Posts

Showing posts from January, 2017

ಶ್ಯಾಮಲಾನವರತ್ನ ಮಾಲಿಕಾ ಸ್ತೋತ್ರಮ್ - ಶ್ರೀ ಶಂಕರಾಚಾರ್ಯರು

ಕುಚಾಂಚಿತ ವಿಪಂಚಿಕಾಂ ಕುಟಿಲಕುಂತಲಾಲಂಕೃತಾಂ | ಕುಶೇಶಯನಿವೇಶಿನೀಂ ಕುಟಿಲಚಿತ್ತ ವಿದ್ವೇಷಿಣಿಮ್ || (ಮುಂಗುರುಳುಗಳಿಂದ ಅಲಂಕೃತಳಾದ, ದರ್ಭಾಸನೆಯಾದ ಕುಟಿಲ ತಂತ್ರ ದ್ವೇಷಿಸುವವಳಾದ ವೀಣಾಪಾಣಿ) ಮದಾಲಸಗತಿ ಪ್ರಿಯಾಂ ಮನಸಿಜಾರಿರಾಜ್ಯಶ್ರೀಯಂ | ಮತಂಗಕುಲ ಕನ್ಯಕಾಂ ಮಧುರಭಾಷಿಣೀ ಮಾಶ್ರಯೇ || (ಮಧವೇರಿದ ಆನೆಯಂತೆ ನಡಿಗೆಯುಳ್ಳ, ಮನ್ಮಥನ ಶತ್ರುವಾದ ಶಿವನ ರಾಜ್ಯಶ್ರೀ, ಮತಂಗರಾಜನ ಕುಲಕನ್ಯೆ, ಮಧುರಭಾಷಿಣಿ ಆದ ಶ್ಯಾಮಲೆಯನ್ನು ಆಶ್ರಯಿಸುತ್ತೇನೆ.) ಕುಂದಮುಕುಳಾಗ್ರದಂತಾಂ ಕುಂಕುಮಪಂಕೇನ ಲಿಪ್ತ ಕುಚಭಾರಾಮ್ | ಆನೀಲನೀಲದೇಹಾಮ್ ಅಂಬಾಮುಖಿಲಾಂಡನಾಯಕೀಂ ವಂದೇ || (ಮುತ್ತಿನಂತೆ ದಂತ ಪಂಕ್ತಿಯುಳ್ಳ ಕುಂಕುಮರಾಗ ಶೋಭಿತಳಾದ ದೇಹ ಸೌಂದರ್ಯವುಳ್ಳ ಶ್ಯಾಮಲವರ್ಣಳಾದ ಅಖಿಲಾಂಡನಾಯಕಿ ಅಂಬಾ ನಿನ್ನನ್ನು ವಂದಿಸುತ್ತೇನೆ.) ಸ್ತೋತ್ರಮ್ ಓಂಕಾರ ಪಂಜರ ಶುಕೀಮುಪನಿಷದುದ್ಯಾನ ಕೇಳಿ ಕಲಕಂಠೀಮ್ | ಆಗಮವಿಪಿನ ಮಯೂರೀಮ್ ಆರ್ಯಾಮಂತರ್ವಿಭಾವಯೇ ಗೌರೀಮ್ ||1|| (ಓಂಕಾರವೆಂಬ ಪಂಜರದಲ್ಲಿ ಗಿಳಿಯಂತಿರುವ ಉಪನಿಷತ್ ಎಂಬ ಉದ್ಯಾನದಲ್ಲಿ ವಿಹರಿಸುವ ಮಧುರ ಕಂಠವುಳ್ಳ ಆಗಮವೆಂಬ ಕಾಡಿನಲ್ಲಿ ನವಿಲಿನಂತೆ ಸಂಚರಿಸುವ ತಾಯಿ ಗೌರಿ ನಿನ್ನನ್ನು ಧ್ಯಾನಿಸುತ್ತೇನೆ.) ದಯಮಾನ ದೀರ್ಘನಯನಾಂ ದೇಶಿಕರೂಪೇಣ ದರ್ಶಿತಾಭ್ಯುದಯಾಮ್ | ವಾಮಕುಚನಿಹಿತ ವೀಣಾಂ ವರದಾಂ ಸಂಗೀತ ಮಾತೃಕಾಂ ವಂದೇ ||2|| (ದಯೆಯನ್ನೇ ಸೂಸುವ ಕಣ್ಣುಗಳುಳ್ಳ, ದೇಶಿಕ ರೂಪದಿಂದ ಅಭ್ಯುದಯಕ್ಕಾಗಿ ದರ್ಶನ ನೀಡುವ ವೀಣಾಪಾ...

ಭಗವತ್ಸಾಕ್ಷಾತ್ಕಾರಕ್ಕೆ ಸುಲಭವಾದ ಮಾರ್ಗವನ್ನು ತೋರಿಸಿದ ಶ್ರೀ ಶಂಕರರು.

    ಅದ್ವೈತಮತ ಪ್ರತಿಷ್ಠಾಪಕರಾದ, ಶ್ರೀಶಂಕರ ಭಗವತ್ಪಾದಾಚಾರ್ಯರನ್ನು, ಕೇವಲ 'ಜ್ಞಾನ ಯೋಗ'ಸಂಸ್ಥಾಪಕರು ಎಂದು ಭಾವಿಸುವುದು, ಅವರ ಬಗ್ಗೆ ಮಾಡುವ ಅಪಚಾರವಾದೀತು. "ಅದ್ವೈತವಾದ" ಜ್ಞಾನಯೋಗದ ಕೊನೆಯ ಹಂತವೆಂಬುದು ಸತ್ಯವಾದ ಸಂಗತಿಯಾದರೂ, ಆಚಾರ್ಯವರ್ಯರ ಉಪದೇಶ, ಇದೊಂದಕ್ಕೇ ಸೀಮಿತವಾಗಿರದೆ, ಕರ್ಮ, ಭಕ್ತಿಗಳನ್ನು ತನ್ನಲ್ಲಿ ಅಳವಡಿಸಿಕೊಂಡಿದೆ. ಯೋಗತ್ರಯಗಳಲ್ಲಿ ಒಂದಾಗಿ, ಈ ಕಲಿಯುಗಕ್ಕೆ ಸುಲಭಸಾಧ್ಯವಾದ ಭಕ್ತಿಯೋಗದ ಪ್ರಭಾವ ಅವರ ಜೀವನದಲ್ಲಿ ಬಹುಮುಖವಾಗಿ, ಕಾಣಿಸಿಕೊಂಡಿರುವುದರಿಂದ "ಭಕ್ತ ಶಂಕರ" ಎಂಬ ಅಂಕಿತಕ್ಕೆ ಆ ಪೂಜ್ಯರು ಸರ್ವಥಾ ಅರ್ಹರಾಗಿದ್ದಾರೆ.     ಶಂಕರ ಬಾಲ್ಯ ಮಾತಾಪಿತೃಗಳ ಭಕ್ತಿಯಿಂದ ಆರಂಭವಾಯಿತು ಎಂಬುದನ್ನು ಅವರ ಜೀವನ ಚರಿತ್ರೆಯಿಂದ ಅರಿಯಬಹುದು. ತಾಯಿಯಾದ "ಆರ್ಯಂಬೆ"ಯ ಅನುಮತಿಯಿಲ್ಲದೇ, ತಮಗೆ ಪ್ರಿಯವಾದ ಸಂನ್ಯಾದೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ದರಾಗದಿರುವುದು, ಅವರ ಮಾತೃ ಭಕ್ತಿಯ ದ್ಯೋತಕವಾದಂತಯೇ, ಸಂನ್ಯಾಸಿಯಾಗಿದ್ದರೂ, ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ತನ್ನ ಕರ್ತವ್ಯವನ್ನು ನಿರ್ವಹಿಸಿರುವುದೂ, ಆ ಭಕ್ತಿಯ ಸ್ಪಷ್ಟಪ್ರತಿಪಾದಕವಾಗಿದೆ.     'ಪ್ರಶ್ನೋತ್ತರಮಾಲಿಕೆ' ಎಂಬ ಅವರ ಗ್ರಂಥದಲ್ಲಿ, "ಪ್ರತ್ಯಕ್ಷ ದೇವತಾ ಕಾ? - ಮಾತಾ, ಪೂಜ್ಯೋ ಗುರುಶ್ಚ ಕಃ? -ತಾತಃ" ಎಂಬ ಪ್ರಶ್ನೋತ್ತರಗಳು, ಜಗತ್ತಿನಲ್ಲಿ ಮಾನವನಿಗೆ, ಮಾತಾಪಿತೃ ಭಕ್ತಿಯ...

ಕುಮಾರವ್ಯಾಸರ ಶ್ರೀಕೃಷ್ಣ ಭಕ್ತಿ

    ಮಹರ್ಷಿ ವ್ಯಾಸರ ಭಾರತವನ್ನು, ಪಂಪಭಾರತವನ್ನು ಓದಿಯೇ ಇಲ್ಲವೆನ್ನುವಷ್ಟರ ಮಟ್ಟಿಗೆ ತನ್ನ ಪ್ರತಿಭಾಧೀದಿತಿಯಿಂದ ಕನ್ನಡಿಸಿ ಕರ್ಣಾಟಕಭರತಕಥಾಮಂಜರಿಯನ್ನು ನೂತನ ಕಾವ್ಯವಾಗಿ ಸೃಜಿಸಿರುವನು ಮಹಾಕವಿ ಕುಮಾರವ್ಯಾಸ. ಕಾವ್ಯಕಥೆಯ ಸರ್ವಸ್ವವನ್ನು ಬಾನ್ಗಣ್ಣಿನಿಂದ ಕಂಡರಸಿ ಯೋಗೇಂದ್ರನಾಗರಿರುವ ಕವಿ ಕಾವ್ಯ ಯೋಗವನ್ನು ಅಭಿನ್ನವಾಗಿ ಭಾವಿಸಿ ಸಮನ್ವಯಗೊಳಿಸಿ ಸಫಲನಾಗಿದ್ದಾನೆ. ಮಹಾಭಾರತದಲ್ಲಿರುವ ಮಾನವಜೀವನ ಜಟಿಲ ಕಥೆಯನ್ನೂ ಕಲಾಮಯವಾಗಿ ಚಿತ್ರಿಸುತ್ತಲೇ ಅದಕ್ಕೇ ಪ್ರೇರಕತಾರಕವಾಗಿರುವ ಭಗವತ್ ಶಕ್ತಿಯ ಲೀಲೆಯನ್ನು ಮಹಿಮೆಯನ್ನು ಬಾಯ್ತುಂಬ ಬಣ್ಣಿಸ ಬೇಕೆಂಬುದರಲ್ಲಿ ಆ ಸಮನ್ವಯವಿದೆ. ಕುಮಾರವ್ಯಾಸರ ವಿಶಿಷ್ಟವಾದ ಸಮ್ಯಕ್ ದರ್ಶನವಿದೆ. ವ್ಯಾಸ ಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಉನ್ನತವಾಗಿದ್ದು ಪಂಪನಲ್ಲಿ ಪೇಲವವಾಗಿದ್ದರೂ ಕುಮಾರವ್ಯಾಸರ ಭಕ್ತಮನೋಧರ್ಮಕ್ಕನುಗುಣವಾಗಿ ನೂತನ ದೃಷ್ಟಿಯಿಂದ ಅಪೂರ್ವ ಸೃಷ್ಟಿಯಾಗಿ ಭಾರತ ಕಥೆಯ ನಾಯಕನಾದ ಧರ್ಮರಾಯನ ಪಾತ್ರ ನೇಪಥ್ಯಕ್ಕೆ ಸರಿಯುವಷ್ಟು ಪ್ರಾಜ್ವಲ್ಯವಾಗಿ ಹಿಂದಿಗಿಂತಲೂ ಅತಿಶಯವಾಗಿ ಮೂರ್ತೀಭವಿಸಿದೆ. ವೇದ ವ್ಯಾಸರ ಪ್ರೇಮಕುಮಾರ 'ವೀರನಾರಯಣನ ಪ್ರೇಮ ಕಿಂಕರನಾಗಿ ವೀರನಾರಯಣನೆ ಕವಿ ಲಿಪಿಕಾರ ಕುಮಾರವ್ಯಾಸ' ಎಂದು ವಿನಮ್ರ ಭಾವದಿಂದ ನುಡಿದು ತನ್ನ ಕಾವ್ಯದ ಉಸಿರು ಹೆಸರು ಸರ್ವಸ್ವವೂ ಶ್ರೀಕೃಷ್ಣನೇ ಎಂದಿದ್ದಾರೆ. ಕಾವ್ಯದ ಉದ್ದಕ್ಕೂ ಅವಕಾಶ ಸಿಕ್ಕದೆಡೆಗಳಲ್ಲೆಲ್ಲಾ ತನ್ನ ಆರಾಧ್ಯದೈವವನ್ನು...

ಶ್ರೀ ಮಧ್ವರ ದಿವ್ಯ ಸಂದೇಶ

ಕರ್ನಾಟಕದ ಆಚಾರ್ಯರು ವಿಶ್ವದಲ್ಲಿ ಎಣಿಕೆಗೆ ಸಿಗದಷ್ಟು ಆಚಾರ್ಯ ಪುರುಷರು ಅವತರಿಸಿದ್ದಾರೆ. ಆದರೆ ಇತಿಹಾಸದ ಪುಟಗಳು ಗುರುತಿಸಿದ, ಸನ್ಮಾನಿಸಿದ, ವಿಮರ್ಶಕರನ್ನು ಬೆರಗುಗೊಳಿಸಿದ ಮಂದಿ ಬಹಳೇ ವಿರಳ. ಈ ಬಗೆಯ ಆಚಾರ್ಯಪುರುಷರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದವರು ಶಂಕರ, ರಾಮಾನುಜ ಹಾಗೂ ಮಧ್ವರು. ವಿಶ್ವಮಾನ್ಯವಾದ ಸಂದೇಶವನ್ನು ಹೊತ್ತು ಬಂದ ಈ ಮೂವರಲ್ಲಿ ಶ್ರೀ ಮಧ್ವರು ಕನ್ನಡದ ಕೊಡುಗೆಯೆಂಬುದು, ಕನ್ನಡಿಗರೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. ಆದರೆ, ವಿಮರ್ಶಕರೆಂದು ಕರೆಯಿಸಿಕೊಂಡ ಬಹಳ ಮಂದಿ, ಆಚಾರ್ಯರ ಸಂದೇಶವನ್ನು ಅರ್ಥೈಸಿಕೊಳ್ಳುವ ಪ್ರಾಮಾಣಿಕ ಯತ್ನ ನಡೆಸದಿರುವುದು, ಐತಿಹಾಸಿಕ ದುರಂತಗಳಲ್ಲೊಂದು. ವಿಮರ್ಶಗೆ ನಮ್ಮಲ್ಲಿರುವ ಅಜ್ಞಾನವೇ ಸಾಕೆನ್ನುವ , ವಿಚಾರವಂತರ ಒಂದು ವರ್ಗ ಆಚಾರ್ಯರನ್ನು ಇಂದಿಗೂ ಜನತೆಗೆ ತಪ್ಪಾಗಿಯೇ ಪರಿಚಯಿಸುತ್ತಿದೆ. 'ಸತ್ಯ' 'ಸುಳ್ಳು'ಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸಂತಸಪಡುವ ಮಂದಿಗೆ ಆಚಾರ್ಯರ ಈ 'ತತ್ವವಾದ' ಎಂದಿಗೂ ಒಂದು ಸಮಸ್ಯೆಯಾಗೇ ಉಳಿದಿದೆ. ಮಾನವನ -ಜೀವನ-ತತ್ವಶಾಸ್ತ್ರ ಯಾವ ಹಿನ್ನಲೆಯಲ್ಲಿ ಮಾನವ ಪಶು, ಇತರ ಪಶುಗಳಿಗಿಂತ ಹೆಚ್ಚಳವನ್ನು ಪಡೆದಿದೆ? ಎಂಬ ಪ್ರಶ್ನೆಗೆ ಭಾಗವತ ಈ ರೀತಿ ಉತ್ತರಿಸುತ್ತದೆ - 'ಮಾನವ ಬುದ್ದಿಜೀವಿ, ತನಗೆ ಅಪೂರ್ವವಾದ ಬುದ್ಧಿಶಕ್ತಿಯನ್ನು ನೀಡಿದ, ದೇಹೇಂದ್ರಿಯಾದಿ ಸಕಲ ಸ...

ವಿಶಿಷ್ಟಾದ್ವೈತ

ವೇದಾಂತದರ್ಶನದ ಪ್ರಕಾರಗಳಲ್ಲಿ ವಿಶಿಷ್ಟಾದ್ವೈತವೂ ಒಂದು. ಈ ಸಿದ್ಧಾಂತಯವು ಶೃತಿಸ್ಮೃತಿ. ಇತಿಹಾಸ ಮತ್ತು ಪುರಾಣಗಳಲ್ಲಿ ಪ್ರತಿಪಾದಿತವಾಗಿದ್ದು, ಅತಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುತ್ತದೆ. `ವಿಶಷ್ಟಾದ್ವೈತದರ್ಶನ' ಎಂಬ ಹೆಸರು ಇದಕ್ಕೆ ಮೊದಲು ಇದ್ದಂತೆ ಕಂಡು ಬರುವುದಿಲ್ಲ. ಇದನ್ನು ಪ್ರಾಯಃ 'ವೈಷ್ಣವಧರ್ಮ' ಎಂದೊ 'ಭಾಗವತ ಧರ್ಮ' ಎಂದೊ ಕರೆಯುತ್ತಿದ್ದಿರಬಹುದು. ಭಗವಾನ್‌ ರಾಮಾನುಜರು ಈ ಸಿದ್ಧಾಂತದ ಪ್ರವರ್ತನವನ್ನು ಮಾಡಿದ ಕಾರಣ ಇದನ್ನು 'ರಾಮಾನುಜದರ್ಶನ' ಎಂಬುದಾಗಿ ಕರೆದರೆಂದು ಕಾಣುತ್ತದೆ. ಸರ್ವದರ್ಶನ ಸಂಗ್ರಹಕಾರರು ರಾಮಾನುಜದರ್ಶನ ಎಂದೇ ಈ ಸಿದ್ಧಾಂತವನ್ನು ನಿರೂಪಿಸದ್ದಾರೆ. ಈ ಸಿದ್ಧಾಂತದ ಅಸಾಧಾರಣವಾದ ತತ್ತ್ವಸ್ವರೂಪಕ್ಕೆನುಗುಣವಾಗಿ 'ವಿಶಿಷ್ಟಾದ್ವೈತದರ್ಶನ' ಎಂಬ ಹೆಸರು ರೂಢಿಗೆ ಬಂದಿದೆ. ವಿಶಿಷ್ಟಾದ್ವೈತ ಎಂಬ ಹೆಸರಿನ ಮರ್ಮ ಈ ದರ್ಶನ ಅದ್ವೈತ ಮತ್ತು ದ್ವೈತ ದರ್ಶನಗಳಿಗೆ ಸಮನ್ವಯವಾಗುವ ಮಧ್ಯಸ್ಥ ದೃಷ್ಟಿಯನ್ನು ಹೊಂದಿದೆ. ದ್ವೈತ ಭಾವವನ್ನು ವಾಸ್ತವಿಕವಾಗಿ ಪುರಸ್ಕರಿಸಿ ಚೇತನರಿಗೂ ಈಶ್ವರನಿಗೂ ಪ್ರಕೃತಿಗೂ ಸ್ವಾಭಾವಿಕವಾದ ಭೇದವನ್ನೇ ಈ ದರ್ಶನ ಸಾಧಿಸಿದರೂ, ಚೇತಾನಾಚೇತನ ಪದಾರ್ಥಗಳಿಗೆಲ್ಲ ಆತ್ಮವಾದ ಬ್ರಹ್ಮವಸ್ತು ಚೇತಾನಾಚೇತನಗಳಿಂದ ವಿಶಿಷ್ಟವಾಗಿ ಅದ್ವಿತೀಯವಾದುದೆಂದು ಶ್ರತಿ ಪ್ರಮಾಣಕ್ಕನುಗುಣವಾಗಿ ಸಾಧಿಸ...

ಅದ್ವೈತ ವೇದಾಂತ

ವೇದಾಂತವೆಂದರೆ ವೇದದ ಕೊನೆಯಭಾಗ. ವೇದದ ಸಿದ್ಧಾಂತ. ಇದು ಉಪನಿಷತ್ತುಗಳ ಸಾರಾರ್ಥ. ವೈದಿಕ ಸಾಹಿತ್ಯದ ಮಥಿತಾರ್ಥ. ವೇದವಯದ ಜ್ಞಾನ ಕಾಂಡವೆನಿಸಿಕೊಂಡಿರುವ ಭಾಗ, ಭಾರತೀಯ ಋಷಿ ಮುನಿಗಳು ಮಾನವತೆಗೆ ನೀಡಿದ ಅಪೂರ್ವ ಕೊಡುಗೆ ವೈದಿಕ ಚಿಂತಕರು ತಪಸ್ಸಿನಿಂದ ಕಂಡುಕೊಂಡ ಸತ್ಯ. ಮಾನವ ಬುದ್ದಿಯ ಪರಾಕಾಷ್ಠೆಯ ಸತ್ಪಲ. ಇದರಲ್ಲಿ ಜೀವ, ಜಗತ್ತು, ಬ್ರಹ್ಮ ಇತ್ಯಾದಿಗಳನ್ನು ಕುರಿತ ವಿಸ್ತಾರವಾದ ಚರ್ಚೆ - ವಿಫುಲ ಪರಾಮರ್ಶೆಗಳು ಸಮ್ಮಿಳಿತವಾಗಿವೆ. ದಶ ಉಪನಿಷತ್ತುಗಳೆಂದು ಪ್ರಸಿದ್ದಿವಾಗಿರುವ ವೇದ ಸಾಹಿತ್ಯದ ಸಾರಭೂತ ಜ್ಞಾನಕ್ಕೆ ಆಚಾರ್ಯತ್ರಯರು ತಂತಮ್ಮ ನಿಲುವಿಗೆ ಆನುಗುಣವಾಗಿ ವಿಸ್ತಾರವಾಗಿ ವ್ಯಾಖ್ಯಾನ ಮಾಡಿದ್ದಾರೆ. ಆಚಾರ್ಯ ಶಂಕರರು ಮೂವರು ಭಾಷ್ಯಕರ್ತರಾದ ಆಚಾರ್ಯರಲ್ಲಿ ಮೊದಲನೆಯವರು. ಇವರ ಕಾಲದಲ್ಲಿ ಶ್ರುತಿ ಪ್ರಸ್ಥಾನವಾದ ಉಪನಿಷತ್ತುಗಳು ವೇದಾಂತವೆಂಬ ಅಭಿಧಾನಕ್ಕೆ ಪಾತ್ರವಾಗಿದ್ದವು. ಶ್ರೀ ಶಂಕರರ ಕಾಲದಲ್ಲಿ ವೇದಾಂತವೆಂಬ ಶಬ್ದವು ಈಗ ಅದ್ವೈತವೆಂದು ಕರೆಯಲಾಗುವ ತತ್ತ್ವವನ್ನು ಮಾತ್ರ ಪ್ರತಿನಿಧಿಸುತ್ತಿತ್ತು. ಹಾಗಾಗಿ ಶಂಕರರ ಕಾಲದವರೆಗೆ ವೇದಾಂತವೆಂದರೆ ಅದ್ವೈತ ವೇದಾಂತವೆಂದೇ ಆರ್ಥೃಸಿಕೊಳ್ಳುವುದು ಸಹಜ ಹಾಗೂ ಸೂಕ್ತವಾದದ್ದು. ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರು ತಂತಮ್ಮ ಮತಗಳನ್ನು ಪ್ರತಿಪಾದಿಸದ ಮೇಲೆ ವೇದಾಂತದಲ್ಲಿ ಮುಖ್ಯವಾಗಿ ಮೂರು ಬಗೆಗಳಾದವು. ಅದರ ಆನ್...

ಅಂತಃಕರಣವೆಂಬ ಅದ್ಭುತ ಯಂತ್ರ

5-1-2017 # ವಿಶ್ವವಾಣಿ ಯಲ್ಲಿ ನನ್ನ ಲೇಖನ. ಹೊರಗಿನ ಸಂಗತಿಗಳು ಅನಿಷ್ಟವಾಗಿದ್ದರೆ ಬದಲಾಯಿಸಬೇಕೆಂದು ಪ್ರಯತ್ನಿಸುತ್ತೇವೆ, ಆದರೆ ನಮ್ಮ ಅಂತಃಕರಣವನ್ನು ಮಾರ್ಪಡಿಸುವುದು ಉತ್ತಮ ಸನ್ನಿವೇಶ ಸೃಷ್ಟಿಗೆ ಕಾರಣವಾಗಬಲ್ಲುದೆಂದು ನಮಗೆ ಹೊಳೆಯುವುದೇ ಇಲ್ಲ.... http://epaper.vishwavani.news/bng/e/bng/05-01-2017/18 #     ಅಂತಃಕರಣವೆಂಬುದೊಂದು ಜಟಿಲವಾದ ಯಂತ್ರವು. ಮನುಷ್ಯ ತನ್ನ ಉಪಯೋಗಕ್ಕೆ ಮಾಡಿಕೊಂಡಿರುವ ಯಂತ್ರಗಳಲ್ಲಿ ಚಕ್ರಗಳು, ಕೀಲುಗಳು ಮುಂತಾದ ಹಲವು ಅವಯವಗಳಿರುತ್ತವೆ. ಸಾಮಾನ್ಯವಾದ ಜನರಿಗೆ ಆ ಯಂತ್ರಗಳ ರಚನಾಕ್ರಮವು ಮನಸ್ಸಿಗೆ ಹತ್ತುವ ಹಾಗೆಯೇ ಇರುವದಿಲ್ಲ, ಅವುಗಳ ಅವಯವಗಳು ಒಟ್ಟುಗೂಡಿ ಪರಸ್ಪರವಾಗಿ ಉಪಕಾರ್ಯೋಪಕಾರಕವಾಗಿದ್ದಕೊಂಡು ಸಾದಿಸುವ ಅದ್ಭುತಕಾರ್ಯಗಳು ಅತ್ಯಮತ ಆಶ್ಚರ್ಯಕರವಾಗಿರುತ್ತವೆ. ಆದರೆ ಅಂತಃಕರಣಯಂತ್ರಕ್ಕೆ ಹೋಲಿಸಿದರೆ ಅವುಗಳು ಬಹಳ ಸಾಧಾರಣವಾಗಿ ಕಾಣುತ್ತವೆ. ಈ ಹೊರಗಿನ ಯಂತ್ರಗಳ ಜೊಡುಗಿರಿಯನ್ನು ಕುಶಲಮತಿಯಾದವನು ಒಬ್ಬ ಯಾಂತ್ರಿಕನ ಸಹಾಯದಿಂದ ತಿಳಿದುಕೊಂಡು ಅವುಗಳನ್ನು ಬಿಚ್ಚಬಹುದು ಮತ್ತೆ ಸಂಹತವಾದ ಯಂತ್ರವಾಗುವಂತೆ ಜೋಡಿಸಲೂ ಬಹುದು ಆದರೆ ಅಂತಃಕರಣದ ವಿಮರ್ಶವು ಹಾಗಲ್ಲ, ಅದರಲ್ಲಿ ಅನಂತವಾದ ಅದ್ಭುತಕಾರ್ಯಗಳನ್ನು ಮಾಡುವ ಶಕ್ತಿವಿಶೇಷಗಳಿರುತ್ತವೆ; ಆದರೂ ಆ ಶಕ್ತಿಗಳು ಯಾವದಾದರೊಂದು ಅವಯವದಿಂದ ಆಗಿರುವದಿಲ್ಲ, ಅಂತಃಕರಣವು ಸಾವಯವಯಂತ್ರವಲ್ಲ ಅಪರಿಮಿತವಾದ ವ್ಯಾಪಾರಗಳ...