ಸಪ್ತ ಶ್ಲೋಕೀ ಗೀತಾ
ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ |
ಯ: ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್ ||೧||
ಓಂ ಎಂಬ ಏಕಾಕ್ಷರ ರೂಪದ ಬ್ರಹ್ಮನ ಹೆಸರನ್ನು ಉಚ್ಚರಿಸುತ್ತಾ ಹಾಗೂ ಓಂಕಾರಕ್ಕೆ ಅರ್ಥ ಸ್ವರೂಪನೂ ಆಗಿರುವ ನನ್ನನ್ನು ಸ್ಮರಿಸುತ್ತಾ ಯಾವಾತನು ದೇಹವನ್ನು ತ್ಯಜಿಸುವನೋ ಅವನು ಅತ್ಯುನ್ನತ ಶ್ರೇಷ್ಠ ಪದವಿಯೆನಿಸಿದ ಮೋಕ್ಷವನ್ನು ಪಡೆಯುವನು.
ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಾಜತೇ ಚ |
ರಕ್ಷಾಂಸಿ ಭೀತಾನಿ ದಿಶೋ ಧವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾ: ||೨||
ಎಲೈ ಹೃಷಿಕೇಶ! ನಿನ್ನ ಗುಣಗಳ ಸಂಕೀರ್ತನೆಯಿಂದ ಬ್ರಹ್ಮಾಂಡವು ಸ್ವಚ್ಚವಾಗಿದೆ ಮತ್ತು ಸ್ನೇಹಪೂರಿತವಾಗಿದೆ.ಹಾಗೂ ಅದು ಸರಿಯಾದುದೂ ಆಗಿದೆ. ಈ ರಕ್ಕಸರು ಭಯಭೀತರಾಗಿ ಸಮಸ್ತ ದಿಸೆಗಳತ್ತ ಓಡುತ್ತಲಿರುವರು. ಹೀಗಿರುತ್ತಾ ಸಮಸ್ತ ಸಿದ್ಧಗಣ ಸೇನೆಯು ನಿನಗೆ ನಮಸ್ಕರಿಸುತ್ತಲಿವೆ.
ಸರ್ವತ: ಪಾಣಿಪಾದಂ ತತ್ಸರ್ವತೋಕ್ಷಿ ಶಿರೋಮುಖಮ್ |
ಸರ್ವತ: ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||೩||
ಅವನು ಸಮಸ್ತ ಕಡೆಗೂ ಹಸ್ತ ಪಾದಗಳುಳ್ಳವನು;ಹಾಗೆಯೇ ಎಲ್ಲ ಕಡೆಗೂ ಕಣ್ಣು.ತಲೆ,ಮುಖಗಳುಳ್ಳವನು.ಅವನು ಸರ್ವತ್ರ ವ್ಯಾಪಕಸ್ವರೂಪನಾಗಿ ಶ್ರವಣೇಂದ್ರಿಯಗಳುಳ್ಳವನೂ ಆಗಿರುವನು. ಅವನು ಸಮಸ್ತ ಬ್ರಹ್ಮಾಂಡವನ್ನು ವ್ಯಾಪಿಸಿಕೊಂಡವನು.
ಕವಿಂ ಪುರಾಣಮನುಶಾಸಿತಾರಮಣೋರಣೀಯಾಂ ಸಮನುಸ್ಮರೇದ್ಯ: |
ಸರ್ವಸ್ಯ ದಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸ: ಪರಸ್ತಾತ್ ||೪||
ಅವನು ಎಲ್ಲವನ್ನು ಬಲ್ಲವನು.ಎಲ್ಲದಕ್ಕೂ ಆದಿಯಾದವನು.ಪ್ರಪಂಚದ ನಿಯಾಮಕನು.ಸೂಕ್ಷ್ಮಾತಿಸೂಕ್ಷ್ಮನಾಗಿರುವವನು.ಎಲ್ಲರಿಗೂ ಅವರವರ ಕರ್ಮಗಳಿಗನುಸಾರವಾಗಿ ಉಚಿತವಾದ [ತಕ್ಕುದಾದ] ಫಲವನ್ನು ನೀಡುವವನು.ಅವನ ಸ್ವರೂಪವನ್ನು ಚಿಂತಿಸಲು ಅಶಕ್ಯ. ಅವನು ಸೂರ್ಯ ಸಮಾನ ತೇಜೋಮಯಿ.ಆತನು ಅಜ್ಞಾನಗಳಿಗೆ ಹೊರತಾದವನು.ಸ್ಮರಣೀಯನು.
ಊರ್ಧ್ವಮೂಲಮಧ: ಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||೫||
ಮೇಲ್ಬದಿಯಲ್ಲಿ ಬೇರುಳ್ಳವನು ಬ್ರಹ್ಮನು. ಕವಲುಗಳು ಕೆಳಬದಿಯಲ್ಲಿ ಹರಡಿವೆ.ಈ ರೀತಿಯಾದ ಸಂಸಾರ ಸ್ವರೂಪೀ ಅಶ್ವತ್ಥ ವೃಕ್ಷವನ್ನು ಅವಿನಾಶಿ ಎಂಬರು. ಋಗ್,ಯಜ್,ಸಾಮಾದಿ ವೇದಗಳು ಆ ವೃಕ್ಷದ ಎಲೆಗಳು. ಈ ತೆರನಾದ ಸಂಸಾರರೂಪೀ ವೃಕ್ಷವನ್ನು ಈ ಅರ್ಥದಲ್ಲಿ ಅರಿತುಕೊಳ್ಳಲು ಶಕ್ಯನಾದವನು ವೇದಗಳ ಯಥಾರ್ಥವನ್ನು ಅರಿಯಬಲ್ಲನು.
ಸರ್ವಸ್ಯ ಚಾಹಂ ಹೃದಿ ಸನ್ನಿವಿಷೋ ಮತ್ತ: ಸ್ಮೃತಿರ್ಜ್ಞಾನಮಪೋಹನಂ ಚ |
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇದಾಂತಕೃದ್ವೇದವಿದೇವ ಚಾಹಮ್ ||೬||
ನಾನು ಸಮಸ್ತ ಜೀವಿಗಳ ಆತ್ಮನಾಗಿದ್ದು ಅವರ ಹೃದಯದಲ್ಲಿ ನೆಲೆಸಿರುವೆ. ಅವರ ಪ್ರಜ್ಞೆ,ಮತ್ತು ಜ್ಞಾನಗಳು ನಾನು.ಅವುಗಳ ಲೋಪಕ್ಕೂ ನಾನೇ ಕಾರಣನು.ಸಮಸ್ತ ವೇದಗಳ ಮೂಲಕ ತಿಳಿದುಕೊಳ್ಳಲು ತಕ್ಕವನು ನಾನು. ವೇದಾಂತದ ಸೃಷ್ಟಿಕರ್ತನೂ ವೇದಗಳ ಅರ್ಥವನ್ನು ಬಲ್ಲವನೂ ನಾನೇ ಆಗಿರುವೆ.
ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು |
ಮಾಮೇವೈಷ್ಯಯುಕ್ತೈವಮಾತ್ಮಾನಂ ಮತ್ಪರಾಯಣ: ||೭||
ನೀನು ನನ್ನಲ್ಲಿ ಮನವನ್ನು ನೆಲೆಗೊಳಿಸು. ನನ್ನ ಭಕ್ತ ನೀನಾಗು. ನನಗೆ ನಮಸ್ಕರಿಸುತ್ತಾ ನಿನ್ನ ಚಿತ್ತವನ್ನು ನನ್ನಲ್ಲಿ ಲೀನಗೊಳಿಸು.ನನ್ನಲ್ಲಿ ಅತ್ಯಂತ ಆಸಕ್ತನಾಗು. ಹೀಗೆ ಮಾಡಿದರೆ ನೀನು ನನ್ನನ್ನು ಹೊಂದಲು ಶಕ್ತನಾಗುವೆ.
|| ಇತಿ ಸಪ್ತಶ್ಲೋಕೀ ಗೀತಾ ||

Comments
Post a Comment