ಮಾತೃಪಂಚಕಮ್ - ಶ್ರೀಮತ್ ಶಂಕರಾಚಾರ್ಯ ವಿರಚಿತಂ


ಆಸ್ತಂ ತಾವದ್ ಇಯಂ ಪ್ರಸೂತಿಸಮಯೇ ದುರ್ವಾರಶೂಲವ್ಯಥಾ
ನೈರುಚ್ಯಂ ತನುಶೋಷಣಂ ಮಲಮಯೀ ಶಯ್ಯಾ ಚ ಸಂವತ್ಸರೀ ।
ಏಕಸ್ಯಾಪಿ ನ ಗರ್ಭಭಾರ ಭರಣ ಕ್ಲೇಶಸ್ಯ ಯಸ್ಯ ಅಕ್ಷಮಃ
ದಾತುಂ ನಿಷ್ಕೃತಿಂ ಉನ್ನತೋsಪಿ ತನಯಃ ತಸ್ಯೈ ಜನನ್ಯೈ ನಮಃ ॥ 1॥
ಪ್ರಸೂತಿ(ಹೆರಿಗೆ) ಕಾಲದಲ್ಲಿ ಸಹಿಸಲಸಾಧ್ಯವಾದ ಹೊಟ್ಟೆನೋವಿನ ಬಾಧೆ ಹಾಗಿರಲಿ, ವರ್ಷವೆಲ್ಲ ಬಾಯಿಸಪ್ಪೆ, ಶರೀರಶ್ರಮ, ಕೊಳಕಾದ ಹಾಸಿಗೆಯಲ್ಲಿ ಮಲಗುವಿಕೆ, ಇತ್ಯಾದಿಗಳನ್ನು ಸಹಿಸಿಕೊಂಡು ಜನ್ಮವನ್ನು ನೀಡುವ ತಾಯಿಗೆ, ಹಾಗೂ ಗರ್ಭಿಣಿಯಾಗಿ ಗರ್ಭದ ಭಾರವನ್ನು ಹೊತ್ತು ಕಷ್ಟವನ್ನು ಸಹಿಸಿಕೊಳ್ಳುವ (ತಾಯಿಗೆ) ಯಾವನೊಬ್ಬನೂ ಪುಷ್ಟನಾದವನು ಕೂಡ ತನ್ನ ಪಾಲಿನ ಸಾಲವನ್ನು ತೀರಿಸಲು ಸಮರ್ಥನಾಗಲಿಲ್ಲವೋ ಅಂಥ ತಾಯಿಗೆ ನಮಸ್ಕಾರಗಳು.

ಗುರುಕುಲಮುಪಸೃತ್ಯ ಸ್ವಪ್ನಕಾಲೇ ತು ದೃಷ್ಟ್ವಾ
ಯತಿಸಮುಚಿತವೇಶಂ ಪ್ರಾರುದೋ ಮಾಂ ತ್ವಮುಚ್ಚೈಃ ।
ಗುರುಕುಲಮಥ ಸರ್ವಂ ಪ್ರಾರುದತ್ ತೇ ಸಮಕ್ಷಂ
ಸಪದಿ ಚರಣಯೋಸ್ತೇ ಮಾತರಸ್ತು ಪ್ರಣಾಮಃ ॥ 2॥
(ನೀನು) ಕನಸಿನಲ್ಲಿ - ನಾನು ಗುರುಕುಲವನ್ನು ಸೇರಿ ಸಂನ್ಯಾಸಿಗೆ ತಕ್ಕ ವೇಷವನ್ನು ಧರಿಸಿರುವದನ್ನು ನೋಡಿ ಗಟ್ಟಿಯಾಗಿ ಅತ್ತುಬಿಟ್ಟೆ ಅದನ್ನು ಕಂಡು ಗುರುಕುಲದವರೆಲ್ಲರೂ ನಿನ್ನ ಎದುರಿಗೆ ಅಳಲಾರಂಭಿಸಿದರು. ಎಲ್ಲಾ ತಾಯಿಗೂ ಇದೊ, ನಿನ್ನ ಪಾದಗಳಿಗೆ ವಂದನೆಗಳು.
ನ ದತ್ತಂ ಮಾತಸ್ತೇ ಮರಣಸಮಯೇ ತೋಯಮಪಿವಾ
ಸ್ವಧಾ ವಾ ನೋ ದತ್ತಾ ಮರಣದಿವಸೇ ಶ್ರಾದ್ಧವಿಧಿನಾ ।
ನ ಜಪ್ತ್ವಾ ಮಾತಸ್ತೇ ಮರಣಸಮಯೇ ತಾರಕಮನುಃ
ಅಕಾಲೇ ಸಂಪ್ರಾಪ್ತೇ ಮಯಿ ಕುರು ದಯಾಂ ಮಾತುರತುಲಾಮ್ ॥ 3 ॥
ನಿನ್ನ ಮರಣಕಾಲದಲ್ಲಿ ನೀರನ್ನು ಕೂಡ (ನಿನ್ನ ಬಾಯಿಗೆ ಹಾಕಲು) ನನಗೆ ಆಗಲಿಲ್ಲ. ಇನ್ನು ಮೃತತಿಥಿಯ ದಿನ ಶ್ರಾದ್ಧವಿಧಿಯಂತೆ ನಿನಗೆ (ಪಿಂಡವನ್ನೂ) ಕೊಡಲಾರದೆ ಹೋದೆನು. ಇನ್ನು ಮರಣಕಾಲಕ್ಕೆ ನಿನ್ನ ಕಿವಿಯಲ್ಲಿ ತಾರಕ(ರಾಮ)ಮಂತ್ರವನ್ನೂ ನಾನು ಜಪಿಸಲಿಲ್ಲ ಹೀಗಾಗಿ ಕಾಲಮೀರಿ ಬಂದ ನನ್ನ ಮೇಲೆ ಅಪಾರವಾದ ಕೃಪೆಮಾಡು.
ಮುಕ್ತಾಮಣಿ ತ್ವಂ ನಯನಂ ಮಮ ಇತಿ ರಾಜ ಇತಿ ಜೀವ
ಇತಿ ಚಿರ ಸುತ ತ್ವಮ್ ।
ಇತ್ಯುಕ್ತವತ್ಯಾಃ ತವ ವಾಚಿ ಮಾತಃ ದದಾಮಿ ಅಹಂ
ತಂಡುಲಮ್ ಏವ ಶುಷ್ಕಮ್ ॥ 4॥
"ಮಗುವೆ, ನೀನು ನನ್ನ ಮುತ್ತಿನ ಮಣಿ, ನನ್ನ ಕಣ್ಣು; ನನ್ನ ರಾಜ; ನನ್ನ ಜೀವ(ಆತ್ಮ); ನೀನು ಚಿರಕಾಲ ಬಾಳು" ಹೀಗೆಂದು ನುಡಿಯುತ್ತಿದ್ದ ನಿನ್ನ ಪ್ರೀತಿಯ ಮಾತುಗಳಿಗೆ ಪ್ರತಿಯಾಗಿ ಈಗ ನಾನು ಅಕ್ಕಿಯ ಕಾಳನ್ನು ಮಾತ್ರವೇ ನಿನಗೆ ಕೊಡುತ್ತಿರುವೆನು.
ಅಂಬಾ ಇತಿ ತಾತ ಇತಿ ಶಿವ ಇತಿ ತಸ್ಮಿನ್
ಪ್ರಸೂತಿಕಾಲೇ ಯದವೋಚ ಉಚ್ಚೈಃ ।
ಕೃಷ್ಣೇತಿ ಗೋವಿಂದ ಹರೇ ಮುಕುಂದ ಇತಿ ಜನನ್ಯೈ
ಅಹೋ ರಚಿತೋsಯಂ ಅಂಜಲಿಃ ॥ 5॥
ನೀನು ನನ್ನ ಜನ್ಮಕಾಲದಲ್ಲಿ ಅಮ್ಮ, ತಾತ, (ಅಪ್ಪ) ಶಿವ - ಇತ್ಯಾದಿ ಮಾತುಗಳನ್ನು ಗಟ್ಟಿಯಾಗಿ ಹೇಳುತ್ತಿದ್ದೆಯಲ್ಲವೆ? ಈಗ ನಾನು ಕೃಷ್ಣ, ಗೋವಿಂದ, ಹರೇ ಮುಕುಂದ - ಎಂದು ಹೇಳುತ್ತಾ ನನ್ನ ಈ ಪ್ರಾರ್ಥನೆಯನ್ನು ಪೂರ್ಣಗೊಳಿಸುವೆನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ