Posts

ಶನೈಶ್ಚರ

Image
    ಶನಿ ಎಂಬುದು ನವಗ್ರಹಗಳಲ್ಲೊಬ್ಬನಾದ ದೇವತೆಯ ಹೆಸರು. ಈಶ್ವರ ಶಬ್ದವನ್ನು ಕೊನೆಯಲ್ಲಿ ಜೋಡಿಸಿದರೆ 'ಶನೀಶ್ವರ' ಎಂಬ ನಾಮವಾಗುವದು. ಗ್ರಹಗಳಲ್ಲಿ ಬಹಳ ವಿಳಂಬ (ಮಂದ)ಗತಿಯಿಂದ ಸಂಚರಿಸುವವನೇ ಶನಿಯು. ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆವರ್ಷಗಳ ಕಾಲವೇ ಬೇಕಾಗುವದು. ಹೀಗೆ ಗ್ರಹಗಳಲ್ಲಿ ಬಹಳ ಮಂದಗತಿಯವನಾದ ಶನಿಯನ್ನು 'ಮಂದ'ನೆಂಬ ಹೆಸರಿನಿಂದಲೂ ಕರೆಯುತ್ತಾರೆ. ಉಳಿದ ಗ್ರಹಗಳೆಲ್ಲರೂ ಅತಿ ಶೀಘ್ರಗತಿಯಾದ ಚಂದ್ರನಿಗೂ ಅತಿ ಮಂದಗತಿಯಾದ ಶನಿಗೂ ನಡುವಿನ ಕಾಲವ್ಯವಧಾನದಲ್ಲಿ ಒಂದೊಂದು ರಾಶಿಯನ್ನು ದಾಟುತ್ತಾರೆ. ಜ್ಯೋತಿಷ್ಯಸಿದ್ಧಾಂತದಂತೆ ಶನಿಗೆ ವಕ್ರಗತಿಯೂ ಉಂಟು. ಎಂದರೆ ನಕ್ಷತ್ರಗಳ ಪಾದಗಳನ್ನು ದಾಟುವಾಗ ಕೆಲವು ಸಲ ಹಿಂದಕ್ಕೆ ಬರುತ್ತಾನೆ. ಸೂರ್ಯಚಂದ್ರರಿಗೆ ಮಾತ್ರ ವಕ್ರಗತಿಯಿರುವದಿಲ್ಲ, ಆದ್ದರಿಂದಲೇ ಸೋಮವಾರದ ನಂತರ ಮಂಗಳವಾರವೇ ಹೊರತು ಮತ್ತೆ ಭಾನುವಾರವು ಬರುವದಿಲ್ಲ. ಇದು ಹಾಗಿರಲಿ. ಅಂತೂ ಮೆಲ್ಲಗೆ ದಾಟುವ ಶನಿಯನ್ನು ಸಂಸ್ಕೃತ ಭಾಷೆಯಲ್ಲಿ "ಶನೈಃ ಚರತಿ ಇತಿ ಶನೈಶ್ವರಃ" ಎಂಬ ವ್ಯುತ್ಪತ್ತಿಯಂತೆ 'ಶನೈಶ್ಚರ'ನೆಂದೂ ಕರೆಯುತ್ತಾರೆ. ಶನೇಶ್ವರ, ಶನೈಶ್ವರ - ಎಂಬ ಕನ್ನಡ ಪ್ರಯೋಗಗಳು ತಪ್ಪು. ಈ ದೇವತೆಯನ್ನು ಕುರಿತು ಶನಿವಾರದ ದಿನ ಮಾಡುವ ಪೂಜೆಯೇ ಶನೈಶ್ಚರವ್ರತವು.     'ಶನಿ...

ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ

Image
ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ । ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥     ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು. ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ । ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥     (ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು. ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ...

ಅಜಾತಿವಾದ

    ವೇದಾಂತಸಂಪ್ರದಾಯದಲ್ಲಿ ಶ್ರೀ ಗೌಡಪಾದರಿಗೆ ಬಹಳ ಉನ್ನತವಾದ ಸ್ಥಾನವಿದೆ. ಈ ಮಹನೀಯರು ರಚಿಸಿರುವ ಮಾಂಡೂಕ್ಯೋಪನಿಷತ್ತಿನ ವ್ಯಾಖ್ಯಾನ ರೂಪವಾದ ಕಾರಿಕೆಗಳು ವೇದಾಂತಸಿದ್ದಾಂತಪ್ರಪಂಚದಲ್ಲಿ ಚಿಂತಾಮಣಿರತ್ನದಂತೆ ಮುಮುಕ್ಷುಗಳಿಗೆ ಅಪೂರ್ವಲಾಭವಾಗಿವೆ. ಶ್ರೀಗೌಡಪಾದರವರ ವೇದಾಂತ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ 'ಅಜಾತಿವಾದ' ಎಂಬ ಒಂದೇ ಮಾತಿನಲ್ಲಿ ಅಡಕಮಾಡಿಬಿಡಬಹುದು. ಆದ್ದರಿಂದ ಅಜಾತಿವಾದವೆಂದರೇನು?     ನ ಕಶ್ಚಿಜ್ಜಾಯೆತೇ ಜೀವಃ ಸಂಭವೋsಸ್ಯ ನ ವಿದ್ಯತೇ | ಏತತ್ತದುತ್ತಮಂ ಸತ್ಯಂ ಯತ್ರ ಕಿಂಚಿನ್ನ ಜಾಯತೇ ||             'ಯಾವನೊಬ್ಬ ಜೀವನೂ ಹುಟ್ಟಿರುವದಿಲ್ಲ. ಇವನಿಗೆ ಹುಟ್ಟೆಂಬುದೇ ಇಲ್ಲ. ಹೀಗೆ ಹುಟ್ಟು ಎಂಬುದು ಇಲ್ಲವೇ ಇಲ್ಲ; ಏನೊಂದೂ ಹುಟ್ಟಿರುವದಿಲ್ಲ - ಎಂಬಿದೇ ಪರಮಾರ್ಥವಾದ ಉತ್ತಮಸತ್ಯವು' ಎಂಬಿದು ಮೇಲಿನ ಕಾರಿಕೆ ಅಕ್ಷರಾರ್ಥವು.         ಹೀಗೆ ಹುಟ್ಟು - ಎಂಬಿದನ್ನೇ ಹುಟ್ಟಡಗಿಸಿರುವ ಸತ್ಯದ ತಿರುಳೇನು? ಎಂಬಿದು ವಿಚಾರಣೀಯವಾಗಿದೆ. ಏಕೆಂದರೆ ವ್ಯವಹಾರದೃಷ್ಟಿಯಲ್ಲಿ ಇದು ತೀರ ವಿರುದ್ಧವಾಗಿ ಕಂಡುಬರುತ್ತದೆ. ಲೌಕಿಕರು, ಅಜ್ಞಾನಿಗಳು - ಹಾಗಿರಲಿ; ವಿವೇಕಿಗಳೂ ವಿದ್ಯಾವಂತರೂ ಪ್ರಾಜ್ಞರೂ ಸಹ ಜಗತ್ತು ಹುಟ್ಟಿದೆ - ಎಂದೇ ತಿಳಿದಿದ್ದಾರೆ. ವೇದಾಂತಿಗಳನ್ನು ಬಿಟ್ಟರೆ ಉಳಿದ ದ...

ಅದ್ವೈತ ಮತ್ತು ದೇವತಾರಾಧನೆ

Image
    ಜೀವನದಲ್ಲಿ ಕರ್ಮಮಾರ್ಗ, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗ ಎಂಬ ಮೂರು ವಿಧಾನಗಳು ಲಭ್ಯವಾಗಿದ್ದು ನಮ್ಮ ವೈಯಕ್ತಿಕ ಪ್ರವೃತ್ತಿಗನುಗುಣವಾಗಿ ಒಂದನ್ನು ಆರಿಸಿಕೊಳ್ಳುತ್ತೇವೆ. ಈ ಮೂರು ಮಾರ್ಗಗಳು ನಮ್ಮನ್ನು ಬೆಳೆಸುತ್ತವೆ, ಉಳಿಸುತ್ತವೆ. ಇವುಗಳಲ್ಲಿ ಭಕ್ತಿಮಾರ್ಗಮಾತ್ರವೇ ಶೀಘ್ರಫಲದರ್ಶನ ನೀಡುತ್ತದೆ. ಇದರಲ್ಲಿ ಮತಿಗೆ ವ್ಯಥೆಯಿಲ್ಲ. ಅಂತೆಯೇ ಹೆಚ್ಚು ಜನರನ್ನು ಇದು ಆಕರ್ಷಿಸುತ್ತದೆ. ಅಬಾಲವೃದ್ಧರೂ, ಸ್ತ್ರೀಯರೂ ಈ ಮಾರ್ಗವನ್ನು ಅನುಸರಿಸಬಹುದಾದ್ದರಿಂದ ಇದರ ವ್ಯಾಪ್ತಿಯು ದೊಡ್ಡದು.     ಹೀಗಾಗಿ ಆಚಾರ್ಯ ಶಂಕರರು ಸಕಲ ಜನರ ಉದ್ಧಾರಕ್ಕಾಗಿ ಹಲವಾರು ದೇವಸ್ಥಾನಗಳನ್ನು ಸ್ಥಾಪಿಸಿದರು; ಹಲವನ್ನು ಜೀಣೋದ್ಧಾರ ಮಾಡಿಸಿದರು, ಹಲವು ದೇವಾಲಯಗಳಲ್ಲಿನ ಕ್ರೂರಪದ್ಧತಿಗಳನ್ನು ಮಾರ್ಪಡಿಸಿ, ಶುದ್ಧವಾಗಿಸಿದರು. ಇಷ್ಟಲ್ಲದೆ, ಸುಂದರ, ರಸಗರ್ಭಿತ, ಮಂಜುಳ, ಲಯಬದ್ಧ ಗಾನಸುಧೆಗಾಗಿ ಹಲವು ಸ್ತೋತ್ರಗಳನ್ನು ರಚಿಸಿ ಭಗವಂತನ ಪ್ರಾರ್ಥನೆಗೆ ಅನುವು ಮಾಡಿಕೊಟ್ಟಿದ್ದಾರೆ. ಲಹರಿ, ಅಷ್ಟಕ, ಪಂಚಕ, ಪಂಜರಿಕಾ, ಅಪರಾಧ ಕ್ಷಮಾಪಣಾ.... ಹೀಗೆಯೇ ಹಲವಾರು ಶೈಲಿಯ, ಅರ್ಥಗಾಂಭೀರ್ಯದ, ಭಕ್ತಿರಸಪೂರ್ಣವಾದ ಸ್ತವಕುಸುಮಗಳನ್ನು ನೀಡಿ ಉಪಕರಿಸಿದ್ದಾರೆ.     ಪ್ರತ್ಯೇಕ ವ್ಯಕ್ತಿಯು ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸುವುದು ಸೂಕ್ತವಾದರೂ, ಇತರ ದೇವತೆಗಳು ಕಡಿಮೆಯವೆಂದು ಪರಿಗಣಿಸಬಾರದು. ಪರಮತ ಸಹಿಷ್ಣುತೆ ನಮ್...

ರಾಮರಹಸ್ಯೋಪನಿಷತ್

Image
    ಪ್ರತಿವರ್ಷವೂ ಯುಗಾದಿಯಿಂದ ಆರಂಭವಾಗುವ ಚೈತ್ರಮಾಸದಲ್ಲಿ ಶ್ರೀರಾಮ ನವರಾತ್ರಿಯ ಉತ್ಸವವು ದೇಶದಲ್ಲೆಲ್ಲ ನಡೆಯುತ್ತದೆ. ಶ್ರೀರಾಮನವಮಿವರೆಗೆ ಅನುಷ್ಠಾನಮಾಡಿ ಪಟ್ಟಾಭಿಷೇಕವನ್ನು ನೆರವೇರಿಸುವ ಪದ್ಧತಿಯನ್ನು ಗರ್ಭ ನವರಾತ್ರಿಯೆಂದೂ ನವಮಿಯಿಂದಲೇ ಉತ್ಸವಾರಂಭವನ್ನು ಮಾಡಿ ಒಂಭತ್ತು ದಿನಗಳ ಅನಂತರ ಪಟ್ಟಾಭಿಷೇಕವನ್ನು ನೆರವೇರಿಸುವ ಕ್ರಮವನ್ನು ಜನ್ಮನವರಾತ್ರಿಯೆಂದೂ ಕರೆಯುತ್ತಾರೆ. ಈ ಕಾಲದಲ್ಲಿ ಶ್ರೀಮದ್ರಾಮಾಯಣಪಾರಾಯಣ, ಹರಿಕಥೆ, ಸಂಗೀತ, ಭಜನೆ - ಮುಂತಾದ ಕಾರ್ಯಕ್ರಮಗಳು ಸಾಮಾನ್ಯವಾಗಿ ನಡೆಯುತ್ತವೆ. ಈಚೆಗೆ ಟಿ.ವಿ ರಾಮಾಯಣ ಫಿಲಂ ಪ್ರದರ್ಶನವೂ ಜಾರಿಗೆ ಬಂದಿದೆ. ಆದರೆ ವಿಶೇಷವಾಗಿ ರಾಮಮಂತ್ರ ಜಪ, ಪುರಶ್ಚರಣೆ, ರಾಮತತ್ತ್ವ ಕಥಾವ್ಯಾಖ್ಯಾನ, ರಾಮರಹಸ್ಯ, ರಾಮತಾಪಿನ್ಯಾದಿ ಉಪನಿಷತ್ತುಗಳ ಪಾರಾಯಣ - ಮುಂತಾದವು ನೆರವೇರುವದು ಅಪರೂಪವಾಗಿರುತ್ತದೆ. ಆದ್ದರಿಂದ ಈ ಲೇಖನದಲ್ಲಿ ರಾಮರಹಸ್ಯೋಪನಿಷತ್ತಿನ ಬಗ್ಗೆ ಸ್ಥೂಲವಾಗಿ ಪರಿಚಯಮಾಡಿಕೊಡಲು ಪ್ರಯತ್ನಿಸಿದೆ.     ಅಷ್ಟೋತ್ತರಶತೋಪನಿಷತ್ತುಗಳಲ್ಲಿ ಇದು 56ನೆಯದಾಗಿದೆ. ಇದು ಅಥರ್ವ ವೇದಕ್ಕೆ ಸೇರಿದ್ದು. 'ಭದ್ರಂ ಕರ್ಣೇಭಿಃ' ಎಂಬ ಶಾಂತಿಪಾಠವುಳ್ಳದ್ದಾಗಿದೆ. ಇದರಲ್ಲಿ ಒಟ್ಟು ಐದು ಅಧ್ಯಾಯಗಳು 145 ಮಂತ್ರಗಳೂ ಇವೆ. ಎರಡನೆಯ ಅಧ್ಯಾಯವೊಂದರಲ್ಲಿಯೇ 106 ಮಂತ್ರಗಳಿವೆ. ಮೂರನೆಯ ಅಧ್ಯಾಯವೆಲ್ಲ ಒಂದೇ ಮಂತ್ರ ರೂಪವಾಗಿದೆ. ಮೊದಲನೆಯ ಅಧ್ಯಾಯದಲ್ಲಿ ಸನಕಾದಿಯೋಗಿಗಳ...

ಶ್ರೀ ವೈಷ್ಣವ 108 ದಿವ್ಯದೇಶಗಳ ದಿವ್ಯದಂಪತಿಗಳು

    'ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ' ಎಂದು ದಾಸವರೇಣ್ಯರಾದ ಪುರಂದರ ದಾಸರು ಅಪ್ಪಣೆ ಕೊಟ್ಟಿದ್ದಾರೆ. ಅನೇಕ ಜನುಮಗಳ ನಂತರ ಲಭಿಸಿದ ಈ ಮಾನವ ಜನ್ಮ ಆದ್ದರಿಂದಲೇ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು. ಜನ್ಮಸಾರ್ಥಕ್ಯವನ್ನು ಪಡೆಯುವುದು ಹೇಗೆಂದು ತಿಳಿದುಕೊಳ್ಳುವುದು ಮಾನವನ ಪ್ರಥಮ ಕರ್ತವ್ಯ.     ಭಗವಂತನು ಸರ್ವಾಂತರ್ಯಾಮಿ. ಅವನು ಅನುಗ್ರಹಿಸಿದ ಈ ಜನ್ಮದಲ್ಲಿ ಅವನನ್ನು ಸ್ತುತಿಸಿ, ಧ್ಯಾನಿಸಿ, ಅವನ ನಾಮ ಜಪಮಾಡಿ, ಅವನು ಅರ್ಚಾರೂಪಿಯಾಗಿ ನಿಂತಿರುವ ದೇವಾಲಯಗಳನ್ನು ಸಂದರ್ಶಿಸಿ ಅವನ ಮೂರ್ತಿಗಳಲ್ಲಿ ದರ್ಶನವನ್ನು ಸಾಕ್ಷಾತ್ಕರಿಸಿಕೊಂಡು ಐಹಿಕ ಆಮುಷ್ಮಿಕ ಫಲಗಳನ್ನು ಪಡೆದು ಆ ದೇವನಲ್ಲಿಯೇ ಸೇರಿದರೆ ಮಾತ್ರ ಜನ್ಮ ಸಾರ್ಥಕವಾಗುವುದು.     ನಮ್ಮ ಭರತಖಂಡವು ಪುಣ್ಯಭೂಮಿ, ಭಾರತ ಮಾತೆಯು ಪಾವನಿ, ಆ ತಾಯಿಯು ಉದ್ದಗಲಕ್ಕು ವ್ಯಾಪಿಸಿರುವ ನದಿಗಳ, ಗಿರಿಪರ್ವತಗಳ, ನದೀಸಂಗಮಗಳಲ್ಲಿ ಕಾಣಿಸಿಗುವ ದೇವಾಲಯಗಳಲ್ಲಿ ಭಗವಂತನು ಆರ್ಚಾರೂಪಿಯಾಗಿ ನಿಂತು ದರ್ಶನಕ್ಕಾಗಿ ಬರುವ ಭಕ್ತವೃಂದಕ್ಕೆ ವರಗಳನ್ನು ದಯಪಾಲಿಸಿ ಇಷ್ಟಾರ್ಥ ಪ್ರಾಪ್ತಿಯನ್ನು ಅನಿಷ್ಠಾರ್ಥ ನಿವಾರಣೆಯನ್ನೂ ಉಂಟುಮಾಡುತ್ತಿದ್ದಾನೆ. ಆದ್ದರಿಂದ ಮಾನವರೆಲ್ಲರೂ ತೀರ್ಥಯಾತ್ರೆ ಮಾಡಿ ತೀರ್ಥಕ್ಷೇತ್ರಗಳನ್ನೂ ಪುಣ್ಯಸ್ಥಳಗಳನ್ನು ಸಂದರ್ಶಿಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಜನ್ಮಸಾರ್ಥಕ ಪಡಿಸಿಕೊಳ್ಳ...

ಲಲಿತಾ ತ್ರಿಶತೀ - 15 ಓಂ ಕಲಿದೋಷಹರಾಯೈ ನಮಃ

Image