ಅನ್ನ ಪೂರ್ಣಾ ಸ್ತೋತ್ರಮ್
ನಿತ್ಯಾನಂದಕರೀ ವರಾಭಯಕರೀ ಸೌಂದರ್ಯರತ್ನಾಕರೀ
ನಿರ್ಧೂತಾಖಿಲಘೋರಪಾವನಕರೀ ಪ್ರತ್ಯಕ್ಷಮಾಹೇಶ್ವರೀ |
ಪ್ರಾಲೇಯಾಚಲವಂಶಪಾವನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೧||
ನಿತ್ಯವೂ ಆನಂದವನ್ನು ನೀಡುವವಳೂ,ಭಕ್ತರಿಗೆ ವರವನ್ನೂ ಅಭಯವನ್ನೂ ಕರುಣಿಸುವವಳೂ,ಸೌಂದರ್ಯದ ನಿಧಿಯೂ,ಭಕ್ತರ ಪಾಪಗಳನ್ನು ಕಳೆದು ಅವರನ್ನು ಪಾವನರನ್ನಾಗಿಸುವವಳೂ,ಸಾಕ್ಷಾತ್ ಮಾಹೇಶ್ವರೀ ಸ್ವರೂಪಳೂ,ಪರ್ವತರಾಜನ ವಂಶವನ್ನು ಪುನೀತಗೊಳಿಸಿದವಳೂ,ಕಾಶೀ ಪಟ್ಟಣದ ಅಧೀಶ್ವರಿಯೂ,ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ನಾನಾರತ್ನವಿಚಿತ್ರಭೂಷಣಕರೀ ಹೇಮಾಂಬರಾಡಂಬರೀ
ಮುಕ್ತಾಹಾರವಿಲಂಬಮಾನವಿಲಸದ್ವಕ್ಷೋಜಕುಂಭಾಂತರೀ |
ಕಾಶ್ಮೀರಾಗರುವಾಸಿತಾ ರುಚಿಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೨||
ವಿಧವಿಧವಾಗಿರುವ ಚಿತ್ರವಿಚಿತ್ರವಾಗಿರುವ ಆಶ್ಚರ್ಯಕಾರಕವಾದ ರತ್ನಾಭರಣಗಳನ್ನು ಧರಿಸಿದವಳೂ ಹೊಂಬಣ್ಣದ ವಸನಗಳಿಂದ ಶೋಭಿಸುತ್ತಿರುವವಳೂ,ವಕ್ಷಸ್ಥಳದ ಮೇಲೆ ಪ್ರಕಾಶಮಾನವಾದಂತಹಾ ಮುತ್ತಿನ ಹಾರವನ್ನು ಧರಿಸಿಕೊಂಡಿರುವವಳೂ,ಕೇಸರಿ-ಅಗರುಗಳಿಂದ ಸುವಾಸಿತಳಾದವಳೂ,ಕಾಂತಿಯುತಳಾಗಿರುವವಳೂ ಕಾಶೀ ಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಯೋಗಾನಂದಕರೀ ರಿಪುಕ್ಷಯಕರೀ ಧರ್ಮಾರ್ಥನಿಷ್ಠಾಕರೀ
ಚಂದ್ರಾರ್ಕಾನಲಭಾಸಮಾನಲಹರೀ ತ್ರಿಲೋಕ್ಯರಕ್ಷಾಕರೀ |
ಸರ್ವೈಶ್ವರ್ಯಸಮಸ್ತವಾಂಛಿತಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೩||
ಯೋಗಾನಂದದಾಯಕಳೂ,ಶತ್ರು ಸಂಹಾರಕಳೂ,ಧರ್ಮ-ಅರ್ಥಗಳಲ್ಲಿ ಶ್ರದ್ಧೆ ಉಂಟುಮಾಡುವವಳೂ,ಚಂದ್ರ-ಸೂರ್ಯ-ಅಗ್ನಿಗಳ ಕಿರಣಕ್ಕೆ ಸಮಾನವಾದ ದೇಹಕಾಂತಿಯುಳ್ಳವಳೂ,ಮೂರು ಲೋಕಗಳನ್ನು ಪಾಲಿಸುವವಳೂ,ಹಾಗೆಯೇ ಸಮಸ್ತ ಐಶ್ವರ್ಯಗಳನ್ನೂ ವಾಂಛಿತಾರ್ಥಗಳನ್ನೂ ದಯಪಾಲಿಸುವವಳೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಕೈಲಾಸಾಚಲಕಂದರಾಲಯಕರೀ ಗೌರೀಹ್ಯುಮಾ ಶಂಕರೀ
ಕೌಮಾರೀ ನಿಗಮಾರ್ಥಗೋಚರಕರೀ ಓಂಕಾರಬೀಜಾಕ್ಷರೀ |
ಮೋಕ್ಷ ದ್ವಾರಕಪಾಟಪಾಟನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೪||
ಕೈಲಾಸ ಪರ್ವತದ ಗುಹೆಗಳನ್ನು ತನ್ನ ಆಲಯವನ್ನಾಗಿಸಿಕೊಂಡವಳೂ,ಗೌರಿ,ಉಮೆ,ಶಂಕರಿ ಹಾಗೆಯೇ ಕೌಮಾರೀ ಸ್ವರೂಪಳೂ,ವೇದಗಳ ಮಹತ್ವವನ್ನು ಮನಗಾಣಿಸುವವಳೂ,ಓಂಕಾರ ಬೀಜಾಕ್ಷರದ ಮೂಲ ಸ್ವರೂಪಳೂ,ಮೋಕ್ಷದ ಹೆಬ್ಬಾಗಿಲನ್ನು ತೆರೆಯುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ದೃಶ್ಯಾದೃಶ್ಯಪ್ರಭೂತವಾಹನಕರೀ ಬ್ರಹ್ಮಾಂಡಭಾಂಡೋದರೀ
ಲೀಲಾನಾಟಕಸೂತ್ರಭೇಧನಕರೀ ವಿಜ್ಞಾನದೀಪಾಂಕುರೀ |
ಶ್ರೀವಿಶ್ವೇಶಮನ:ಪ್ರಸಾದನಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೫||
ಸೃಷ್ಟಿಯಲ್ಲಿ ಗೋಚರವಾದ ಹಾಗೂ ಅಗೋಚರವಾದ ಸಮಸ್ತ ವಸ್ತುಗಳನ್ನು ವಹಿಸಿಕೊಂಡಿರುವವಳೂ,ಬ್ರಹ್ಮಾಂಡವನ್ನು ಒಡವೆಯ ರೂಪದಲ್ಲಿ ತನ್ನ ಉದರದಲ್ಲಿ ಧರಿಸಿಕೊಂಡವಳೂ,ಲೀಲಾನಾಟಕದ ನಿಬಂದನೆಗಳನ್ನು ಬೇಧಿಸಬಲ್ಲವಳೂ,ವಿಜ್ಞಾನವೆಂಬ ಸೊಡರು ಪ್ರಕಾಶಿಸಲು ಕಾರಣೀಭೂತಳೂ,ಶ್ರೀವಿಶ್ವೇಶ್ವರನ ಮನಸ್ಸಿಗೆ ಮುದನೀಡುವಾಕೆಯೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಉರ್ವೀಸರ್ವಜನೇಶ್ವರೀ ಭಗವತೀ ಮಾತಾನ್ನಪೂರ್ಣೇಶ್ವರೀ
ವೇಣೀನೀಲಸಮಾನಕುಂತಲಧರೀ ನಿತ್ಯಾನ್ನದಾನೇಶ್ವರೀ |
ಸರ್ವಾನಂದಕರೀ ದಶಾಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೬||
ಬ್ರಹ್ಮಾಂಡದ ಸಮಸ್ತ ಜೀವಿಗಳಿಗೂ ಈಶ್ವರಿಯೂ,ಭಗವತಿಯೂ,ತಾಯಿಯೂ, ಅನ್ನಪೂರ್ಣೇಶ್ವರಿಯೂ ಕಪ್ಪಾಗಿರುವ ಕೂದಲುಗಳಿಂದ ಮನೋಹರವಾಗಿ ಜಡೆಯನ್ನು ಹೆಣೆದುಕೊಂಡವಳೂ,ಅನುದಿನವೂ ಪ್ರಾಣಶಕ್ತಿದಾಯಕವಾಗಿರುವ ಅನ್ನ ಪ್ರಸಾದವನ್ನು ಕರುಣಿಸುವವಳೂ,ಸರ್ವಾನಂದದಾಯಕಳೂ,ಸೌಭಾಗ್ಯದಾಯಕಳೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಆದಿಕ್ಷಾಂತಸಮಸ್ತ ವರ್ಣನಕರೀ ಶಂಭೋಸ್ತ್ರಿಭಾವಾಕರೀ
ಕಾಶ್ಮೀರಾ ತ್ರಿಜನೇಶ್ವರೀ ತ್ರಿಲಹರೀ ನಿತ್ಯಾಂಕುರಾ ಶರ್ವರೀ |
ಕಾಮಾಕಾಂಕ್ಷಕರೀ ಜನೋದಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೭||
"ಅ"ಕಾರದಿಂದ"ಕ್ಷ"ಕಾರದ ತನಕದ ಸಮಸ್ತ ಅಕ್ಷರ ಸಮೂಹಗಳನ್ನು ಸೃಷ್ಟಿಸಿದವಳೂ,ಈಶ್ವರ,ಹಿರಣ್ಯಗರ್ಭ,ವಿರಾಟ್ ಗಳೆಂಬ ಅವಸ್ಥಾತ್ರಯಗಳಿಗೆ ಕಾರಣೀಭೂತಳಾದವಳೂ,ಕುಂಕುಮಾಂಕಿತೆಯೂ,ಮೂರು ಲೋಕಗಳ ಅಧಿಷ್ಠಾನದೇವತೆಯೂ, ಸೃಷ್ಟಿ-ಸ್ಥಿತಿ-ಲಯಗಳೆಂಬ ಮೂರು ತರಂಗಗಳ ರೂಪವುಳ್ಳವಳೂ,ಸದಾ ಕಾರಣ ಸ್ವರೂಪಳೂ,ಪ್ರಳಯಾಂಧಕಾರ ಸ್ವರೂಪಿಣಿಯೂ,ಸಮಸ್ತ ಆಕಾಂಕ್ಷೆಗಳನ್ನು ಈಡೇರಿಸಬಲ್ಲವಳೂ,ಭಕ್ತೋದ್ಧಾರಕಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ದರ್ವೀ ಸ್ವರ್ಣವಿಚಿತ್ರರತ್ನರಚಿತಾ ದಕ್ಷೇ ಕರೇ ಸಂಸ್ಥಿತಾ
ವಾಮೇ ಸ್ವಾದುಪಯೋದಯೋಧರೀ ಸಹಚರೀ ಸೌಭಾಗ್ಯ ಮಾಹೇಶ್ವರೀ |
ಭಕ್ತಾಭೀಷ್ಟಕರೀ ದೃಶಾ ಶುಭಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೮||
ಬಲಹಸ್ತದಲ್ಲಿ ಬಂಗಾರದ ಸೌಟನ್ನು ಧರಿಸಿದವಳಾಗಿಯೂ,ಎಡಹಸ್ತದಲ್ಲಿ ರುಚಿಕರವಾದ ಅಮೃತಕಲಶವನ್ನು ಹಿಡಿದವಳಾಗಿಯೂ,ಸಕಲ ಸೌಭಾಗ್ಯಗಳಿಗೆ ಒಡತಿಯಾಗಿಯೂ,ಭಕ್ತರ ಸರ್ವಾಭೀಷ್ಟಗಳನ್ನು ಈಡೇರಿಸುವವಳೂ,ಕಟಾಕ್ಷಮಾತ್ರದಿಂದಲೇ ಶುಭವನ್ನು ಅನುಗ್ರಹಿಸುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಚಂದ್ರಾರ್ಕಾನಲ ಕೋಟಿಕೋಟಿಸದೃಶಾ ಚಂದ್ರಾಂಶುಬಿಂಬಾಧರೀ
ಚಂದ್ರಾರ್ಕಾಗ್ನಿಸಮಾನ ಕುಂಡಲಧರೀ ಚಂದ್ರಾರ್ಕವರ್ಣೇಶ್ವರೀ |
ಮಾಲಾಪುಸ್ತಕಪಾಶಸಾಂಕುಶಧರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೯||
ಕೋಟ್ಯಾನುಕೋಟಿ ಸೂರ್ಯ ಚಂದ್ರ ಅಗ್ನಿಯರಿಗೆ ಸಮಾನವಾದ ತೇಜಸ್ಸನ್ನು ಹೊಂದಿರುವವಳೂ,ಚಂದ್ರನ ಕಿರಣಗಳನ್ನು ಪ್ರತಿಬಿಂಬಿಸುತ್ತಿರುವ ತುಟಿಯನ್ನು ಹೊಂದಿರುವವಳೂ,ಚಂದ್ರ ಸೂರ್ಯಾಗ್ನಿಗಳಂತೆ ಉಜ್ವಲವಾಗಿ ದೇದೀಪ್ಯಮಾನವಾಗಿ ಬೆಳಗುತ್ತಲಿರುವ ಕರ್ಣಾಭರಣಗಳುಳ್ಳವಳೂ,ಸೂರ್ಯ ಚಂದ್ರರಂತೆ ಕಾಂತಿಯುತವಾಗಿರುವ ದೇಹವನ್ನು ಹೊಂದಿರುವವಳೂ,ಹಸ್ತಗಳಲ್ಲಿ ಮಾಲೆ,ಪುಸ್ತಕ,ಪಾಶ,ಅಂಕುಶಗಳನ್ನು ಧರಿಸಿರುವವಳೂ, ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಕ್ಷತ್ರತ್ರಾಣಕರೀ ಮಹಾಭಯಕರೀ ಮಾತಾಕೃಪಾಸಾಗರೀ
ಸಾಕ್ಷಾನ್ಮೋಕ್ಷಕರೀ ಸದಾ ಶಿವಕರೀ ವಿಶ್ವೇಶ್ವರೀಶ್ರೀಧರೀ |
ದಕ್ಷಾಕ್ರಂದಕರೀ ನಿರಾಮಯಕರೀ ಕಾಶೀಪುರಾಧೀಶ್ವರೀ
ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ||೧೦||
ಕ್ಷತ್ರಿಯರ ಮಹಾಸಂರಕ್ಷಕಳೂ,ಭಕ್ತರ ಘೋರ ಸಂಕಟಗಳನ್ನು ಪರಿಹರಿಸಿ ಅಭಯ ಪ್ರದಾನ ಮಾಡುವವಳೂ,ದಯಾಸಾಗರೆಯೂ,ಸಾಕ್ಷಾತ್ ಮೋಕ್ಷ ಪ್ರದಾಯಕಳೂ,ಮಂಗಲದಾಯಿನಿಯೂ,ಜಗತ್ತಿನ ಅಧೀಶ್ವರಿಯೂ,ಸಂಪತ್ತನ್ನು ಧರಿಸಿರುವವಳೂ,ದಕ್ಷನು ರೋಧಿಸುವಂತೆ ಮಾಡಿದವಳೂ,ಸರ್ವರೋಗ ನಿವಾರಕಳೂ ಕಾಶೀಪಟ್ಟಣದ ಅಧೀಶ್ವರಿಯೂ ಭಕ್ತರ ಪಾಲಿನ ಕೃಪಾಮಯಿ ತಾಯಿಯೂ,ಒಡತಿಯೂ ಆಗಿರುವ ಅನ್ನಪೂರ್ಣಾದೇವಿಯೇ ನನಗೆ ಭಿಕ್ಷೆಯನ್ನು ಅನುಗ್ರಹಿಸು.
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೇ |
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತೀ ||೧೧||
ಅನವರತವೂ ಅಮೃತಮಯವಾಗಿ ಸದಾ ಪೂರ್ಣೆಯೆನಿಸಿಕೊಂಡಿರುವ ಅನ್ನಪೂರ್ಣೆ ತಾಯಿಯೇ;ಶಂಕರನಿಗೆ ಪ್ರಾಣಪ್ರಿಯಳಾದವಳೇ,ಪಾರ್ವತೀ ಮಾತೆಯೇ ನನಗೆ ಜ್ಞಾನ ವೈರಾಗ್ಯಗಳು ಸಿದ್ಧಿಸುವಂತೆ ಭಿಕ್ಷೆಯನ್ನು ಕರುಣಿಸು.
ಮಾತಾ ಮೇ ಪಾರ್ವತೀ ದೇವೀ ಪಿತಾದೇವೋ ಮಹೇಶ್ವರ: |
ಬಾಂಧವಾ: ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್ ||೧೨||
ಪಾರ್ವತೀ ದೇವಿಯೇ ನನ್ನ ತಾಯಿ.ಭಗವಂತನಾಗಿರುವ ಪರಮೇಶ್ವರನೇ ನನ್ನ ತಂದೆ.ಪರಶಿವನ ಭಕ್ತರೆಲ್ಲರೂ ನನ್ನ ಬಂಧುಗಳು. ಮೂರುಲೋಕಗಳೇ ನನ್ನ ಜನ್ಮಭೂಮಿ.ಈ ರೀತಿಯ ಮನೋ ಭಿಕ್ಷೆಯನ್ನು ಸದಾ ನನಗೆ ದಯಪಾಲಿಸು ಅಮ್ಮಾ!
|| ಇತಿ ಶ್ರೀಮದಾಚಾರ್ಯ ಶಂಕರವಿರಚಿತ ಅನ್ನಪೂರ್ಣಾ ಸ್ತೋತ್ರಮ್ ||

Comments
Post a Comment