ಸಂಕಷ್ಟನಾಶನ ವಿಷ್ಣು ಸ್ತೋತ್ರಮ್

ನಾರದ ಉವಾಚ:-
ಪುನರ್ದೈತ್ಯಂ ಸಮಾಯಾಂತಂ ದೃಷ್ಟ್ವಾ ದೇವಾ: ಸವಾಸವಾ: |
ಭಯಪ್ರಕಂಪಿತಾ: ಸರ್ವೆ ವಿಷ್ಣುಂ ಸ್ತೋತುಂ ಪ್ರಚಕ್ರಮು: ||೧||
ನಾರದರು ಹೇಳಿದರು:-
ಪುನ: ಬರುತ್ತಿರುವ ದೈತ್ಯರನ್ನು ಕಂಡು ಇಂದ್ರನೊಟ್ಟಿಗೆ ದೇವತೆಯರೆಲ್ಲರೂ ಭೀತಿಗೊಳಗಾಗಿ ವಿಷ್ಣುವನ್ನು ಸ್ತುತಿಸಲು ಪ್ರಾರಂಬಿಸಿದರು.

ದೇವಾ ಊಚು:-
ನಮೋ ಮತ್ಸ್ಯಕೂರ್ಮಾದಿ ನಾನಾ ಸ್ವರೂಪೈ: ಸದಾಭಕ್ತ ಕಾರ್ಯೋದ್ಯತಾಯಾರ್ತಿಹಂತ್ರೇ |
ವಿಧಾತ್ರಾದಿ ಸರ್ಗಸ್ಥಿತಿಧ್ವಂಸಕರ್ತೆ ಗದಾಶಂಖಪದ್ಮಾದಿ ಹಸ್ತಾಯ ತೇಸ್ತು ||೨||
ದೇವತೆಗಳು ಹೇಳುವರು:-
ಮತ್ಸ್ಯ-ಕೂರ್ಮ ಮೊದಲಾದ ನಾನಾಸ್ವರೂಪಗಳಿಂದ ಸಮಸ್ತಕಾಲವೂ ಭಕ್ತರ ಕಾರ್ಯಗಳಲ್ಲಿ ನಿರತನಾಗಿ ಅವರ ದುರಭಿಮಾನವನ್ನು ಅಳಿಸಿ ಉತ್ಪತ್ತಿ,ಸ್ಥಿತಿ,ಮತ್ತು ನಾಶಗಳಿಗೆ ಸ್ವಾಮಿಯಾದವನೂ,ಕೈಗಳಲ್ಲಿ ಗದೆ,ಶಂಖ,ಪದ್ಮ,ಚಕ್ರಗಳನ್ನು ಹಿಡಿದಿರುವವನೂ ಆಗಿರುವ ವಿಷ್ಣುವೇ ನಿನಗೆ ಪ್ರಣಾಮಗಳು.

ರಮಾವಲ್ಲಭಾಯಾsಸುರಾಣಾಂ ನಿಹಂತ್ರೇ ಭುಜಂಗಾರಿಯಾನಾಯ ಪೀತಾಂಬರಾಯ |
ಮಖಾದಿಕ್ರಿಯಾಪಾಕಕರ್ತ್ರೆ ವಿಕರ್ತ್ರೆ ಶರಣ್ಯಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೩||
    ರಮಾವಲ್ಲಭನಿಗೆ,ಅಸುರ ಸಂಹಾರಕನಿಗೆ,ಗರುಢವಾಹನನಿಗೆ,ಪೀತಾಂಬರಧಾರಿಗೆ,ಯಜ್ಞಾದಿ ಕಾರ್ಯಗಳ ಪ್ರತಿಫಲದಾಯಕನಿಗೆ,ಶರಣರನ್ನು ರಕ್ಷಿಸುವವನಿಗೆ ನಾವು ನಮಸ್ಕರಿಸುವೆವು.

ನಮೋ ದೈತ್ಯಸಂತಾಪಿತಾಮರ್ತೃ ದು:ಖಾಚಲ ಧ್ವಂಸದಂಭೋಲಯೇ ವಿಷ್ಣವೇ ತೇ |
ಭುಜಂಗೇಶತಲ್ಪೇಶಯಾರ್ಕ ಚಂದ್ರ ದ್ವಿನೇತ್ರಾಯ ತಸ್ಮೈ ನತಾ: ಸ್ಮೋ ನತಾ ಸ್ಮ: ||೪||
    ದೈತ್ಯರ ಉಪಟಳದಿಂದ ಕ್ಷೋಭೆಗೊಳಗಾದ,ಮರ್ತ್ಯರ ದು:ಖವೆಂಬ ಅತ್ಯುನ್ನತಪ್ರದೇಶವನ್ನು ನಾಶಗೊಳಿಸುವ,ಗರ್ವಗಳಿಗೆ ಲಯಕಾರಿಯಾಗಿರುವ ವಿಷ್ಣುವೇ;ಶೇಷಶಾಯಿಯೇ;ಸೂರ್ಯ-ಚಂದ್ರರನ್ನು ಕಣ್ಣುಗಳನ್ನಾಗಿ ಮಾಡಿಕೊಂಡಿರುವವನೇ ನಿನಗೆ ನಮಸ್ಕರಿಸುವೆವು.
|| ಇತಿ ಸಂಕಷ್ಟನಾಶನ ವಿಷ್ಣುಸ್ತೋತ್ರಮ್ ||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ