ದೇವತೆಗಳ ವಾಹನಗಳು
ವೇದಪುರಾಣಗಳಲ್ಲಿ ದೇವತೆಗಳ ವಾಹನಗಳ ಬಗ್ಗೆ ವಿಶಿಷ್ಟ ವಿವರಗಳಿವೆ ಅವರು ಬೇರೆ ಬೇರೆಯಾದ ವಿಮಾನಗಳನ್ನಲ್ಲದೆ ವೃಷಭ, ಮಹಿಷ, ಮೂಷಿಕ, ಆನೆ, ಗರುಡ, ಕಾಗೆ ಇತ್ಯಾದಿ ಪಶುಪಕ್ಷಿಗಳನ್ನೂ ವಾಹನಗಳನ್ನಾಗಿ ಮಾಡಿಕೊಂಡಿದ್ದರು ಇಂದಿನ ಬುದ್ಧಿಜೀವಿಗಳಿಗೆ ಇದೊಂದು ಆಶ್ಚರ್ಯಕರ ವಿಷಯವಾಗಿದ್ದರೂ, ಪೌರಾಣಿಕ ಸಾಹಿತ್ಯಕ ದೃಷ್ಟಿಯಿಂದ ಇವೆಲ್ಲವೂ ಸತ್ಯವಾಗಿದ್ದವು.
ದೇವತೆಗಳು ಬ್ರಹ್ಮ ಲೋಕಕ್ಕೆ ಹೋಗಲು ಅಲ್ಲಿಂದ ವಿಷ್ಣು ಲೋಕ, ಶಿವ ಲೋಕ್ಕಕ್ಕೆ ಹೋಗಬೇಕಾದರೆ ಅವರು ವಿವಿಧ ರೀತಿಯ ವಿಮಾನಗಳಲ್ಲಿ ಹೋಗುತ್ತಿದ್ದರು ಎಂಬುದು ಶತಸ್ಸಿದ್ಧ. ಈ ವಿಮಾನಗಳು ಇಂದಿನ ಆದುನಿಕ ವಿಮಾನಗಳಿಗಿಂತಲೂ ತಾಂತ್ರಿಕ ವೈಶಿಷ್ಟಪೂರ್ಣವಾದುವೂ ಹೆಚ್ಚು ಶಕ್ತಿಶಾಲಿಯಾದುವೂ ಆಗಿದ್ದವು, ಅವು ಮನೋವೇಗಕ್ಕಿಂತ ಹೆಚ್ಚು ವೇಗವಾಗಿ ಹೋಗುವಂತಹವೂ, ತೀವ್ರಗಾಮಿಗಳೂ ಆಗಿದ್ದವು.
ಹರಿದ್ವಾರದಲ್ಲಿ ಸನಕಾದಿ ಮುನೀಶ್ವರರು ನಾರದರಿಗೆ ಶ್ರೀಮದ್ಭಾಗವತದ ಕಥಾನಕವನ್ನು ವಿವಿರಿಸುತ್ತಿದ್ದರು ಆ ಸಮಯದಲ್ಲಿ ದೇವತೆಗಳು ಆಕಾದಲ್ಲಿನ ವಿಮಾನಗಳಲ್ಲಿ ಕುಳಿತುಕೊಂಡು ಪಾರಿಜಾತ, ಹರಿಚಂದನ ಇತ್ಯಾದಿ ಕಲ್ಪವೃಕ್ಷದ ಪುಷ್ಪಗಳನ್ನು ಸುರಿಸಿರು.
ವಿಮಾನಾನಿ ಸಮಾರು ಹ್ಯ
ಕಿಯಂತೋ ದೇವನಾಯಕಾ
ಕಲ್ಪವೃಕ್ಷ ಪಸರಸೂನೈಸ್ತಾನ್
ಸರ್ವಾಂಸ್ತತ್ರ ಸಮಾಕಿರನ್ || (ಪದ್ಮಪುರಾಣ-ಉತ್ತರಖಂಡ)
ಮೇರು ಗಿರಿಯಲ್ಲಿ ಸ್ಕಂದ ಸರೋವರ ಒಂದ ಸುಂದರ ಪ್ರದೇಶ ಅದರ ತಟದ ಮೇಲೆ ಸಂತ ನೈಮಿಷರು ಶ್ರೀ ಸನತ್‌ಕುಮಾರನನ್ನು ಭೇಟಿ ಮಾಡಿದರು ಆಗ ಅವರು ಪಾಶಚ್ಛೇದನಾರ್ವ ಪ್ರಾರ್ಥನೆ ಮಾಡಿದರು ಅದೇ ಸಮಯಕ್ಕೆ ಸರಿಯಾಗಿ ಸೂರ್ಯನಂತೆ ಪ್ರಕಾಶಮಾನವಾದ ಸುಂದರ ವಿಮಾನವೊಂದು ಕಂಡು ಬಂದಿತು ಅದನ್ನು ಅಸಂಖ್ಯಾಕರಾದ ಗಣೇಶ್ಚರರು ನಾಲ್ದೆಸೆಗಳಿಂದಲೂ ಸುತ್ತುವರೆದಿದ್ದರು
ದದೃಶೆ ತತ್ನಣೆ ತಸ್ಮಿನ್
ವಿಆನಂ ಬಾನುಸನ್ನಿಬಮ್
ಗಣೇಶ್ವರೈರ ಸಂಖ್ಯೇಯೈ
ಸಂವೃತಂ ಚ ಸಮಂತತ || (ಶಿವಪುರಾಣ ವಾ ಸಂ, ಉ ಖಂ 41-22)
ಆ ವಿಮಾನದ ಮದ್ಯಭಾಗದಲ್ಲಿ ಎರಡು ಝೂಲರಿಗಳ ನಡುವೆ ಚಂದ್ರಮನ ಸಮಾನ ಉಜ್ಜಲ, ದುಣಿಮಯ ದಂಡದಿಂದ ಕೂಡಿದ ಶುದ್ಧ ಛತ್ರದ ಕೆಳಗೆ ದಿವ್ಯ ಸಿಂಹಾಸನದ ಮೇಲೆ ಶಿಲಾದ ಪುತ್ರ ನಂದಿಯು ತನ್ನ ಪತ್ನಿ ಸುಯಶಾಳೊಂದಿಗೆ ಕುಳಿತಿದ್ದನು.
ತಸ್ಯ ಮದ್ಯೇ ವಿಮಾನಸ್ಯ
ಚಾಮರದ್ವಿತಯಾಸ್ತರೇ
ಛತ್ರಸ್ಯ ಮಣಿದಂಡಸ್ಯ
ಚಂದ್ರಸ್ಯೇವ ಶುಚೇರದ
ದಿವ್ಯಂ ಸಿಂಹಾಸನಾರೂಢಂ
ದೇವ್ಯಾ ಸುಯಶಯಾ ಸಹ (ಶಿವಪುರಾಣ ವಾ ಸಂ, ಉ ಕಾಂ 41/26-27)
ನಂದಿಯು ಶಂಕರನ ವಾಹನ ಎಂದು ಜನ ನಂಬುತ್ತಾರೆ ವ್ಯಾಸರು ಈತನನ್ನು ಸಾಕ್ಷಾತ್ ಶಿವ ರೂಪವೆಂದು ವರ್ಣಿಸಿದ್ದಾರೆ ಮುಂದುವರೆದು 'ಆತನ ಕೈನಲ್ಲಿ ಸುಂದರ ತ್ರಿಶೂಲವಿತ್ತು, ಆತನಿಗೆ ನಾಲ್ಕು ಭುಜಗಳು ಇದ್ದವು, ಹಣೆಯ ಮೇಲೆ ಚಂದ್ರಾಕತಿಯು ಇದ್ದುದೇ ಅಲ್ಲದೆ ಆತನ ಕಂಠದಲ್ಲಿ ನಾಗನು ಸುಶೋಭಿತನಾಗಿದ್ದನು' ಎಂದು ತಿಳಿಸಿದ್ದಾರೆ.
ಶಿಲಾದತನಯಂ ಸಾಕ್ಷಾತ್
ಶ್ರೀಮಚ್ಛೂಲವರಾಯುದಮ್
ಚತುರ್ಬಾಹು ಮುದಾರಾಂಗಂ
ಚಂದ್ರರೇಖಾ ವಿಭೂಷಿತಮ್
ಕಂಠೇ ನಾಗೇನ ಮೌಲೌ ಚ
ಶಶಾಂಕೇನಾಪ್ಯಲಂ ಕೃತಮ್
ಸವಿಗ್ರಹ ಮಿವೈಶ್ಚೆರ್ಯ
ಸಮರ್ದ್ಯಮಿವ ಸತ್ತಿಯಮ್ (ಶಿವಪುರಾಣ ವಾಸಂ, ಉ ಖ ಶ್ಲೋಕ 31-32)
ಮೇಲಿನ ಸಂದರ್ಭಗಳಿಂದ ಪ್ರಮಾಣೀತಗೊಳ್ಳುವುದೇನೆಂದರೆ ನಂದೀಶ್ವರನ ಆಕೃತಿ ಮಾತ್ರದಿಂದಲೇ ವೃಷಭನಂತಿರಲಿಲ್ಲ ಆತನು ಸಾಕ್ಷತ್ ಶಂಕರನಂತಿದ್ದನು ಆತನ ವಿಮಾನದಲ್ಲಿ ಧ್ವಜದಲ್ಲಿ ವೃಷಭದ ಚಿಹ್ನೆ ಇತ್ತು.
ವೀರ ಗೋವೃಷ ಚಿಹ್ನೇ
ವಿದ್ರುಮುದ್ರುಮಯಷ್ಟಿನಾ
ದೇವತೆಗಳ ಪ್ರತಿಯೊಂದ ವಿಮಾನವೂ ಬೇರೆ ಬೇರೆಯೇ ಆದ ಸ್ವರೂಪವನ್ನು ಪಡೆದಿದ್ದವು ವಿಮಾನವೊಂದರ ಅಗ್ರಭಾಗದಲ್ಲಿ ಮಹಿಷನ ತತಿಯ ಕೊಂಬುಗಳನ್ನು ಲಗತ್ತಿಸಲಾಗಿತ್ತು ಮತ್ತೊಂದು ವಿಮಾನದ ಅಗ್ರ ಭಾಗವು ಆನೆಯ ಮುಖವನ್ನು ಹೋಲುತ್ತಿದ್ದರೆ ಮತ್ತೊಂದು ವಿಮಾನವು ಮಯೂರದಾಕಾರವನ್ನು ಹೊಂದಿತ್ತು.
ಇದಲ್ಲದೆ ಪ್ರತಿಯೊಬ್ಬ ದೇವತೆಯೂ ಧ್ರುತಗತಿಯಲ್ಲಿ ವಿಮಾನಗಳನ್ನು ನಡೆಸುತ್ತಿದ್ದನು ವಿಮಾನದ ಆಕಾರ, ಧ್ವಜ ಹಾಗೂ ಚಿಹ್ನೆಗಳು ಆಯಾ ದೇವತೆಯ ಪರಿಚಯವನ್ನು ಮಾಡುತ್ತಿದ್ದವು.
ಭಗವತೀ ಜಗದಂಬೆಯನ್ನು ಸಿಂಹವಾಹಿನಿ ಎಂದೇ ಕರೆಯುವರು.
ಆದರೆ ಆಕೆಯ ಬಳಿ ಮನೋವೇಗದಿಂದ ಚಲಿಸುವ ವಿಮಾನಗಳು ಇದ್ದುವೇ ಅಲ್ಲದೆ ಸಂಕಲ್ಪಮಾತ್ರದಿಂದ ಅವುಗಳಿಗೆ ಸಮಾನವಾದ ನೂರಾರು ವಿಮಾನಗಳನ್ನು ಪ್ರಕಟಗೊಳಿಸುವ ಸಾಮರ್ಥ್ಯವೂ ಆಕೆಯಲ್ಲಿತ್ತು.
ಏಕಾರ್ಣವದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕುರಿತು ಭಗವತೀ ಜಗದಂಬೆಯು ಅವರು ತಮ್ಮ ತಮ್ಮ ಕಾರ್ಯಗಳನ್ನು ನೆರವೇರಿಸುವಂತೆ ಆದೇಶ ನೀಡುವಳು.
ಕಾಜೇಶಾ ಸ್ವಾನಿ ಕಾರ್ಯಣಿ
ಕುರುಷ್ವಂ ಸಮತಂದ್ರಿತಾ (ದೇವೀ ಭಾಗವತ 3-2-32)
ಆಗ ಆ ಮೂವರೂ ದೇವರುಗಳು ತಾವು ಶಕ್ತಿಹೀನರಾಗಿರುವುದಾಗಿಯೂ, ಅದರಿಂದ ತಮ್ಮ ಕಾರ್ಯವನ್ನು ನಿರ್ವಹಿಸುವುದರಲ್ಲಿ ಅವರು ಅಸಮರ್ಥರಾಗಿರುವುದಾಗಿಯೂ ತಿಳಿಸಿದರು
ಆಗ ಇದ್ದಕ್ಕಿದ್ದಂತೆ ಆಕಾಶದಲ್ಲಿ ಒಮದು ಸುಂದರ ವಿಮಾನ ಕಾಣಿಸಿತು ಅದನ್ನು ತೋರಿಸುತ್ತಾ ದೇವಿಯು ಮುಗುಳುನಗುತ್ತಾ ಹೇಳಿದಳು, "ನೀವು ಈ ವಿಮಾನದಲ್ಲಿ ಕುಳಿತುಕೊಳ್ಳಿ!"
ಝಟಿತ್ಯೇವಾಗತಂ ತತ್ರ
ವಿಮಾನಂ ಗಗನಾಚ್ಛುಭಮ್
ಸೋವಾಚಾಸ್ಮಿನ್ ಸುರಾ ಕಾಮಂ
ವಿಶಧ್ವಂ ಗತಸಾಧ್ವಸಾ (ದೇವೀ ಭಾಗವತ 3-2-37)
ಈ ವಿಮಾನವು ಅಮೂಲ್ಯ ರತ್ನಗಳಿಂದ ನಿರ್ಮಾಣವಾದುದಾಗಿತ್ತು ಅದರಲ್ಲಿ ಮುತ್ತಿನ ಜಾಲರಿಗಳಿದ್ದುವು, ಅದರಲ್ಲಿನ ಸಣ್ಣ ಗಂಟೆಗಳು ಇಂಪಾದ ದನಿಯನ್ನು ನೀಡುತ್ತಿದ್ದವು.
ದೇವಿಯು ತನ್ನ ಶಕ್ತಿಯಿಂದ ಅದನ್ನು ಆಕಾಶದಲ್ಲಿ ಹಾರಿಸಿದಳು.
ಸಮಾರುಹ್ನೋಪವಿಷ್ಟಾ ಸ್ವು
ವಿಮಾನೇ ರತ್ನ ಮಂಡಿತೆ
ಮುಕ್ತಾ ದಾಮ ಸುಸಂವೀತೇ
ಕಿಂಕಿಣೀಜಾಲ ಶಬ್ದಿತೆ
ಸ್ವಶಕ್ತ್ಯಾ ತದ್ಪಿಮಾನಂ ವೈ
ನೋದಯಾಮಾಸ ಚಾಮ್ಬರೆ (ದೇವಿ ಭಾಗವತ 3-2-39,41)
ಭೂಮಿ, ಭೂಪಾಲ, ಪ್ರಜೆಗಳು, ವನೋಫಯುಕ್ತ ಭೂಲೋಕವನ್ನು, ಇಂದ್ರಾದಿ ದೇವತೆಗಳ ಸಮೇತ ಸ್ವರ್ಗಲೋಕವನ್ನು, ಬ್ರಹ್ಮ, ಸನಕಾದಿ ಹಾಗೂ ಮರೀಚ್ಯಾದಿ ಋಷಿಗಳಿಂದ ಕೂಡ ಬ್ರಹ್ಮ ಲೋಕವನ್ನು ವಿಷ್ಣು ಹಾಗೂ ಅವರ ಪಾರ್ಷದರಿಂದ ಕೂಡಿದ ವಿಷ್ಣು ಲೋಕವನ್ನು ತ್ರಿಮೂರ್ತಿಗಳೂ ಆ ವಿಮಾನದಲ್ಲಿ ಕುಳಿತಿರುವಂತೆ ಆಶ್ಚರ್ಯ ಚಕ್ಷುಗಳಿಂದ ನೋಡಿದರು ಇದೇ ರೀತಿಯಲ್ಲಿ ಭಗವತೀ ಜಗದಂಬೆಯು ಆಸೀನಳಾದಂತಹ ವಿಮಾನವು ತಮ್ಮ ವಿಮಾನಕ್ಕಿಂತಲೂ ವೇಗವಾಗಿ ಮುಂದೆ ಹೋಗುತ್ತಿರುವುದನ್ನು ಅವರುಗಳು ನೋಡಿದರು.
ಅಸ್ಮಾಭಿ ಸಂಸ್ಥಿತಾ ದೃಷ್ಟಾ
ವಿಮಾನೋಪರಿ ಚಾಂಬಿಕಾ
ವಿಮಾನಗಳ ನಿರ್ಮಾಣ ವೈವಿಧ್ಯತೆ
ಪುರಾಣಗಳನ್ನು ಆಳವಾಗಿ ಅದ್ಯಯನ ಮಾಡಿದಲ್ಲಿ ವಿಮಾನಗಳ ನಿರ್ಮಾಣದ ಬಗ್ಗೆ ವಿವರಗಳು ತಿಳಿದುಬರುವುವು ಈ ದೃಷ್ಟಿಯಿಂದ ಎರಡು ರೀತಿಯ ವಿಮಾನ ನಿರ್ಮಾಣಗಳನ್ನು ಕಾಣಬಹುದು.
ಮೊದಲನೆಯದು ಅಷ್ಟ ಸಿದ್ಧಿಸಂಪನ್ನವಾದವುಗಳೂ, ಮಹರ್ಷಿಗಳು ಹಾಗೂ ದಿವ್ಯ ಶಕ್ತಿಗಳಿಂದ ಕೂಡಿರುವುಗಳೂ ಆದವುಗಳಾಗಿವೆ - ದೇವತೆಗಳ ಮುಖಾಂತರ ಸಂಕಲ್ಪ ಮಾತ್ರದಿಂದ ಉತ್ಪನ್ನವಾಗುವ ವಿಮಾನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಮಹರ್ಷಿ ಕರ್ದಮನ ತನ್ನ ಚಿರಕಾಲದ ಸಮಾದಿಯ ಅವಸ್ಥೆಯಲ್ಲಿಯೂ ಕೂಡ ಅವಿಚಲಳಾಗಿ ಹಾಗೂ ಪ್ರತಿಫಲಾಪೇಕ್ಷೆಯಿಲ್ಲದ ಸೇವೆ ಮಾಡಿದ ತನ್ನ ಪತ್ನಿ ದೇವಹೂತಿಯ ಬಗ್ಗೆ ಸಂತೋಷಗೊಂಡು, ಪ್ರಸನ್ನನಾಗಿ ಯೋಗ ಶಕ್ತಿ ಯಿಂದ ಕಾಮಗ (ಇಚ್ಛಾನುಸಾರ ಹಾರಾಡುವ) ವಿಮಾನದ ರಚನೆ ಮಾಡಿದರು. ಆ ವಿಮಾನವು ಒಳಭಾಗದಲ್ಲಿ ತುಂಬಾ ವಿಸ್ತಾರವಾಗಿದ್ದುದೇ ಅಲ್ಲದೆ ಜೀವನಾವಶ್ಯಕ ಉಪಕರಣಗಳು ಹಾಗೂ ವಸ್ತುಗಳಿಂದ ಸಂಪನ್ನಗೊಂಡಿತ್ತು
ಪ್ರಿಯಾಯಾ ಪ್ರಿಯಮನ್ವಿಚ್ಛನ್
ಕರ್ದಮೋ ಯೋಗಮಾಸ್ಥಿತ
ವಿಮಾನಂ ಕಾಮಗಂ ಕ್ಷತ್ರ
ಸ್ತರ್ಹ್ಯೇವಾ ವಿರಚಿಕರತ್ (ಶ್ರೀಮದ್ಭಾಗವತ 3-23-12)
ವಿದ್ಯಾದರ ಚಿತ್ರಕೇತುವು ಘೋರವಾದ ತಪಸ್ಸು ಮಾಡಿದ ಅವನ ತಪಸ್ಸು ಹಾಗೂ ಪ್ರಾರ್ಥನೆಗಳಿಂದ ಸಂತುಷ್ಟನಾದ ಭಗವಾನ್ ವಿಷ್ಣುವು ಅವನಿಗೆ ಸುಂದರ ವಿಮಾನವೊಂದನ್ನು ನೀಡಿದನು ತೇಜೋಮಯ ಆ ವಿಮಾನದ ಮೇಲೆ ಕುಳಿತು ಅವನು ಪ್ರಯೋಗಿಸುತ್ತಿದ್ದಾಗ, ಸಿದ್ದಚಾರಣರಿಮದ ಆವೃತನಾದ ಭಗವಾನ್ ಶಂಕರನನ್ನು ನೋಡಿದನು.
ಏಕದಾಸ ವಿಮಾನೇನ
ವಿಷ್ಣುದತ್ತೇನ ಬಾಸ್ವತಾ
ಗಿರಿಶಂ ದದೃಶೆ ಗಚ್ಛನ್
ಪರೀತಂ ಸಿದ್ಧಚಾರಣೈ (ಶ್ರೀಮದ್ಭಾಗವತ 6-17-4)
ಎರಡನೆಯ ತರಹದ ವಿಮಾನಗಳನ್ನು ವಿಶ್ವ ಕರ್ಮ, ಮಯ ದಾನವ ಇತ್ಯಾದಿ ಪ್ರಾಚ್ಯ ವೈಜ್ಷಾನಿಕ ಮುಖಾಂತರ ರಚಿಸಲ್ಪಟ್ಟ ವಿಶಿಷ್ಟ ದಿವ್ಯ ಉಪಕರಣಗಳಿಂದ ಕೂಡಿದ ವಿಮಾನಗಳ ಉಲ್ಲೇಖವು ದೊರೆಯುತ್ತದೆ.
ರಾಜಾ ಶಾಲ್ವನು ಯದುವಂಶೀಯರಿಂದ ಪರಾಜಯಗೊಂಡನು ಇದರಿಂದ ಹಟತೊಟ್ಟ ಅವನು ಒಂದು ವರ್ಷದವರೆಗೆ ಪ್ರತಿದಿನ ಒಂದು ಹಿಡಿ ದೂಳನ್ನು ಮಾತ್ರ ಆಹಾರವನ್ನಾಗಿ ಸೇವಿಸುತ್ತಾ ಭಗವಾನ್ ಶಂಕರನನ್ನು ಪ್ರಸನ್ನಗೊಳಿಸಿದ ಆತನು ಶಾಲ್ವನಿಗೆ ಒಂದು ವಿಮಾನವನ್ನು ವರವಾಗಿ ನೀಡಿದ ಅದನ್ನು ದೇವತೆಗಳು ಅಸುರರು, ಗಂದರ್ವರು ನಾಗರು ಹಾಗೂ ರಾಕ್ಷಸರು ನಾಶಪಡಿಸಲು ಸಾಧ್ಯವಿರಲಿಲ್ಲ ಅದು ಯಾರ ಅದೀನದಲ್ಲಿರುತ್ತದೆಯೋ ಅವರ ಇಷ್ಟದ ಪ್ರಕಾರ, ಅವರು ಹೇಳುವ ಸ್ಥಳಕ್ಕೆ ಚಲಿಸುತ್ತಿತ್ತು ಇದನ್ನು ಶಂಕರನ ಅಜ್ಞೆಯಂತೆ ಮಯದಾನವನು ನಿರ್ಮಿಸಿದ ಇದಕ್ಕೆ 'ಸೌಭ' ಎನ್ನುವ ಹೆಸರನ್ನು ನೀಡಲಾಯಿತು ಇದು ಶತ್ರುಗಳಿಗೆ ಅಗಮ್ಯವಾದುದಾಗಿತ್ತು.
ದೇವಾಸುರ ಮನುಷ್ಯಾಣಾಂ
ಗಂದರ್ವೋರಗ ರಕ್ಷತಿಮ್
ಅಭೇದ್ಯಂ ಕಾಮಗಂ ವವ್ರೆ
ಸಯಾನಂ ವೃಷ್ಟಿ ಭೀಷಣಮ್
ತದೆ ತಿ ಗಿರಿಶಾದಿಷ್ಟೋ
ಮಯ ಪರಪುರಂಜಯ
ಪುರಂ ನಿರ್ಮಾಯ ಶಾಲ್ವಾಯ
ಪ್ರಾದಾತ್ ಸೌಭಮಯಸ್ಮಯಮ್
ಸ ಲಬ್ಧ್ವಾ ಕಾದುಗಂ ಯಾನಂ
ತಮೋದಾಮ ದುರಾಸದಮ್ (ಶ್ರೀಮದ್ಭಾಗವತ 10-76-6,8)
ಶಾಸ್ತ್ರಗಳು ಹಾಗೂ ಪುರಾಣ ಕವನಗಳ ಅನುಸಾರ ಶಿವ, ಬ್ರಹ್ಮ, ವಿಷ್ಣು, ಗಣೇಶ, ಹಾಗ ದುರ್ಗ ಇತ್ಯಾದಿ ದೇವತೆಗಳಿಗೆ ನಂದಿ, ಹಂಸ, ಗರುಡ, ಮೂಷಕ, ಹಾಗೂ ಸಿಂಹಗಳು ವಾಹನಗಳಾಗಿದ್ದುದು ತಿಳಿದು ಬರುತ್ತದೆ ಈ ವಾಹನಗಳು ದಿವ್ಯ ತೇಜೋಮಯವಾಗಿದ್ದು, ಅನಂತ ಶಕ್ತಿ ಸಂಪನ್ನವಾಗಿದ್ದುವು, ತಮ್ಮ ಬಾಹ್ಯ ದೇವತೆಗಳಿಗೆ ಅನುರೂಪವಾಗಿಯೇ ಅವೂ ಕೂಡ ದಿವ್ಯ ಶಕ್ತಿ ಹಾಗೂ ಪರಾಕ್ರಮಗಳಿಂದ ಸಂಪನ್ನವಾಗಿದ್ದುವು, ಅಲ್ಲದೆ ಅವು ತಮ್ಮ ಸ್ವಾಮಿಯೊಂದಿಗೆ ಪ್ರತಿಯೊಂದು ಕಲ್ಪದಲ್ಲಿಯೂ ಅದ್ಭುತವಾಗುತ್ತ ಮುಂದುವರಿದುವು, ಅವು ಬಹಳ ಕಾಲದವರೆಗೆ ನಿತ್ಯ ದಿವ್ಯ ಯೌವನದಿಂದ ಕೂಡಿದ್ದು, ಪರಾಕ್ರಮ, ಶಕ್ತಿ ಇತ್ಯಾದಿಗಳಿಂದ ಸಂಪನ್ನವಾಗಿದ್ದುವು.
ಗರುಡನನ್ನು ಇದಕ್ಕೆ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು ಅವನನ್ನು ಛಂದೋಮಯ, ವೇದಮಯ, ವೇದಾತ್ಮಾ ಇತ್ಯಾದಿ ವಿಶೇಷಣಗಳಿಂದ ಹೊಗಳಲಾಗಿದೆ ಅವನು ಚಲಿಸುವಾಗ ಅವನ ರೆಕ್ಕೆಗಳ ಧ್ವನಿಯಿಂದ ಸ್ವತ ಸಾಮವೇದದ ಋಚಗಳ ಗಾನವೇ ಹೊರಹೊಮ್ಮುತ್ತಿತ್ತು.
ಇಂತಹ ವಿಶೇಷತೆಗಳು ಇತರೇ ವಾಹನಗಳಲ್ಲಿಯೂ ಇವೆ ಅವು ತಮ್ಮ ಇಚ್ಛಾನುಸಾರ ಯಾವುದೇ ರೂಪವನ್ನಾದರೂ ದಾರಣೆ ಮಾಡಬಲ್ಲಂತಹ ಶಕ್ತಿಯನ್ನು ಪಡೆದಿದ್ದುವು. ಭಗವಾನ್ ನಂದಿಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು ಈತನು ವೃಷಭ ರೂಪದಲ್ಲಿ ಪ್ರತಿಷ್ಠಿತನಾಗಿದ್ದು, ಸಕಲರಿಂದ ಪೂಜಿತಗೊಳ್ಳುತ್ತಿದ್ದಾನೆ ಎಲ್ಲಾ ದೇವತೆಗಳು, ಋಷಿಗಳು ಹಾಗೂ ಹನುಮಂತ ಇತ್ಯಾದಿಯವರುಗಳಿಂದಲೂ ಪೂಜಿಸಲ್ಪಟ್ಟಿದ್ದಾನೆ.
Comments
Post a Comment