ನರಸಿಂಹ ಶತಕ - 4

4. ಸೀಸ :    ಆದಿನಾರಾಯಣ ಯನುಚು ನಾಲುಕತೋಡ
                ಬಲುಕ ನೇರ್ಚಿನವಾರಿ ಪಾದಮುಲಕು
               ಸಾಷ್ಟಾಂಗಮುಗ ನಮಸ್ಕಾರ ಸಮರ್ಪಣ ಚೇಸಿ
               ಪ್ರಸ್ತುಸಿಂಚೇದನಯ್ಯ ಬಹು ವಿಧಮುಲ
               ಧರಣಿಲೋ ನರುಲೆಂತ ದಂಡಿವಾರೈನನು
               ನಿನ್ನುಗಾನನಿವಾರಿ ನೇಸ್ಮರಿಂಚ
               ಮೇಮು ಶ್ರೇಷ್ಟುಲ ಮಂಚು ಬಲ್ಕು ಚುಂಡೆಡಿವಾರಿ
              ಚೆಂತ ಜೇರಗ ಬೋನು ಶೇಷಶಯನ

ತೇಟಗೀತೆ :    ಪರಮ ಸಾತ್ಮಿಕುಲೈನ ನೀ ಭಕ್ತ ವರುಲ
                    ದಾಸುಲಕು ದಾಸುಡನು ಸುಮ್ಮಿ ಧಾತ್ರಿಲೋನ ||ಭೂ||

ಅನುವಾದ ಸೀ :     ಆದಿನಾರಾಯಣ ಎನುತ ನಾಲಿಗೆಯಿಂದ ನುಡಿಯೆ ಕಲಿತವರ ಪಾದಗಳಿಗೆ ಸಾಷ್ಟಾಂಗ ನಮನ
                          ಸಮರ್ಪಣೆಯನು ಮಾಡಿ ಪ್ರಸ್ತುತಿಸುವೆನಯ್ಯ ಬಹುವಿಧದೊಳು ಧರಣಿಯೊಳ್ ನರರಷ್ಟೆ ಹಿರಿಯರೆ
                       ಇರಲುಂ ನಿನ್ನ ಭಜಿಸದವರ ಸ್ಮರಿಸೆನಯ್ಯ ತಾವೆ  ಶ್ರೇಷ್ಟರು ಎಂಬ ಗರ್ವಬೀರುಗಳಲ್ಲಿ ಸಹವಾಸವನು
                       ಮಾಡೆ ಶೇಷಶಯನ    

ತೇಟಗೀತೆ :    ಪರಮಸಾತ್ವಿಕರಪ್ಪ ನಿನ್ನ ಭಕ್ತ ಜನರ
                    ದಾಸರಿಗೆ ದಾಸನಾನಯ್ಯ ಧಾತ್ರಿಯೊಳಗೆ ||ಭೂ||

ತಾತ್ಪರ್ಯ :     "ಆದಿನಾರಯಣ" ಎಂಬುದಾಗಿ ನಾಲಿಗೆಯಿಂದ ನುಡಿಯಲು ಕಲಿತ ಭಕ್ತರ ಪಾದಗಳಿಗೆ ನಮಸ್ಕರಿಸಿ, ಕವಿ ಬಹುವಿಧವಾಗಿ ಕೊಂಡಾಡಿದ್ದಾನೆ. ದೊಡ್ಡವರಾದರು ಪರಮಾತ್ಮನ ಚಿಂತನೆ ಇಲ್ಲದವರನ್ನು ಸೇರುವುದಿಲ್ಲ ತಾವು ಶ್ರೇಷ್ಠರೆಂದು ಗರ್ವಿಸುವವರ ಸಹವಾಸವನ್ನು ಮಾಡುವುದಿಲ್ಲ ಪ್ರಪಂಚದಲ್ಲಿ ಪರಮ  ಸಾತ್ವಿಕರಾದ ಭಕ್ತ ಜನರಾದ ದಾಸರಿಗೆ ದಾಸ ನಾನು     ಎಂಬುದಾಗಿ ಕವಿ ನಮ್ರತೆಯಿಂದ ನುಡಿಯುತ್ತಾನೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕಧಾರಾ ಸ್ತೋತ್ರ