ಉಡುಪೀಗೆ ಆ ಹೆಸರು ಬರಲು ಕಾರಣ ಚಂದ್ರೇಶ್ವರ
ತಪಸಾಸ್ತುತಿಭಿಶ್ಚಾಸ್ಯ ಪ್ರಸನ್ನಶ್ಚಂದ್ರಶೇಖರ |
ಚಂದ್ರಾಯಾದಾತ್ ಕಲಾಪೂರ್ತಿಂ ಸ ಲಬ್ಧಾಥೋ ದಿವಂ ಯಯೌ ||
ತದಾಪ್ರಭೃತಿ ವಿಪ್ರೇಂದ್ರ ಚಂದ್ರಕ್ಷೇತ್ರಮಿದಂ ಜಗುಃ |
ದಕ್ಷಪ್ರಜಾಪತಿಯ ಶಾಪದಿಂದ ಕಲಾರಹಿತನೂ, ಅಪರಿಶುದ್ಧನೂ ಆದ ಚಂದ್ರನು ಈ ಕ್ಷೇತ್ರದಲ್ಲಿ ಕಡೆಕೊಪ್ಪಲವೆಂದು ಪ್ರಸಿದ್ಧವಾದ ತೆಂಕಬೀದಿಯ ಕೊನೆಯಲ್ಲಿರುವ ಅರಣ್ಯದಲ್ಲಿ ತಪೋನಿರತನಾಗಿರು, ಶ್ರೀಮದನಂತೇಶ್ವರ ಪ್ರಾದುರ್ಭಾವದ ಮೊದಲೇ ಚಂದ್ರಮೌಳೀಶ್ವರ ನಾಮಕನಾದ ಶ್ರೀರುದ್ರದೇವನು ಚಂದ್ರನ ತಪಸ್ಸಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಮೆಚ್ಚಿ, ಒಂದು ಸರೋವರದಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾಗಿ ಚಂದ್ರನಿಗೆ ಕಾಂತಿಯನ್ನೂ ಶುದ್ಧಿಯನ್ನೂ ಕೊಟ್ಟು, ಶ್ರೀಮದನಂತೇಶ್ವರನ ಪ್ರಾದುರ್ಭಾವವನ್ನಿದಿರು ನೋಡುತ್ತಾ ಈ ಕ್ಷೇತ್ರಾಲಂಕಾರಭೂತನಾದನು. ಅಂದಿನಿಂದ ಚಂದ್ರನ ತಪಸ್ಥಾನವಾದ ಈ ಭಾರ್ಗವ ಕ್ಷೇತ್ರವು "ಉಡೂನ್ ಪಾತೀತಿ ಉಡುಪಃ, ಉಡುಪೋsಸ್ಮಿನ್ನಸ್ತೀತಿ ಉಡುಪೀ" ಉಡುಪನೆಂದರೆ ನಕ್ಷತ್ರಸ್ವಾಮಿಯಾದ ಚಂದ್ರನು ಅವನ ಕ್ಷೇತ್ರವು ಉಡುಪಿಯೆಂದು ಪ್ರಸಿದ್ಧವಾಯಿತು. ಇದಕ್ಕೆ ದೃಷ್ಟಾಂತವಾಗಿ ಆ ಚಂದ್ರೇಶ್ವರ ದೇವಾಲಯವು ಹಳ್ಳದಲ್ಲಿದ್ದು ಪೂರ್ವದ ಕೆರೆಯ ಆಕಾರವನ್ನು ಸೂಚಿಸುತ್ತದೆ.

Comments
Post a Comment