ಯಾದವಗಿರಿ ಮತ್ತು ವೈರಮುಡೀ ಕಿರೀಟ



ಸಹ್ಯಾದ್ರೇಃ ಪೂರ್ವತೋವಾ ತದುದಿತ ಸರಿತಶ್ಚೋತ್ತರಸ್ಯಾಂ ಗಿರೀ
ನ್ದ್ರೋನಾನಾಶೃಂಗಃ ಫಣೀಂದ್ರಾವತರ ಉರತರಪ್ರೇಮಪಾತ್ರಂ ತು ವಿಷ್ಣೋಃ |
ಯೋವಾಚೀನೋ ಬದರ್ಯಾಶ್ರಮ ಇತಿ ಕಥಿತೋ ಮಂತ್ರ
ದೈವಾಶ್ರಿತಶ್ಚ ಕ್ಷೇತ್ರಂ ವೈಕುಂಠವೃದ್ಧಿಪ್ರದ ಮಿತಿ ಪರಿತೋ ಯೋಜನೇ
ದ್ವೇಪ್ರಕ್ಲ್‌ಪ್ತಃ ||
    ಯಾವ ಯಾದವಗಿರಿಯು ಸಹ್ಯಪರ್ವತಕ್ಕೆ ಪೂರ್ವದಲ್ಲಿಯೂ ಕಾವೇರೀನದಿಗೆ ಉತ್ತರದಲ್ಲಿಯೂ ಇದ್ದು ಅನೇಕ ಶಿಖರಗಳಿಂದೊಡಗೂಡಿ ಸಾಕ್ಷಾಚ್ಛೇಷರೂಪಿಯಾಗಿದ್ದು, ಭಗವಂತನಿಗೆ ವೈಕುಂಠಕ್ಕಿಂತಲೂ ಅತ್ಯಂತ ಪ್ರೀತಿಪಾತ್ರವಾಗಿಯೂ, ದಕ್ಷಿಣಬದರಿಕಾಶ್ರಮವೆಂತಲೂ ಸುತ್ತಲೂ ಎರಡು ಯೋಜನದವರಿಗೂ ವೈಕುಂಠವರ್ಧನಕ್ಷೇತ್ರವೆಂದೂ ಪ್ರಸಿದ್ಧವಾಗಿಯೂ, ಅಷ್ಟಾಕ್ಷರ ಮಂತ್ರ ಪ್ರತಿಪಾದ್ಯ ದೇವತೆಯಾದ ಶ್ರೀಮನ್ನಾರಾಯಣನಿಗೆ ಆಶ್ರಯವಾಗಿಯೂ ಇದೆಯೋ, ಮತ್ತು

ದತ್ತಾತ್ರೇಯ ಶ್ಯ್ರುತೀನಾಂ ಪ್ರವಚನಮತನೋದತ್ರ ತದ್ವೇದಶೈಲೋ
ನಾಮ್ನಾ ನಾರಾಯಣಾದ್ರಿ ಸ್ತದನು ಭಗವತ ಸ್ಸನ್ನಿಧಾನಾ ದ್ಬಭೂವ |
ಯದ್ವದ್ರಿರ್ನಾಮತೋ ಭೂದ್ಯದುಕುಲಭಜನಾ ದ್ದ್ವಾಪರಾಂತೇ ಕಲಾ
ವಪ್ಯಂತೋ ನನ್ತಸ್ಯ ಕಶ್ಚಿದ್ಯಶಿರಪಿ ಭವಿತಾ ತೇನ ತಚ್ಛೈಲಸಂಜ್ಞಃ ||
    ಪೂರ್ವದಲ್ಲಿ ದತ್ತಾತ್ರೇಯರು ಈ ಪರ್ವತದಲ್ಲಿ ವೇದಗಳನ್ನು ಪ್ರವಚನ ಮಾಡಿದರಾದ್ದರಿಂದ ವೇದಪರ್ವತವೆಂತಲೂ, ಇಲ್ಲಿ ಶ್ರೀ ನಾರಾಯಣನ ಸಾನ್ನಿಧ್ಯ ಉಂಟಾದಮೇಲೆ ನಾರಾಯಣಾದ್ರಿ ಎಂತಲೂ, ದ್ವಾಪರಯುಗದ ಕೊನೆಯಲ್ಲಿ ಯಾದವರುಗಳು ಬಂದು ಸೇವಿಸುತ್ತಿದ್ದರಾದ್ದರಿಂದ ಯಾದವಗಿರಿ ಎಂತಲೂ, ಈ ಪರ್ವತಕ್ಕೆ ಹೆಸರುಂಟಾಯಿತು ಕಲಿಯುಗದಲ್ಲಿ ಆದಿಶೇಷಾಂಶಭೂತರಾದ ಒಬ್ಬ ಯತಿಯು ಜೀರ್ಣೋಧ್ಧಾರಮಾತಿ ಸೇವಿಸೋಣದರಿಂದ ಯತಿಶೈಲವೆಂಬ ಹೆಸರು ಉಂಟಾಗುವುದು ಇಂತಹ ಆ ಗಿರಿ(ಮೇಲುಕೋಟೆ)ಯಲ್ಲಿ ಸನತ್ಕುಮಾರರು ಶ್ರೀಮನ್ನಾರಾಯಣನ ವಿಮಾನವನ್ನು ಸ್ಥಾಪಿಸಿದದರೆಂದು ನಾರದರು ವ್ಯಾಸಾದಿ ಮಹರ್ಷಿಗಳಿಗೆ ಅಪ್ಪಣೆಕೊಡಿಸಿದರು.

ವೈರಮುಡೀ ಕಿರೀಟ
ಜಾತು ಪ್ರಹ್ಲಾದಪುತ್ರಃ ಪರಿಚರಣರತೈಸ್ಸೂರಿಭಿರ್ದುಗ್ಧಸಿಂಧಾ ವಾಸೀ
ತ್ಸಾಕಂ ಶಯಾಳೋಃ ಪರಿಸರಮಿಳಿತಸ್ತಾತವಿಸ್ರಂಭಗಂಧಾತ್ |
ರಂಧ್ರೇ ತಸ್ಯಾಪಜಹ್ರೇ ಮಣಿಮಕುಟವರಂ ನಾಗಲೋಕಂ ಚ ನಿನ್ಯೇ ನುನ್ನಸ್ತ ತ್ರತ್ಯ ಭಕ್ತ್ಐಃ ಖಗಪತಿ ರಥ ತಂ ಪ್ರಾವ್ಯಜಿತ್ವಾಜಗಾಮ ||
    ಒಂದು ಕಾಲದಲ್ಲಿ ಪ್ರಹ್ಲಾದನ ಮಗನಾದ ವಿರೋಚನನು ತನ್ನ ತಂದೆಯಲ್ಲಿದ್ದ ವಿಶ್ವಾಸದಿಂದ ನಿತ್ಯಸೂರಿಗಳೊಡಗೂಡಿ ಕ್ಷೀರಾಬ್ಧಿಶಾಯಿಯಾದ ಅನಿರುದ್ಧ ಭಗವಂತನನ್ನು ಸೇವಿಸುತ್ತಿದ್ದು, ಭಗವಂತನ ಯೋಗನಿದ್ರಾಕಾಲದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆ ಭಗವಂತನ ಕಿರೀಟವನ್ನು ಅಪಹರಿಸಿಕ್ಕೊಂಡು ಪಾತಾಳಕ್ಕೆ ಹೊರಟು ಹೋದನು. ಅನಂತರ ಬಂದು ನೋಡಿದ ಅಂತರಂಗ ಭಕ್ತರು ಭಗವಂತನ ಕಿರೀಟವನ್ನು ಕಾಣದೆ "ಇದು ವಿರೋಚನನ ಕೆಲಸವೇ ಸರಿ" ಎಂದು ಊಹಿಸಿ ಗರುಡನೊಡನೆ ಹೇಳಲು, ಗರುಡನು ಪಾತಾಳಕ್ಕೆ ಹೋಗಿ ವಿರೋಚನನ್ನು ಜಯಿಸಿ ಅನಿರುದ್ಧ ಕಿರೀಟವನ್ನು ತೆಗೆದುಕೊಂಡು ಮಹಾವೇಗದಿಂದ ಬರುತ್ತಿದ್ದನು.

ಆಗಚ್ಛನ್ವ್ಮೋಮಮಾರ್ಗೇ ಪ್ರತಿಹತಗಮನ ಶ್ಚಿಂತಯಿತ್ವಾ ಸುಮೋಢೋ
ಬೃಂದಾವನ್ಯಾಮಟಂತಂ ಕರ ಧೃತ ಮುರಳಿಂ ಪಿಂಛ ಗುಂಜಾ ವಿಭೂಷಮ್ |
ಗೋಪಾಲಂ ನಂದಸೂನುಂ ಗತಿಹತಿಜನನೇ ಹೇತುಮಾಲೋಕ್ಯ ಹರ್ಷಾತ್ ತನ್ಮೂರ್ಧ್ನಿ ನ್ಯಸ್ಯ ಹೈರಂ ಮಕುಟಮನುಗುಣಂ ಸೂರಿಭಿಃ ಶ್ಲಾಘಿತೋಭೂತ್ ||
    ಗರುಡನು ಹೀಗೆ ಆಕಾಶಮಾರ್ಗದಲ್ಲಿ ಬರುತ್ತಿರುವಾಗ ಅಂತಹ ತನ್ನ ವೇಗವೂ ನಿಂತುಹೋದುದನ್ನು ನೋಡಿ ಆಶ್ಚರ್ಯಪಟ್ಟು ಎಲ್ಲಾ ಕಡೆಯಲ್ಲೂ ನೋಡಿ ಏನುಕಾಣದೆ, ಭೂಭಾಗದಲ್ಲಿ ನೋಡಿದಾಗ ನವಿಲುಗರಿಗಳಿಂದಲೂ, ಗುಲಿಗಂಜಿಮಣಿಗಳ ಸರಗಳಿಂದಲೂ ಅಲಂಕೃತನಾಗಿ ವೇಣುಗಾನ ಮಾಡುತ್ತಾ ಬೃಂದಾವನದಲ್ಲಿ ಗೋವುಗಳನ್ನು ಕಾಯುತ್ತಿದ್ದ ಶ್ರೀಕೃಷ್ಣನನ್ನು ದರ್ಶನಮಾಡಿ ಬಹಳ ಹರ್ಷದಿಂದ "ಈ ಕಾರಣದಿಂದಲೇ ತನ್ನ ಗತಿ ಭಂಗವಾಯಿತು" ಎಂದು ನಿಶ್ಛೈಸಿ ಭಗವದಭಿಪ್ರಾಯದಂತೆ ಆ ಕಿರೀಟವನ್ನು ಶ್ರೀ ಕೃಷ್ಣನ ಶಿರಸ್ಸಿನಲ್ಲಿ ಧಾರಣೆ ಮಾಡಿ ಪ್ರದಕ್ಷಿಣ ನಮಸ್ಕಾರಾದಿಗಳನ್ನು ಮಾಡಿ ಕ್ಷೀರಾಬ್ಧಿಗೆ ಹೋಗಿ ನಡೆದ ವೃತ್ತಾಂತವೆಲ್ಲವನ್ನೂ ಹೇಳಲು ಭಗವಂತನೂ, ನಿತ್ಯಸೂರಿಗಳೂ ಶ್ಲಾಘಿಸಿದರು. ಆದರೆ ಆ ಅನಿರುದ್ಧ ಭಗವಂತನ ಬಹಳ ದೊಡ್ಡದಾದ ಆ ಕಿರೀಟವು ಶ್ರೀಕೃಷ್ಣನಿಗೆ ಸಮರ್ಪಿಸಲ್ಪಟ್ಟಾಗ ಅವನಿಗೆ ತಕ್ಕ ಅಳತೆಯುಳ್ಳದ್ದಾಗಿ ಆಯಿತು. ಇದು ಭಗವಂತನ ಇಚ್ಛೆ. ಆ ಕಿರೀಟದ ಮಹಿಮೆ.

ಕೃಷ್ಣೋ ಪಿ ಸ್ವಾರ್ಚ್ಯ ರಾಮಪ್ರಿಯಶಿರಸಿ ನಿಧಾಯಾದ್ಭುತಂ ತತ್ಕಿರೀಟಂ
ನಿತ್ಯಂ ಪೂಜಾ ಮಕಾರ್ಷೀ ದ್ಧಲಭೃದಥ ಯಯೌ ಜಾತು ನಾರಾಯಣಾದ್ರಿಮ್ |
ತೀರ್ಥಸ್ನಾನಪ್ರಸಂಗೇ ಹರಿ ರಪಿ ದದೃಶೇ ತೇನ ನಾರಾಯಣಾಖ್ಯಃ
ಕಲ್ಯಾಣೀತೀರ ಭೂಮಾ ವಮನುತ ಸದೃಶಂ ತಂ ಸ ರಾಮಪ್ರಿಯಸ್ಯ ||
    ಶ್ರೀಕೃಷ್ಣನೂಕೂಡ ತನ್ನ ಮನೆದೇವರಾದ ಚಲುವರಾಯಸ್ವಾಮಿಯ ಶಿರಸ್ಸಿಗೆ ಧಾರಣೆ ಮಾಡಲು ಅವರ ಶಿರಸ್ಸಿಗೆ ತಕ್ಕಂತೆ ಒಪ್ಪಲು ನಿತ್ಯವೂ ಪೂಜೆಮಾಡುತ್ತಿದ್ದನು. ಹೀಗಿರುವಾಗ ಒಂದು ಕಾಲದಲ್ಲಿ ಬಲರಾಮನು ತೀರ್ಥ ಯಾತ್ರಾ ಪ್ರಸಂಗದಿಂದ ಈ ನಾರಾಯಣಾದ್ರಿಗೆ ಬಂದು ಕಲ್ಯಾಣೀ ತೀರಲದಲಿ ಆನಂದಮಯದಿವ್ಯವಿಮಾನಮಧ್ಯಸ್ಥರಾದ ತಿರುನಾರಾಯಣಸ್ವಾಮಿಯವರನ್ನು ದರ್ಶನಮಾಡಿ ತಮ್ಮ ಮನೆದೇವರಾದ ಚಲುವರಾಯಸ್ವಾಮಿಯ ಹಾಗೆಯೇ ಇಧಾರೆಂದು ತಿಳಿದನು.

ಕೃಷ್ಣಾಯಾ ಚಷ್ಟ ಗತ್ವಾ ಸು ಸದೃಶ ಇತಿ ತಂ ಸ್ವಸೈ ರಾಮಪ್ರಿಯಸ್ಯೇ
ತ್ಮೇತನ್ನೈವಾನುಮೇನೇ ಮುರಭಿ ದಧ ಬಲಃ ಕೃಷ್ಣ ಪೂರ್ವೈಸ್ಸ್ವವರ್ಗೈಃ |
ಸೀತ್ವಾ ರಾಮಪ್ರಿಯಂ ತಂ ಪುರ ಇಹ ನಿದಧೇ ತಸ್ಯ ನಾರಾಯಣಸ್ಯ
ಪ್ರತ್ಯಕ್ಷೀಚಕ್ರು ರೇತತ್ಸುಸದೃಶ ತಮತಾಂ ಸರ್ವ ವೃಷ್ಣಿ ಪ್ರವೀರಾಃ ||
    ಅನಂತರ ಬಲರಾಮನು ದ್ವಾರಕಿಗೆ ಹೋಗಿ "ದಕ್ಷಿಣದೇಶದಲ್ಲಿ ನಾರಾಯಣಾದ್ರಿ ಎಂಬಲ್ಲಿ ನಮ್ಮ ಚಲುವರಾಯಸ್ವಾಮಿಯ ಹಾಗೆಯೇ ಒಬ್ಬ ನಾರಾಯಣಮೂರ್ತಿಯು ಇಧಾರೆ" ಎಂದು ಹೇಳಿದನು. ಕೃಷ್ಣನು ಅದನ್ನು ಒಪ್ಪಲಿಲ್ಲ ಅನಂತರ ಬಲರಾಮನುಉ ಕೃಷ್ಣನನ್ನೂ ಇತರ ಯಾದವರನ್ನೂ ಕರೆದುಕ್ಕೊಂಡು ಚಲುವರಾಯಸ್ವಾಮಿಯವರನ್ನೂ ಬಿಜಮಾಡಿಸಿಕ್ಕೊಂಡು ಬಂದು ನಾರಾಯಣಾದ್ರಿಯಲ್ಲಿ ಶ್ರೀ ನಾರಾಯಣಸ್ವಾಮಿಯವರ ಮುಂದುಗಡೆ ಬಿಜಮಾಡಿಸಿ ಎಲ್ಲರೂ ದರ್ಶನ ಮಾಡಿದಾಗ ಈ ಎರಡು ಮೂರ್ತಿಗಳೂ ಒಂದೇರೂಪವುಳ್ಳವರೆಂದು ಎಲ್ಲರೂ ಒಪ್ಪಿದರು.

ತತ್ರೈವಾಸ್ಥಾಪ್ಯ ರಾಮಪ್ರಿಯಮಸಕೃದಮಿ ತತ್ರ ಗತ್ವಾ ಯಥಾ
ರ್ಹಂ ಕಾಲೇಕಾಲೇ ವಿಧಾಯೋತ್ಸವ ವಿಧಿ ಮತುಲಂ ಮೋದಮಾ
ಪೇದಿರೇ ಯತ್ |
ತೇನಾಸಾ ಯಾದವಾದ್ರಿಃ ಕಥಿತ ಇಹ ಜನೈ ರೇವ ಮೇಕತ್ರ ಮೂರ್ತೀ ಮೂಲತ್ವೇನೋತ್ಸವತ್ವೇನ ಚ ಪುನರಪಿ ತೇ ಸಂಗತೇ ಲೋಕಭಾಗ್ಯಾತ್ ||
    ಅನಂತರದಲ್ಲಿ ಸಕಲ ಯಾದವರುಗಳೂ ಚಲುವರಾಯ ಸ್ವಾಮಿಯನ್ನು ಅಲ್ಲಿಯೇ ಬಿಜಮಾಡಿಸಿ ಆಯಾಯ ಕಾಲಗಳಲ್ಲಿ ಅಲ್ಲಿಗೇನೇ ಹೋಗೆ ಆಯಾಯಾ ಉತ್ಸವಗಳನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿ ದರ್ಶನ ಮಾಡಿ ಕೃತಾರ್ಥರಾಗುತ್ತಾ ಬರುತ್ತಿದ್ದರಾದುದರಿಂದ ಇದಕ್ಕೆ "ಯಾದವಾದ್ರಿ" ಎಂದು ಅದು ಮೊದಲು ಹೆಸರಾಯಿತು. ಹೀಗೆ ನರಾಯಣಸ್ವಾಮಿಯೂ, ಚಲುವರಾಯಸ್ವಾಮಿಯೂ ಮೂಲ ವಿಗ್ರವಾಗಿಯೂ, ಉತ್ಸವ ವಿಗ್ರಹವಾಗಿಯೂ ಒಂದು ಕಡೆ ಬಿಜಮಾಡಿಸಿದ್ದು.....

(ಮುಂದುವರೆಯುವುದು.....)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ