ಅಹಂ ತೇಭ್ಯೋಕರಂ ನಮಃ - 2
ಪ್ರಮುಂಚ ಧನ್ವನಸ್ತ್ವಮುಭಯೋರಾರ್ತ್ನಿಯೋರ್ಜ್ಯಾಮ್ |
ಯಾಶ್ಚತೇ ಹಸ್ತ ಇಷವಃ ಪರಾ ತಾ ಭಗವೋ ವಪ ||10||
'ಎಲೈ ಭಗವಂತನೆ, ನಿನ್ನ ಬಿಲ್ಲಿನ ತುದಿಗಳನ್ನು ಅಲ್ಲಿಗೆ ಬಿಗಿದಿರುವ ಮೌರ್ವಿ(ಹಗ್ಗ)ಗಳಿಂದ ಬಿಡಿಸಿ ಶಿಥಿಲಗೊಳಿಸುವವನಾಗು ಮತ್ತು ನಿನ್ನ ಕೈಯಲ್ಲಿರುವ ಬಾಣಗಳನ್ನು ಪರಾಙ್ಮುಖವಾಗಿ ಮಾಡುವವನಾಗು.'
ಇಲ್ಲಿಂದ ಮುಂದಕ್ಕೆ ಆರು ಮಂತ್ರಗಳಿಂದ ಆಯುಧಗಳನ್ನು ಉಪಸಂಹಾರಮಾಡಿಕೊಳ್ಳುವಂತೆ ಭಗವಂತನನ್ನು ಪ್ರಾರ್ಥಿಸಿದೆ. 'ಶಿವಾಂ ಗಿರಿತ್ರ...' ಎಂಬ ಮಂತ್ರದಲ್ಲಿಯೇ ಹಿಂದೆಯೇ ಈ ಪ್ರಾರ್ಥನೆಯನ್ನು ಮಾಡಿದ್ದರೂ ಹೆಚ್ಚಿನ ಭಯದಿಂದ ಕೂಡಿರುವ ಸಾಧಕನು ಮತ್ತೊಮ್ಮೆ ಕೇಳಿಕೊಂಡಿದ್ದಾನೆಂದು ಭಾವಿಸಬೇಕು. ಜ್ಞಾನಶಕ್ತಿಬಲೈಶ್ವರ್ಯಾದಿಗುಣಸಂಪನ್ನನಾದ ಭಗವಂತನು ತನ್ನ ಧನುಸ್ಸಿನ ಹಗ್ಗವನ್ನು ಸಡಿಲಗೊಳಿಸಲು ತಾನೊಬ್ಬನೇ ಸಮರ್ಥನೇ ಹೊರತು ಬೇರೆ ಯಾರಿಂದಲೂ ಅದು ಸಾಧ್ಯವಾಗಲಾರದು. ಧನುಸ್ಸನ್ನು ಸಡಿಲಗೊಳಿಸಿದರೆ ಮಾತ್ರ ರುದ್ರನು ಶಾಂತನಾದನೆಂದು ಗೊತ್ತಾಗುತ್ತದೆ ಅದಕ್ಕಾಗಿ ಇಲ್ಲಿ ಆತನನ್ನೇ ಹೀಗೆ ಪ್ರಾರ್ಥಿಸಿದೆ ಮತ್ತು ಧನುಸ್ಸನ್ನು ಶಿಥಿಲಗೊಳಿಸಿದ ಅನಂತರವೂ ಬಾಣಗಳು ಭಯವನ್ನುಂಟುಮಾಡಬಹುದಾದ್ದರಿಂದ ಅವುಗಳನ್ನು ಹಿಮ್ಮುಖವಾಗಿ (ಹಿಂದುಮುಂದಾಗಿ) ಮಾಡು ಎಂದೂ ಇಲ್ಲಿ ಕೇಳಿಕೊಳ್ಳಲಾಗಿದೆ.

Comments
Post a Comment