ನಾವು ಸಂಪಾದಿಸಬೇಕಾದ ಧನ
ನಾವು ಸಂಪಾದಿಸಬೇಕಾದ ಧನ
(ಸರ್ವತಂತ್ರಸ್ವತಂತ್ರ ಶ್ರೀವೇದಾಂತದೇಶಿಕರ ಕೃತಿ)
ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ
ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ |
ಆಯತ್ನಮಲಮಲ್ಪಕಂ ಪಥಿ ಪಟಚ್ಚರಂ ಕಚ್ಚರಂ
ಭಜನ್ತಿ ವಿಬುಧಾ ಮುಧಾ ಅಹಹ ಕುಕ್ಷಿತಃ ಕುಕ್ಷಿತಃ ! ||1||
ಹೊಟ್ಟೆಯ ಹಸಿವೆಂಬ ಕಿಚ್ಚನ್ನು ಹೋಗಲಾಡಿಸುವದಕ್ಕೆ ಉಂಭ ವೃತ್ತಿಯೇ ಸಾಲದೆ? ಕೆರೆಯ ನೀರಿನ ಒಂದು ಬೊಗಸೆಯಾದರೆ ಬಾಯಾರಿಕೆಯನ್ನು ಇಂಗಿಸಿ ಕೊಂಡು ಪ್ರಾಣವನ್ನು ಧರಿಸಿರುವದಕ್ಕೆ ಆಗಲಾರದೆ? ಯಾವ ಆಯಾಸವು ಇಲ್ಲದೆ ದೊರಕುವ ದಾರಿಯಲ್ಲಿ ಬಿದ್ದಿರುವ ಅರಿವೆಯ ತುಂಡೇ ಮಾನವನ್ನು ಮುಚ್ಚಿಕೊಳ್ಳುವದಕ್ಕೆ ಸಾಲದೆ ಹೀಗಿದ್ದರೂ ಕುತ್ಸಿತನಾದವನನ್ನು ತಿಳಿದವರು ಕೂಡ ಸುಮ್ಮಸುಮ್ಮನೆ ಸೇವಿಸುತ್ತಾರಲ್ಲ! ಆಹಹ ! ಇದು ಹೊಟ್ಟೆಯ ಪಾಡಿಗಾಗಿ, ಹೊಟ್ಟೆಯ ಪಾಡಿಗಾಗಿ!
ದುರೀಶ್ವರದ್ವಾರಬಹಿರ್ವಿತರ್ದಿಕಾ
ದುರಾಸಿಕಾಯೈ ರಚಿತೋsಯಮಞ್ಜಲಿಃ |
ಯದಞ್ಜನಾಭಂ ನಿರಪಾಯಮಸ್ತಿ ನೋ
ಧನಞ್ಜಯಸ್ಯನ್ದನಭೂಷಣಂ ಧನಮ್ ||2||
ಕೆಟ್ಟ ಧಣಿಗಳ ಹೊರಜಗಲಿಯ ಮೇಲೆ ಕೂರುವ ಕೆಟ್ಟಕೆಲಸಕ್ಕೆ ಇಗೋ, ಕೈಮುಗಿದೆವು; ಏಕೆಂದರೆ ಧನಂಜಯನ (ಅರ್ಜುನನ) ರಥಕ್ಕೆ ಅಲಂಕರವಾಗಿ ಅಂಜನ ಪರ್ವತದಂತೆ ಹೊಳೆಯುವ ಶ್ರೀಕೃಷ್ಣನೆಂಬ ಅಪಾಯವಿಲ್ಲದ ಧನವು ನಮಗಿರುತ್ತದೆ.
ಕಾಚಾಯ ನೀಚಂ ಕಮನೀಯವಾಚಾ
ಮೋಚಾಫಲಸ್ವಾದುಮುಚಾ ನ ಯಾಚೇ |
ದಯಾಕುಚೇಲೇ ಧನವತ್ಕು ಚೇಲೇ
ಸ್ಥಿತೇsಕುಚೇಲೇ ಶ್ರಿತಮಾಕುಚೇಲೇ ||3||
ದಯಾನಿಧಿಯಾಗಿಯೂ ಕುಚೇಲನಿಗೆ ಭಾಗ್ಯವನ್ನಿತ್ತವನಾಗಿಯೂ ಶ್ರೀ ಭೂದೇವಿಯರನ್ನು ಸಮಿಪದಲ್ಲಿರಿಸಿಕೊಂಡವನಾಗಿಯೂ ಇರುವ ಪೀತಾಂಬರಧಾರಿಯು ಇರುವಲ್ಲಿ, ಒಂದು ಗಾಜಿನ ತುಂಡಿಗಾಗಿ ನೀಚನಾದವನನ್ನು ಮನೋಹರವಾಗಿ ಹೊಗಳಿ ಬೇಡಿ ಮೋಕ್ಷಫಲದ ಸವಿಯನ್ನು ಕಳೆದುಕೊಳ್ಳಲಾರೆನು.
ಕ್ಷೋಣೀಕೋಣಶತಾಂಶಪಾಲನಖಲದ್ದುರ್ವಾರಗರ್ವಾನಲ-
ಕ್ಷುಭ್ಯತ್ಕ್ಷುದ್ರನರೇನ್ದ್ರಚಾಟುರಚನಾಂ ಧನ್ಯಾಂ ನ ಮನ್ಯಾಮಹೇ |
ದೇವಂ ಸೇವಿತುಮೇವ ನಿಶ್ಚಿನುಮಹೇ ಯೋsಸೌ ದಯಾಲುಃ ಪುರಾ
ಧನಾಮುಷ್ಟಿಮುಚೇ ಕುಚೇಲಮುನಿಯೇ ಧತ್ತೇಸ್ಮ ವಿತ್ತೇಶತಾಮ್ ||4||
ಭೂಮಿಯ ಒಂದು ಮೂಲೆಯಲ್ಲಿ ನೂರನೆಯ ಒಂದು ಪಾಲನ್ನು ಆಳುವ ಮಾತ್ರದಿಂದ ತಡೆಯಲಾರದಷ್ಟು ಹೆಮ್ಮೆಯಿಂಬ ಕಿಚ್ಚಿನಿಂದ ಉರಿದು ಬೀಳುವ ಕೀಳುದೊರೆಗಳನ್ನು ಹೊಗುಳುವ ಕವಿತೆಯನ್ನು ನಾವೇನೂ ಮನಮೆಚ್ಚುವದಿಲ್ಲ. ಯಾವ ಕರುಳಾಳನು ಹಿಂದೆ ಒಂದು ಹಿಡಿ ಅವಲಕ್ಕಿಯನ್ನು ಕೊಟ್ಟ ಕುಚೇಲನೆಂಬ ಮುನಿಗೆ ಕುಬೇರನ ಐಶ್ವರ್ಯವನ್ನೇ ಇತ್ತನೋ ಆ ದೇವನನ್ನು ಸೇವಿಸಬೇಕೆಂದೇ ನಿಶ್ಚಯಿಸಿರುವೆವು.
ಶರೀರಪತನಾವಧಿ ಪ್ರಭುನಿಷೇವಣಾಪಾದನಾ-
ದಬಿನ್ಧನಧನಞ್ಜಯಪ್ರಶಮದಂ ಧನಂ ದನ್ಧನಮ್ |
ಧನಞ್ಜಯವಿವರ್ಧನಂ ಧನಮುದೂಢಗೋವರ್ಧನಂ
ಸುಸಾಧನಮಬಾಧನಂ ಸುಮನಸಾಂ ಸಮಾರಾಧನಮ್ ||5||
ದೇಹವು ಬಿದ್ದುಹೋಗುವವರೆಗೂ ಧಣಿಯನ್ನು ಸೇವಿಸುತ್ತಿರುವಂತೆ ಮಾಡುವದರಿಂದ, ಹಸಿವುಬಾಯಾರಿಕೆಗಳನ್ನು ಶಾಂತಿಗೊಳಿಸುವ ಧನವು ಕುತ್ಸಿತವಾದದ್ದು. ಧನಂಜಯನನ್ನು ವೃದ್ಧಿಗೊಳಿಸಿರುವದಾಗಿಯೂ, ಗೋವರ್ಧನವನ್ನು ಎತ್ತಿರುವದಾಗಿಯೂ, ಸಂಪಾದಿಸುವದಕ್ಕೆ ಸುಲಭವಾಗಿಯೂ, ನಾಶವಿಲ್ಲದ್ದಾಗಿಯೂ, ದೇವತೆಗಳು ಪೂಜಿಸತಕ್ಕದ್ದಾಗಿಯೂ, ಇರುವದೇ ನಿಜವಾದ ಧನವು

ಇದರ ಅರ್ಥ
ReplyDeleteಏನು