ಶ್ಯಾಮಲಾನವರತ್ನ ಮಾಲಿಕಾ ಸ್ತೋತ್ರಮ್ - ಶ್ರೀ ಶಂಕರಾಚಾರ್ಯರು

ಕುಚಾಂಚಿತ ವಿಪಂಚಿಕಾಂ ಕುಟಿಲಕುಂತಲಾಲಂಕೃತಾಂ |
ಕುಶೇಶಯನಿವೇಶಿನೀಂ ಕುಟಿಲಚಿತ್ತ ವಿದ್ವೇಷಿಣಿಮ್ ||
(ಮುಂಗುರುಳುಗಳಿಂದ ಅಲಂಕೃತಳಾದ, ದರ್ಭಾಸನೆಯಾದ ಕುಟಿಲ ತಂತ್ರ ದ್ವೇಷಿಸುವವಳಾದ ವೀಣಾಪಾಣಿ)

ಮದಾಲಸಗತಿ ಪ್ರಿಯಾಂ ಮನಸಿಜಾರಿರಾಜ್ಯಶ್ರೀಯಂ |
ಮತಂಗಕುಲ ಕನ್ಯಕಾಂ ಮಧುರಭಾಷಿಣೀ ಮಾಶ್ರಯೇ ||
(ಮಧವೇರಿದ ಆನೆಯಂತೆ ನಡಿಗೆಯುಳ್ಳ, ಮನ್ಮಥನ ಶತ್ರುವಾದ ಶಿವನ ರಾಜ್ಯಶ್ರೀ, ಮತಂಗರಾಜನ ಕುಲಕನ್ಯೆ, ಮಧುರಭಾಷಿಣಿ ಆದ ಶ್ಯಾಮಲೆಯನ್ನು ಆಶ್ರಯಿಸುತ್ತೇನೆ.)

ಕುಂದಮುಕುಳಾಗ್ರದಂತಾಂ ಕುಂಕುಮಪಂಕೇನ ಲಿಪ್ತ ಕುಚಭಾರಾಮ್ |
ಆನೀಲನೀಲದೇಹಾಮ್ ಅಂಬಾಮುಖಿಲಾಂಡನಾಯಕೀಂ ವಂದೇ ||
(ಮುತ್ತಿನಂತೆ ದಂತ ಪಂಕ್ತಿಯುಳ್ಳ ಕುಂಕುಮರಾಗ ಶೋಭಿತಳಾದ ದೇಹ ಸೌಂದರ್ಯವುಳ್ಳ ಶ್ಯಾಮಲವರ್ಣಳಾದ ಅಖಿಲಾಂಡನಾಯಕಿ ಅಂಬಾ ನಿನ್ನನ್ನು ವಂದಿಸುತ್ತೇನೆ.)

ಸ್ತೋತ್ರಮ್
ಓಂಕಾರ ಪಂಜರ ಶುಕೀಮುಪನಿಷದುದ್ಯಾನ ಕೇಳಿ ಕಲಕಂಠೀಮ್ |
ಆಗಮವಿಪಿನ ಮಯೂರೀಮ್ ಆರ್ಯಾಮಂತರ್ವಿಭಾವಯೇ ಗೌರೀಮ್ ||1||
(ಓಂಕಾರವೆಂಬ ಪಂಜರದಲ್ಲಿ ಗಿಳಿಯಂತಿರುವ ಉಪನಿಷತ್ ಎಂಬ ಉದ್ಯಾನದಲ್ಲಿ ವಿಹರಿಸುವ ಮಧುರ ಕಂಠವುಳ್ಳ ಆಗಮವೆಂಬ ಕಾಡಿನಲ್ಲಿ ನವಿಲಿನಂತೆ ಸಂಚರಿಸುವ ತಾಯಿ ಗೌರಿ ನಿನ್ನನ್ನು ಧ್ಯಾನಿಸುತ್ತೇನೆ.)

ದಯಮಾನ ದೀರ್ಘನಯನಾಂ ದೇಶಿಕರೂಪೇಣ ದರ್ಶಿತಾಭ್ಯುದಯಾಮ್ |
ವಾಮಕುಚನಿಹಿತ ವೀಣಾಂ ವರದಾಂ ಸಂಗೀತ ಮಾತೃಕಾಂ ವಂದೇ ||2||
(ದಯೆಯನ್ನೇ ಸೂಸುವ ಕಣ್ಣುಗಳುಳ್ಳ, ದೇಶಿಕ ರೂಪದಿಂದ ಅಭ್ಯುದಯಕ್ಕಾಗಿ ದರ್ಶನ ನೀಡುವ ವೀಣಾಪಾಣಿ ವರದೆ, ಸಂಗೀತಕ್ಕೆ ಮಾತೃ ಸ್ವರೂಪಳಾದ ಶ್ಯಾಮಲೆಯನ್ನು ವಂದಿಸುತ್ತೇನೆ.)

ಶ್ಯಾಮತನುಸೌಕುಮಾರ್ಯಾಂ ಸೌಂದಯ್ಯನಂದಸಂಪದುನ್ಮೇಷಾಮ್ |
ತರುಣಿಮಕರುಣಾಪೂರಾಂ ಮದಜಲಕಲ್ಲೋಲ ಲೋಚನಾಂ ವಂದೇ ||3||
(ಸುಕುಮಾರ್ಯಾ ನೀಲವರ್ಣ ಶರೀರವುಳ್ಳ, ಸೌಂದರ್ಯ ಆನಂದ ಸಂಪತ್ತುಗಳುಳ್ಳ, ಕರುಣಾಪೂರ್ಣಳಾದ ತರುಣೆ, ಆನಂದಬಾಷ್ಪಗಳಿಂದ ಕೂಡಿದ ಕಣ್ಣುಗಳುಳ್ಳ ಶ್ಯಾಮಲೆಯನ್ನು ವಂದಿಸುತ್ತೇನೆ.)

ನಖಮುಖ ಮುಖರಿತವೀಣಾನಾದರಸಾಸ್ವಾದನವನ ವೋಲ್ಲಾಸಮ್ |
ಮುಖಮಂಬ! ಮೋದಯತು ಮಾಂ ಮುಕ್ತಾ ತಾಟಂಕ ಮುಗ್ಧ ಹಸಿತಂ ತೇ ||4||
(ಉಗುರಿನ ತುದಿಯಿಂದ ಮೀಟಿದ ವೀಣಾನಾದದ ರಸಾಸ್ವಾದದಿಂದ ನಮೋಲ್ಲಾಸಳಾದ ನಗೆಮುಖವುಳ್ಳ ಅಂಬಾ ನಿನ್ನನ್ನು ನೋಡಿ ಸಂತೋಷಪಡುತ್ತೇನೆ.)

ಸರಿಗಮಪಧನಿರುತಾಂತಾಂ ವೀಣಾಸಂಕ್ರಾಂತಕಾಂತ ಹಸ್ತಾಂ ತಾಮ್ |
ಶಾಂತಾಂ ಮೃದಳಸ್ವಾಂತಾಂ ಕುಚಭರತಾಂತಾಂ ನಮಾಮಿಶಿವಕಾಂತಾಮ್ ||5||
(ಸರಿಗಮಪದನಿ-ಸ್ವರಗಳಲ್ಲಿ ನಿರತಳಾದ, ವೀಣೆಯನ್ನು ಪಿಡಿದಿಹ ಶಾಂತಳಾದ ಮೃದುಸ್ವಭಾವದವಳಾದ, ಶಿವಕಾಂತೆಯಾದ ದೇವಿ ನಿನಗೆ ವಂದಿಸುತ್ತೇನೆ.)

ಅವಟುತಟ ಘಟಿತ ಚೂಳಿತಾಡಿತತಾಳೀ ಫಲಾಶತಾಟಂಕಾಮ್ |
ವೀಣಾವಾದನ ಮೇಳ ಕಂಪಿತಶೀಷಾಂ ನಮಾಮಿ ಮಾತಂಗೀಮ್ ||6||
(ಲಯಭರಿತ ನಡೆಯುಳ್ಳ ವೀಣಾವಾದನದ ಮೇಳದಿಂದ ತಲೆತೂಗುತ್ತಿರುವ ಮಾತಂಗಿಗೆ ನಮಸ್ಕರಿಸುತ್ತೇನೆ. )

ವೀಣಾರವಾನುಷಙ್ಗ ವಿಕಚಮುಖಾಂಭೋಜ ಮಾಧುರೀ ಭೃಂಗಮ್ |
ಕರುಣಾಪೂರತರಂಗಂ ಕಲಯೇ ಮಾತಂಗ ಕನ್ಯಕಾಪಾಂಗಮ್ ||7||
(ಮಾಧುರ್ಯ ಮುಖವು ವೀಣಾವಾದನದಿಂದ ಕಮಲಪುಷ್ಪಕ್ಕೆ ಆಕರ್ಷಿಸಿದ ದುಂಬಿಯಂತೆ ಕರುಣಾಪೂರಿತ ತರಂಗಗಳಿಂದ ಕೂಡಿದ ಮಾತಂಗ ಕನ್ಯೆಯನ್ನು ನಮಸ್ಕರಿಸುತ್ತೇನೆ.)

ಮಣಿಭಂಗ ಮೇಚಕಾಂಗೀಂ ಮಾತಂಗೀಂ ನೌಮಿ ಸಿದ್ಧಮಾತಂಗೀಮ್ |
ಯೌವನವನಸಾರಂಗೀಂ ಸಂಗೀತಾಂಭೋರು ಹಾನುಭವಭೃಂಗೀಮ್ ||8||
(ರತ್ನಖಚಿತ ಆಭರಣ ಧರಿಸಿಹ ಶೋಭಿತ ಮಾತಂಗಿ, ಯೌವನವನದಲ್ಲಿ ಜಿಂಕೆಯಂತೆ ವಿಹರಿಸುವ, ಸಂಗೀತವೆಂಬ ಕಮಲವನ್ನು ಅನುಭವಿಸುವ ದುಂಬಿಯಂತೆ ಇರುವವಳೇ ಮಾತಂಗಿ ನಿನಗೆ ನಮಸ್ಕರಿಸುತ್ತೇನೆ.)

ಮೇಚಕಮಾಸೇಚನಕಂ ಮಿಥ್ಯಾ ದೃಷ್ಟಾಂತಮಧ್ಯಭಾಗಂ ತೇ |
ಮಾತಸ್ಸ್ವರೂಪಮನಿಶಂ ಮಂಗಳ ಸಂಗೀತ ಸೌರಭಂ ವಂದೇ ||9||
(ಪ್ರಪಂಚದ ಮಿಥ್ಯಾ ದೃಷ್ಟಾಂತಕ್ಕೆ ಕಾರಣಳಾದ, ಗಣಪತಿಯ ತಾಯಿಗೆ, ಮಂಗಳ ಸಂಗೀತದಿಂದ ಕೂಡಿದ ದೇವಿಗೆ ನಮಸ್ಕರಿಸುತ್ತೇನೆ.)

ನವರತ್ನ ಮಾಲ್ಯ ಮೇತತ್ ರಚಿತಂ ಮಾತಂಗಕನ್ಯಕಾಭರಣಮ್ |
ಯಃ ಪಠತಿ ಭಕ್ತಿಯುಕ್ತಃ ಸಂಭವೇದ್ವಾಗೀಶ್ವರೀ ಸಾಕ್ಷಾತ್ ||10||
(ಈ ನವರತ್ನಮಾಲಿಕೆ ಮಾತಂಗ ಕನ್ನಿಕೆಯ ಆಭರಣವಾಗಿ ರಚಿಸಲ್ಪಟ್ಟಿದೆ. ಇದನ್ನು ಭಕ್ತಿಯಿಂದ ಪಠಿಸಿದರೆ ಸಾಕ್ಷಾತ್ ವಾಗೀಶ್ವರಿಯು ಪ್ರಸನ್ನಳಾಗುತ್ತಾಳೆ.)
 

Comments

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ