Posts

ರುದ್ರ - ಅಸ್ಮಾನ್ ವೃಣಕ್ತು ವಿಶ್ವತಃ - 3

ಪರಿ ತೇ ಧನ್ವನೋ ಹೇತಿರಸ್ಮಾನ್ ವೃಣಕ್ತು ವಿಶ್ವತಃ | ಅಥೋ ಯ ಇಷುಧಿಸ್ತವಾರೇ ಆಸ್ಮನ್ನಿಧೇಹಿ ತಮ್ ||15||     '(ಎಲೈ ಭಗವಂತನೆ), ನಿನ್ನ ಧನುಸ್ಸಿನ ಸಂಬಂಧವಾದ (ಬಾಣರೂಪವಾದ ಆಯುಧವು ನಮ್ಮನ್ನು (ಎಲ್ಲಾ ತೊಂದರೆಗಳಿಂದಲೂ) ರಕ್ಷಿಸಿ ಕಾಪಾಡಲಿ! ಮತ್ತು ಇನ್ನು ಯಾವ ನಿನ್ನ ಬಾಣದ ಚೀಲವುಂಟೋ ಅದನ್ನು ನಮ್ಮ ಶತ್ರುಗಳಲ್ಲಿ ಇಡುವವನಾಗು.'     ಈ ಮಂತ್ರದಲ್ಲಿಯೂ ಆಯುಧಗಳ ಪ್ರಾರ್ಥನೆಯೇ ಇದೆ. 'ನಿನ್ನ ಧನುಸ್ಸಿನಲ್ಲಿ ಏರಿಸಲ್ಪಟ್ಟ ಯಾವ ಬಾಣರೂಪವಾದ ಆಯುಧವುಂಟೋ ಅದು ನಮ್ಮನ್ನು ಪಾಪಗಳಿಂದ ರಕ್ಷಿಸಲಿ!' ಎಂದು ಭಕ್ತನು ಕೇಳಿಕೊಂಡಿದ್ದಾನೆ. ಇಲ್ಲಿ ಪಾಪಗಳಿಂದ ರಕ್ಷಿಸುವದು - ಎಂದರೆ ನಾವು ಪಾಪವನ್ನು ಮಾಡದಂತೆ ಎಚ್ಚರಿಸುವದು. ಆಯುಧಗಳನ್ನು ಕಂಡು ಹೆದರಿದವನು ಪಾಪಮಾಡಲಾರನು ಎಂದರ್ಥ ಅವೇ ಆಯುಧಗಳು ಪಾಪವನ್ನು ಸುಟ್ಟು ನಾಶಮಾಡಿಯೂ ಬಿಡವವು ಏಕೆಂದರೆ ಪಾಪಗಳನ್ನು ಉಳಿಸಿಕೊಂಡಲ್ಲಿ ಅವುಗಳಿಂದ ಎಂದಾದರೂ ತೊಂದರೆಯುಂಟೇ ಉಂಟು ಅದಕ್ಕಾಗಿ ಆಯುಧ ಚೀಲವನ್ನೇ ಪಾಪರಾಶಿಗಳ ಮೇಲೆ ಇಟ್ಟುಬಿಡು ಎಂದು ಕೇಳಲಾಗಿದೆ ಹೀಗೆ ಆಯುಧಗಳ ಸ್ಪರ್ಶ ಮತ್ತು ಸಂಯೋಗಗಳಿಂದ ಪಾಪಗಳೆಲ್ಲವೂ ಹೇಳಹೆಸರಿಲ್ಲವಾಗುವವು ಆದ್ದರಿಂದ ಇಲ್ಲಿ ಪಾಪಗಳನ್ನೇ ಶತ್ರುಗಳೆಂದು ಕರೆದಿದೆಯೆಂದು ತಿಳಿಯಬೇಕು. ಈ ಮಂತ್ರವನ್ನು ಶತ್ರುನಾಶಕ್ಕಾಗಿಯೂ ಉಪಯೋಗಿಸುತ್ತಾರೆಂದು ಮಂತ್ರಶಾಸ್ತ್ರದಲ್ಲಿ ಹೇಳಿರುತ್ತದೆ ಇಲ್ಲಿಗೆ ಒಂದನೆಯ ಅನುವಾಕವು ಮುಗಿಯಿತು.

ನರಸಿಂಹ ಶತಕ - 4

4. ಸೀಸ :    ಆದಿನಾರಾಯಣ ಯನುಚು ನಾಲುಕತೋಡ                 ಬಲುಕ ನೇರ್ಚಿನವಾರಿ ಪಾದಮುಲಕು                ಸಾಷ್ಟಾಂಗಮುಗ ನಮಸ್ಕಾರ ಸಮರ್ಪಣ ಚೇಸಿ                ಪ್ರಸ್ತುಸಿಂಚೇದನಯ್ಯ ಬಹು ವಿಧಮುಲ                ಧರಣಿಲೋ ನರುಲೆಂತ ದಂಡಿವಾರೈನನು                ನಿನ್ನುಗಾನನಿವಾರಿ ನೇಸ್ಮರಿಂಚ                ಮೇಮು ಶ್ರೇಷ್ಟುಲ ಮಂಚು ಬಲ್ಕು ಚುಂಡೆಡಿವಾರಿ               ಚೆಂತ ಜೇರಗ ಬೋನು ಶೇಷಶಯನ ತೇಟಗೀತೆ :    ಪರಮ ಸಾತ್ಮಿಕುಲೈನ ನೀ ಭಕ್ತ ವರುಲ                     ದಾಸುಲಕು ದಾಸುಡನು ಸುಮ್ಮಿ ಧಾತ್ರಿಲೋನ ||ಭೂ|| ಅನುವಾದ ಸೀ :     ಆದಿನಾರಾಯಣ ಎನುತ ನಾಲಿಗೆಯಿಂದ ನುಡಿಯೆ ಕಲಿತವರ ಪಾದಗಳಿಗೆ ಸಾಷ್ಟಾಂಗ ನಮನ         ...

ಸ್ಕಂದಪುರಾಣ ಅಧ್ಯಾಯ 4

ಸನತ್ಕುಮಾರ ಉವಾಚ | ಪ್ರಾಜಾಪತ್ಯಂ ತತೋ ಲಬ್ಧ್ವಾ ಪ್ರಜಾಃ ಸ್ರಷ್ಟುಂ ಪ್ರಚಕ್ರಮೇ | ಪ್ರಜಾಸ್ತಾಃ ಸೃಜ್ಯಮಾನಾಶ್ಚ ನ ವಿವರ್ಧಂತಿ ತಸ್ಯ ಹ || ಸ ಕುರ್ವಾಣಸ್ತಥಾ ಸೃಷ್ಟಿಂ ಶಕ್ತಿಹೀನಃ ಪಿತಾಮಹಃ | ಸೃಷ್ಟ್ಯರ್ಥಂ ಭೂಯ ಏವಾಥ ತಪಶ್ಚರ್ತುಂ ಪ್ರಚಕ್ರಮೇ || ಸೃಷ್ಟಿಹೇತೋಸ್ತಸ್ಯ ಜ್ಞಾತ್ವಾ ತ್ರಿಭುವನೇಶ್ವರಃ | ತೇಜಸಾ ಜಗದಾವಿಶ್ಯ ಆಜಗಾಮ ತದಂತಿಕಮ್ | ಸ್ರಷ್ಟಾ ತಸ್ಯ ಜಗನ್ನಾಥೋsದರ್ಶಯತ್ಸ್ವತನೌ ಜಗತ್ || ಸ್ವಯಮಾಗತ್ಯ ದೇವೇಶೋ ಮಹಾಭೂತಪತಿರ್ಹರಃ | ವ್ಯಾಪ್ಯೇವ ಹಿ ಜಗತ್ಕೃತ್ಸ್ನಂ ಪರಮೇಣ ಸ್ವತೇಜಸಾ | ಶಂಭುಃ ಪ್ರಾಹ ವರಂ ವತ್ಸ ಯಾಚಸ್ವೇತಿ ಪಿತಾಮಹಮ್ || ತಂ ಬ್ರಹ್ಮಾ ಲೋಕಸೃಷ್ಟ್ಯರ್ಥಂ ಪುತ್ರಸ್ತ್ವಂ ಮನಸಾಬ್ರವೀತ್ | ಸ ಜ್ಞಾತ್ವಾ ತಸ್ಯ ಸಂಕಲ್ಪಂ ಬ್ರಹ್ಮಣಃ ಪರಮೇಶ್ವರಃ | ಮೂಢೋಯಮಿತಿ ಸಂಚಿಂತ್ಯ ಪ್ರೋವಾಚ ವರದಃ ಸ್ವಯಮ್ || ಆಗತಂ ಪಿತರಂ ಮಾ ತ್ವಂ ಯಸ್ಮಾತ್ಪುತ್ರಂ ಸಮೀಹಸೇ | ಮನ್ಮೂರ್ತಿಸ್ತನಯಸ್ತಸ್ಮಾದ್ಭವಿಷ್ಯತಿ ಮಮಾಜ್ಞಯಾ || ಸ ಚ ತೇ ಪುತ್ರತಾಂ ಯಾತ್ವಾ ಮದೀಯೋ ಗಣನಾಯಕಃ | ರುದ್ರೋ ವಿಗ್ರಹವಾನ್ಭೂತ್ವಾ ಮೂಢ ತ್ವಾಂ ವಿನಯಿಷ್ಯತಿ || ಸರ್ವವಿದ್ಯಾಧಿಪತ್ಯಂ ಚ ಯೋಗಾನಾಂ ಚೈವ ಸರ್ವಶಃ | ಬಲಸ್ಯಾಧಿಪತಿತ್ವಂ ಚ ಅಸ್ತ್ರಾಣಾಂ ಚ ಪ್ರಯೋಕ್ತೃತಾ || ಮಯಾ ದತ್ತಾನಿ ತಸ್ಯಾಶು ಉಪಸ್ಥಾಸ್ಯಂತಿ ಸರ್ವಶಃ | ಧನುಃ ಪಿನಾಕಂ ಶೂಲಂ ಚ ಖಡ್ಗಂ ಪರಶುರೇವ ಚ || ಕಮಂಡಲುಸ್ತಥಾ ದಂಡಃ ಅಸ್ತ್ರಂ ಪಾಶುಪತಂ ತಥಾ | ಸಂವರ್ತಕಾಶನಿಶ್ಚೈವ ಚಕ್ರಂ ಚ ಪ್ರತಿಸರ್ಗಿಕಮ...

ಅಸ್ಮಾನ್ ವೃಣಕ್ತು ವಿಶ್ವತಃ - 2

ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ | ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ ||14||     '(ಎಲೈ ಭಗವಂತನೆ), ನಿನ್ನ ಆಯುಧಗಳಿಗೆ ನಮಸ್ಕಾರ! ಅವು ಹೊಡೆಯಲು ಎತ್ತಲ್ಪಡದೆ ಇರುವವೂ, ಆದರೆ, ಹೊಡೆಯುವ ಸಾಮರ್ಥ್ಯವುಳ್ಳವೂ ಆಗಿದೆಯಷ್ಟೆ! ಮತ್ತು ನಿನ್ನ ಎರಡು ಬಾಹುಗಳಿಗೂ ನಿನ್ನ ಧನುಸ್ಸಿಗೂ ನಮಸ್ಕಾರ!'     ಹೀಗೆ ಪ್ರಾರ್ಥನೆಮಾಡಿದಮೇಲೂ ಮತ್ತೆ ನಮಸ್ಕಾರಮಾಡಲು ಉಪಕ್ರಮಿಸಿದ ಭಕ್ತನ ಉದ್ಗಾರವಿದು: 'ಎಲೈ ಭಗವಂತನೆ, ನಿನ್ನ ಆಯುಧಗಳಿಗೆ ನಮಸ್ಕಾರ! ತೋಳುಗಳಿಗೂ ನಮಸ್ಕಾರ' - ಎಂದು ಹೆಚ್ಚಿನ ಭಯದಿಂದ ಕೂಡಿದವನಾಗಿ ಹೇಳುತ್ತಿದಾನೆ. 'ಬಾಹುಭ್ಯಾಮ್' ಎಂಬ ದ್ವಿವಚನವೇ ಎರಡು ತೋಳುಗಳೆಂದು ತಿಳಿಸುತ್ತದೆಯಾದರೂ 'ಉಭಾಭ್ಯಾಮ್' ಎಂದು ಮತ್ತೆ ವಿಶೇಷಣವಾಗಿ ಹೇಳಿರುವದು ಹೆದರಿಕೆಯ ನಿಮಿತ್ತದಿಂದಲೇ ಎಂದು ಅರ್ಥ ಮಾಡಬೇಕು. ಏಕೆಂದರೆ ಬಾಣವನ್ನು ಹೊಡೆಯಲು ಎತ್ತಿರುವ ತೋಳುಗಳನ್ನು ಕಂಡಾಗ ಎಂಥವನಿಗಾದರೂ ಭಯವುಂಟಾಗಿ ಮಾತುಗಳು ವ್ಯತ್ಯಾಸವಾಗಿ ಬಿಡುವವು. ಎಷ್ಟೇ ಸಿದ್ಧಮಾಡಿಕೊಂಡಾಗಲೂ ದೊಡ್ಡವರ ಸನ್ನಿಧಿಯಲ್ಲಿ ಮಾತನಾಡುವಾಗ ತಬ್ಬಿಬ್ಬಾಗುವದು. ಹಾಗೆ ಇಲ್ಲಿಯೂ ತಿಳಿಯಬೇಕು. ಇದರಿಂದ ಭಗವಂತನು ಎದುರಿಗೇ ಇದ್ದಾನೆಂತಲೂ ತಾನು ಅವನನ್ನು ನೋಡುತ್ತಾ ಸ್ತೋತ್ರಮಾಡುತ್ತಿರುವೆನೆಂತಲೂ ಭಕ್ತನು ಭಾವಿಸಿದ್ದಾನೆ - ಎಂದು ತಿಳಿಯ ಬರುತ್ತದೆ.

ನರಸಿಂಹ ಶತಕ - 3

3. ಸೀಸ :     ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ     ದುರಿತ ಜಾಲಮುಲೆಲ್ಲ ದೋಲ ವಚ್ಚು     ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ     ಬಲು ವೈನ ರೋಗಮು ಲ್ಬಾಪವಚ್ಚು     ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ     ರಿಪು ಸಂಘಮುಲ ಸಂಹ ರಿಂಚವಚ್ಚು     ನರಸಿಂಹ ನೀ ದಿವ್ಯ ನಾಮ ಮಂತ್ರಮು ಚೇತ     ದಂಡ ಹಸ್ತುನಿ ಬಂಟ್ಲ ದರುಮ ವಚ್ಚು ತೇಟಗೀತೆ :     ಭಳಿರ ನೇ ನೀ ಮಹಾಮಂತ್ರ ಬಲಮು ಚೇತ     ದಿವ್ಯ ವೈಕುಂಠ ಪದವಿ ಸಾದಿಂಪವಚ್ಚು ||ಭೂ|| ಅನುವಾದ :     ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ     ದುರಿತ ಜಾಲಗಳನು ದೂಡಬಹುದು     ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ     ಬಲವಾದ ರೋಗವ ನೀಗಬಹುದು     ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ     ರಿಪುಸಂಘ ಸಂಹಾರ ಮಾಡಬಹುದು     ನರಸಿಂಹ ನಿನ್ನ ದಿವ್ಯ ನಾಮ ಮಂತ್ರ ಬಲದಿ     ದಂಡಹಸ್ತ ಭಟರ ಅಟ್ಟಬಹುದು     ತೇಟಗೀತೆ :     ಬಲರೆ ನಾ ನಿನ್ನ ಯಾ ನಾಮ ಮಂತ್ರ ಬಲದಿ     ದಿವ್ಯ ...

ಸ್ಕಂದಪುರಾಣ ಅಧ್ಯಾಯ 3

ಸನತ್ಕುಮಾರ ಉವಾಚ | ಶೃಣುಷ್ವೇಮಾಂ ಕಥಾಂ ದಿವ್ಯಾಂ ಸರ್ವಪಾಪಪ್ರಣಾಶನೀಮ್ | ಕಥ್ಯಮಾನಾಂ ಮಯಾ ಚಿತ್ರಾಂ ಬಹ್ವರ್ಥಾಂ ಶ್ರುತಿಸಮ್ಮಿತಾಮ್ | ಯಾಂ ಶ್ರುತ್ವಾ ಪಾಪಕರ್ಮಾಪಿ ಗಚ್ಛೇಚ್ಛ ಪರಮಾಂ ಗತಿಮ್ || ನ ನಾಸ್ತಿಕಾಶ್ರದ್ದಧಾನೇ ಶಠೇ ಚಾಪಿ ಕಥಂಚನ | ಇಮಾಂ ಕಥಾಮನುಬ್ರೂಯಾತ್ತಥಾ ಚಾಸೂಯಕೇ ನರೇ || ಇದಂ ಪುತ್ರಾಯ ಶಿಷ್ಯಾಯ ಧಾರ್ಮಿಕಾಯಾನಸೂಯವೇ | ಕಥನೀಯಂ ಮಹಾಬ್ರಹ್ಮಂದೇವಭಕ್ತಾಯ ವಾ ಭವೇತ್ | ಕುಮಾರಭಕ್ತಾಯ ತಥಾ ಶ್ರದ್ದಧಾನಾಯ ಚೈವ ಹಿ || ಪುರಾ ಬ್ರಹ್ಮಾ ಪ್ರಜಾಧ್ಯಕ್ಷಃ ಅಂಡೇsಸ್ಮಿನ್ಸಂಪ್ರಸೂಯತೇ | ಸೋsಜ್ಞಾನಾತ್ಪಿತರಂ ಬ್ರಹ್ಮಾ ನ ವೇದ ತಮಸಾವೃತಃ || ಅಹಮೇಕ ಇತಿ ಜ್ಞಾತ್ವಾ ಸರ್ವಾ/ಲ್ಲೋಕಾನವೈಕ್ಷತ | ನ ಚಾಪಶ್ಯತ ತತ್ರಾನ್ಯಂ ತಪೋಯೋಗಬಲಾನ್ವಿತಃ || ಪುತ್ರ ಪುತ್ರೇತಿ ಚಾಪ್ಯುಕ್ತೋ ಬ್ರಹ್ಮಾ ಶರ್ವೇಣ ಧೀಮತಾ | ಪ್ರಣತಃ ಪ್ರಾಂಜಲಿರ್ಭೂತ್ವಾ ತಮೇವ ಶರಣಂ ಗತಃ || ಸ ದತ್ತ್ವಾ ಬ್ರಹ್ಮಣೇ ಶಂಭುಃ ಸ್ರಷ್ರ್ಟತ್ವಂ ಜ್ಞಾನಸಂಹಿತಮ್ | ವಿಭುತ್ವಂ ಚೈವ ಲೋಕಾನಾಮಂತರ್ಧೇ ಪರಮೇಶ್ವರಃ || ತದೇಷೋಪನಿಷತ್ಪ್ರೋಕ್ತಾ ಮಯಾ ವ್ಯಾಸ ಸನಾತನಾ | ಯಾಂ ಶ್ರುತ್ವಾ ಯೋಗಿನೋ ಧ್ಯಾನಾತ್ಪ್ರಪದ್ಯಂತೇ ಮಹೇಶ್ವರಮ್ || ಬ್ರಹ್ಮಂ ಚ ಯೋ ವಿದಧೇ ಪುತ್ರಮಗ್ರೇ ಜ್ಞಾನಂ ಚ ಯಃ ಪ್ರಹಿಣೋತಿ ಸ್ಮ ತಸ್ಮೈ | ತಮಾತ್ಮಸ್ಥಂ ಯೇsನುಪಶ್ಯಂತಿ ಧೀರಾಸ್ತೇಷಾಂ || ಸ ವ್ಯಾಸ ಪಿತರಂ ದೃಷ್ಟ್ವಾ ಸ್ವದೀಪ್ತ್ಯಾ ಪರಯಾ ಯುತಮ್ | ಪುತ್ರಕಾಮಃ ಪ್ರಜಾಹೇತೋಸ್ತಪಸ್ತೀವ್ರಂ ಚಕಾರ ಹ || ಮಹತಾ ಯೋಗ...

ಅಸ್ಮಾನ್ ವೃಣಕ್ತು ವಿಶ್ವತಃ

ಮೊದಲನೆಯ ಅನುವಾಕದಲ್ಲಿ ಉಳಿದಿರುವ ಮೂರು ಮಂತ್ರಗಳನ್ನು ಈಗ ವಿಚಾರಮಾಡೋಣ : ಯಾ ತೇ ಹೇತಿರ್ಮಿಢುಷ್ಟಮ ಹಸ್ತೇ ಬಭೂವ ತೇ ಧನುಃ | ತಯಾಸ್ಮಾನ್ ವಿಶ್ವತಸ್ತ್ವಮಯಕ್ಷ್ಮಯಾ ಪರಿಬ್ಭುಜ ||13||     'ಎಲೈ ಮಿಢುಷ್ಟಮನೆ, ಯಾವ ನಿನ್ನ (ಕತ್ತಿಯೇ ಮುಂತಾದ) ಆಯುಧಳು ಇವೆಯೋ ಮತ್ತು ಕೈಯಲ್ಲಿರುವ ಧನುಸ್ಸುಂಟೋ ಅಯಕ್ಷ್ಮವಾದ ಅದರಿಂದ ನೀನು ನಮ್ಮನ್ನು ಎಲ್ಲಾ ಪಾಪಗಳಿಂದಲೂ ಕಾಪಾಡುವವನಾಗು.'     ಈ ಮಂತ್ರದಲ್ಲಿ ಭಗವಂತನನ್ನು ಮತ್ತೊಮ್ಮೆ ಮಿಢುಷ್ಟಮನೆಂದು ಸಂಬೋಧಿಸಿದೆ. ಹಿಂದಿನ ಮೂರು ಮಂತ್ರಗಳಲ್ಲಿ ಆಯುಧಗಳನ್ನು ಹಿಂತೆಗೆದುಕೊಳ್ಳುವಂತೆ ಪ್ರಾರ್ಥಿಸಲಾಗಿತ್ತು ಆದರೆ ರುದ್ರನು ಆಯುಧಗಳನ್ನು ಹಿಂತೆಗೆದುಕೊಂಡು ಸುಮ್ಮನೆ ಕುಳಿತುಬಿಟ್ಟರೆ ಆಪತ್ತಿನಿಂದ ನಮ್ಮನ್ನು ಕಾಪಾಡುವವರಾರು? ಅದಕ್ಕಾಗಿ ಇಲ್ಲಿ ತನ್ನನ್ನು ಅದೇ ಆಯುಧಗಳ ನೆರವಿನಿಂದ ಕಾಪಾಡಬೇಕೆಂದೂ ಭಕ್ತನು ಕೇಳಿಕೊಳ್ಳುತ್ತಿದ್ದಾನೆ. ಭಕ್ತರ ಎಲ್ಲಾ ಇಷ್ಟಾರ್ಥಗಳನ್ನೂ ಅನುಗ್ರಹಿಸಿ ಅನಿಷ್ಟಗಳನ್ನು ಪರಿಹರಿಸಿ ರಕ್ಷಿಸುವವನೇ ಮಿಢುಷ್ಟಮನು. ಆ ಭಗವಂತನನ್ನು ಕುರಿತು 'ಎಲೈ ಮಿಢುಷ್ಟಮನೆ, ನಿನ್ನಲ್ಲಿರುವ ಖಡ್ಗವೇ ಮುಂತಾದ ಆಯುಧಗಳು ಮತ್ತು ಕೈಯಲ್ಲೇ ಧರಿಸಿರುವ ಬಿಲ್ಲು, ಇವುಗಳ ವಿಷಯಕ್ಕೆ ಶಾಂತಿಯನ್ನು ನಾನು ಬಯಸಿದ್ದು ನನ್ನನ್ನು ಕ್ಷಮಿಸುವದಕ್ಕಾಗಿಯೂ ಮತ್ತು ಶತ್ರುಗಳಿಂದ ನನ್ನನ್ನು ಕಾಪಾಡುವದಕ್ಕಾಗಿಯೂ ಆಗಿದೆ; ಎಂದರೆ ನೀನು ಆಯುಧಗಳನ್ನು ಸನ್ನದ್ಧವಾಗಿಯೇ ಇರಿಸಿ ...