ಶ್ರೀ ಗಾಯತ್ರೀ ಸ್ತೋತ್ರಮ್

ನಮಸ್ತೇ ದೇವಿ ಗಾಯತ್ರಿ ಸಾವಿತ್ರಿ ತ್ರಿಪದೇsಕ್ಷರೇ |
ಅಜರೇ ಅಮರೇ ಮಾತತ್ರಾಹಿ ಮಾಮ್ ಭವಸಾಗರಾತ್ ||೧||
    ಹೇ! ತಾಯೇ; ಈ ಭವ ಸಾಗರದಿಂದ ನನ್ನನ್ನು ಕಾಪಾಡು.ಮೂರು ಅಕ್ಷರಗಳಿರುವ ನೀನು ಗಾಯತ್ರಿಯೂ,ಸಾವಿತ್ರಿಯೂ ಆಗಿದ್ದು ಮುಪ್ಪಿಲ್ಲದವಳೂ ಆಗಿರುವುದಲ್ಲದೆ ಅಮರಳೂ ಆಗಿರುವೆ. ಮಾತೆಯೇ ನಿನಗಿದೋ ಪ್ರಣಾಮಗಳು.

ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೆಮಾತೃಕೇ |
ಬ್ರಹ್ಮವಿದ್ಯೆ ಮಹಾವಿದ್ಯೆ ವೇದಮಾತೇನಮೋಸ್ತುತೇ ||೨||
    ತಾಯಿಯೇ;ವೇದಮಾತೆಯೇ,ಮಹಾವಿದ್ಯಾಪ್ರದಾಯಿನಿಯೇ,ಬ್ರಹ್ಮ ವಿದ್ಯಾಪಾರಂಗತಳೇ,ಸೂರ್ಯನೊಡನೆ ಸದಾ ಇರುವ ಮಾತೆಯೇ ನಿನಗಿದೋ ಪ್ರಣಾಮಗಳು.

ಅನಂತಕೋಟಿ ಬ್ರಹ್ಮಾಂಡವ್ಯಾಪಿನಿ ಬ್ರಹ್ಮಚಾರಿಣಿ |
ನಿತ್ಯಾನಂದೇ ಮಹಾಮಾಯೇ ಪರೇಶಾನಿ ನಮೋಸ್ತುತೇ ||೩||
    ಹೇ! ಅಮ್ಮಾ; ಬ್ರಹ್ಮಚಾರಿಣಿಯೇ,ಬ್ರಹ್ಮಾಂಡವನ್ನು ವ್ಯಾಪಿಸಿರುವವಳೇ,ನಿರಂತರ ಆನಂದ ದಾಯಕಿಯಾಗಿ ಮಾಯಾಸ್ವರೂಪಿಣಿಯೂ ಆಗಿರುವ ಮಾತೆಯೇ, ನಿನಗಿದೋ ಪ್ರಣಾಮಗಳು.

ತ್ವಂ ಬ್ರಹ್ಮಾ ತ್ವಂ ಹರಿ: ಸಾಕ್ಷಾದ್ ರುದ್ರಸ್ತ್ವಮಿಂದ್ರ ದೇವತಾ |
ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮ್ ಅಗ್ನಿರಶ್ವಿನೌ ಭಗ: ||೪||
    ಹೇ! ಅಮ್ಮಾ: ನೀನು ಬ್ರಹ್ಮ ಸ್ವರೂಪಿಯು. ನೀನು ಹರಿ ಸ್ವರೂಪಳು.ಸಾಕ್ಷಾತ್ ರುದ್ರ ಸ್ವರೂಪಿಣಿಯೂ ಇಂದ್ರ ದೇವತೆಯೂ ಆಗಿರುವೆ.ನೀನೇ ಸೂರ್ಯ,ಚಂದ್ರ, ಅಗ್ನಿ,ವರುಣ,ಅಶ್ವಿನೀ ದೇವತೆಯರೂ ಆಗಿರುವೆ.ತಾಯಿಯೇ ನಿನಗಿದೋ ಪ್ರಣಾಮಗಳು.

ಪೂಷಾರ್ಯಮಾ ಮರುತ್ವಾಂಶ್ಚ ಋಷಯೋsಪಿ ಮುನೀಶ್ವರಾ: |
ಪಿತರೋ ನಾಗಾ ಯಕ್ಷಾಂಶ್ಚ ಗಂಧರ್ವಾಪ್ಸರಾಂ ಗಣಾ: ||೫||
    ನೀನೇ ಸೂರ್ಯ,ನೀನೇ ಪಾರ್ವತೀಮಾತೆ,ನೀನೇ ಮರುತ್ ದೇವತೆಯರ ಸ್ವರೂಪಿಣಿಯಾಗಿರುವಿ.ಋಷಿಗಳ ಸ್ವರೂಪವೂ ನಿನ್ನದೇ ಆಗಿದೆ.ನಾಗ,ಯಕ್ಷ,ಗಂಧರ್ವ,ಅಪ್ಸರಗಣಾದಿಗಳಿಗೆ ನೀನೇ ಮಾತಾಸ್ವರೂಪಿಣಿಯಾಗಿರುವಿ.

ರಕ್ಷೋ ಭೂತ ಪಿಶಾಚಾಶ್ಚ ತ್ವಮೇವ ಪರಮೇಶ್ವರೀ |
ಋಗ್ ಯಜು: ಸಾಮ ವಿದ್ಯಾಶ್ಚ ಅಥರ್ವಾಂಗೀರಸಾನಿ ||೬||
    ಹೇ!ಪರಮೇಶ್ವರೀ; ನನ್ನನ್ನು ಭೂತ ಪಿಶಾಚಾದಿಗಳಿಂದ ನೀನೇ ರಕ್ಷಿಸುವುದಾಗಿದೆ.ಅಲ್ಲದೇ ಚತುರ್ವೇದಗಳಾದ ಋಗ್,ಯಜು,ಸಾಮಾರ್ಥವಣಗಳು ನಿನ್ನಿಂದಲೇ ರಕ್ಷಿಸಲ್ಪಡುವುದಾಗಿದೆ.

ತ್ವಮೇವ ಸರ್ವ ಶಾಸ್ತ್ರಾಣಿ ತ್ವಮೇವ ಸರ್ವ ಸಂಹಿತಾ: |
ಪುರಾಣಿ ಚ ತಂತ್ರಾಣಿ ಮಹಾಗಮಮತಾನಿ ಚ ||೭||
    ಅಮ್ಮಾ! ನೀನು ಸಮಸ್ತ ಶಾಸ್ತ್ರಗಳ ಸ್ವರೂಪಿಣಿಯೇ ಆಗಿರುವಿ.ಅಲ್ಲದೆ ಮಂತ್ರ ಸಂಹಿತೆಗಳ,ತಂತ್ರಾಗಮಾದಿ ಪುರಾಣಗಳ ಸ್ವರೂಪಿಣಿಯೂ ಆಗಿರುವೆ.

ತ್ವಮೇವ ಪಂಚಭೂತಾನಿ ತತ್ವಾನಿ ಜಗದೀಶ್ವರಿ |
ಬ್ರಾಹ್ಮೀ ಸರಸ್ವತೀ ಸಂಧ್ಯಾ ತುರೀಯಾ ತ್ವಂ ಮಹೇಶ್ವರೀ ||೮||
    ತಾಯಿಯೇ!ನೀನೇ ಪೃಥ್ವೀ,ಅಪ್,ತೇಜೋ,ವಾಯು,ಆಕಾಶಗಳೆಂಬ ಪಂಚ ಮಹಾಭೂತಾತ್ಮಿಕೆಯಾಗಿರುವೆ. ಸಮಸ್ತ ತತ್ವಗಳೂ ನೀನೇ ಆಗಿರುವಿ.ನೀನು ಬ್ರಾಹ್ಮೀ ಕಾಲದಲ್ಲಿ ಸರಸ್ವತಿಯಾಗಿಯೂ ಸಾಯಂಕಾಲ,ನಿಶ:ಕಾಲಗಳಲ್ಲಿ ಮಹೇಶ್ವರಿಯೂ ಆಗಿರುವಿ.

ತತ್ವಂ ಸದ್ ಬ್ರಹ್ಮಸ್ವರೂಪಾ ಕಿಂಚಿದ್ ಸದಸದಾತ್ಮಿಕಾ |
ಪರಾತ್ ಪರೇಶಿ ಗಾಯತ್ರಿ ನಮಸ್ತೇ ಮಾತರಂಬಿಕೇ ||೯||
    ಅಮ್ಮ! ಮಾತೆಯೇ!! ಅಂಬಿಕೆಯೇ; ನೀನು ಸಾಕ್ಷಾತ್ ಬ್ರಹ್ಮಸ್ವರೂಪಿಣಿಯೇ ಆಗಿರುವೆ. ಸತ್ಯಾತ್ಮಳೂ ಸತ್ಯ ರೂಪಿಣಿಯೂ,ಶ್ರೇಷ್ಠಳೂ,ಪರಮಾತ್ಮಳೂ ಆಗಿರುವ ಗಾಯತ್ರಿಯೂ ನೀನೇ ಆಗಿರುವೆ.ಆಂತಹಾ ಮಾತೆಯೇ ನಿನಗಿದೋ ಪ್ರಣಾಮಗಳು.

ಚಂದ್ರೇ ಕಲಾತ್ಮಿಕೇ ನಿತ್ಯೇ ಕಾಲರಾತ್ರಿ ಸ್ವಧೇ ಸ್ವರೇ |
ಸ್ವಾಹಾಕಾರೆsಗ್ನಿವಕ್ತ್ರೇ ತ್ವಾಮ್ ನಮಾಮಿ ಜಗದೀಶ್ವರಿ ||೧೦||
    ಅನುದಿನವೂ ಚಂದ್ರನಲ್ಲಿ ಕಾಣಬಹುದಾದ ಕಲೆಗಳ ನಿರ್ಮಾತೃ ನೀನೇ ಆಗಿರುವೆ.ಕಾಲರಾತ್ರಿಯಾಗಿಯೂ,ಸ್ವಾಹಾಕಾರದ ಅಗ್ನಿಮುಖಳೂ ನೀನೇ ಇರುವೆ. ಹೇ! ಗಾಯತ್ರಿ ಮಾತೆಯೇ; ಜಗದೀಶ್ವರೀಯೂ ಆಗಿರುವ ನಿನಗೆ ನನ್ನ ಪ್ರಣಾಮಗಳು.

ನಮೋ ನಮಸ್ತೇ ಗಾಯತ್ರಿ ಸಾವಿತ್ರಿ ತ್ವಾಂ ನಮಾಮ್ಯಹಮ್ |
ಸರಸ್ವತಿ ನಮಸ್ತುಭ್ಯಮ್ ತುರೀಯೇ ಬ್ರಹ್ಮರೂಪಿಣಿ ||೧೧||
    ಗಾಯತ್ರಿ ಮಾತೆಯೇ ನಿನಗಿದೋ ನನ್ನ ಪ್ರಣಾಮಗಳು.ಸಾವಿತ್ರಿ ಮಾತೆಯೇ ನಿನಗಿದೋ ನನ್ನ ನಮನಗಳು.ಸರಸ್ವತಿಯೂ ಬ್ರಹ್ಮ ಸ್ವರೂಪಿಣಿಯೂ ಆಗಿರುವ ಮಹಾಮಾತೆಯೇ ನಿನಗಿದೋ ಎನ್ನ ಪ್ರಣಾಮಗಳು.

ಅಪರಾಧ ಸಹಸ್ರಾಣಿ ತ್ವಸತ್ ಕರ್ಮ ಶತಾನಿ ಚ |
ಮತ್ತೋ ಜಾತಾನಿ ದೇವೇಶಿ ತ್ವಂ ಕ್ಷಮಸ್ವ ದಿನೇ ದಿನೇ ||೧೨||
    ಅಮ್ಮಾ! ತಾಯಿಯೇ;ಅನುದಿನವೂ ನನ್ನಿಂದ ಸಾವಿರಾರು ಅಪರಾಧಗಳು ಸಂಭವಿಸುತ್ತಲೇ ಇರುತ್ತವೆ.ನಿನ್ನಿಂದ ನೂರಾರು ಸಂಖ್ಯೆಯಲ್ಲಿ ಪ್ರಶಸ್ತ ಕಾರ್ಯಗಳು ಜರಗುತ್ತಲೇ ಇರುತ್ತವೆ.ಹೇ! ಜಗನ್ಮಾತೆಯೇಸತ್ಯವನ್ನು ಅರಿತವಳಾದ ನೀನು ಅನುದಿನವೂ ನನ್ನಿಂದಾಗುವ ಅಪರಾಧಗಳನ್ನು ಮನ್ನಿಸು ತಾಯೇ!!

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ