ದೇವಿ ಸ್ಮರಣೆ
ಪುರಾಣಗಳ ಅಭಿವ್ಯಕ್ತಿ ಮೊದಲು ವೇದಗಳಲ್ಲಿಯೇ ಆಗಿದೆ ಛಾಂದೋಗ್ಯೋಪನಿಷತ್ತಿನಲ್ಲಿ ಸನತ್ಕುಮಾರನಾರದ ಸಂವಾದದಲ್ಲಿ "ಋಗ್ವೇದಂ ಭಗವೋಧ್ಯೇಮಿ. ಇತಿಹಾಸಂ ಪುರಾಣಂ ಪಂಚಮಂ ವೇದಾನಾಂ ವೇದಮ್" || (ಛಾಂ 7-1-2)ರಲ್ಲಿ ಅಕಾಲದಲ್ಲಿ ಪ್ರಚಲಿತವಿದ್ದು ಶಾಸ್ತ್ರಗಳು ನಿರ್ದಿಷ್ಟವಾಗಿವೆ. "ಋಚಃ ಸಾಮಾನಿ ಛಂದಾಂಸಿ ಪುರಾಣಂ ಯಜುಷಾಸಹ|" (ಉಚ್ಛಿಷ್ಟನೆಂಬ ಋಷಿಯಿಂದ ನಾಲ್ಕು ವೇದಗಳ ನಂತರ ಪುರಾಣಗಳು ಉತ್ಪನ್ನವಾದವೆಂದು ಉಕ್ತವಾಗಿದೆ. ಆದರೆ ಮೂಲಪುರಾಣಗಳು ಈಗ ಉಪಲಬ್ದವಿಲ್ಲ. ಇವು ಯಾವದೋ ಒಂದು ಶತಮಾನಗಳ ನಿರ್ದಿಷ್ಟ ರಚನೆಗಳೂ ಅಲ್ಲ. ಯಾವಾಗ ವೇದಗಳ ಭಾಷೆಯು ಸಾಧಾರಣ ಜನತೆಗೆ ಅರ್ಥವಾಗದಾಯಿತೋ, ಆಗ ಅದರ ತತ್ತ್ವಗಳನ್ನು ಜನತೆಗೆ ತಿಳಿಸಲು ಪುರಾಣಗಳ ರಚನೆಯಾಯಿತು. ನಮಗೆ ಅರ್ಥವಾಗುವ ಭಾಷೆಯಲ್ಲಿ ರಚಿತವಾಗಿರುವದರಿಂದ ಅವು ಬೇಗ ನಮ್ಮ ಹೃದಯಕ್ಕೆ ಮುಟ್ಟುತ್ತವೆ. ಧಾರ್ಮಿಕದೃಷ್ಟಿಯಿಂದ ಪುರಾಣಗಳು ಅತ್ಯಂತ ಮಹತ್ತ್ವವಾದವುಗಳು ಆದ್ದರಿಂದಲೇ ಮಹಾಭಾರತದಲ್ಲಿ. ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಭಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ || ಎಂದಿರುವದು. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ. ಪುರಾಣಗಳು ಮಹರ್ಷಿಗಳಿಂದ ಪರಂಪರೆಯಾಗಿ ನಮಗೆ ಬಂದು ಸೇರಿದ ಆಸ್ತಿ ಅವುಗಳಲ್ಲಿ ಭಾಗವತವು ತುಂಬ ಆದರಕ್ಕೆ ಪಾತ್ರವಾದ ಗ್ರಂಥ ಭಾಗವತದ ವಿಭಿನ್ನಸ್ವರೂಪದ ಎರಡು ಗ್ರಂಥಗಳು ದೊರೆಯುತ್ತವೆ. ಅಷ...