ಶ್ರೀಮಹಾಗಣೇಶ ಪಂಚರತ್ನ ಸ್ತೋತ್ರಮ್



ಮುದಾಕರಾತ್ತ ಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಕಂ ವಿಲಾಸಿ ಲೋಕ ರಕ್ಷಕಂ |
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ||೧||
    ಮಂದಹಾಸದಿಂದ ಕೂಡಿದವನಾಗಿ ಮೋದಕವನ್ನು ಕೈಯಲ್ಲಿ ಧರಿಸಿರುವ,ಸದಾ ಮೋಕ್ಕ್ಷವನ್ನು ಕರುಣಿಸುವುದರಲ್ಲಿ ನಿರತನಾಗಿರುವ,ಶಿರದಲ್ಲಿ ಚಂದ್ರನನ್ನು ಆಭರಣೋಪಾದಿಯಲ್ಲಿ ಧರಿಸಿರುವ,ಭಕ್ತಿ ವಿಲಾಸದಲ್ಲಿ ತತ್ಪರರಾದವರನ್ನು ತನ್ನ ಲೀಲಾಮಾತ್ರದಿಂದಲೇ ಪೊರೆಯುವ,ಅನಾಥರ ಏಕಮಾತ್ರ ದಿಕ್ಕಾದ,ಲೋಕ ಕಂಠಕನಾದ ಇಭಾಸುರ ಸಂಹಾರಿಯಾದ,ಶರಣು ಹೊಕ್ಕವರ ಅಶುಭಗಳನ್ನು ತ್ವರಿತವಾಗಿ ನಾಶಗೊಳಿಸುವ ಆ ಸಿದ್ಧಿವಿನಾಯಕನಿಗೆ ನಾನು ನಮಸ್ಕರಿಸುತ್ತೇನೆ.

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮಸ್ಸುರಾರಿ ನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ||೨||
    ದುರಹಂಕಾರಿಗಳಿಗೆ ಅತಿಭೀಕರನೂ,ಆಗತಾನೇ ಉದಯಿಸುತ್ತಿರುವ ಉದಯಸೂರ್ಯನ ಕಾಂತಿಯನ್ನು ಹೊಂದಿರುವ,ಶರಣಾಗತರಾದ ದೇವದಾನವರ ಘೋರಸಂಕಟಗಳವಿನಾಶಕನಾಗಿರುವ,ಸುರೇಶ್ವರನೂ,ನಿಧೀಶ್ವರನೂ,ಗಜೇಶ್ವರನೂ,ಗಣೇಶ್ವರನೂ,ಮಹೇಶ್ವರನೂ,ಪವಿತ್ರತಮನೂ ಆಗಿರುವ ಆ ಸಿದ್ಧಿದಾಯಕ ವಿನಾಯಕನನ್ನು ನಾನು ಸದಾ ಆಶ್ರಯಿಸುತ್ತೇನೆ.

ಸಮಸ್ತಲೋಕ ಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ ||೩||
    ಸಮಸ್ತ ಲೋಕಗಳಿಗೂ ಒಳಿತನ್ನು ಕರುಣಿಸುವವನೂ,ಗಜಾಸುರನನ್ನು ಸಂಹರಿಸಿದವನೂ,ವಿಸ್ತಾರವಾದ ಉದರವನ್ನು ಹೊಂದಿದವನೂ,ಸರ್ವೋನ್ನತವಾಗಿರುವ ಆನೆಯಮೊಗದವನೂ,ನಾಶರಹಿತನೂ,ಕ್ಷಮಾದಾಯಕನೂ,ಆನಂದದಾಯಕನೂ,ಯಶಸ್ಸನ್ನು ಕರುಣಿಸುವವನೂ,ಶರಣಾರ್ತಿಗಳಿಗೆ ಪರಿಶುದ್ಧ ಮನಸ್ಸನ್ನು ದಯಪಾಲಿಸುವವನೂ,ತೇಜೋವಂತನೂ ಆಗಿರುವ ಶ್ರೀಮಹಾಗಣಪತಿಗೆ ನಾನು ನಮಸ್ಕರಿಸುವೆ.

ಅಂಕಿಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣನ್ |
ಪ್ರಪಂಚನಾಶಭೀಷಣಂ ಧನಂಜಯಾದಿ ಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ ||೪||
    ಗತಿಹೀನರಾದ ಭಕ್ತರ ದು:ಖಗಳನ್ನು ಪರಿಹರಿಸುವ,ವೇದಗಳಲ್ಲಿ ಪ್ರತಿಪಾದಿಸಲ್ಪಟ್ಟ ತ್ರಿಪುರಾಸುರಾದಿ ರಕ್ಕಸರ ಗರ್ವವನ್ನು ಸಂಹರಿಸಿದ,ಶಂಕರನ ಪುತ್ರನಾದ,ಬ್ರಹ್ಮಾಂಡದ ಲಯಕಾರ್ಯದಲ್ಲಿ ಭಯಂಕರನಾದ,ಪ್ರಾಪಂಚಿಕ ದು:ಖಗಳ ಪರಿಹಾರಕನಾದ,ಅಗ್ನಿಯೇ ಮೊದಲಾದ ದೇವತಾ ಸಮೂಹಕ್ಕೆ ಭೂಷಣಪ್ರಾಯನಾದ,ಗಂಡಸ್ಥಳದಿಂದ ಗಲ್ಲದ ತನಕ ಸ್ರವಿಸುತ್ತಿರುವ ಬೆವರನ್ನು ಒರೆಸಿಕೊಳ್ಳುತ್ತಲಿರುವ ಆದಿಪುರುಷನಾದ ಶ್ರೀ ಮಹಾಗಣಪತಿಗೆ ನಾನು ನಮಸ್ಕರಿಸುವೆನು.

ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮಂತಮೇಕಮೇವ ತಂ ವಿಚಿಂತಯಾಮಿ ಸಂತತಮ್ ||೫||
    ವಿಶೇಷವಾಗಿಯೂ ಮನೋಹರವಾಗಿಯೂ ಹೊಳೆಯುತ್ತಲಿರುವ ದಂತಗಳನ್ನುಹೊಂದಿರುವವನಾದ ಯಮನಿಗೆ ಯಮನಾಗಿರುವ, ಶಿವತನಯನಾದ,ಚಿಂತನೆಗಳಿಗೆನಿಲುಕದ ಅಚಿಂತ್ಯರೂಪನಾದ,ವಿನಾಶವಿಲ್ಲದವನಾದ ವಿಘ್ನಗಳ ಧ್ವಂಸಕನಾಗಿರುವ,ಯೋಗಿಗಳ ಹೃದಯಸಿಂಹಾಸನದಲ್ಲಿ ನಿರಂತರ ನೆಲೆಯಾಗಿರುವ ಏಕದಂತನಾದ ಶ್ರೀ ಮಹಾಗಣಪತಿಗೆ ನಾನು ನಮಸ್ಕರಿಸುವೆ.

ಮಹಾಗಣೇಷ ಪಂಚರತ್ನಮಾದರೇಣ ಯೋsನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋsಚಿರಾತ್ ||೬||
    ಅನುದಿನವೂ ಪ್ರಾತ:ಕಾಲದಲ್ಲಿ ಮಹಾಗಣಪತಿಯನ್ನು ತನ್ನ ಹೃತ್ಕಮಲದಲ್ಲಿರಿಸಿ ಸ್ಮರಣೆಮಾಡಿ ಈ ಮಹಾಗಣೇಶ ಪಂಚರತ್ನ ಸ್ತೋತ್ರಗಳನ್ನು ಪಠನ ಮಾಡುವ ಮನುಜರಿಗೆ ನಿರೋಗತ್ವ,ನಿರ್ದೋಷತ್ವಗಳು ದೊರಕಿ,ಅವರಿಗೆ ಸನ್ಮಿತ್ರರ ಸಂಘದೊರಕಿ,ಸತ್ಪುತ್ರ,ಪೂರ್ಣಾಯುಷ್ಯಾದಿ ಸಕಲೈಶ್ವರ್ಯಸೌಭಾಗ್ಯಗಳನ್ನು ಶೀಘ್ರವಾಗಿ ಹೊಂದುತ್ತಾರೆ.
||ಇತಿ ಶ್ರೀ ಮದಾಚಾರ್ಯ ಆದಿಶಂಕರಭಗವದ್ಪಾದ ವಿರಚಿತ ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರಮ್||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ