ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್



ಅರ್ಜುನ ಉವಾಚ:-
ಕಿಂ ನು ನಾಮ ಸಹಸ್ರಾಣಿ ಜಪಂತೆ ಚ ಪುನ: ಪುನ: |
ಯಾನಿ ನಾಮಾನಿ ದಿವ್ಯಾನಿ ತಾನಿ ಚಾssಚಕ್ಷ್ವ ಕೇಶವ ||೧||
    ಅರ್ಜುನನು ಕೇಳುವನು: ಕೇಶವಾ! ಮನುಜರು ಒಂದೇ ತೆರನಾಗಿ ನಿನ್ನ ಒಂದು ಸಾವಿರ ನಾಮಗಳನ್ನು ಯಾಕಾಗಿ ಪುನ: ಪುನ: ಜಪಿಸುತ್ತಾರೆ? ನಿನ್ನ ಆ ದಿವ್ಯ ನಾಮಗಳ ಬಗ್ಗೆ ವಿವರಿಸಿ ಹೇಳುವಂತವನಾಗು.

ಭಗವಾನುವಾಚ:-
ಮತ್ಸ್ಯಂ ಕೂರ್ಮಂ ವರಾಹಂ ಚ ವಾಮನಂ ಚ ಜನಾರ್ದನಮ್ |
ಗೋವಿಂದಂ ಪುಂಡರೀಕಾಕ್ಷಂ ಮಾಧವಂ ಮಧುಸೂದನಮ್ ||೨||
    ಭಗವಂತನು ಹೇಳುತ್ತಾನೆ: ಅರ್ಜುನಾ; ಮತ್ಸ್ಯ,ಕೂರ್ಮ; ವರಾಹ,ವಾಮನ, ಜನಾರ್ದನ,ಗೋವಿಂದ,ಪುಂಡರೀಕಾಕ್ಷ,ಮಾಧವ,ಮಧುಸೂದನ-----

ಪದ್ಮನಾಭಂ ಸಹಸ್ರಾಕ್ಷಂ ವನಮಾಲಿಂ ಹಲಾಯುಧಮ್ |
ಗೋವರ್ಧನಂ ಹೃಷೀಕೇಶಂ ವೈಕುಂಠಂ ಪುರುಷೋತ್ತಮ್ ||೩||
    ಪದ್ಮನಾಭ, ಸಹಸ್ರಾಕ್ಷ, ವನಮಾಲಿ, ಹಲಾಯುಧ, ಗೋವರ್ಧನ, ಹೃಷೀಕೇಶ, ವೈಕುಂಠ, ಪುರುಷೋತ್ತಮ-----------

ವಿಶ್ವರೂಪಂ ವಾಸುದೇವಂ ರಾಮಂ ನಾರಾಯಣಂ ಹರಿಮ್ |
ದಾಮೋದರಂ ಶ್ರೀಧರಂ ಚ ವೇದಾಂಗಂ ಗರುಢಧ್ವಜಮ್ ||೪||
    ವಿಶ್ವರೂಪ, ವಾಸುದೇವ, ರಾಮ, ನಾರಾಯಣ, ಹರಿ, ದಾಮೋದರ, ಶ್ರೀಧರ, ವೇದಾಂಗ, ಗರುಢಧ್ವಜ----------

ಅನಂತಂ ಕೃಷ್ಣಗೋಪಾಲಂ ಜಪತೋ ನಾಸ್ತಿ ಪಾತಕಮ್ |
ಗವಾಂ ಕೋಟಿಪ್ರದಾನಸ್ಯ ಅಶ್ವಮೇಧಶತಸ್ಯ ಚ ||೫||
    ಅನಂತ, ಕೃಷ್ಣಗೋಪಾಲ ಎಂಬೀ ಇಪ್ಪತ್ತೆಂಟು ನಾಮಗಳನ್ನು ಜಪಿಸುವಂತಹವನ ಪಾಪಗಳೆಲ್ಲಾ ನಶಿಸಿ ಹೋಗುತ್ತವೆ. ಆತನಿಗೆ ಒಂದು ಕೋಟಿ ಗೋದಾನ, ಒಂದು ನೂರು ಅಶ್ವಮೇಧ ಯಾಗ ಮಾಡಿದರೆ ದೊರಕುವ ಫಲವು ಲಭಿಸುತ್ತದೆ.

ಕನ್ಯಾದಾನ ಸಹಸ್ರಾಣಾಂ ಫಲ ಪ್ರಾಪ್ನೋತಿ ಮಾನವಾ: |
ಅಮಾಯಾಂ ವಾ ಪೌರ್ಣಿಮಾಸ್ಯಾಮೇಕಾದಶ್ಯಾಂ ತಥೈವ ಚ ||೬||
    ಮತ್ತು ಒಂದು ಸಾವಿರ ಕನ್ಯಾದಾನ ಮಾಡಿದ ಫಲವು ಮಾನುಜರಿಗೆ ದೊರಕುವುದು.ಅಮವಾಸ್ಯೆ,ಹುಣ್ಣಿಮೆ,ಮತ್ತು ಏಕಾದಶಿಗಳಂದು ಮತ್ತು ಅದೇರೀತಿ---------

ಸಂಧ್ಯಾಕಾಲೇ ಸ್ಮರೇನ್ನಿತ್ಯಂ ಪ್ರಾತ:ಕಾಲೇ ತಥೈವ ಚ |
ಮಧ್ಯಾಹ್ನೇ ಚ ಜಪೇನ್ನಿತ್ಯಂ ಸರ್ಪಪಾಪೈ: ಪ್ರಮುಚ್ಯತೇ ||೭||
    ಪ್ರತಿದಿನ ಸಾಯಂಕಾಲ,ಮುಂಜಾನೆ,ಮತ್ತು ಮದ್ಯಾಹ್ನದ ಸಮಯಗಳಲ್ಲಿ ಈ ನಾಮಗಳನ್ನು ಜಪಿಸುವ ಮಾನವರು ಸಮಸ್ತ ಪಾಪಗಳಿಂದ ವಿಮುಕ್ತರಾಗುತ್ತಾರೆ.
||ಇತಿ ಶ್ರೀ ವಿಷ್ಣೋರಷ್ಟಾವಿಂಶತಿನಾಮ ಸ್ತೋತ್ರಮ್ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ