ನಾವು ಸಂಪಾದಿಸಬೇಕಾದ ಧನ
ನಾವು ಸಂಪಾದಿಸಬೇಕಾದ ಧನ (ಸರ್ವತಂತ್ರಸ್ವತಂತ್ರ ಶ್ರೀವೇದಾಂತದೇಶಿಕರ ಕೃತಿ) ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ | ಆಯತ್ನಮಲಮಲ್ಪಕಂ ಪಥಿ ಪಟಚ್ಚರಂ ಕಚ್ಚರಂ ಭಜನ್ತಿ ವಿಬುಧಾ ಮುಧಾ ಅಹಹ ಕುಕ್ಷಿತಃ ಕುಕ್ಷಿತಃ ! ||1|| ಹೊಟ್ಟೆಯ ಹಸಿವೆಂಬ ಕಿಚ್ಚನ್ನು ಹೋಗಲಾಡಿಸುವದಕ್ಕೆ ಉಂಭ ವೃತ್ತಿಯೇ ಸಾಲದೆ? ಕೆರೆಯ ನೀರಿನ ಒಂದು ಬೊಗಸೆಯಾದರೆ ಬಾಯಾರಿಕೆಯನ್ನು ಇಂಗಿಸಿ ಕೊಂಡು ಪ್ರಾಣವನ್ನು ಧರಿಸಿರುವದಕ್ಕೆ ಆಗಲಾರದೆ? ಯಾವ ಆಯಾಸವು ಇಲ್ಲದೆ ದೊರಕುವ ದಾರಿಯಲ್ಲಿ ಬಿದ್ದಿರುವ ಅರಿವೆಯ ತುಂಡೇ ಮಾನವನ್ನು ಮುಚ್ಚಿಕೊಳ್ಳುವದಕ್ಕೆ ಸಾಲದೆ ಹೀಗಿದ್ದರೂ ಕುತ್ಸಿತನಾದವನನ್ನು ತಿಳಿದವರು ಕೂಡ ಸುಮ್ಮಸುಮ್ಮನೆ ಸೇವಿಸುತ್ತಾರಲ್ಲ! ಆಹಹ ! ಇದು ಹೊಟ್ಟೆಯ ಪಾಡಿಗಾಗಿ, ಹೊಟ್ಟೆಯ ಪಾಡಿಗಾಗಿ! ದುರೀಶ್ವರದ್ವಾರಬಹಿರ್ವಿತರ್ದಿಕಾ ದುರಾಸಿಕಾಯೈ ರಚಿತೋsಯಮಞ್ಜಲಿಃ | ಯದಞ್ಜನಾಭಂ ನಿರಪಾಯಮಸ್ತಿ ನೋ ಧನಞ್ಜಯಸ್ಯನ್ದನಭೂಷಣಂ ಧನಮ್ ||2|| ಕೆಟ್ಟ ಧಣಿಗಳ ಹೊರಜಗಲಿಯ ಮೇಲೆ ಕೂರುವ ಕೆಟ್ಟಕೆಲಸಕ್ಕೆ ಇಗೋ, ಕೈಮುಗಿದೆವು; ಏಕೆಂದರೆ ಧನಂಜಯನ (ಅರ್ಜುನನ) ರಥಕ್ಕೆ ಅಲಂಕರವಾಗಿ ಅಂಜನ ಪರ್ವತದಂತೆ ಹೊಳೆಯುವ ಶ್ರೀಕೃಷ್ಣನೆಂಬ ಅಪಾಯವಿಲ್ಲದ ಧನವು ನಮಗಿರುತ್ತದೆ. ಕಾಚಾಯ ನೀಚಂ ಕಮನೀಯವಾಚಾ ಮೋಚಾಫಲಸ್ವಾದುಮುಚಾ ನ ಯಾಚೇ | ದಯಾಕುಚೇಲೇ ಧನವತ್ಕು ಚೇಲೇ ಸ್ಥಿತೇsಕುಚೇಲೇ ಶ್ರಿತಮಾಕುಚೇಲೇ ||3|| ದಯಾನಿಧಿ...