ಶ್ರೀ ವೈಷ್ಣವ 108 ದಿವ್ಯದೇಶಗಳ ದಿವ್ಯದಂಪತಿಗಳು

    'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರಾದ ಪುರಂದರ ದಾಸರು ಅಪ್ಪಣೆ ಕೊಟ್ಟಿದ್ದಾರೆ. ಅನೇಕ ಜನುಮಗಳ ನಂತರ ಲಭಿಸಿದ ಈ ಮಾನವ ಜನ್ಮ ಆದ್ದರಿಂದಲೇ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಜನ್ಮಸಾರ್ಥಕ್ಯವನ್ನು ಪಡೆಯುವುದು ಹೇಗೆಂದು ತಿಳಿದುಕೊಳ್ಳುವುದು ಮಾನವನ ಪ್ರಥಮ ಕರ್ತವ್ಯ.
    ಭಗವಂತನು ಸರ್ವಾಂತರ್ಯಾಮಿ. ಅವನು ಅನುಗ್ರಹಿಸಿದ ಈ ಜನ್ಮದಲ್ಲಿ ಅವನನ್ನು ಸ್ತುತಿಸಿ, ಧ್ಯಾನಿಸಿ, ಅವನ ನಾಮ ಜಪಮಾಡಿ, ಅವನು ಅರ್ಚಾರೂಪಿಯಾಗಿ ನಿಂತಿರುವ ದೇವಾಲಯಗಳನ್ನು ಸಂದರ್ಶಿಸಿ ಅವನ ಮೂರ್ತಿಗಳಲ್ಲಿ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡು ಐಹಿಕ ಆಮುಷ್ಮಿಕ ಫಲಗಳನ್ನು ಪಡೆದು ಆ ದೇವನಲ್ಲಿಯೇ ಸೇರಿದರೆ ಮಾತ್ರ ಜನ್ಮ ಸಾರ್ಥಕವಾಗುವುದು.
    ನಮ್ಮ ಭರತಖಂಡವು ಪುಣ್ಯಭೂಮಿ, ಭಾರತ ಮಾತೆಯು ಪಾವನಿ, ಆ ತಾಯಿಯು ಉದ್ದಗಲಕ್ಕು ವ್ಯಾಪಿಸಿರುವ ನದಿಗಳ, ಗಿರಿಪರ್ವತಗಳ, ನದೀಸಂಗಮಗಳಲ್ಲಿ ಕಾಣಿಸಿಗುವ ದೇವಾಲಯಗಳಲ್ಲಿ ಭಗವಂತನು ಆರ್ಚಾರೂಪಿಯಾಗಿ ನಿಂತು ದರ್ಶನಕ್ಕಾಗಿ ಬರುವ ಭಕ್ತವೃಂದಕ್ಕೆ ವರಗಳನ್ನು ದಯಪಾಲಿಸಿ ಇಷ್ಟಾರ್ಥ ಪ್ರಾಪ್ತಿಯನ್ನು ಅನಿಷ್ಠಾರ್ಥ ನಿವಾರಣೆಯನ್ನೂ ಉಂಟುಮಾಡುತ್ತಿದ್ದಾನೆ. ಆದ್ದರಿಂದ ಮಾನವರೆಲ್ಲರೂ ತೀರ್ಥಯಾತ್ರೆ ಮಾಡಿ ತೀರ್ಥಕ್ಷೇತ್ರಗಳನ್ನೂ ಪುಣ್ಯಸ್ಥಳಗಳನ್ನು ಸಂದರ್ಶಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಜನ್ಮಸಾರ್ಥಕ ಪಡಿಸಿಕೊಳ್ಳಬೇಕು.
    ಭಗವಂತನ ಸರ್ವವ್ಯಾಪಿಯಾದ್ದರಿಂದ ತೀರ್ಥ ಯಾತ್ರೆಗಳೇಕೆ ಎಂದು ಅಲಕ್ಷಿಸದೆ ಅವುಗಳ ಅವಶ್ಯಕತೆಯನ್ನು ಅರಿಯಬೇಕು. ಭಗವಾನ್ ರಾಮಕೃಷ್ಣಪರಮಹಂಸರು ತಿಳಿಸಿರುವಂತೆ "ಹಸುವಿನಲ್ಲಿರುವ ಹಾಲನ್ನು ಪಡೆಯಬೇಕಾದರೆ ಅದರ ಕೆಚ್ಚಲನ್ನು ಹಿಂಡಿದರೆ ಮಾತ್ರ ನಮಗೆ ಲಭ್ಯ". ಆದ್ದರಿಂದ ತೀರ್ಥಯಾತ್ರೆ ಮಾಡಿ ವಿವಿಧ ರೂಪಗಳಲ್ಲಿ ಅಭಿವ್ಯಕ್ತಗೊಂಡಿರುವ ಭಗವಂತನನ್ನು ವಿಧ ವಿಧವಾಗಿ ಕೊಂಡಾಡಿ ಇಹಪರ ಸಾಧನೆಗಳನ್ನು ಗಳಿಸೋಣ.
    ವಿಶಿಷ್ಟಾದ್ವೈತ ಪಂಥದ ಶ್ರೀ ವೈಷ್ಣವರಿಗೆ ಶ್ರೀಮನ್ಮಹಾವಿಷ್ಣುವು ನೆಲೆಸಿರುವ ದಿವ್ಯದೇಶಗಳು ಬಹು ಮುಖ್ಯ ಇವುಗಳ ಸಂದರ್ಶನ ಒಂದು ಪವಿತ್ರ ಕಾರ್ಯ, ಜೀವನೋದ್ದೇಶ ಎಂಬುದೇ ಹಿರಿಯರೆಲ್ಲರ ಅಭಿಮತ.
    ಶ್ರೀ ವೈಷ್ಣವ ದಿವ್ಯದೇಶಗಳಲ್ಲಿ, 108 ದಿವ್ಯದೇಶಗಳು ಶ್ರೀ ವೈಷ್ಣವರು ಸಂದರ್ಶಿಸಲೇಬೇಕಾದ ಪರಮ ಪವಿತ್ರ ಸ್ಥಳಗಳು.
   
ಶ್ರೀವೈಷ್ಣವರು ಪ್ರತಿದಿನವೂ-
ಶ್ರೀರಂಗ ಮಂಗಳ ಮಣಿಂ
ಕರುಣಾನಿವಾಸಂ,
ಶ್ರೀವೇಂಕಟಾದ್ರಿ ಶಿಖರಾಲಯ
ಕಾಳಮೇಘಂ
ಶ್ರೀಹಸ್ತಿಶೈಲ ಶಿಖರೋಜ್ವಲ
ಪಾರಿಜಾತಂ,
ಶ್ರೀಶಂ ನಮಾಮಿ ಶಿರಸಾ
ಯದುಶೈಲ ದೀಪಂ
    ಅನುಸಂಧಾನಮಾಡುವ ನಾಲ್ಕು ಮುಖ್ಯ ದಿವ್ಯ ದೇಶಗಳೇ ಆದ ಶ್ರೀರಂಗಂ, ತಿರುಮಲೆ-ತಿರುಪತಿ, ಕಾಂಚೀಪುರ ಮತ್ತು ಯಾದವಾದ್ರಿ (ಮೇಲುಕೋಟೆ - ತಿರುನಾರಾಯಣಪುರ)ಗಳೇ ಅಲ್ಲದೆ, ಇನ್ನೂ 104 ದಿವ್ಯದೇಶಗಳನ್ನು ಸಂದರ್ಶನ ಮಾಡಿ, ಮುಮುಕ್ಷುಗಳಾಗಿ ತಮ್ಮ ಮಂದಮತಿಯನ್ನು ನಿವೃತ್ತಿಮಾಡಿಕೊಂಡು ಮೋಕ್ಷಪ್ರಾಪ್ತಿ ಹೊಂದಿ ಎಂದು ಶ್ರೀವೈಷ್ಣವ ಪರಮಭಕ್ತರಾದ ಆಳ್ವಾರಾಚಾರ್ಯರು ತಿಳಿಸಿರುತ್ತಾರೆ.
    ಆದ್ದರಿಂದ, ಶ್ರೀವೈಷ್ಣವರ ಲೀಲಾವಿಭೂತಿಯಲ್ಲಿ 107 ಮತ್ತು ನಿತ್ಯವಿಭೂತಿಯಲ್ಲಿ 1 ದಿವ್ಯದೇಶಗಳ ಪರಿಚಯ ಮಾಡಿಕೊಳ್ಳುವುದು ಪ್ರತಿಯೊಬ್ಬ ಶ್ರೀವೈಷ್ಣವನ ಆದ್ಯಕರ್ತವ್ಯ.
    ಸೃಷ್ಟಿಕರ್ತನಾದ ಸಾಕ್ಷಾತ್ ಬ್ರಹ್ಮನಿಂದ ಅನುಗೃಹೀತನಾಗಿ ನಾರದ ಮಹರ್ಷಿಯು ಈ 108 ದಿವ್ಯ ದೇಶಗಳನ್ನು ಸಂದರ್ಶಿಸಿ ಅಲ್ಲಿಯ ಅನೇಕ ರೂಪಗಳಲ್ಲಿ ನೆಲೆಸಿರುವ ದಿವ್ಯದಂಪತಿಗಳನ್ನು ಸಾಕ್ಷಾತ್ಕರಿಸಿಕೊಂಡು ಪರಮಾನಂದವನ್ನು ಪಡೆದರು.
    ತದನಂತರ, ಕಲಾನುಕಾಲಗಳಲ್ಲಿ ದ್ವಾದಶಾಳ್ವಾರರು ಈ ದಿವ್ಯದೇಶಗಳನ್ನು ಸಂದರ್ಶಿಸಿ ಅಲ್ಲಿ ವಿರಾಜಮಾನರಾಗಿರುವ ದಿವ್ಯ ದಂಪತಿಗಳ ವರ್ಣನೆಯನ್ನು ತಮ್ಮ ದಿವ್ಯ ಪಾಶುರಗಳಲ್ಲಿ ಶ್ರೀವೈಷ್ಣವರಿಗೆ ಕರುಣಿಸಿದ್ದಾರೆ. ಇವೇ ನಾಲಾಯಿರ(4000) ದಿವ್ಯಪ್ರಬಂಧಗಳು ಎಂದು ಪ್ರಸಿದ್ಧವಾಗಿವೆ.
    108 ದಿವ್ಯದೇಶಗಳನ್ನು ಸಂದರ್ಶಿಸಲು ಅವಕಾಶವಾಗದೆ ಇರುವವರು, ಆ ದಿವ್ಯದೇಶಗಳು ಯಾವುವು ಮತ್ತು ಅಲ್ಲಿಯ ದಿವ್ಯದಂಪತಿಗಳ ಪರಿಚಯ ಮಾಡಿಕೊಂಡು ಅವರನ್ನು ನಿತ್ಯವೂ ಸ್ಮರಿಸಿ, ಕೊಂಡಾಡಿ ಧನ್ಯರಾಗಲು ಪ್ರಯತ್ನ ಪಡುವುದು ಅತ್ಯಾವಶ್ಯಕ.


ನೂರೆಂಟು ದಿವ್ಯದಂಪತಿಗಳು
1    ಶ್ರೀರಂಗಂ :    (ಶ್ರೀರಂಗನಾಥರ್- ಶ್ರೀರಂಗನಾಯಕಿ)
2    ಉರೈಯೂರ್ :    (ಅಳಹಿಯಮಣವಾಳರ್ - ವಾಸಲಕ್ಷ್ಮಿ)
3    ತಂಜೈ ಮಾಮಣಿಕ್ಕೋಯಿಲ್ :    (ನೀಲಮೇಘಸ್ವಾಮಿ - ಶೆಂಕಮಲವಲ್ಲಿ)
4    ಅನ್ಪಿಲ್ :        (ತಿರುವಡಿವಳಹಿಯನಂಬಿ - ಅಳಹಿಯವಲ್ಲಿ)
5    ಉತ್ತಮರ್ ಸನ್ನಿಧಿ :    (ಪುರುಷೋತ್ತಮರ್ - ಪೂರ್ವಾದೇವಿ)
6    ತಿರುವೆಳ್ಳರೈ :    (ಪುಂಡರೀಕಾಕ್ಷರ್ - ಪಂಕಜವಲ್ಲಿ)
7    ತಿರುಪ್ಪಳ್ಳಂ ಪೂದಂ ಕಾಡಿ :    (ಶ್ರೀ ಕೋಲವಲ್ವಿಲಿ ರಾಮಸ್ವಾಮಿ - ಪೋತ್ತಾಮರೈವಾಳ್ )
8    ತಿರುಪ್ಪೇರ್ ನಹರ್ :    (ಆಪ್ಪಕ್ಕುಡತ್ತಾನ್ ಸ್ವಾಮಿ - ಕಮಲವಲ್ಲಿ)
9    ತಿರುವಾದನೂರ್ :     (ಆಂಡಳಕ್ಕುವೈಯನ್ - ಶ್ರೀರಂಗನಾಯಕಿ)
10    ತಿರುವಳುಂದೂರ್ :    (ಅಮರವಿಯಪ್ಪನ್ - ಶೆಂಕಮಲವಲ್ಲಿ)
11    ಶಿರುಪುಲಿಯೂರ್ :    (ಅರುಮಾಕಡಲ್ ಅಮುದುಸ್ವಾಮಿ - ತಿರುಮಾಮಹಳ್)
12    ತಿರುಚ್ಚೇರೈ :    (ಸಾರನಾಥರ್ - ಸಾರನಾಯಕಿ)
13    ತಿರುತ್ತಲೈಚ್ಚಂಗ :    (ನಾಣ್ಮದಿಯಂ ಸ್ವಾಮಿ - ತಲೈಚ್ಚಂಗನಾಚ್ಚಿಯಾರ್)
14    ತಿರುಕ್ಕುಡಂದೈ :    (ಶಾರ್ಙ್ಗಪಾಣಿ - ಕೋಮಲವಲ್ಲಿ)
15    ತಿರುಕ್ಕಂಡಿಯೂರ್ :    (ಹರಶಾಪವಿಮೋಚನರ್ - ಕಮಲವಲ್ಲಿ)
16    ತಿರುವಿಣ್ಣಹರ್ :    (ಒಪ್ಪಿಲಿಯಪ್ಪನ್ ಸ್ವಾಮಿ - ಭೂದೇವಿ)
17    ತಿರುಕ್ಕಣ್ಣಪುರಂ :    (ಶೌರಿರಾಜನ್ - ಕಣ್ಣಪುರನಾಯಕಿ)
18    ತಿರುವಾಲಿ ತಿರುನಗರಿ :    (ವಯಲಾಲಿ ಮಣವಾಳಸ್ವಾಮಿ - ಅಮೃತಘಟವಲ್ಲಿ )
19    ತಿರುನಾಗೈ :    (ಸೌಂದರ್ಯರಾಜರ್ - ಸೌಂದರ್ಯವಲ್ಲಿ)
20    ತಿರುನರೈಯೂರ್ :    (ನಂಬಿಸ್ವಾಮಿ - ನಂಬಿಕೈನಾಚ್ಚಿಯಾರ್ )
21    ತಿರುನಂದಿಪುರ :    (ನಂದಿಪುರವಿಣ್ಣಹರ್ - ಚಂಪಕವಲ್ಲಿ)
22    ತಿರುವಿಂದಳೂರ್ :    (ಸುಗಂಧವನ - ಪರಿಮಳರಂಗನಾಥರ್, ಚಂದ್ರಶಾಪ - ವಿಮೋಚನವಲ್ಲಿ)
23    ತಿಲೈತ್ತಿರುಚ್ಚಿತ್ತಿರ ಕೂಟಂ  :    (ಗೋವಿಂದರಾಜರ್ - ಪುಂಡರೀಕವಲ್ಲಿ
24    ಕಾಳಿಚ್ಚೀರಾಮವಿಣ್ಣಹರಂ :    (ಕಾಡಾಳನ್ ಸ್ವಾಮಿ - ಮಟ್ಟವಿಳುಂಕುಳಲಿ )
25    ಕೂಡಲೂರ್ :    (ವೈಯ್ಯಂಕಾತ್ತಸ್ವಾಮಿ - ಪದ್ಮಾಸನವಲ್ಲಿ)
26    ತಿರುಕ್ಕಣ್ಣಂಕುಡಿ :    (ಶ್ಯಾಮಲಮೇನಿಸ್ವಾಮಿ - ಅರವಿಂದವಲ್ಲಿ)
27    ತಿರುಕ್ಕಣ್ಣಮಂಗೈ :    (ಶ್ರೀ ಪತ್ತರಾವಿಸ್ವಾಮಿ - ಅಭಿಷೇಕವಲ್ಲಿ )
28    ಕಪಿಸ್ಥಲಂ :    (ಗಜೇಂದ್ರವರದರ್ - ರಮಾಮಣಿವಲ್ಲಿ)
29    ತಿರುವೆಳ್ಳಿಯಂಕುಡಿ :    (ನಂದಾವಿಳಕ್ಕುಸ್ವಾಮಿ - ಪುಂಡರೀಕವಲ್ಲಿ)
30    ತಿರುಮಣಿಮಾಡಕ್ಕೋಯಿಲ್ :     (ನಂದಾವಿಳಕ್ಕುಸ್ವಾಮಿ - ಪುಂಡರೀಕವಲ್ಲಿ)
31    ವೈಕುಂಠ ವಿಣ್ಣಗರಂ :    (ವೈಕುಂಠನಾಥರ್ - ವೈಕುಂಠವಲ್ಲಿ)
32    ಅರಿಮೇಯ ವಿಣ್ಣಹರಂ : (ಕುಡಮಾಡುಕ್ತೂತ್ತನ್ ಸ್ವಾಮಿ - ಅಮೃತಘಟವಲ್ಲಿ)
33    ತಿರುತ್ತೇವನಾರ್ ತೋಹೈ :    (ದೈವನಾಯಕರ್ - ಕಡಲ್ ಮಹಳ್ ನಾಚ್ಚಿಯಾರ್ )
34    ವಣ್ ಪುರುಷೋತ್ತಮಂ :    (ಪುರುಷೋತ್ತಮರ್ - ಪುರುಷೋತ್ತಮನಾಯಕಿ)
35    ತಿರುಚ್ಚೆಂದೊನ್ ಶೆಯ್ :    (ಪೇರರುಳ್ಳಾಸ್ವಾಮಿ - ಅಲ್ಲಿಮಾಮಲರ್ ನಾಚ್ಚಿಯಾರ್ )
36    ತಿರುತ್ತೆತ್ತಿಯಂಬಲಂ :    (ಶೆಂಗಣ್ಮಾಲ್ ಸ್ವಾಮಿ - ಶೆಂಗಮಲವಲ್ಲಿ )
37    ತಿರುಮಣಿಕ್ಕೊಡಂ :     (ಮಣಿಕ್ಕುಡನಾಯಕರ್ - ತಿರುಮಾಮಹಳನಾಚ್ಚಿಯಾರ್ )
38    ತಿರುಕ್ಕಾವಳಂ ಪಾಡಿ :    (ಗೋಪಾಲಕೃಷ್ಣನ್ - ಮಡವರಲ್ ಮಂಗೈ)
39    ತಿರುವೆಳ್ಳಕ್ಕುಳಂ :    (ಕೃಷ್ಣನಾರಾಯಣರ್ - ಪೂವಾರ್ ತಿರುಮಹಳ್ ನಾಚ್ಚಿಯಾರ್ )
40    ಪಾರ್ ರ್ತಪಳ್ಳಿ :    (ತಾಮರೈಯಾಳ್ ಕೇರ್ಳ್ವ - ತಾಮರೈನಾಯಕಿ)
41    ತಿರುಮಾಲಿರಂ ಶೋಲೈ :    (ಸುಂದರರಾಜರ್ - ಸುಂದರವಲ್ಲಿ )
42    ತಿರುಕ್ಕೋಟಮಟಿಯೂರ್ :    (ಸೌಮ್ಯನಾರಾಯಣರ್ - ತಿರುಮಾಮಹಳ್ ನಾಯಕಿ)
43    ತಿರುಮಯ್ಯಂ :    (ಸತ್ಯಗಿರಿನಾಥರ್ - ಉಯ್ಯವಂದಾಳ್ ನಾಚ್ಚಿಯಾರ್ )
44    ತಿರುಪುಲ್ಲಾಣಿ :    (ಕಲ್ಯಾಣ ಜಗನ್ನಾಥರ್ - ಕಲ್ಯಾಣವಲ್ಲಿ )
45    ತಿರುತ್ತಣ್ ಗಾಲ್ :    (ಅರ್ಪ್ಪಸ್ವಾಮಿ - ಅನ್ನನಾಯಕಿ)
46    ತಿರುಮೋಹೂರ್ :    (ಕಾಳಮೇಘರ್ - ಮೇಘವಲ್ಲಿ)
47    ತಿರುಕ್ಕುಡಲ್ :    (ಕೂಡಲಳಹರ್ ಸ್ವಾಮಿ - ಮಧುರವಲ್ಲಿ)
48    ಶ್ರೀವಿಲ್ಲಿಪುತ್ತೂರ್ :    (ರಂಗಮನ್ನಾರ್ - ಶ್ರೀಗೋದಾದೇವಿ (ವಟಪತ್ರಶಾಯಿ))
49    ತಿರುಕ್ಕುರುಹೂರ್ :     (ಆದಿನಾಥರ್ - ಆದಿನಾಥವಲ್ಲಿ)
50    ತುಲೈವಿಲ್ಲಿ ಮಂಗಲಂ :    (ದೇವಪಿರಾನ್ - ಕರುತ್ತಡಂಕಣ್ಣಿ)
51    ಶಿರೀವರ ಮಂಗೈ :    (ತೋತಾದ್ರಿ ದೈವನಾಯಕರ್ - ಶ್ರೀವರಮಂಗೈ)
52    ತಿರುಪ್ಪಳಿಂಗುಡಿ :    (ಕಾಯ್ ಶಿವೇಂರ್ದಸ್ವಾಮಿ - ಮಲರ್ ಮಹಳ್ ನಾಚ್ಚಿಯಾರ್ )
53    ತೆನ್ನಿರುಪ್ಪೇರ್ :    (ಮಕರನೆಡುಂಕುಳೈಕ್ಕಾರ್ದ - ಕುಳೈಕ್ಕಾದವಲ್ಲಿ)
54    ಶ್ರೀವೈಕುಂಠಂ :    (ಕಳ್ಳಪ್ಪಿರ್ರಾಸ್ವಾಮಿ - ವೈಕುಂಠವಲ್ಲಿ)
55    ತಿರುಕ್ಕೋಳೂರ್ :    (ವೈತ್ತಮಾನಿಧಿಸ್ವಾಮಿ - ಕೋಳೂರ್ ವಲ್ಲಿ)
56    ವರಗುಣಮಂಗೈ :    (ವಿಜಯಾಸನರ್ - ವರಗುಣವಲ್ಲಿ)
57    ತಿರುಕ್ಕುಳಂದೈ :    (ಮಾಯಕ್ಕೂರ್ತ್ತಸ್ವಾಮಿ - ಕುಳಂದೈವಲ್ಲಿ)
58    ತಿರುಕ್ಕರುಂಗುಡಿ :    (ವೈಷ್ಣವನಂಬಿಸ್ವಾಮಿ - ಕುರಂಗಾಡಿವಲ್ಲಿ)
59    ತಿರುವನಂತಪುರಂ :    (ಅನಂತಪದ್ಮನಾರ್ಭ - ಶ್ರೀಹರಿಲಕ್ಷ್ಮಿ)
60    ತಿರುವಣ್ ಪರಿಶಾರಂ : (ತಿರುಕ್ಕುರಳರ್ಪ್ಪಸ್ವಾಮಿ - ಕಮಲವಲ್ಲಿ)
61    ತಿರುಕ್ಕಾಳ್ಕರೈ :    (ಕಾಳ್ಕರೈಯರ್ಪ್ಪಸ್ವಾಮಿ - ಪೆರುಂಶೆಲ್ವನಾಯಕಿ)
62    ತಿರುಮೂಳಿಕ್ಕಳಂ :    (ತಿರುಮೂಳಿಕ್ಕಳರ್ತ್ತಾಸ್ವಾಮಿ - ಮಧುರವೇಣಿ)
63    ಕುಟ್ಟನಾಟ್ಟತ್ತಿರು ಪ್ಪುಲಿಯೂರ್  :    (ಮಾಯಪ್ಪಿರಾನ್ ಸ್ವಾಮಿ - ಪೊರ್ಕೊಡಿ ನಾಚ್ಚಿಯಾರ್)
64    ತಿರುಚ್ಚೆಂಗುನ್ರೂರ್ :    ( ಇಮೈಯವರಪ್ಪನ್ - ಶೆಂಕಮಲವಲ್ಲಿ)
65    ತಿರುನಾವಾಯ್ :    (ನಾರಾಯಣರ್ - ಮಲರ್ ಮಂಗೈನಾಚ್ಚಿಯಾರ್ )
66    ತಿರುವಲ್ಲವಾಳ್ :    (ಕೋಲಪ್ಪಿರ್ರಾಸ್ವಾಮಿ - ಶೆಲ್ವತಿರುಕ್ಕೊಳುಂ ನಾಚ್ಚಿಯಾರ್ )
67    ತಿರುವಣ್ ವಂಡೂರ್ :    (ಸಾಂಬಣೈಯರ್ಪ್ಪ - ಕಮಲವಲ್ಲಿ)
68    ತಿರುವಾಟ್ಟಾರು :    (ಆದಿಕೇಶವರ್ - ಮರಕತವಲ್ಲಿ)
69    ವಿತ್ತುವಕ್ಕೋಡು :    (ಉಯ್ಯವಂದಸ್ವಾಮಿ - ವಿತ್ತುವಕ್ಕೋಟ್ಟುವಲ್ಲಿ)
70    ತಿರುಕ್ಕಡಿತ್ತಾನ ನಹರಂ :    (ಅದ್ಭುತ ನಾರಾಯಣರ್ - ಕಲ್ಪಕವಲ್ಲಿ )
71    ತಿರುವಾರನ್ ವಿಳೈ :    (ತಿರುಕ್ಕುರಳಪ್ಪನ್ - ಪದ್ಮಾಸನ ನಾಚ್ಚಿಯಾರ್ )
72    ತಿರುವಹೀಂದ್ರಪುರಂ :    (ದೈವನಾಯಕರ್ - ವೈಕುಂಠನಾಯಕಿ)
73    ತಿರುಕ್ಕೋವಲೂರ್ :    (ತ್ರಿವಿಕ್ರಮರ್ - ಪೊಂಕೋವಲ್ ನಾಚ್ಚಿಚಾರ್ )
74    ಶ್ರೀಕಾಂಚೀಪುರಂ :    (ಪೇರರುಳಾಳನ್ - ಪೆರುಂದೇವಿ)
75    ಅಷ್ಟಭುಜಂ :    (ಆದಿಕೇಶವರ್ - ಅಲಮೇಲ್ ಮಂಗೈ)
76    ತಿರುತ್ತಣ್ ಕಾ :    (ದೀಪಪ್ರಕಾಶರ್ - ಮರಕತವಲ್ಲಿ)
77    ವೇಳುಕೈ :    (ಮುಕುಂದನಾಯಕರ್ - ವೇಳುಕೈವಲ್ಲಿ)
78    ಪಾಡಹಂ :    (ಪಾಂಡವದೂರ್ತ - ರುಕ್ಮಿಣೀ ಸತ್ಯಭಾಮ)
79    ನೀರಹಂ :        (ಜಗದೀಶನ್ - ನಿಲಮಂಗೈವಲ್ಲಿ)
80    ನಿಲಾತ್ತಿಂಗಳ್ ತುಂಡಂ :    (ನಿಲಾತ್ತಿಂಗಳ್ ತುಂಡತ್ತಾನ್ - ನೇರೊರುವರಿಲ್ಲಾವಲ್ಲಿ)
81    ಊರಹಂ :    (ಉಲಹಳಂದಸ್ವಾಮಿ - ಅಮುದವಲ್ಲಿ)
82    ತಿರುವೆಃಕಾ :    (ಶೊನ್ನವಣ್ಣಂಶೆಯ್ದಸ್ವಾಮಿ - ಕೋಮಲವಲ್ಲಿ)
83    ಕಾರಹಂ :        (ಕರುಣಾಕರನ್ - ಪದ್ಮಾಮಣಿನಾಚ್ಚಿಯಾರ್ )
84    ಕಾರ್ವಾನಂ :    (ನವನೀತಚೋರನ್ - ಕಮಲವಲ್ಲಿ)
85    ತಿರುಕ್ಕಳ್ವನೂರ್ :    (ಆದಿವರಾಹರ್ - ಆಂಶಿಲೈವಲ್ಲಿ)
86    ಪವಳವಣ್ಣರ್ :    (ಪವಳವಣ್ಣಸ್ವಾಮಿ - ಪವಳವಲ್ಲಿ)
87    ಪರಮೇಶ್ವರ ವಿಣ್ಣಹರಂ :    (ಪರಮಪದನಾಥರ್ - ವೈಕುಂಠನಾಚ್ಚಿಯಾರ್ )
88    ತಿರುಪ್ಪಳ್ ಕುಳಿ :    (ವಿಜಯರಾಘವರ್ - ಮರಕತವಲ್ಲಿ)
89    ತಿರುವಿನ್ರವೂರ್ :    (ಭಕ್ತವತ್ಸಲನ್ - ಎನ್ಹೈಪ್ಪೆತ್ತತ್ತಾಯಾರ್ )
90    ತಿರುವೆವ್ಜುಳ್ :    (ವೀರರಾಘವರ್ - ಕನಕವಲ್ಲಿ)
91    ತಿರುನೀರ್ ಮಲೈ :    (ನೀರ್ ವಣ್ಣನ್ - ಮಂಗೈ)
92    ತಿರುವಿಡವೆಂದೈ :    (ನಿತ್ಯಕಲ್ಯಾಣರ್ - ಕೋಮಲವಲ್ಲಿ)
93    ತಿರುಕ್ಕಡಲ್ ಮಲ್ಲೈ :    (ಶಯನತ್ತುರೈವಾರ್ - ನಿಲಮಂಗೈ)
94    ತಿರುವಲ್ಲಿಕ್ಕೇಣೀ :    (ವೆಂಕಟಕೃಷ್ಣನ್ - ರುಕ್ಮಿಣೀದೇವಿ)
95    ತಿರುಕ್ಕಡಿಹೈ :    (ಯೋಗನೃಸಿಂಹರ್ - ಅಮೃತವಲ್ಲಿ)
96    ತಿರುವೇಂಗಡಂ :    (ತಿರುವೇಂಗಡಮುಡೈಯಾನ್ - ಅಲರ್ ಮೇಲ್ ಮಂಗತ್ತಾಯಾರ್ )
97    ಶಿಂಗವೇಳ್ ಕುನ್ರಂ :    (ನರಸಿಂಹರ್ - ಲಕ್ಷ್ಮೀನಾಚ್ಚಿಯಾರ್)
98    ತಿರುವಯೋಧ್ಯೆ :    (ರಘುನಾಥರ್ - ಸೀತಾದೇವಿ)
99    ನೈಮಿಶಾರಣ್ಯಂ :    (ದೇವರಾಜರ್ - ಶ್ರೀಹರಿಲಕ್ಷ್ಮಿ
100    ಸಾಳಗ್ರಾಮಂ :    (ಶ್ರೀಮೂರ್ತನ್ - ಶ್ರೀದೇವಿ)
101    ಬದರಿಕಾಶ್ರಮಂ :    ( ಬದರೀನಾರಾಯಣರ್ - ಅರವಿಂದವಲ್ಲಿ)
102    ತಿರಪ್ಪಿರಿತಿ :    (ನೀಲಮೇಘನ್ - ಪುಂಡರೀಕವಲ್ಲಿ)
103    ತುವರೈ (ದ್ವಾರಕ) :    (ಪರಮಪುರುಷನ್ - ಪರಿಮಳವಲ್ಲಿ)
104    ವಡಮಧುರೈ (ಬೃಂದಾವನಂ) :    (ಕಲ್ಯಾಣ ನಾರಾಯಣರ್ - ಕಲ್ಯಾಣ ನಾಚ್ಚಿಯಾರ್ )
105    ತಿರುವಾಯ್ಪಾಡಿ (ಗೋಕುಲಂ) :    (ಗೋವರ್ಧನೇಶರ್ - ರುಕ್ಮಿಣೀ ಸತ್ಯಭಾಮ)
106    ತಿರುಕ್ಕಂಡಂ ವಿನ್ರುಂ ಕಡಿನಹರ್ :    (ನವಮೋಹನಕೃಷ್ಣನ್ - ರುಕ್ಮಿಣೀ ಸತ್ಯಭಾಮ)
107    ತಿರುಪ್ಪಾರ್ಕಡಲ್(ಕ್ಷೀರಾಬ್ಧಿ) :    (ಕ್ಷೀರಾಬ್ಧಿನಾಥರ್ - ಕಡಲ್ ಮಹಳ್)
108    ತಿರುನಾರಾಯಣಪುರಂ (ಮೇಲುಕೋಟೆ) :    (ಶೆಲ್ವನಾರಾಯಣರ್ - ಯದುಗಿರಿನಾಯಕಿ) (ಇದು ಅಭಿಮಾನಸ್ಥಳ)

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ