ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್

ಔಷಧೇ ಚಿಂತಯೇದ್ವಿಷ್ಣುಂ ಭೋಜನೇಚ ಜನಾರ್ಧನಮ್ |
ಶಯನೇ ಪದ್ಮನಾಭಂಚ ವಿವಾಹೇ ಚ ಪ್ರಜಾಪತಿಮ್ ||೧||
    ಔಷಧಿಯನ್ನು ಸ್ವೀಕರಿಸುವ ಕಾಲದಲ್ಲಿ ವಿಷ್ಣುವನ್ನು, ಆಹಾರವನ್ನು ಸ್ವೀಕರಿಸುವಾಗ ಜನಾರ್ಧನನನ್ನು,ಮಲಗುವ ಸಮಯದಲ್ಲಿ ಪದ್ಮನಾಭನನ್ನು, ವಿವಾಹದ ಸಮಯದಲ್ಲಿ ಪ್ರಜಾಪತಿಯನ್ನು ಸ್ಮರಿಸಬೇಕು.

ಯುದ್ಧೇ ಚಕ್ರಧರಂದೇವಂ ಪ್ರವಾಸೇ ಚ ತ್ರಿವಿಕ್ರಮಮ್ |
ನಾರಾಯಣಂ ತನು ತ್ಯಾಗೇ ಶ್ರೀಧರಂ ಪ್ರಿಯಸಂಗಮೇ ||೨||
    ಯುದ್ಧ ಕಾಲದಲ್ಲಿ ಚಕ್ರಧರ ದೇವನನ್ನು,ಪ್ರವಾಸ ಸಮಯದಲ್ಲಿ ತ್ರಿವಿಕ್ರಮನನ್ನು, ಶರೀರ ತ್ಯಾಗ ಮಾಡುವಾಗ ನಾರಾಯಣನನ್ನು, ಪ್ರೀತಿಯ ವ್ಯಕ್ತಿಗಳು ಸೇರುವಾಗ ಶ್ರೀಧರನನ್ನು ಸ್ಮರಿಸಬೇಕು.

ದು:ಸ್ವಪ್ನೇ ಸ್ಮರ ಗೋವಿಂದಂ ಸಂಕಟೇ ಮಧುಸೂಧನಮ್ |
ಕಾನನೇ ನಾರಸಿಂಹಂ ಚ ಪಾವಕೇ ಜಲಶಾಯಿನಮ್ ||೩||
    ಘೋರ ಕನಸ್ಸುಗಳನ್ನು ಕಂಡಾಗ ಗೋವಿಂದನನ್ನು,ಸಂಕಷ್ಟದ ಸಮಯದಲ್ಲಿ ಮಧುಸೂಧನನನ್ನು,ಘೋರಾರಣ್ಯದಲ್ಲಿ ನಾರಸಿಂಹನನ್ನು, ಅಗ್ನಿ ದುರಿತದಲ್ಲಿ ಜಲಶಾಯಿಯನ್ನು ಸ್ಮರಿಸಬೇಕು.

ಜಲಮಧ್ಯೇ ವರಾಹಂ ಚ ಪರ್ವತೇ ರಘುನಂದನಮ್ |
ಗಮನೇ ವಾಮನಂ ಚೈವ ಸರ್ವ ಕಾರ್ಯೇಷು ಮಾಧವಮ್ ||೪||
    ನೀರಿನ ನಡುವೆ ಸಿಲುಕಿದಾಗ ವರಾಹರೂಪಿಯನ್ನು, ಪರ್ವತ ಪ್ರದೇಶದಲ್ಲಿ ರಘುನಂದನನನ್ನು, ದಾರಿಯಲ್ಲಿ ಸಾಗುತ್ತಿರುವ ಸಮಯದಲ್ಲಿ ವಾಮನನನ್ನು, ಮತ್ತು ಸಮಸ್ತ ಕಾರ್ಯಗಳಲ್ಲಿ ಮಾಧವನನ್ನು ಸ್ಮರಿಸಬೇಕು.

ಷೋಡಶೈತಾನಿ ನಾಮಾನಿ ಪ್ರಾತರುತ್ತಾಯ ಯ: ಪಠೇತ್ |
ಸರ್ವ ಪಾಪವಿನಿರ್ಮುಕ್ತೋ ವಿಷ್ಣು ಲೋಕೇ ಮಹೀಯತೇ ||೫||
    ಉಷ: ಕಾಲದೊಳೆದ್ದು ಈ ಹದಿನಾರು ನಾಮಗಳನ್ನು ಯಾರು ಪಠಿಸುವರೋ ಅವರು ತಮ್ಮ ಎಲ್ಲ ಪಾಪಗಳಿಂದ ವಿಮುಕ್ತಿ ಹೊಂದಿ ವಿಷ್ಣು ಲೋಕದಲ್ಲಿ ಉನ್ನತ ಪದವಿಯನ್ನು ಹೊಂದುವರು.ಈ ಭುವಿಯಲಿ ಇರುವಷ್ಟು ಸಮಯ ಸುಖ-ಶಾಂತಿಯನ್ನು ಅನುಭವಿಸುವರು.
||ಇತಿ ಶ್ರೀ ವಿಷ್ಣೋ: ಷೋಡಶನಾಮ ಸ್ತೋತ್ರಮ್||


Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ