಮತ್ತೆ ಮತ್ತೆ ಉಚ್ಚರಿಸುವೆನೋ?
ಕದಾ ಹಿತ್ವಾ ಜೀರ್ಣಂ ತ್ವಚಮಿವ ಭುಜಂಗಸ್ತನುಮಿಮಾಂ ಚತುರ್ಬಾಹುಶ್ಚಕ್ರಾಂಬುಜದರಕರಃ ಪೀತವಸನಃ |
ಘನಶ್ಯಾಮೋ ದೂತೈರ್ಗಗನಗತಿನೀತೋ ನತಿಪರೈಃ ಗಮಿಷ್ಯಾಮೀ ಶಸ್ಯಾಂತಿಕಮುಖಿಲದಃಖಾಂತಕಮಿತಿ || 8 ||
ಎಂದು ನಾನು ಕೊನೆಯುಸಿರೆಳೆದು ನಿನ್ನ ನಿವಾಸಕ್ಕೆ ಬರುವೆನು? ಈ ಹಾವಿನಂತೆ ಡೊಂಕಾಗಿರುವ ಶರೀರವನ್ನು ತ್ಯಜಿಸಿ, ನಿನ್ನ ದೂತರೊಂದಿಗೆ ಆಕಾಶದಲ್ಲಿ ಎಂದು ಬರುವೆನು? ಶಂಖ ಚಕ್ರಗಳನ್ನು ಧರಿಸಿದ ಚತುರ್ಭುಜನಾದ ನಿನ್ನ ಸನ್ನಿಧಿಯನ್ನೆಂದು ಸೇರುವೆನು ?
|| ಇತಿ ಶ್ರೀಮತ್ಪರಮಹಂಸಸ್ವಾಮಿಬ್ರಹ್ಮಾನಂದವಿರಚಿತಂ ಅಭಿಲಾಷಾಷ್ಟಕಂ ಸಂಪೂರ್ಣಂ ||
Comments
Post a Comment